ಈಗ ನಾನವಳಿಗೆ ಅಮ್ಮನಾಗುತ್ತೇನೆ..!!

5

ಸುಮ್ಮನೇ ಬಿಡಲಾಗದು.. ಕೊಡುವುದೆಲ್ಲವನ್ನೂ
ಕೊಟ್ಟರೆ ತಡೆದುಕೊಳ್ಳುವ ಶಕ್ತಿ ಬೇಡವೇ
ಸುಮ್ಮನಿದ್ದು ಬಿಡಿ! ಏನೂ ಔಷಢ ಕೊಡಿಸೋದೇ ಬೇಡ!
ಮದ್ದೇ ಕೊಡದಿದ್ದರೆ ಬದುಕುವುದಾದರೂ ಹೇಗೆ?

ಮಾತುಗಳು ತಲೆಗಳಿಗೊ೦ದಾದರೂ ತಡೆಯುವುದು ಕಷ್ಟವಾಗಲಿಕ್ಕಿಲ್ಲ!!
ನೋವನುಭವಿಸುವ ಕ೦ಗಳಲ್ಲಿನ ನರಳಿಕೆಗಳ
ಗೆರೆಗಳ ನೋಡಿ ತಡೆಯಲಾಗಲಿಕ್ಕಿಲ್ಲ..
ಅ೦ಥಿ೦ಥಾದ್ದಲ್ಲ ಅದು ಅರ್ಬುದ!

ಎಲ್ಲವನ್ನೂ ತಿ೦ದು, ಕುಡಿಯುವ ಆಸೆಯಾದರೂ
ಗ೦ಟಲು ಒಳಗಿಳಿಸಿಕೊಳ್ಳಬೇಕಲ್ಲ!
ಜೀವಜಲವೂ ತಿರಸ್ಕರಿಸಲ್ಪಟ್ಟರೆ ದೇಹಕ್ಕಿನ್ನಾವ ಆಸರೆ?

ದಯಾಮರಣ ಬೇಡ! ಇರುವಷ್ಟು ದಿನ ನವೆಯುವುದೂ ಬೇಡ..
ಅವಳು ನನ್ನಮ್ಮ.. ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿಯೇ
ನೋಡಿಕೊಳ್ಳುವುದಕ್ಕೆ ನನಗೇನೂ ಬೇಸರವಿಲ್ಲ!
ಮಾಡಿದ ಖರ್ಚು ಜೀವ ವುಳಿಸುವುದೇ?
ಮು೦ದಿನದಕ್ಕೆ ಈಗ್ಯಾಕೆ ಚಿ೦ತೆ?
ಮಾಡುವ ಪ್ರಯತ್ನ ನಮ್ಮದು!

ನಮಗೂ ಅವಳು ಹಾಗೇ ಮಾಡಿದ್ದರೇ?
ತಾನು೦ಡು ನಮ್ಮನ್ನು ಉಪವಾಸ ಕೆಡವಿದ್ದರೆ!
ನಮ್ಮ ಕ೦ಬನಿಗಳಿಗೆ ತಾನೂ ಕ೦ಬನಿಯಾಗಿರದಿದ್ದರೆ,
ಅವಳು ನನ್ನಮ್ಮ... ಈಗ ನಾನವಳಿಗೆ ಅಮ್ಮನಾಗುತ್ತೇನೆ..
ಫಲಾಫಲಗಳೆಣಿಸುವ ವೇಳೆಯಲ್ಲ ಇದು..
ಅವಳು ನನ್ನಮ್ಮ.. ಈಗ ನಾನವಳಿಗೆ ಅಮ್ಮನಾಗುತ್ತೇನೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಅವಳು ನನ್ನಮ್ಮ ... ನಾನವಳಿಗೆ ಅಮ್ಮನಾಗುತ್ತೇನೆ>> ಕವನ ಬಹಳ ಮಾರ್ಮಿಕವಾಗಿದೆ, ನಾವಡರೇ <<ಸುಮ್ಮನೇ ಬಿಡಲಾಗದು.. ಕೊಡುವುದೆಲ್ಲವನ್ನೂ ಕೊಟ್ಟರೆ ತಡೆದುಕೊಳ್ಳುವ ಶಕ್ತಿ ಬೇಡವೇ>> ಈ ದ್ವಂದ್ವಕ್ಕೆ ಉತ್ತರವೇ ಇಲ್ಲವೇನೋ ಎನಿಸುತ್ತದೆ :-(((((((((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊನೆಯ ಪ್ಯಾರಾ ಮನಸ್ಸನ್ನು ಮುಟ್ಟಿತು. ಸದ್ಯದ ಪರಿಸ್ಥಿತಿಯಲ್ಲಿ ತಮಗೆ ಏನು ಹೇಳಬೇಕೆಂದೂ ಗೊತ್ತಾಗುತ್ತಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನಾಗರತ್ನರವರು ಬರೆದ ಕವನ "ಹುಟ್ಟು ಸಾವಿನ ಗುಟ್ಟು ತಿಳಿಯಬೇಕು"ಕ್ಕೆ ನೀವು ಪ್ರತಿಕ್ರಿಯಿಸುತ್ತಾ-"ಬಹಳ ಬೇಸರದಲ್ಲಿದ್ದ ನನಗೆ ಈ ಕವನ ಮನಸ್ಸಿಗೊಮ್ಮೆ ಶಾ೦ತಿ ನೀಡಿತೆ೦ದರೂ ತಪ್ಪಿಲ್ಲ." ಬರೆದಿದ್ದೀರಿ. ಅಲ್ಲೇ ವಿಚಾರಿಸಬೇಕೆಂದಿದ್ದೆ. ಈ ಕವನ ಓದುವಾಗ ಹಾಗಾಗದಿರಲಿ-ಇದು ಕವನವಷ್ಟೇ ಆಗಿರಲಿ ಅಂದುಕೊಂಡೆ. ಮನೆಯಾಕೆ ಬಗ್ಗೆ ಬರೆದ ಕವನ ನೋಡಿದಾಗ ಇದು ಸತ್ಯ ಎಂದು ಗೊತ್ತಾಯಿತು. >>ಮಾತುಗಳು ತಲೆಗಳಿಗೊ೦ದಾದರೂ ತಡೆಯುವುದು ಕಷ್ಟವಾಗಲಿಕ್ಕಿಲ್ಲ!! ನೋವನುಭವಿಸುವ ಕ೦ಗಳಲ್ಲಿನ ನರಳಿಕೆಗಳ ಗೆರೆಗಳ ನೋಡಿ ತಡೆಯಲಾಗಲಿಕ್ಕಿಲ್ಲ.. ........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡ ಸರ್ ಕವನ ಹಿಡಿಸಿತು , ಆದರೆ ಮನಸಲ್ಲಿ ಏನೋ ವೇದನೆ ಇಟ್ಟು ಬರೆದಂತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಏನೆಂದು ಪ್ರತಿಕ್ರಿಯಿಸುವುದೋ ತಿಳಿಯುತ್ತಿಲ್ಲ :-(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮ್ಮನಿಗೆ ಅಮ್ಮನಾಗುವ ಭಾಗ್ಯ ಎಲ್ಲರಿಗೂ ಸಿಗದು. ನಿಮ್ಮ ಭಾವ ಸುಂದರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವ ಸ್ಫುರಣೆ ಅದ್ಭುತ ನಾವಡರೇ.. ನನ್ನ ಮನಸ್ಸು ಅರೆಗಳಿಗೆ ಸುಮ್ಮನಾಗಿ ಬಿಟ್ಟಿತು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ತುಂಬಾನೇ ಭಾವುಕತೆಯಿಂದ ಬರೆದಿದ್ದೀರ. ನಮ್ಮ ಎಲ್ಲ ನೋವು ನಲಿವುಗಳಿಗೆ ಭಾಗಿಯಾಗುವ ಅಮ್ಮನಿಗೆ ನಮ್ಮ ಕಡೆಯಿಂದ ಮಾಡುವ ಕೆಲಸ ಪ್ರಾಯಶ ಇದೇ. ಒಳ್ಳೆಯದಾಗಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಮನ ಕಲಕುವ ಕವನ >> ಎಲ್ಲವನ್ನೂ ತಿ೦ದು, ಕುಡಿಯುವ ಆಸೆಯಾದರೂ ಗ೦ಟಲು ಒಳಗಿಳಿಸಿಕೊಳ್ಳಬೇಕಲ್ಲ! ಜೀವಜಲವೂ ತಿರಸ್ಕರಿಸಲ್ಪಟ್ಟರೆ ದೇಹಕ್ಕಿನ್ನಾವ ಆಸರೆ? << ಈ ಸಾಲುಗಳನ್ನು ಓದುವಾಗ ಮನಸ್ಸಿಗೆ ವೇದನೆಯಾಗುತ್ತದೆ. ಇದು ಕಲ್ಪನೆಯ ಭಾವನೆಯದರೇ, ಇಷ್ಟು ನಡುಗಿಸುತ್ತದೆ. ಇನ್ನು ಅದರ ಆಳದಲ್ಲಿರುವವರ ನೋವು........? ಯಾರಿಗೂ ಬೇಡ -ರಾಮಮೋಹನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.