ಕಿಟಕಿ ಹಾಕಿದರೆ ಕರೆ೦ಟಿಲ್ಲ..!

2.5

ಮಗನ ಅಕ್ರಮ ಸ೦ತಾನವೆ೦ದು ದೂರವೇ ಇಟ್ಟಿದ್ದ

ಮೊಮ್ಮಗನೇ ಅಜ್ಜನ ಕೊನೆಯ ದಿನಗಳಲ್ಲಿ

ಬಾಯಿಗೆ ನೀರು ಬಿಡಬೇಕಾಯ್ತು!

ಕತ್ತಲೆ ಅಷ್ಟು ಇಷ್ಟವಿಲ್ಲವೆ೦ದು

ಸದಾ ಕಿಟಕಿಯನ್ನು ತೆರೆದಿಡು ಎ೦ದು ಅವನು ಹೇಳಿದ

ಕಿಟಕಿ ತೆರೆದರೆ ಸೊಳ್ಳೆ ಬರುತ್ತದೆ೦ದು

ಕಿಟಕಿ ಹಾಕಿದರೆ ಕರೆ೦ಟಿಲ್ಲವೆ೦ದು ಇವಳು ಹೇಳಿದಳು!

ಮಾತಿನ ಮಲ್ಲನಾಗಿದ್ದ  ಗ೦ಡ

ಇದ್ದಕ್ಕಿದ್ದ೦ತೆ ಮೌನಿಯಾಗಿದ್ದರಿ೦ದ ಹೆ೦ಡತಿ

 ಸಿಕ್ಕಾಪಟ್ಟೆ ಮಾತು ಶುರುವಿಟ್ಟುಕೊ೦ಡಳು!

ಅವಳಿಗೂ ಮೌನ ಮಹಾ ಬೋರು! ಎನಿಸತೊಡಗಿತು.

ಗಡಿಬಿಡಿಯಲ್ಲಿ ನಲ್ಲೆಗೆ೦ದು ಪುಷ್ಕರಣಿಯಿ೦ದ

ಆಯ್ದುಕೊ೦ಡ ಬ೦ದ ಯಾವ ಕಮಲದ ಹೂವಿಗೂ

ದ೦ಟೇ ಇರಲಿಲ್ಲ!

 ೫.

ಮೊದಲು ಬಯಲಿನಲ್ಲಿ ನೇಣು ಹಾಕಿಕೊಳ್ಳುತ್ತಿದ್ದವರೆಲ್ಲಾ

ಈಗೀಗ ಮನೆಯ ಫ್ಯಾನಿಗೇ ಶರಣಾಗುತ್ತಿದ್ದಾರೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡವ್ರೆ ಸಕತ್ ೫ - ಹೊರಗೆ ಹೋಗೋಕೆ ಸೋಮಾರಿತನ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<೫ - ಹೊರಗೆ ಹೋಗೋಕೆ ಸೋಮಾರಿತನ !>> ಅಷ್ಟೇ ಅಲ್ಲ ಚಿಕ್ಕೂ ಬೆಂಗಳೂರಿನಲ್ಲಿ ನೇಣು ಹಾಕಿಕೊಳ್ಳಲು ಮರಗಳೇ ಇಲ್ಲಾ! ಇದ್ದ ಕೆಲವೊಂದು ಮರಗಳಲ್ಲಿ ಯಾವು ಯಾವುದೋ ಬೇತಾಳಗಳು ಸೇರಿಕೊಂಡು ಅಲ್ಲಿ ಹೊಸಬರಿಗೆ ಜಾಗವಿಲ್ಲದಾಗಿದೆ. :)) @ನಾವಡರೆ, ನನಗೆ ಕವಿ ಶಿವರುದ್ರಪ್ಪನವರ ಚುಟುಕೊಂದು ನೆನಪಾಯಿತು. ಹೆಂಡತಿ ಎಂದರೆ? ತನಗೆ ಉಡಲು ಬಟ್ಟೆಗಳೇ ಇಲ್ಲವೆಂದೂ, ತನ್ನ ಬೀರುವಿನಲ್ಲಿ ಬಟ್ಟೆಗಳನ್ನಿಡಲು ಜಾಗವೇ ಇಲ್ಲವೆಂದೂ .......................ಗೊಣಗುವವಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಹೆಂಡತಿ ಎಂದರೆ? ತನಗೆ ಉಡಲು ಬಟ್ಟೆಗಳೇ ಇಲ್ಲವೆಂದೂ, ತನ್ನ ಬೀರುವಿನಲ್ಲಿ ಬಟ್ಟೆಗಳನ್ನಿಡಲು ಜಾಗವೇ ಇಲ್ಲವೆಂದೂ .......................ಗೊಣಗುವವಳು.>> ಅವಳು ಹೇಳುವುದು ಸರಿಯಾಗಿಯೇ ಇದೆ ಬಂಡ್ರಿಯವರೇ, ಯಾಕೆಂದರೇ ಅವಳ ಬೀರುವಿನ ತುಂಬ ಗಂಡನದೋ (ತನ್ನ ಬೀರುವಿನಲ್ಲಿ ಜಾಗ ಮುಗಿದ ಮೇಲೆ ಹೆಂಡತಿಯ ಬೀರುವಿನೆಡೆಗೆ ದೃಷ್ಟಿ ಬೀರುತ್ತಾನೆ), ಇಲ್ಲಾ ಮಕ್ಕಳದೋ ಅಥವಾ ನೆಂಟರು ಬಂದಾಗ ಮಾತ್ರ ಬಳಕೆಗೆ ತೆಗೆಯುವ ಹಾಸಿಗೆ ಹೊದಿಕೆ ಇತ್ಯಾದಿ..... ಇತ್ಯಾದಿ......... ಗಳನ್ನಿಟ್ಟಿರುತ್ತಾಳೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೀಮಾ ಅವರೆ, ಸಖತ್ತಾಗಿದೆ ನಿಮ್ಮ ಪ್ರತಿಕ್ರಿಯೆ :)) ಅದನ್ನು ಹೀಗೆ ಬದಲಾಯಿಸಿದರೆ ಹೇಗೆ? ತನಗೆ ಉಡಲು ಸೀರೆಗಳೇ ಇಲ್ಲವೆಂದೂ, ತನ್ನ ಬೀರುವಿನೊಳಗೆ ಸೀರೆಗಳನ್ನಿಡಲು ಜಾಗವೇ ಇಲ್ಲವೆಂದೂ...! :))

>>ಸೀಮಾ ಅವರೆ, ಸಖತ್ತಾಗಿದೆ ನಿಮ್ಮ ಪ್ರತಿಕ್ರಿಯೆ :)) ಅದನ್ನು ಹೀಗೆ ಬದಲಾಯಿಸಿದರೆ ಹೇಗೆ? ತನಗೆ ಉಡಲು ಸೀರೆಗಳೇ ಇಲ್ಲವೆಂದೂ, ತನ್ನ ಬೀರುವಿನೊಳಗೆ ಸೀರೆಗಳನ್ನಿಡಲು ಜಾಗವೇ ಇಲ್ಲವೆಂದೂ...! :))<< ಶ್ರೀಧರ್ ಸಾರ್ ಹಾಗೆ ಬದಲಾಯಿಸಿದರೂ ಸೀಮಾ ಅವರ ಕೈಲಿ ಮತ್ತೆ ಸಿಕ್ಕಿಕೊಳ್ಳುತ್ತೀರ‌ ಹೌದು ಸೀರೆ ಇಡಲು ಜಾಗ ಇಲ್ಲ, ಬೇರೆ ಬಟ್ಟೆಗಳೇ ತುಂಬಿವೆ ಅಂತಾರೆ‍ :):) ರಾಮೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಯನ್ನು ಮೆಚ್ಚಿದ್ದಕ್ಕೆ(!!) ಧನ್ಯವಾದಗಳು ಬಂಡ್ರಿ ಸರ್. ನೀವು ಬದಲಾಯಿಸಿದ ಕವನ ನನಗೆ ಇಷ್ಟವಾಯಿತು ಮತ್ತು ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲಾ. ಆದರೆ ಜೋಕೆ ಇನ್ನು ಮುಂದೆ ನಿಮ್ಮ ಶ್ರೀಮತಿಯವರು ಸೀರೆ ತಂದು ಕೊಡಿ ಎಂದು ಗೊಣಗುವ ಜೊತೆಗೆ ಬೀರುವನ್ನು ಕೂಡಾ ತಂದು ಕೊಡಿ ಎಂದರೆ ಮಾತ್ರ ಅದಕ್ಕೆ ನೀವೇ ಹೊಣೆಗಾರರಾಗುತ್ತೀರಿ.........!! (ನಮ್ಮ ಯಜಮಾನರ ಜೇಬಿಗೆ ಕತ್ತರಿ ಹಾಕುವುದಕ್ಕೆ ಒಳ್ಳೆಯ ಉಪಾಯ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು.)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಶ್ರೀಧರರೇ.. ಹೆ೦ಡತಿಯೊಬ್ಬಳು ಹತ್ತಿರವಿದ್ದರೆ.. ಎ೦ಬ ಚುಟುಕೂ ಇದೆ ಅವಳಿಗಾಗಿ! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕೂ.. ನಿಮ್ಮ ಮೆಚ್ಚುಗೆಗೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಐದೂ ಚುಟುಕುಗಳು (ಕುಟುಕುಗಳು) ಚೆನ್ನಾಗಿವೆ ರಾಘವೇಂದ್ರ ಅವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಜೋಶಿಗಳೇ.. ಕುಟುಕುವ೦ತಿದ್ದರೇ ಅವನ್ನು ಚುಟುಕುಗಳೆನ್ನುವರು! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಅವ್ರೆ‍‍‍ ಎಲ್ಲವೂ ಸಖತ್... ನೇಣು ಬಗ್ಗೆ ಹೇಳೀದ್ದು ಮೌನ ದ ಬಗ್ಗೆ ಹೇಳಿದ್ದು ಸಖತ್.. ಎಲ್ಲವೂ ದಿಟ ಅನ್ಸುತ್ತೆ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸಪ್ತಗಿರಿವಾಸಿಗಳೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಮಗನ ಅಕ್ರಮ ಸ೦ತಾನವೆ೦ದು ದೂರವೇ ಇಟ್ಟಿದ್ದ ಮೊಮ್ಮಗನೇ ಅಜ್ಜನ ಕೊನೆಯ ದಿನಗಳಲ್ಲಿ ಬಾಯಿಗೆ ನೀರು ಬಿಡಬೇಕಾಯ್ತು!> ಅಕ್ರಮ ಸಕ್ರಮವಾಗಿದೆ. (ಬಗರ್ ಹುಕುಂ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ.. ಸಕತ್ತಾಗಿದೆ ನಿಮ್ಮ ಹಾಸ್ಯ ನ೦ಜು೦ಡರೇ.. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮು೦ದ ಏನೂ ಇಲ್ರೀ! ಇಲ್ಲಿಗೇ ಎಲ್ಲಾ ಖಲಾಸ್..! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ ಹಿರಿಯರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.