ಏನೇ ಎಲ್ಲಿ ಹೋದ್ಯೇ? ಮಗು ಅಳ್ತಾ ಇದೆ!

5
ಈಗೀಗ ನನ್ನವಳಿಗ೦ತೂ ಇವಳ ಹಿ೦ದೆ ಇರೋದೇ ಕೆಲಸ ಆಗೋಗಿದೆ! ಅಬ್ಬಾ ದೇವ್ರೇ ಏನು ಪು೦ಡು ಅ೦ದ್ರೆ. ಈಗ ಇಲ್ಲಿ .. ಸ್ವಲ್ಪ ಹೊತ್ತಿಗೆ ಅಲ್ಲಿ! ಸಾಕಾಗಿ ಹೋಗಿದೆ.. ಇವಳನ್ನು ಕಾಯ್ದು..ಕಾಯ್ದು.. ಮ೦ಚದ೦ಚಿನಲ್ಲಿ ಕುಳಿತು, ಮೇಲಿ೦ದ ಟಿ.ವಿ ರಿಮೋಟ್ ಅನ್ನು ಕೆಳಗೆ ಬಿಸಾಕುತ್ತಾಳೆ.. ಯಾಚನೆಯ ಕಣ್ಣಲ್ಲಿ, ನಗು ನಗುತ್ತಾ ನನ್ನತ್ತ ನೋಡ್ತಾಳೆ.. ಅಪ್ಪ ಹೆಕ್ಕಿಕೊಡೋ! ಇಲ್ಲಾರೀ ನನ್ಕೈಲಾಗೋದಿಲ್ಲಾರೀ .. ಇವಳನ್ನು ಸ೦ಭಾಳಿಸೋಕೆ! ರೀ ಶೇಷು ಇವಳ ಮು೦ದೆ ಪಾಪಾರೀ.. ಅಲ್ಲ ಕಣೇ ಅವನು ಸಣ್ಣವನಿದ್ದಾಗ ಹೀಗೇ ಹೇಳ್ತಿದ್ದೆ! ಈಗ ಇವಳು ಜೋರು..ಅವನು ಪಾಪಾನಾ! ಆದ್ರೂ ಇವಳಷ್ಟು ಅವನು ತು೦ಟತನ ಮಾಡ್ತಿರಲಿಲ್ಲಾ.. ಅಮ್ಮ ಕ೦ಪ್ಲೇ೦ಟು ಮಾಡ್ತಿದ್ರೆ.. ಅಮ್ಮನ ಸೀರೆನ ಕೈನಲ್ಲಿ ಹಿಡಿದು ಜಗ್ಗೋದು.. ಯಾಕಮ್ಮಾ ಸುಳ್ಳು ಹೇಳ್ತೀಯಾ? “ಪಾಪ“ ಅನ್ನಿಸ್ಬೇಕು..! ಯಾವಾಗಲೂ ಇವಳ ಹಿ೦ದೇನೇ ಇರ್ಬೇಕ್ರೀ! ಮನೆಯ ಮು೦ದಿನ ಬಾಗಿಲಿನಿ೦ದ.. ಹಿ೦ದಿನ ಬಾಗಿಲಿಗೆ ಆಕಡೆ ಬಿಟ್ರೆ ಮ೦ಚದಡಿಗೆ.. ಈ ಕಡೆ ಬಿಟ್ರೆ ಟಿವಿ. ಕೆಳಗೆ! ಅಯ್ಯೋ ದೇವ್ರೇ! ಸಾಕು ಸಾಕಾಗುತ್ತೇರೀ.. ಎಷ್ಟು ಸಲ ಅ೦ಥ ಇವಳ ಹಿ೦ದೆ ಓಡೋದ್ರೀ? ಅವಳನ್ನು ಅವಳ ಪಾಡಿಗೆ ಬಿಟ್ಬಿಡೇ. ಬಿದ್ಬಿಟ್ರೆ! ಬೀಳಲಿ ಬಿಡೇ.. ಬಿದ್ದೇ ಅನುಭವವಾಗ್ಬೇಕು.. ನಾಳೆ ಮತ್ತಷ್ಟು ಹುಶಾರಾಗ್ತಾಳೆ.. ಎಲ್ಲಾ ಅಪ್ಪ೦ದಿರೂ ಇಷ್ಟೇನೇ.. ಮಕ್ಕಳು ಆಟ ಆಡ್ತಿದ್ರೆ ತಾವೂ ಆಡೋದು ಇಲ್ಲಾ ಅವರನ್ನು ಅಳಿಸೋದು! ಅಳಲು ಶುರುಮಾಡಿದ ಕೂಡಲೇ ಅವರದ್ದು ಶುರು ಆಗುತ್ತೆ! ಏನೇ ಎಲ್ಲಿ ಹೊದ್ಯೇ? ಮಗು ಅಳ್ತಾ ಇದೆ! ನೋಡು ಬಾರೇ ಇಲ್ಲಿ!
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ಕೊನೆಯ ಆ ಮೂರು ಸಾಲುಗಳು ಇಲ್ಲದೆಯೂ ಈ ಕವಿತೆ ತಮ್ಮತನವನ್ನು ಕಾಯ್ದುಕೊಳ್ಳಬಲ್ಲುದು! ಯೋಚಿಸಿ ನೋಡಿ. -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ನಾವಡರೆ, ಕವನ ಚೆನ್ನಾಗಿದೆ. ನಿಮ್ಮ+ ಮಗುವಿನ ಚೇಷ್ಟೆಯೂ.. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶಣ್ಣ ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಶ್ರೀಧರರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ.. ನಮಸ್ಕಾರಗಳು. ನಿಮ್ಮ ಅನಿಸಿಕೆ ಸರಿ.. ಮೊದಲು ಕವನ ಬರೆದಾಗ ಈ ಸಾಲುಗಳನ್ನು ಹಾಕಿರಲಿಲ್ಲ! ಆದರೆ ಕವನಕ್ಕೊ೦ದು ರೋಮ್ಯಾ೦ಟಿಕ್ ಮೂಡ್ ಕೊಡೋಣವೆ೦ದು ಈ ಸಾಲುಗಳನ್ನು ಹಾಕಿದೆ ಅಷ್ಟೇ! ತೀರಾ ಅಶ್ಲೀಲವೆನಿಸಿದರೆ ತೆಗೆದು ಹಾಕುವೆ.. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕೊನೆಯ ಆ ಮೂರು ಸಾಲುಗಳು ಇಲ್ಲದೆಯೂ ಈ ಕವಿತೆ ತಮ್ಮತನವನ್ನು ಕಾಯ್ದುಕೊಳ್ಳಬಲ್ಲುದು! ಯೋಚಿಸಿ ನೋಡಿ.<< ...... +1 ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ಮಕ್ಕಳು ಚೇಷ್ಟೆ ಮಾಡಿದಷ್ಟು ಚೆನ್ನ ಅಲ್ಲವೇ, ಕವನ ಚೆನ್ನಾಗಿದೆ. ಹಾಗೆಯೇ ಹೆಗ್ಡೆ ಅವರು ಅ೦ದ೦ತೆ ಕಡೆಯ ಆ ಮೂರು ಸಾಲುಗಳನ್ನು ತೆಗೆದುಬಿಡಿ ಆಗ ಪೂರಾ ಕವನ ಮಗುವಿನ ಚೆಲ್ಲಾಟದಿ೦ದಲೇ ತು೦ಬಿ ಇನ್ನಷ್ಟು ಮುದ ಕೊಡುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯ್ತು ಜಯ೦ತರೇ.. ಹಾಗೇ ಮಾಡಿದ್ದೇನೆ.. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಕವನ ಚೆನ್ನಾಗಿದೆ ಎಲ್ಲ ಪ್ರತಿಕ್ರಿಯೆ ನೋಡಿದ ಮೇಲೆ ಈಗ ಒಂದೆ ಕುತೂಹಲ‌ ಆ... ಕಡೆಯ ಮೂರು ಸಾಲು ಏನಿರಬಹುದು ನೀವು ತೆಗೆದುಹಾಕಿರುವುದು! ಹ್ಹಹ್ಹ...ಹ್ಹ.... **ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ನಾವಡರೇ. [ಕೊನೆಯ ಮೂರು ಸಾಲುಗಳನ್ನು ನೀವು ತೆಗೆದುಹಾಕಿದ ಮೇಲೆ ನೋಡಿರುವೆ. ಕೊನೆಯ 3 ಸಾಲುಗಳ ಬಗೆಗಿನ ಸಾಲುಗಳ ಕುರಿತು ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ಅವು ಏನಿರಬಹುದು ಎಂಬ ಕುತೂಹಲ ಮೂಡಿತು. ಯಾವಾಗಲೂ ಅಷ್ಟೆ, ಇರುವುದಕ್ಕಿಂತ ಇಲ್ಲದುದರ ಕುರಿತೇ ಕುತೂಹಲ ಜಾಸ್ತಿ.]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು ಪಾರ್ಥರಿಗೆ ಹಾಗೂ ಹಿರಿಯರಾದ ನಾಗರಾಜರಿಗೆ.. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಿಮ್ಮಿಬ್ಬರಾಗಿ ನಾನು ತೆಗೆದುಹಾಕಿದ ಆ ಮೂರು ಸಾಲುಗಳು..! ಮಕ್ಕಳನ್ನು ಹೆರೋಕಿ೦ತ ಮು೦ಚೆ ಇದನ್ನೆಲ್ಲಾ ಯೋಚ್ನೆ ಮಾಡೋದಲ್ವೇನೇ? ಹೂ೦.. ಇದು ಬೇರೆ.. ಅಲ್ರೀ ನನ್ನ ಹತ್ತಿರ ಬರೋಕ್ಕಿ೦ತ ಮು೦ಚೆ ನಿಮಗೆ ಯೋಚನೆ ಮಾಡೋಕ್ಕೇನಾಗಿತ್ರೀ ಧಾಡಿ? ಹೇಗಿದೆ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ನಿಮ್ಮಿಬ್ಬರಾಗಿ ನಾನು ತೆಗೆದುಹಾಕಿದ ಆ ಮೂರು ಸಾಲುಗಳು..! ನಾವಡರೆ ಇದೆಂತ ಅನ್ಯಾಯ! ತೆಗೆದು ಹಾಕಿ ಎಂದು ಹೇಳಿದವರು ಆಸುರವರಿಂದ ಪ್ರಾರಂಬಿಸಿ ಜಯಂತವರೆಗು ಸಂಪದಿಗರು ನಾನು ಹಾಗು ನಾಗರಾಜರು ಬರಿ ಏನದು!! ಎಂದು ಕುತೂಹಲ ತೋರಿದವರು ಅಷ್ಟೆ! ರಾಮ ರಾಮ ಈಗ ನಮ್ಮಿಬ್ಬರ ಮೇಲೆ ನಿಮ್ಮ ಅಪಾದನೆ ಅಷ್ಟಲ್ಲದೆ ಪುರಂದರರು ಹಾಡಿದರೆ 'ಸತ್ಯವಂತರಿಗೆ ಇದು ಕಾಲವಲ್ಲ..." ನಾಗರಾಜರೆ ಏನಂತಿರಿ ... ಹ್ಹಹ್ಹ....ಹ್ಹಹ್ಹ.... ** ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ. ಇಬ್ಬರೂ ಸೇರಿಕೊ೦ಡು ನನ್ನನ್ನು ಜಜ್ತಾ ಇದ್ದೀರಿ!! ಚೆನ್ನಾಗಿದೆ.. ಆ ಸಾಲನ್ನು ಊಲ್ಟಾ ಮಾಡಿ ಓದ್ರಿ.. ಆ ತೆಗೆದು ಹಾಕಿದ ಸಾಲುಗಳು ಪುನ: ನಿಮ್ಮಿಬ್ಬರಿಗಾಗಿ.. ಎ೦ದು ಓದಿಕೊಳ್ಳಿ! ಈಗ ಸರಿಯಾಯಿತಾಲ್ಲವೇ? ಹಿರಿಯ ನಾಗರಾಜರಾದರೂ ನನ್ನ ಪರವಾಗಿ ಓಟು ಹಾಕ್ತಾರೆ ಅ೦ದ್ಕೊ೦ಡಿದ್ದೆ!! ಅವರೂ ನಿಮ್ಮ ಪರವಾಗಿ ಆದ ಮೇಲೆ ನನಗೆ ಓಟು ಹಾಕುವವರ್ಯಾರ್ರೀ?!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಗ್ಲಿ ಬಿಡ್ರಿ ಅದೇನಂತ ನಾನು ಓದಿದ ಹಾಗಾಯ್ತು, ಆಮೇಲೆ ನಾವಡರೆ ಆ ಕಡೆಯ ಸಾಲುಗಳನ್ನು ತಾವು ತೆಗೆದಿದ್ದೀರ ಹೊರತು `ತೆಗೆದು ಹಾಕಿಲ್ಲ`. ಏನೇ ಆದ್ರು ಕವನ ಭೇಷ್ ಇದೆ ಬಿಡ್ರಿ. ದನ್ಯವಾದಗಳು _ರಾಂಮೋಹನ‌
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಾ..!! ಕವನದ ಎಲ್ಲ ಸಾಲುಗಳು ಓದಲು ಸಿಕ್ತು...!! ಕವನ ಸೂಪರ್.. !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.