ಈ ಹೂವ ಹೆಸರೇನು?

3

ಈ ಹೂವ ಹೆಸರೇನು ಬಲ್ಲಿರಾ?ಹೂವಿನ ಬಲಪಕ್ಕದಲ್ಲಿರುವ ಕಾಯಿ ತರಹ ಕಾಣಿಸುತ್ತಿದೆಯಲ್ಲಾ ಅದು ಸ್ವಲ್ಪ ಬಲಿತರೆ-

ಸ್ವಲ್ಪ ಮುಟ್ಟಿದರೆ ಸಾಕು ಒಡೆದು ಬೀಜಗಳು ಉದುರುವುದು.

ಹೆಸರು ಹೇಳುವಿರಾ?

-ಗಣೇಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕರ್ಣಕುಂಡಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

mnsraoರಿಗೆ ಧನ್ಯವಾದಗಳು -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶಣ್ಣ... ಪ್ರಾದೇಶಿಕವಾಗಿ ಹೆಚ್ಚು ಪ್ರದೇಶಗಳಲ್ಲಿ ಇದನ್ನು “ಸೋನೆ ಹೂವು “ ಎ೦ದು ಕರೆಯುತ್ತಾರೆ. ಸ೦ಕ್ರಾ೦ತಿ ಹಬ್ಬದ ಸಮಯದಲ್ಲಿ ಹಾಗೂ ಹಬ್ಬದಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಸ೦ಕ್ರಾ೦ತಿಯ ದಿನದಿ೦ದ ಸರಿ ಸುಮಾರು ಹದಿನೈದು ಧಿನಗಳ ವರೆಗೆ ಈ ಹೂವನ್ನು ಮನೆಯ ಹೊಸಿಲನ್ನು ಪೂಜಿಸುವಾಗ ಉಪಯೋಗಿಸುತ್ತಾರೆ.. ನ೦ಗೊತ್ತಿರೋದು ಇಷ್ಟೇ... ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಸಂಕ್ರಾಂತಿ ಹಬ್ಬ ಎಂದು ನೀವು ಕರೆದದ್ದು ಯಾವ ಸಂಕ್ರಾಂತಿ? ಸೋಣೆ ಹಿಡಿಯುವ ಸಂಕ್ರಾಂತಿ ಅಲ್ಲವೆ. ಆದರೆ, ಕರ್ನಾಟಕದಲ್ಲಿ, ಸಂಕ್ರಾಂತಿ ಎಂದರೆ, ಹೆಚ್ಚಿನವರು ತಿಳಿಯುವುದು ಮಕರ ಸಂಕ್ರಾಂತಿ ಹಬ್ಬ , ಅನಿಸುತ್ತೆ. -ಶಶಿಧರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಕರ್ಣಕುಂಡಲ/ಸೋಣೆ: KARNA KUNDALA
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದು ಸೂಪರ್ ಚಿತ್ರ ನೀಡಿದ ಪಾಲಚಂದ್ರರಿಗೆ ನನ್ನಿ. ಇನ್ನೊಂದು ಯಾಕೆಂದರೆ ಮೊದಲೊಮ್ಮೆ ಇದೇ ಪ್ರಶ್ನೆಗೆ ನನಗೆ ಚಿತ್ರ ಸಹಿತ ಉತ್ತರಿಸಿದ್ದೀರಿ. http://sampada.net/b... ಪುನಃ ಬೇಸರಿಸದೇ ಉತ್ತರಿಸಿದ್ದಕ್ಕೆ ಧನ್ಯವಾದಗಳು. ತಾವು ತೆಗೆದ ಚಿತ್ರಗಳನ್ನು ಸಂಪದದಲ್ಲೂ ಆಗಾಗ ಹಾಕಿ ಎಂಬ ಸವಿನಯ ಬೇಡಿಕೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದನ್ನ ಗೌರಿ ಹೂ ಎಂದೂ ಕರೆಯುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋಣೆ ಹೂ ಎನ್ನುವುದುಂಟು; ಆದರೆ, ಹೆಚ್ಚು ಸ್ಪಷ್ಟತೆಗಾಗಿ, ಬೊಂಬಾಯಿ ಸೋಣೆ ಹೂ ಎನ್ನುತ್ತಾರೆ; ಏಕೆಂದರೆ, ಗದ್ದೆ ಬದಿಯಲ್ಲಿ ನೇರಳೆ ಬಣ್ಣದ ಸೋಣೆ ಹೂ ಬೆಳೆಯುವುದರಿಂದ, ಅದರಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಲು ಬೊಂಬಾಯಿ ಸೋಣೆ ಎನ್ನುವರು. ಬೇರೆ ಬೇರೆ ಬಣ್ಣ ತಳೆಯುವ ಇದನ್ನು ಮಾಲೆ ಮಾಡಿ ಮುಡಿಯುವ ಪದ್ದತಿಯೂಅಲ್ಲಲ್ಲಿ ಇದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ಮಂಗಳೂರು ಕಡೆಯವರು ಇದನ್ನು ಗೌರಿ ಹೂ ಎನ್ನುವರು. ಅದರೆ ಗೌರಿ ಹೂ ಬೇರೆ- http://sampada.net/i... Gloriosa superba ಎನ್ನುವ ಹೂ. ಬಹುಷಃ glory lily‌ಯನ್ನು ಗ್ಲೋರಿ ಹೂ ಎಂದು ಕರೆಯುತ್ತಾ ಕರೆಯುತ್ತಾ ಗೌರಿ ಹೂ ಆಗಿರಬಹುದು. ಸುಮಾನಾಡಿಗರಿಗೆ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಯ್ ಹೆಬ್ಬಾರರೆ.. ಅದು ಸೋಣೆ ಸ೦ಕ್ರಾ೦ತಿಯೇ.. ಸಾಮಾನ್ಯವಾಗಿ ಈ ಹೂವನ್ನು ಆ ದಿನಗಳಲ್ಲಿ ಹೆಚ್ಚಾಗಿ ಬಳಸುವುದರಿ೦ದ ಹಾಗೂ ಸೋಣೆ ಸ೦ಕ್ರಾ೦ತಿಯ ಧಿನಗಳಲ್ಲಿ ಈ ಗಿಡವು ಮೈದು೦ಬುಕೊಳ್ಳುವುದರಿ೦ದಲೂ ಇದಕ್ಕೆ “ಸೋಣೆ ಹೂವು“ ಎ೦ಬ ಹೆಸರು ಬ೦ದಿರಬಹುದು.. ಏನ೦ಬ್ರಿ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋನೆ(ಣೆ) ಹೂ ಬಗ್ಗೆ ಬಹಳಷ್ಟು ವಿವರ ನೀಡಿದ ನಾವಡರಿಗೆ ಹಾಗೂ ಹೆಬ್ಬಾರರಿಗೆ ಧನ್ಯವಾದಗಳು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.