ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

4.5

ಮನಸ್ಸಿನ ಮೂಲೆಯಲ್ಲೆಲ್ಲೋ ಬುಧ್ಧನ ನಗು

ಹನಿ-ಹನಿಯ೦ತೆ ತೊಟ್ಟಿಕ್ಕುತ್ತಿರುವ ನಳದ ನೀರು

ಸದ್ಯಕ್ಕೆ ಜ್ಞಾನೋದಯವೆ೦ದರೆ ನೀರಿನ ಟ್ಯಾ೦ಕು ತು೦ಬಿದ೦ತೆ...

ಜಿರಿಜಿರಿ ಮಳೆ ಸದಾ ಬೀಳುತ್ತಿದ್ದರೂ 

ತೊಟ್ಟಿಕ್ಕುತ್ತಲೇ ಇರುವ ನಳದ ನೀರಿನಿ೦ದ

ಆಗಾಗ ಟ್ಯಾ೦ಕು ತು೦ಬಿದಂತೆ ಕಂಡರೂ

ಟ್ಯಾ೦ಕಿಯೊಳಗಿನ ಸಣ್ಣ ರ೦ಧ್ರದಿ೦ದ ನೀರು ಸದಾ ಪೋಲು!!

ನೀರು ತೊಟ್ಟಿಕ್ಕುತ್ತಲೇ ಇದೇ.. ತೂತಿನಿ೦ದ ನೀರು ಹೊರಬೀಳುತ್ತಲೇ ಇದೆ!!

ಭೋಧಿವೃಕ್ಷದ ಸುತ್ತೆಲ್ಲಾ ಅಯೋಮಯವೆನ್ನಿಸುವ ಸು೦ಟರಗಾಳಿ

ಧ್ಯಾನಕ್ಕೆ ಕೂತ ಬುಧ್ಧನ ಮನವೆಲ್ಲಾ ಅಲ್ಲೋಲ ಕಲ್ಲೋಲ

ನಳವನ್ನು ನಿಲ್ಲಿಸಿದರೆ ಬೆಳಿಗ್ಗೆ ಸ್ನಾನಕ್ಕೆ ನೀರಿಲ್ಲ...

ಟ್ಯಾ೦ಕು ತು೦ಬುವ ಹಾಗಿಲ್ಲ!!

ಮನದ ತು೦ಬೆಲ್ಲಾ  ಏನೋ ಒ೦ದು ರೀತಿಯ ವ್ಯಾಕುಲತೆ, ಅಕ್ಕರೆ

ಆರೈಕೆಗಾಗಿ ಸದಾ ಬಯಸುವ ಮನದೊಳಗೆ

ಸ೦ಸಾರ ಭೀತಿ- ಸನ್ಯಾಸ ಸ್ವೀಕರಿಸುವ ಭ್ರಾಂತಿ! 

ಕಾಲಕ್ಕಿಲ್ಲ ಉತ್ತರ.. ಕನ್ನಡಿಯಲ್ಲಿ ಕ೦ಡದ್ದು

ಬೇರಾರದ್ದೋ ಮುಖ! ನನ್ನದೂ ಅಲ್ಲ-ಬುಧ್ಧನದೂ ಅಲ್ಲ!!

ಕಾಲದ ಕನ್ನಡಿಯಲ್ಲೀಗ ಯಾವ ಪ್ರತಿಬಿ೦ಬ ವೂ ಕಾಣಲು ಅಸಾಧ್ಯ...

ಏಕೆ೦ದರೆ ಕನ್ನಡಿಯ ಗಾಜು ಒಡೆದಂತಿದೆ!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ನಮ್ಮ ಜೀವನ ಪಥದಲ್ಲಿ ಎದುರಾಗುವ ಸಣ್ಣ ಪುಟ್ಟ ಕಷ್ಟ ಕಾರ್ಪಣ್ಯಗಳೂ ನಮ್ಮನ್ನು ಎದೆಗುಂದುವಂತೆ ಮಾಡುತ್ತವೆ. ಮನಸ್ಸಿನ ಮೇಲೆ ಭ್ರಾಂತಿಯ ಪರದೆಯನ್ನು ನಿರ್ಮಾಣ ಮಾಡಿಬಿಡುತ್ತವೆ. ಆದರೆ ಇವೆಲ್ಲವೂ ತಾತ್ಕಾಲಿಕ ಎನ್ನುವ ಅರಿವು ಸದಾ ಇರಲಿ. ಮೋಡ ಮುಸುಕಿದರೆ, ಸೂರ್ಯ ಕಾಣೆಯಾಗಿದ್ದಾನೆ ಎಂದು ಅರ್ಥವಲ್ಲ. ಮಳೆ ಸುರಿಯಲಿದೆ ಎಂಬುದರ ಸೂಚನೆ ಅಷ್ಟೇ. ಗ್ರಹಣವೆಂದರೆ ಸೂರ್ಯ ಚಂದ್ರರು ಇಲ್ಲವೆಂದಲ್ಲ. ಆ ಸಮಯ, ಆ ಜಾಗ, ನಾವೆಲ್ಲಾ ಅವರಿಂದ ಮರೆಯಲ್ಲಿದ್ದೇವೆ ಎಂದರ್ಥ ಅಷ್ಟೇ. ಕಾಲ ಸರಿದಂತೆ ಗ್ರಹಣ ವಿಮೋಚನೆಯಾಗುತ್ತದೆ. ಮಳೆ ಸುರಿದು ಆಕಾಶ ಶುಭ್ರವಾದಾಗ ಮತ್ತೆ ಸೂರ್ಯ ಪ್ರಭೆ ಕಾಣಿಸುತ್ತದೆ. ಇವೆಲ್ಲಾ ಕಾಲಚಕ್ರದಲ್ಲಿನ ಆಗುಹೋಗುಗಳು. ನಮ್ಮ ಮಾನಸಿಕ ದುಸ್ಥಿತಿಯಿಂದಾಗಿ ಕಾಲದ ಕನ್ನಡಿಯ ಗಾಜು ಒಡೆದಂತೆ ಅನಿಸುವುದಷ್ಟೇ ವಿನಹ, ಕಾಲದ ಕನ್ನಡಿ ಎಂದೂ ಒಡೆಯುವುದಿಲ್ಲ. ಕಾಲದ ಕನ್ನಡಿಯೊಂದೇ ಸದಾ ಕಾಲ ಶುಭ್ರವಾಗಿದ್ದು, ನಿಖರ ಪ್ರತಿಬಿಂಬವನ್ನು ನಮಗೆ ನೀಡುತ್ತಾ ಇರುವ ಸಾಧನ! ನಮ್ಮ ಬಳಿ ಯೋಚಿಸಲು ಒಂದಿಷ್ಟು ... ಅಲ್ಲ.. ಒಂದಷ್ಟು ಇದ್ದರೂ, ಒಮ್ಮೊಮ್ಮೆ ನಾವು ಯೋಚಿಸುವುದನ್ನೇ ಬಿಡುತ್ತೇವೆ. ಹಾಗಾಗದಿರಲಿ ಎಂಬುದೇ ಹಾರೈಕೆ. -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆ ಮನಸ್ಸಿಗೆ ಸಾ0ತ್ವನ ನೀಡಿತು. ಮೆಚ್ಚುಗೆಗಾಗಿ ವ0ದನೆಗಳು. ನಮಸ್ಕಾರಗಳೊ0ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡ ಸರ್ ಚೆನ್ನಾಗಿದೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ‌0ದನೆಗಳು ಕಾಮತರೇ. ನಮಸ್ಕಾರಗಳೊ0ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಒಮ್ಮೊಮ್ಮೆ ಮನದಲ್ಲಿ ನಡೆಯುವ ಭಾವ ಸ೦ಘರ್ಷವನ್ನು ಸು೦ದರವಾಗಿ ಪದಗಳಲ್ಲಿಳಿಸಿರುವಿರಿ. ಬಾಳ ಹಾದಿಯಲ್ಲಿ ಯಾರಿಗಿಲ್ಲ ನೋವು, ತಳಮಳ? ಎಲ್ಲರಿಗೂ ಇದ್ದದ್ದೆ! ಇಷ್ಟು ಬೇಗನೆ ಕನ್ನಡಿಯ ಗಾಜು ಒಡೆಯದಿರಲಿ, ಯೋಚಿಸಲು ಒ೦ದಿಷ್ಟು ಉತ್ತಮ ವಿಚಾರಗಳು ನಿರ೦ತರ ಹರಿದು ಬರುತ್ತಿರಲಿ, ಆರೋಗ್ಯ ಬೇಗ ಸುಧಾರಿಸಲಿ ಎ೦ದು ಹಾರೈಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆ ಮನಸ್ಸಿಗೆ ಸಾ0ತ್ವನ ನೀಡಿತು. ಮೆಚ್ಚುಗೆಗಾಗಿ ವ0ದನೆಗಳು ಮ0ಜಣ್ಣ‌. ನಮಸ್ಕಾರಗಳೊ0ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಿಯ ಗಾಜು ಒಡೆದಿಲ್ಲ ನಾವಡರೇ ,ಅದು ಕಲ್ಪನೆ ಅಷ್ಟೆ. ನಳದಿ೦ದ ಹನಿ ತೊಟ್ಟಿಕ್ಕುತ್ತಿರಲಿ ಸದಾ..ತೂತಿನಲಿ ನೀರು ಹೊರಹೋಗುತ್ತಿರಲಿ. ಆ ಚ೦ದವನ್ನು ಆಸ್ವಾದಿಸುತ್ತಿದ್ದ೦ತೆ ಕಾಲ ಬದಲಾಗುತ್ತದೆ.ಕನ್ನಡಿಯ ಮಸುಕು ಹರಿದು ಶುಭ್ರವಾಗುತ್ತದೆಯೆ೦ಬ ವಿಶ್ವಾಸವಿದ್ದರೆ ಸಾಕು. ಭಾವನೆಗಳು ತು೦ಬಿ ಹರಿಯುತ್ತಿರುವ ನುದಿಗಳಿಗಾಗಿ ಅಭಿನ೦ದನೆ,ಶುಭಹಾರೈಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆ ಮನಸ್ಸಿಗೆ ಸಾ0ತ್ವನ ನೀಡಿತು. ಮೆಚ್ಚುಗೆಗಾಗಿ ವ0ದನೆಗಳು ಮುಳಿಯರೇ.. ನಮಸ್ಕಾರಗಳೊ0ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ಕನ್ನಡಿಯ ಗಾಜು ಒಡೆದಂತಿದೆ ಆದರೆ ಒಡೆದಿಲ್ಲವಲ್ಲ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗಾಗಿ ವ0ದನೆಗಳು ಚಿಕ್ಕೂ. ನಮಸ್ಕಾರಗಳೊ0ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಕಾಲದ ಕನ್ನಡಿಯ ಪ್ರತಿಪಲನ ಕ್ರಿಯೆ ನಿರಂತರ ಅದರ ಗಾಜು ಒಡೆದಂತೆ ಗೋಚರಿಸಿದರೆ ಅದು ಸತ್ಯವಾಗಬೇಕಿಲ್ಲ. ಉಬ್ಬರವಿಳಿತದಂತೆ ನಮ್ಮ ಮನಸ್ಸು ಯಾವಾಗಲೊ ಸಂತೊಷದ ಉತ್ತುಂಗಕ್ಕೆ ಏರುತ್ತದೆ ಮತ್ತೊಮ್ಮೆ ಕಾರಣವಿಲ್ಲದೆಯು ಕುಗ್ಗಿಹೋಗುತ್ತದೆ. ನೀವೆ ಹಿಂದೊಮ್ಮೆ ಹೇಳಿದಂತೆ ಕಷ್ಟಗಳಿಗೆ ನಿರ್ಲಿಪ್ತರಾಗಬೇಕು, ಸಂತೋಷವನ್ನು ದೂರ ನಿಂತು ಕಾಣಬೇಕು. ನೀವೆ ಹೇಳಿದಂತೆ ಕನ್ನಡಿಯಲ್ಲೀಗ ಯಾರದೊ ಮುಖ ಕಾಣುತ್ತಿದೆ, ಅಂದರೆ ಒಡೆದಿಲ್ಲ ! ನಿಮ್ಮೆಲ್ಲ ಭಾವಗಳಿಗೆ ಉತ್ತರ ಕಾಲ ! ನಿಜ ಕಾಲವೆ ! ... ನಿಮ್ಮವ ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.. ಕಾಲಾಯ ತಸ್ಮೈ ನಮ: ಪಾರ್ಥರೇ! ಮೆಚ್ಚುಗೆಗಾಗಿ ವ0ದನೆಗಳು. ನಮಸ್ಕಾರಗಳೊ0ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಿ ಒಡೆದ0ತಿದೆ ಎ0ಬುದು ಭ್ರಾ0ತಿಯಾಗಿರಲಿ ಅಷ್ಟೆ ... ಎಲ್ಲ ಸಮಸ್ಯೆಗೂ ಸನ್ಯಾಸ ಪರಿಹಾರವಲ್ಲ ... ಈಗ ಬಿಡಿ ಸನ್ಯಾಸವೆ0ದರೆ ಬೇರೆಯೇ ಕಥೆ ... ಕನ್ನಡಿಯಲ್ಲಿ ಕ0ಡದ್ದು ನಿಮ್ಮ ಮುಖವಲ್ಲ ಎ0ದರೆ ಸಮಸ್ಯೆಯೂ ನಿಮ್ಮದಲ್ಲ ಎ0ದುಕೊಳ್ಳೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ. ಮೆಚ್ಚುಗೆಗಾಗಿ ವ0ದನೆಗಳು ಶ್ರೀನಾಥರೇ.. ನಮಸ್ಕಾರಗಳೊ0ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಲಕ್ಕೆ ಎಂತಹದನ್ನೂ ಮರೆಸುವ ಶಕ್ತಿ ಇದೆ! ಇದು ನೀವು ಅರಿಯದ್ದೇನೂ ಅಲ್ಲ. [ಸ೦ಸಾರ ಭೀತಿ- ಸನ್ಯಾಸ ಸ್ವೀಕರಿಸುವ ಭ್ರಾಂತಿ!] ಸನ್ಯಾಸ ಭೀತಿಯಿಂದಂತೂ ಸ್ವೀಕರಿಸುವಂತಹುದಲ್ಲ, ಧೈರ್ಯಶಾಲಿಗೆ ಮಾತ್ರ ಸನ್ಯಾಸ ಸಾಧ್ಯ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು! ನೀವು ಹೇಳಿದ್ದು ಸತ್ಯಸ್ಯ ಸತ್ಯ ಕವಿನಾಗರಾಜರೇ.. ಮೆಚ್ಚುಗೆ ಹಾಗೂ ಸಲಹೆಗಾಗಿ ವ0ದನೆಗಳು. ನಮಸ್ಕಾರಗಳೊ0ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.