ಕನಸಿನೊಳಗೊಂದು ದಿನ..!.

ಕನಸಿನೊಳಗೊಂದು ದಿನ..!.

ಜವ್ವನ ಕರಿಹೊತ್ತು

ಇರುಳೊಳಗೆ ಕಳೆದುಹೋಗಿ

ಕನಸ ಕಟ್ಟುತಲಿದ್ದೆ.

 

ಆಗಸದ ತುಂಬಾ

ಮಂದಾರ ಪುಷ್ಪಗಳು

ಏಣಿಯೊಂದು ಸ್ವರ್ಗಕ್ಕೆ.

 

ಪಾರಿವಾಳಗಳು ಕೈಬೀಸಿ

ಕರೆಯುತ್ತಿದ್ದವು

ಸ್ವರ್ಗ ಲೋಕದ ಪಯಣಕ್ಕೆ.

 

ತನ್ನೊಳಗಿನ ಮೌನ

ಬೆಚ್ಚಿ ನುಡಿದಿತ್ತು !

 

ಹೋಗುವೆಯಾ ಹುಡುಗಿ

ಹಿರಿಯೂರ ಸೌಧಕ್ಕೆ

ಬ್ರಾಂತಿಯಲಿ ಮೈಮರೆತು

ಇಳಿಯದಿರು ನರಕಕ್ಕೆ.

 

ಗೊಂದಲವೇ ಗಾಳವಾಗಿ

ಮನಸಿನೊಳು ತೂರಿತ್ತು

ಸ್ವರ್ಗ ನರಕಗಳೆರಡು

ಕೈ ಹಿಡಿದು ಎಳೆದಿತ್ತು.

 

ಹೂವಿನ ಹಾಸಿಗೆಯೊಂದೆಡೆ ?.

ಮುಳ್ಳಿನ ಹೊದಿಕೆಯೊಂದೆಡೆ ?.

 

ಬೆಚ್ಚಿ ಬೇಸತ್ತು ...!.

ಚೀರಿಕೊಂಡು ಕಣ್ ಬಿಟ್ಟೆ

 

ಇರುಳು ಕಳೆದಿತ್ತು.

ಬೆಳಕು ಮೂಡಿತ್ತು

ನನ್ನ ಅವಸ್ಥೆಯ ಕಂಡು

ಸೂರ್ಯ ನಗುತ್ತಿದ್ದ.

 

                                     ವಸಂತ್

 

 

Rating
No votes yet

Comments