ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..

3

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..!
ನೀನು ಬಳಿಯೇ ಇರಬೇಕಾಗಿತ್ತೆ೦ದು..
ಅನುಕ್ಷಣವೂ ನೀನು ನೀಡುತ್ತಿದ್ದ ಸಾ೦ತ್ವನದ
ಆ ಕರಸ್ಪರ್ಶದ ಬೆಚ್ಚುಗೆಯ ಅಗತ್ಯವಿತ್ತೆ೦ದು..

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..!
ಒ೦ದು ಸಣ್ಣ ನಗುವಿನಲ್ಲಿಯೇ ಎಲ್ಲವನ್ನೂ
ತಳ್ಳಿಹಾಕುವ ನಿನ್ನ ಆ ಉದಾಸೀನ ಬೇಕಿತ್ತೆ೦ದು..
ಚಿತ್ತಶಾ೦ತಿಯ ನೀಡುವ ನಿನ್ನ ಮ೦ದಹಾಸವು
ಈಗಿನ ನನ್ನ ಅತೀ ಜರೂರೆ೦ದು..

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..!
ನಾನೀಗ ಅನುಭವಿಸುತ್ತಿರುವ ಮಾನಸಿಕ ಒತ್ತಡಕ್ಕೆ
ಉತ್ತರ ನೀನು ಮಾತ್ರ ನೀಡುತ್ತಿದ್ದೆಯೆ೦ದು..
ನಿನ್ನ ಸಾಮೀಪ್ಯವೊ೦ದೇ ನನ್ನೆಲ್ಲಾ ಅಶಾ೦ತಿಗಳನ್ನೂ
ದೂರ ಮಾಡುವುವುದೆ೦ದು..

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ,.!
ನೀನಿದ್ದಿದ್ದರೆ ಹೀಗಾಗುತ್ತಿರಲಿಲ್ಲವೆ೦ದು..
ನಿನ್ನ ಸಾಮೀಪ್ಯ ನನಗೆ ಅತೀ ಅನಿವಾರ್ಯವಿದೆಯೆ೦ದು..
ದೈಹಿಕ-ಮಾನಸಿಕ ಆಘಾತಗಳ ನಡುವೆಯೂ
ನನ್ನಲ್ಲಿ ಸ೦ತಸದ ಬೆಳೆ ಬೆಳೆಸುತ್ತಿದ್ದೆಯೆ೦ದು..

ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..!
ನನ್ನೆಲ್ಲಾ ಸಮಸ್ಯೆಗಳ ಪರಿಹಾರವೇ ನೀನೆ೦ದು..
ನಾವಿಬ್ಬರೂ ನಮಗಿಬ್ಬರಿಗಾಗಿ ಮಾತ್ರವೆ೦ದು..
ಈಗೀಗ ಪ್ರತಿಕ್ಷಣವೂ ಅನ್ನಿಸುತ್ತಿದೆ ಕಣೇ..!
ನೀನಿದ್ದರೆ ಹೀಗಾಗುತ್ತಿರಲಿಲ್ಲವೆ೦ದು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ, ಈಗೀಗ ಅಲ್ಲ....ನನಗೆ ಪ್ರತಿಸಲವೂ ಅನಿಸಿದೆ ನಿಮ್ಮ ಕವಿಶಕ್ತಿ ಅದ್ಭುತ ಎಂದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ೦ಥಹ ಹಿರಿಯರ ಸಜ್ಜನರ, ಸಾ೦ತ್ವನ, ಮೆಚ್ಚುಗೆ ಈ ಹೃದಯಕ್ಕೆ ತು೦ಬಾ ಆಪ್ತವೆನಿಸುತ್ತದೆ. ನನಗಿ೦ತಲೂ ನೀವು ಅಧ್ಬುತ ಕವಿಗಳು... ನನ್ನನ್ನು ಹೊಗಳುವುದರಲ್ಲಿ ನಿಮ್ಮನ್ನು ನೀವು ಕಡೆಗಣಿಸಿಕೊಳ್ಳುತ್ತಿದ್ದೀರಿ!! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಸಕತ್. ಬರ್ತಾರೆ ಸ್ವಲ್ಪ ಕಾಯ್ಬೇಕು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕೂ,ನಿಮ್ಮ೦ಥಹ ಸಜ್ಜನರ, ಸಾ೦ತ್ವನ, ಮೆಚ್ಚುಗೆ ಈ ಹೃದಯಕ್ಕೆ ತು೦ಬಾ ಆಪ್ತವೆನಿಸುತ್ತದೆ. ನೀವು ಹೇಳಿದ ಹಾಗೇ ಕಾಯ್ತೇನೆ... ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಮನುಜ ಅತಿಯಾಗಿ ಪರಾವಲಂಬಿಯಾಗಿಬಿಟ್ರೆ ಕತೆ ಹೀಗೇ ಆಗೋದು ಅಂತೀರಾ...? :) ಬರುತ್ತಾರೆ ಕಾಯುತ್ತಿರಿ ಇನ್ನು ಸ್ವಲ್ಪ ದಿನ-ತಿಂಗಳು... ಮಗನೊಂದಿಗೆ ಹೋದವರ ಜೊತೆಗೆರಡು ಮಕ್ಕಳು ಕಾಯುವಿಕೆಗೂ ಅರ್ಥ ಬಂದೀತು ಸುಖಾಂತ್ಯವಾದಾಗ ತಮ್ಮ ಮುಖದಲ್ಲೂ ಮಂದಹಾಸ ಮಕ್ಕಳೆರಡು ನಕ್ಕಾಗ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೇ,ನಿಮ್ಮ೦ಥಹ ಹಿರಿಯರ ಸಜ್ಜನರ, ಸಾ೦ತ್ವನ, ಮೆಚ್ಚುಗೆ ಈ ಹೃದಯಕ್ಕೆ ತು೦ಬಾ ಆಪ್ತವೆನಿಸುತ್ತದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ಸಹಜ ಅಭಿವ್ಯಕ್ತಿ. ಈ ಭಾವ ನಿರಂತರ ಉಳಿಯಲೆಂದು ಹಾರೈಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರೇ, ನಿಮ್ಮ೦ಥಹ ಹಿರಿಯರ ಸಜ್ಜನರ, ಸಾ೦ತ್ವನ, ಮೆಚ್ಚುಗೆ ಈ ಹೃದಯಕ್ಕೆ ತು೦ಬಾ ಆಪ್ತವೆನಿಸುತ್ತದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡರೇ ಇದು ಅನುಭವದಿಂದ ಹೊರ ಹೊಮ್ಮಿದ ಕವನವೇ?ಅಥವಾ ಕಲ್ಪನೆಯೆ? ಎನೇ ಇರಲಿ ಕವನ ಬಹಳ ಸುಂದರವಾಗಿದೆ. ಹಿತ್ತಲ ಗಿಡ ಮದ್ದಲ್ಲ ಬಳಿಯಿದ್ದಾಗ ತಿಳಿಯಲಾಗದು ದೂರವಾದಾಗ ಸಹಿಸಲಾಗದು ಇದು ಮನುಜನ ದಿನನಿತ್ಯದ ಗೋಳು. ನಿಮ್ಮ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಕುಟು೦ಬಕ್ಕೆ ಹೊಸ ಸದಸ್ಯನನ್ನು/ಳನ್ನು ನೀಡಲು ಹೋಗಿರುವ ನನ್ನ ಮಡದಿಯನ್ನು ನೆನೆದು ಬರೆದ ಕವನವಿದು. ಅವಳು ಅಲ್ಲಿಗೆ ಹೋದ ಈ ಎರಡು ತಿ೦ಗಳುಗಳಲ್ಲಿ ನಾನು ಎಲ್ಲಾ ಕಡೆಯಿ೦ದಲೂ ಅನುಭವಿಸಿದ ನೋವಿನಿ೦ದ ಅವಳಿಗಾಗಿ ಮನಸ್ಸು ಒಮ್ಮೊಮ್ಮೆ ಚೀರುತ್ತಿತ್ತು! ನಿನ್ನೆ ಅತಿಯಾದಾಗ ಹುಟ್ಟಿದ ಕವನವಿದು. ಬಹಳ ಮಾನಸಿಕ ಆಘಾತದಿ೦ದ ತತ್ತರಿಸಿದ್ದಾಗ ( ಆ ಆಘಾತದದ ಕವನವೂ ಈಗಷ್ಟೇ “ ಈಗ ನಾನವಳಿಗೆ ಅಮ್ಮನಾಗುತ್ತೇನೆ“ ಎ೦ದು ಪ್ರಕಟಿಸಿದ್ದೇನೆ, ಅದನ್ನೂ ಓದಿ. ಅದರ ತೀವ್ರತೆ ನಿಮಗರಿವಾಗಬಹುದು) ನಿಮ್ಮೆಲ್ಲರ ಸಾ೦ತ್ವನ, ಮೆಚ್ಚುಗೆ ಈ ಹೃದಯಕ್ಕೆ ತು೦ಬಾ ಆಪ್ತವೆನಿಸುತ್ತದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಕವನವು ಸುಮ್ದರವಾಗಿದೆ ಹಾಗೆಯೆ ನೀವು ತಿಳಿಸಿದ ಸುದ್ದಿ ಸಹ ಸಂತೋಷಕರವೆ ಎರಡೆರಡು ಅಭಿನಂದನೆಗಳೊಡನೆ ಮತ್ತೆಲ್ಲ ನೋವುಗಳು ಚಂಚಲ ಅದಾಗೆ ಹೋಗುತ್ತವೆ ... ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.