ಕೇಂದ್ರವೂ ವೃತ್ತವಾದಾಗ ಯಾರನ್ನೂ ನಂಬದಿರುವುದೇ ಸತ್ಯ!

ಕೇಂದ್ರವೂ ವೃತ್ತವಾದಾಗ ಯಾರನ್ನೂ ನಂಬದಿರುವುದೇ ಸತ್ಯ!

(೧೦೧) ನಾನು ವಿಶ್ವದ ಕೇಂದ್ರ. ಏಕೆಂದರೆ ಕೇಂದ್ರ ಎಂಬುದು ವೃತ್ತವೊಂದರ ಮೇಲಿನ ಚಿಕ್ಕೆಯಾಗಿದ್ದು ಆ ವೃತ್ತದ ಕೇಂದ್ರವು ಮತ್ತೆಲ್ಲಿಯೋ ಇರುತ್ತದೆ!


(೧೦೨) ಕೆಲಸಕ್ಕೆ ಬರದ ಜಾಗದಿಂದ ಪ್ರಯೋಜನವಾಗುವ ಸ್ಥಳಕ್ಕೆ ಕರೆದೊಯ್ಯುವುದನ್ನು ರಸ್ತೆ ಎನ್ನುತ್ತೇವೆ. ಅಲ್ಲಿ ಕೆಲಸ ಪೂರೈಸಿದ ನಂತರ ಮತ್ತೆ ರಸ್ತೆಯು ಅಪ್ರಯೋಜಕ ಜಾಗದಿಂದ ಪ್ರಯೋಜನದ ಸ್ಥಳಕ್ಕೆ ನಮ್ಮನ್ನು ಕರೆದುಕೊಂಡು ಬರುತ್ತದೆ. ಪ್ರತಿದಿನ ಮನೆ ಮತ್ತು ಆಫೀಸುಗಳ ನಡುವಣ ಓಡಾಟ ಅಂತಹದ್ದು.


(೧೦೩) ಆತ್ಯಂತಿಕ ಹೇಳಿಕೆಃ ಯಾರು ಏನೇ ಹೇಳಿದರೂ ನೀವು ಸ್ವತಃ ಅದನ್ನು ಯೋಚಿಸಿ, ನಂಬಿ, ಅನುಭವಿಸುವವರೆಗೂ ನಂಬಿಬಿಡಬೇಡಿ--ಈ ನನ್ನ ಉಪದೇಶವನ್ನೂ ಸಹ!


(೧೦೪) ಯಾವುದಾದರೊಂದು ಭಾರತೀಯ ಭಾಷೆಯನ್ನು ಓದಿ, ಬರೆದು, ಅರ್ಥಮಾಡಿಕೊಳ್ಳುವವರನ್ನು ಹುಡುಕುವುದೇ ಕಷ್ಟ, ಏಕೆಂದರೆ ಭಾರತವು ಬಹಳ ವಿಶಾಲವಾದ ದೇಶ!


(೧೦೫) ಚಟ ಚಟ್ಟಕ್ಕೆ ಮೊಲ.//

Rating
No votes yet