ಕಣ್ಣಾಮುಚ್ಚಾಲೆ ಆಟ.

4.5

ಚಿಕ್ಕಂದಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುವಾಗ ಹೇಳುತ್ತಿದ್ದ ಸಾಹಿತ್ಯ ಹೀಗಿದೆ: 

ಕಣ್ಣಾಮುಚ್ಚೆ 
ಕಾಡೆಗೂಡೆ 
ಉದ್ದಿನ ಮೂಟೆ 
ಉರುಳೇಹೋಯ್ತು 
ನಮ್ಮಯ ಹಕ್ಕಿ 
ನಿಮ್ಮಯ ಹಕ್ಕಿ 
ಬಿಟ್ಟೆನೋ ಬಿಟ್ಟೆ. 

ಈ ಸಾಹಿತ್ಯ ಈಗ ನೆನಪಾಯ್ತು. ಏಕೆಂದರೆ, ನೆರೆಹೊರೆಯ ಮಕ್ಕಳು ಕಣ್ಣಾಮುಚ್ಚಾಲೆ ಆಟವನ್ನು ಆಡ್ತಿದ್ರು. ಅವರು ಒಂದು, ಎರಡು, ಮೂರು ಎಂದು ನೂರರವರೆಗೂ ಎಣಿಸುತ್ತಾ ಆಡುತ್ತಿದ್ದರು. ನನ್ನ ಬಾಲ್ಯವನ್ನು ನೆನೆದಾಗ ಈ ಸಾಹಿತ್ಯ ನೆನಪಾಯ್ತು. 

-ಅನಿಲ್

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀವು ಹೇಳಿದ್ದು ನಿಜ. ನಾನು ಇನ್ನುಮುಂದೆ ಮೊಮ್ಮಗಳ ಜೊತೆ ಕಣ್ಣಾಮುಚ್ಚಾಲೆ ಆಡುವಾಗ ಇದನ್ನೇ ಹೇಳುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಖಂಡಿತ ಹಾಗೆಯೇ ಮಾಡಿ. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಸ್ನೇಹಿತೆಯರೊಡನೆ ಚಿಕ್ಕವಳಿದ್ದಾಗ ಇದೇ ಹೇಳಿ ಆಟವಾಡುತ್ತಿದ್ದೆವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಸಾಮಾನ್ಯವಾಗಿ ನಾವೆಲ್ಲರೂ ಬಾಲ್ಯದಲ್ಲಿ ಇದನ್ನು ಹೇಳಿಯೇ ಆಡಿರುತ್ತೇವೆ. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಲ್ಯದ ನೆನಪಾಯಿತು ಅನಿಲ್, ಧನ್ಯವಾದಗಳು. ನನ್ನ ಟೀಚರ್ ಒಬ್ಬರು ಇದರ ಅರ್ಥವನ್ನು ಹೇಳಿದ ನೆನಪು: ಕಣ್ಣ ಮುಚ್ಚೆ ಕಾಡೇ ಗೂಡು... ಉದ್ದಿನ ಮೂಟೆ ಉರುಳೆಹೋಯ್ತು (ಉದ್ದಿನ ಮೂಟೆ = ಆಸೆಯನ್ನು ಹೊತ್ತ ಮನುಷ್ಯ ; ಉರುಳೆಹೋಯ್ತು = ಸತ್ತುಹೋಗುವುದು) ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ (ಪ್ರಾಣ ಪಕ್ಷಿ ಹಾರಿತು) ನಿಮ್ಮಯ ಹಕ್ಕಿ ಬಚ್ಚಿತ್ತುಕೊಳ್ಳಿ (ನೀವಾದರೂ ದುರಾಸೆ ಬಿಟ್ಟು ಬದುಕಿ) ಇದು ನಿಜವೋ ಅಲ್ಲವೋ ಗೊತ್ತಿಲ್ಲ ಆದರೆ ಅರ್ಥಪೂರ್ಣ ಎನಿಸಿತು. ಅದಕ್ಕೆ ಇಲ್ಲಿ ಹಂಚಿಕೊಂಡೆ. ಇದರ ಬಗ್ಗೆ ಮಾಹಿತಿ ಇದ್ದಲ್ಲಿ ದಯವಿಟ್ಟು ತಿಳಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಳವಿಕ, ಈ ಸಾಹಿತ್ಯದ ಅರ್ಥವನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದರ್ಥವನ್ನು ಓದಿದ್ದೆ - ದಶರಥನು ಕಣ್ಣು ಮುಚ್ಚಲು ರಾಮನಿಗೆ ಕಾಡೇ ಗೂಡಾಯಿತು.ಉದ್ದಿನ ಮೂಟೆಯ ಹಾಗೆ ರಾವಣನು ಉರುಳಿದ ಅಂತೆಲ್ಲ ಇತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್! ಕುತೂಹಲಕಾರಿಯಾಗಿದೆ. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್, ಬಾಲ್ಯದ ನೆನ್ಪಾಯ್ತು. ನಾನು, ನೀನು ಮತ್ತೆ ನಮ್ಮ ವಯಸ್ಸಿನ ಹುಡುಗರು ಆಟ ಆಡ್ತಿದ್ದಿದ್ದು ಎಲ್ಲಾ ನೆನಪಾದ್ವು. ನೀನು ನಮ್ಮ ಮನೆಗೆ ಬಂದಾಗ ಅಥ್ವಾ ನಾನು ನಿಮ್ಮ ಮನೆಗೆ ಬಂದಾಗ ಆಡುತ್ತಿದ್ದ ಆಟಗಳೆಲ್ಲ ನೆನಪಾದವು. -ಷಣ್ಮುಖಪ್ರಿಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ಬಾಲ್ಯದ ನೆನಪು ಯಾವಾಗಲೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇರತ್ತೆ. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬ್ಲಾಗ್ ಗೆಳೆಯರೊಬ್ಬರು ಈ ರೀತಿ ವ್ಯಾಖ್ಯಾನಿಸಿದ್ದಾರೆ:

"ಈ ಹಾಡನ್ನು ನಮ್ಮ ಜೀವನಕ್ಕೆ ಕೂಡ ಹೋಲಿಸಬಹುದು...

ಕಣ್ಣಾಮುಚ್ಚೆ ಎಂದರೆ ಮನುಷ್ಯನ ಸಾವು..

ಕಾಡೇ ಗೂಡು ಅಂದರೆ ಸತ್ತ ನಂತರ ಕಾಡಿನಲ್ಲಿ ನಮ್ಮ ಸಮಾಧಿಯೇ ನಮ್ಮ ವಾಸ ಸ್ಥಾನ ಅಥವಾ ಗೂಡು...

ಉದ್ದಿನ ಮೂಟೆ ಅಂದರೆ ನಮ್ಮ ದೇಹ...

ಉರುಳೆ ಹೋಯಿತು ಅಂದರೆ ಸತ್ತಾಗ ದೇಹ ಕೆಳಗೆ ಬೀಳುವ ಸಂಕೇತ....

ನನ್ನಯ ಹಕ್ಕಿ ಬಿಟ್ಟೇ ಬಿಟ್ಟೆ ಅಂದರೆ ನಮ್ಮ ಪ್ರಾಣ ಪಕ್ಷಿ ಅಥವಾ ಆತ್ಮವನ್ನು ಬಿಡುತ್ತಿದ್ದೇವೆ ಎಂದು ಪರಮಾತ್ಮನಲ್ಲಿ ಹೇಳುವುದು....

ನಿನ್ನಯ ಹಕ್ಕಿ ಅಡಗಿಸಿಕೊಳ್ಳಿ ಅಂದರೆ ನಮ್ಮ ಆತ್ಮವನ್ನು ನಿಮ್ಮ ಆತ್ಮದಲ್ಲಿ ಅಡಗಿಸಿಕೊಳ್ಳಿ ಎಂದು ಪರಮಾತ್ಮನಲ್ಲಿ ವಿನಂತಿಸಿಕೊಳ್ಳುವುದು... "

ಇದನ್ನು ಓದಿ ಕೆಲಹೊತ್ತು ಚಿಂತನೆಯಲ್ಲಿ ಮುಳುಗಿದೆ. 

-ಅನಿಲ್. 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.