ಇತಿಹಾಸವು ಮರುಕಳಿಸಿದಲ್ಲಿ, ಗಡ್ಡವೇ ಬುದ್ಧಿವಂತಿಕೆಯಾದಲ್ಲಿ, ಕಾಲವು ಸ್ಥಿರವಾದಲ್ಲಿ ’ಮನುಷ್ಯ’ನೆಂಬುದು ಹೆಸರಾಗುತ್ತದೆ!
(೬೬) ನಾನು ಇತಿಹಾಸವಾದರೆ, ನಾನು ಪುನರಾವರ್ತನೆಗೊಳ್ಳುತ್ತೇನೆ. ಪುನಃ ಪುನಃ ಹೇಳುವುದರಿಂದಾಗಿ ನಾನು ಇತಿಹಾಸವಾಗಿಬಿಡುತ್ತೇನೆ! (ಕ್ರಮಬದ್ಧವಾಗಿ ಒಳ್ಳೆಯ ಮತ್ತು ಕೆಟ್ಟ ಟೀಚರ್ ನಡುವಣ ವ್ಯತ್ಯಾಸವಿದು).
(೬೭) ಲೆಕ್ಕಾಚಾರವಾಗಿ ಬದುಕಿದಾಕ್ಷಣ ನೀನು ಗಣಿತಜ್ಞನಾಗಲಾರೆ. ವ್ಯವಸ್ಥಿತವಾಗಿ ಬದುಕಿದಾಕ್ಷಣ ತರ್ಕಶಾಸ್ತ್ರಜ್ಞನಾಗಲಾರೆ. ತರ್ಕಬದ್ಧವಾಗಿ ಬದುಕಿದಾಕ್ಷಣ ನೀನು ವಿಜ್ಞಾನಿಯಾಗಲಾರೆ. ಇದು, ಎಲ್ಲ ಗಡ್ಡಧಾರಿಗಳೂ ಬುದ್ಧಿವಂತರು ಹೇಗಾಗುವುದಿಲ್ಲವೋ ಹಾಗೆ. ಅನ್ಯಲಿಂಗೀಯರ ಕಥೆಯೇನು?
(೬೮) ಈಗ ಕಾಲವನ್ನು ಕೊಂದವರಿಗೆ ನಂತರದಲ್ಲಿ ಕಾಲಾವಕಾಶದ ಕೊರತೆಯೇ ಶಾಪವಾಗಲಿದೆ. ಸಮಯ ಎಂಬುದೊಂದು ಅಧ್ಬುತ ಪರಿಕಲ್ಪನೆ. ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ!
(೬೯) ಜೀವಂತವಾಗಿರಬೇಕು ಎಂದುಕೊಳ್ಳುವವರಿಗೆ ಕಾಲವು ಅವರ ಪರವಾಗಿರಬೇಕಾಗುತ್ತದೆ, ಕೈಯಲ್ಲಿ ಗಡಿಯಾರವಿಲ್ಲದಿದ್ದರೂ ಸಹ!
(೭೦) ನಿರ್ದಿಷ್ಟ ದೈನಂದಿನ ಉಪಯೋಗಿ ವಸ್ತುಗಳನ್ನು ಮೊದಲಿಗೆ ಸೂಚಿಸಿ, ನಂತರ ಆ ’ವಸ್ತುಗಳೇ’ ಆಗಿಹೋದವುಗಳನ್ನು ’ಕರೆನ್ಸಿ’, ’ಝೆರಾಕ್ಸ್’ ಹಾಗೂ ’ಗಡಿಯಾರ’ವೆನ್ನುತ್ತೇವೆ. ಅಂದು ಕಾಲವನ್ನು ಗಡಿಯಾರದಲ್ಲಿ, ಪ್ರತಿಕೃತಿಯನ್ನು ಝೆರಾಕ್ಸಿನಲ್ಲಿ ಹಾಗೂ ಬೆವರಿನ ಬೆಲೆಯನ್ನು ಕರೆನ್ಸಿಯೊಳಗೆ ಹಿಡಿದಿರಿಸಲಾಯಿತು. ಇಂದು ಆ ’ಮೌಲ್ಯ’ಗಳನ್ನು ಆ ’ನಾಮಧೇಯ’ದಿಂದ ಬಿಡಿಸುವುದೇ ಪ್ರಯಾಸಕರವಾಗಿದೆ!
Comments
ಉ: ಇತಿಹಾಸವು ಮರುಕಳಿಸಿದಲ್ಲಿ, ಗಡ್ಡವೇ ಬುದ್ಧಿವಂತಿಕೆಯಾದಲ್ಲಿ, ಕಾಲವು ...