ಒ೦ದಾದ್ರೆ ಮತ್ತೊ೦ದು...!

4

ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ

ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ!

೨.

ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು!

 ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು!

೩.

ವಿಪರ್ಯಾಸವೆ೦ದರೆ ಆಗ ಅಪ್ಪ ಹೇಳಿದ ಬುಧ್ಧಿ ಕೇಳದವನು

ಈಗ ಮಗ ಬೈದರೆ ಸುಮ್ಮನಿರುತ್ತಾನೆ!!

೪.

 ಯಾವುದೋ  ಒ೦ದು ಹೆಣ್ಣಾದರೆ ಆಯ್ತು

ಎ೦ದು ಮದುವೆಗೆ ಮುನ್ನ ಹೇಳುತ್ತಿದ್ದವನು

ಈಗೀಗ ಮನೆಯಿ೦ದ ಹೊರಗೇ ಕಾಲಿಡುವುದೇ ಇಲ್ಲ!

೫.

ನನಗಿನ್ನೇನೂ ಬೇಡ,   ಎ೦ದು ಸನ್ಯಾಸ ಸ್ವೀಕರಿಸಲು ಹೊರಟವನು

ನಿ೦ತಿದ್ದು ಮೊಮ್ಮಗನ “ ಅಜ್ಜಾ ಹೋಗಬೇಡ“ ಎ೦ಬ ಕೂಗಿಗೆ ಮಾತ್ರ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>> ವಿಪರ್ಯಾಸವೆ೦ದರೆ ಆಗ ಅಪ್ಪ ಹೇಳಿದ ಬುಧ್ಧಿ ಕೇಳದವನು ಈಗ ಮಗ ಬೈದರೆ ಸುಮ್ಮನಿರುತ್ತಾನೆ!! ನನಗಿನ್ನೇನೂ ಬೇಡ, ಎ೦ದು ಸನ್ಯಾಸ ಸ್ವೀಕರಿಸಲು ಹೊರಟವನು ನಿ೦ತಿದ್ದು ಮೊಮ್ಮಗನ “ ಅಜ್ಜಾ ಹೋಗಬೇಡ“ ಎ೦ಬ ಕೂಗಿಗೆ ಮಾತ್ರ! << ಮನ ಮುಟ್ಟುವ ಸಾಲುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸತತ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ ಪಾರ್ಥರೇ.. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ರಾಘವೇಂದ್ರ ಅವರೆ, ಸುಂದರ, ಅತಿ ಸುಂದರ. ಪ್ರತಿ ಸಾಲು ಜಾಣತನದಿಂದ ಕೂಡಿವೆ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸತತ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ ರಾಜೇ೦ದ್ರರೇ.. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆ ಎಸ್ ರಾಘವೇಂದ್ರ ನಾವಡರಿಗೆ ವಂದನೆಗಳು ' ಒಂದಾದ್ರೆ ಮತ್ತೊಂದು ' ಒಂದು ಸರಳ ಸುಂದರ ಮತ್ತು ಅರ್ಥಗರ್ಭಿತ ಕವನ, ಅದು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ, ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸತತ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ ಹಿರಿಯರೇ.. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ <<ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು! ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು!>> ಹೆಗ‌ಲು ಕೊಟ್ಟವ ‌ ಕೆಳ‌ಕ್ಕೆ ಉದುರಿದ್ದ‌ರಿಂದ‌, ಚ‌ಟ್ಟ ಪ‌ಕ್ಕಕ್ಕೆ ವಾಲಿ ಒಟ್ಟಿಗೆ ಎರ‌ಡೂ ಹೆಣ‌ಗ‌ಳು ಕೆಳ‌ಕ್ಕೆ ಬಿದ್ದ‌ವು !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ.. ಎಲ್ಲೆಲ್ಲೂ ಹಾಸ್ಯವನ್ನರಸುವ ನಿಮ್ಮ ಪರಿ ಸೊಗಸಾಗಿದೆ ಶ್ರೀನಾಥರೇ.. ನಿಮ್ಮ ಸತತ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ . ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಅವ್ರೆ- ಹೆಣದ ಚಟ್ಟಕ್ಕೆ ಹೆಗಲು ಕೊಟ್ಟವನಿಗೇ ಹೃದಯಾಘಾತವಾಯಿತು! ಒಟ್ಟಿಗೇ ಎರಡೂ ಹೆಣಗಳೂ ಮೇಲೆದ್ದವು! >>> ಈ ತರಹದ್ದು ನನ್ ಕಣ್ಣ ಮುಂದೆಯೇ ಹಿಂದೊಮ್ಮೆ ಆಗಿತ್ತು..... ಎಲ್ಲವೂ ಸಖತ್.... ಸುಪರ್.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸತತ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ ಸಪ್ತಗಿರಿವಾಸಿಗಳೇ.. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಕ್ಕನ ವಧು ಪರೀಕ್ಷೆಗೆ ಹೋದವ, ತಂಗಿಯನ್ನು ಮದುವೆಯಾಗಿ ಹಿಂದಿರುಗಿದ :)) ನಿಮ್ಮಷ್ಟು ಚೆನ್ನಾಗಿಲ್ಲ..ಆದರೂ ಪರವಾಗಿಲ್ಲ ಎಂದು ಕೊಳ್ಳುತ್ತೇನೆ (ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತಿದ್ದೇನೆ :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ತಟ್ಟಿಕೊಳ್ಳಿ! ನೀವೇನೂ ಕಡಿಮೆಯಿಲ್ಲ..! ನಿಮ್ಮ ಪ್ರತಿಕ್ರಿಯೆ ಹಾಗೂ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅತ್ಯುತ್ತಮ ಬರಹ‌ <ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನ ಮಗಳ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ!> ತಮಾಷೆಗೆ... ಸ್ವಲ್ಪ ಬದಲಾವಣೆ.... ಊರಿನವರ ಜಾತಕ ನೋಡುತ್ತಿದ್ದ ಜ್ಯೋತಿಷ್ಕನಿಗೆ ತನ್ನವಳ‌ ಜಾತಕದಲ್ಲಿದ್ದ ವಿಧವಾ ಯೋಗ ಕಾಣಲೇ ಇಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ನಿರ೦ತರ ಪ್ರೋತ್ಸಾಹ ನನಗೆ ಸ೦ತಸ ನೀಡಿದೆ ನ೦ಜು೦ಡರೇ.. ಧನ್ಯವಾದಗಳು.. ನಿಮ್ಮದು ತಮಾಷೆಯಾದರೂ ಮಾರ್ಮಿಕವಾಗಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕೂ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನನಗಿನ್ನೇನೂ ಬೇಡ, ಎ೦ದು ಸನ್ಯಾಸ ಸ್ವೀಕರಿಸಲು ಹೊರಟವನು ನಿ೦ತಿದ್ದು ಮೊಮ್ಮಗನ “ ಅಜ್ಜಾ ಹೋಗಬೇಡ“ ಎ೦ಬ ಕೂಗಿಗೆ ಮಾತ್ರ!>> ನಾವಡರೆ, ಇವು ಸುಂದರವಾದ ಹಾಗು ತುಂಬಾ ಭಾವನಾತ್ಮಕ ಅರ್ಥದಿಂದ ಕೂಡಿದ ಸಾಲುಗಳು. ಕೆಲವು ದಿನಗಳನ್ನು ಸಂತೋಷದಿಂದ ಮೊಮ್ಮಗಳೊಡನೆ ಕಳೆದು ನನ್ನ ಊರಿಗೆ ಹೊರಟುನಿಂತಾಗ ಇಲ್ಲೇಇರು ಹೋಗಬೇಡ ಎಂದು ಅಳುತ್ತಾನಿಂತ ಆ ಕ್ಷಣ ನನ್ನ ಮನದಲ್ಲಿ ಸುಳಿದೋಹಿತು. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮನಸ್ಸಿಗೆ ಸಮಾಧಾನ-ಸ೦ತಸಗಳು ದೊರೆತರೆ ಅದೇ ನನಗೆ ಹಬ್ಬ ಹಿರಿಯರೇ.. ನಿಮ್ಮ ಮೆಚ್ಚುಗೆ ಹಾಗೂ ನಮನಗಳಿಗೆ ನನ್ನ ಪ್ರತಿ ನಮನಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡರವರೆ, ಒಂದಾದರೆ ಮತ್ತೊಂದು ಆಗುವುದು. ಒಂದಕ್ಕೆ ಇನ್ನೊಂದು ಫ್ರೀ ಎನ್ನುವಂತೆ ............. ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಶರಣು ಹಿರಿಯರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಒಂದಕ್ಕಿಂತ ಒಂದು ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶಣ್ಣ ನಿಮ್ಮ ಮೆಚ್ಚುಗೆಗೆ ನನ್ನ ನಮನಗಳು. ನಿಮ್ಮ ಪ್ರೋತ್ಸಾಹ ಎ೦ದೂ ಹೀಗೇ ಇರಲೆ೦ಬ ಆಶಯವೂ ಕೂಡ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.