ಚುರ್ಮುರಿ - ೧೮

3
೬೮) ಮದ್ಯ ....... ತನ್ನ ಸಂಬಂಧಿಕರೊಬ್ಬರು ಇನ್ನೇನು ಸ್ವಲ್ಪ ದಿನದಲ್ಲಿಯೇ ಕೊನೆಯುಸಿರೆಳೆಯಲಿದ್ದಾರೆ ಎಂಬುದನ್ನ ತಿಳಿದು ಅವನು ಅವರಿಗೆ ಮದ್ಯವನ್ನು ತರಲು ಹೋದ, ಕೊಂಡು ಹಿಂದಿರುವಾಗ ರಸ್ತೆಯಲ್ಲಿ ಅಪಘಾತಕ್ಕೀಡಾದನು. ಕೈಲಿದ್ದ ಬಾಟಲಿಯಿಂದ ಮದ್ಯದ ಹನಿಗಳು ಅವನ ತುಟಿಯನ್ನು ಸೋಕುತ್ತಿದ್ದವು. ೬೯) ಪ್ರಳಯ ......... ಪ್ರಳಯ ಪ್ರಳಯ ಪ್ರಳಯ ಎಂದು ಬಡಿದುಕೊ(ಲ್ಲು)ಳ್ಳುತ್ತಿರುವ ಚಾನೆಲ್ಗಳು ಮತ್ತು ಜ್ಯೋತಿಷಿಗಳು ಪ್ರಳಯವೆಂದು ಬಿಂಬಿಸಿದ ಮಾರನೇ ದಿನದಿಂದ ಸಂಪೂರ್ಣವಾಗಿ ಮೌನಕ್ಕೆ ಶರಣಾಗಬಹುದು. ೭೦) ಸುಳಿ! ....... ಸುಮಾರು ವರ್ಷಗಳಿಂದ ಸಾಂಪ್ರದಾಯಿಕ ಬೆಳೆ ಭತ್ತವನ್ನು ಬೆಳೆದು ಸುಮಾರಾಗಿ ಲಾಭ ಮಾಡಿದ್ದ. ಯಾರೋ ಶುಂಟಿಗೆ ತುಂಬಾ ಬೆಲೆಯೆಂದು ಹೇಳಿದ್ದು ಕೇಳಿ ತನ್ನ ಗದ್ದೆಗೆ ಹಾಕಿದ. ೭-೮ ವರ್ಷಗಳು ಮಾಡಿದರೂ ಲಾಭವಿರಲಿ ಅಸಲೂ ಬರುತ್ತಿರಲಿಲ್ಲ. ಈ ವರ್ಷದಿಂದ ಶುಂಟಿ ಮಾಡಬಾರದೆಂದು ತೀರ್ಮಾನಿಸಿ, ಈಗಾಗಲೇ ಶುಂಟಿ ಹಾಕಿ ಭೂಮಿಯಲ್ಲಿರುವ ಫಲವತ್ತತೆಯೆಲ್ಲಾ ಹೋಗಿರುವುದರಿಂದ ಮುಂದಿನ ವರ್ಷದಿಂದ ಭತ್ತವನ್ನೇ ಹಾಕುವುದೆಂದು ನಿಶ್ಚಯಿಸಿ ಗದ್ದೆಯನ್ನು ಖಾಲಿ ಬಿಟ್ಟನು. ತುಂಬಾ ಜನ ಇವನ ಹಾಗೇ ಮಾಡಿದುದರಿಂದ ಈ ವರ್ಷ ಶುಂಟಿಗೆ ಬಂಪರ್ ಬೆಲೆ ಬಂದಿತ್ತು. ಮುಂದಿನ ವರ್ಷ ಭತ್ತದ ಬದಲು ಮತ್ತೆ ಶುಂಟಿ ಹಾಕಬೇಕೆಂದುಕೊಂಡನು! ೭೧) ಚಿನ್ನ ...... ಅವನು ಚಿನ್ನದ ಮೇಲೆ ಇನ್ವೆಸ್ಟ್ ಮಾಡುತ್ತೇನೆಂದು ಚಿನ್ನದ ಗಟ್ಟಿ ತೆಗೆದುಕೊಂಡು ಬ್ಯಾಂಕಿನಲ್ಲಿ ಇಡುತ್ತೇನೆಂದು ಅವನ ಪತ್ನಿಗೆ ಹೇಳಿದನು. ಅದಕ್ಕವಳು, ಹಾಗೆ ಮಾಡುವುದರ ಬದಲು ನನಗೊಂದು ಸರ ಮಾಡಿಸಿ ಹೇಗಿದ್ದರೂ ಅದೂ ಚಿನ್ನವೇ ತಾನೇ ಎಂದಳು. ೭೨) ಪರಿಹಾರ ........... ಆ ಸೆಲ್ಫೋನ್ ಕಂಪನಿಯ ಸಿಮ್ ಉಪಯೋಗಿಸುತ್ತಿದ್ದನವನು, ಸುಖಾಸುಮ್ಮನೆ ಚಾರ್ಜ್ ಮಾಡುತ್ತಿದ್ದುದರಿಂದ ಅವರ ಕಸ್ಟಮರ್ ಕೇರಿಗೆ ಕರೆ ಮಾಡಿ ಎಷ್ಟು ಸಮಯ ಹೇಳಿದರೂ ಯಾವುದೇ ಬದಲಾವಣೆ ಆಗಲಿಲ್ಲ. ಬೇಸರಗೊಂಡ ಇವನು ಇನ್ನೊಂದು ಕಂಪನಿಗೆ ಸ್ವಿಚ್ ಆಗಬೇಕೆಂದು ಮೆಸೇಜ್ ಕಳುಹಿಸಿದ. ಆ ತಕ್ಷಣವೇ ಕಸ್ಟಮರ್ ಕೆರಿಂದ ಕರೆ ಬಂದು ಅವನ ಸಮಸ್ಯೆಯನ್ನು ಕೂಡಲೇ ಪರಿಹರಿಸಿದರು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

’ಮದ್ಯ’ದ ಬೆಲೆಯೇರಿಕೆಯ ’ಪ್ರವಾಹ’ವುಕ್ಕಿ, ನಾವದರ ’ಸುಳಿ’ಗೆ ಸಿಲುಕಿ, ’ಚಿನ್ನ’ ಕೊಳ್ಳುವುದು ಹೇಗೆಂದು ಯೋಚಿಸುತ್ತಿರ ಬೇಕಾದರೆ ’ಪರಿಹಾರ’ ಸಿಕ್ಕಿತು. ಸಖತ್ ಚುರುಮುರಿ ಚಿಕ್ಕೂ. ಚುರುಮುರಿಯನ್ನು ಹಾಸ್ಯಕ್ಕಾಗಿ ಹೇಳಿದ್ದರೂ ಕೂಡಾ ಇವೆಲ್ಲಾ ವಾಸ್ತವ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರವ್ರೆ ನಿಮ್ಮ ಪ್ರತಿಕ್ರಿಯೆ ಸಕತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮದ್ಯ - ಮದ್ಯದ ಬಾಟಲಿಯೊಂದಿಗೆ" ಮೇಲೆ "ಮುಂಚೆಯೇ ಹೋಗಿ ಅವರಿಗಾಗಿ ಕಾಯುತ್ತಿರಬಹುದು ಫ್ರಳಯ - ಮೌನವಾಗುವುದಿಲ್ಲ " ಪ್ರಳಯ " ದ ದಿನಾಂಕ ಬದಲಾಗಬಹುದು ಅಷ್ಟೆ ಸುಳಿ - ಇದನ್ನೆ " ಹಣೆ(ಹಣ)ಬರಹ" ಎನ್ನುವುದು ಅಲ್ಲವೆ ? ಚಿನ್ನ - ಒಂದೆ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಉಪಾಯ ಹೆಂಡತಿಯದು..!! ಪರಿಹಾರ - ಶಕ್ತಿಯಿಂದಾಗದ್ದು ಯುಕ್ತಿಯಿಂದ ಆಯಿತು...!! ರುಚಿಯಾದ ಚುರುಮುರಿ ಚೇತನ್ ರವರೇ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಮಳೆ-ಮೋಡದ ವಾತಾವರಣದಲ್ಲಿ ಖಡಕ್ ಚುರುಮುರಿ ಗರಿಗರಿಯಾಗಿ ರುಚಿಕರವೆನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಚೇತನ್, ಚುರಮುರಿ ಸಿಂಪಲ್ಲಾಗಿ ರುಚಿಕರವಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವೂ ಸಖತ್... ಸಮಾಜದ ವಿವಿಧ ಮುಖಗಳನ್ನು / ಮನೋ ಚ್ಹಿಂತನೆಯನ್ನು ಪ್ರತಿಬಿಂಬಿಸಿದ ಸಾಲುಗಳು....!! ಹಂಚ್ಹಿಕೊಂಡದ್ದಕ್ಕೆ ನನ್ನಿ// ಒಳಿತಾಗ್ಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ಚೇತನ್ ಆದರೆ ಚರ್ಮುರಿ ಪಾರ್ಮುಲ ಬದಲಾದ ಹಾಗಿದೆ ಸ್ವಲ್ಪ ಕಾರ ಜಾಸ್ತಿ :))) ಆದರೆ ಚಳಿಗೆ ಚೆನ್ನಾಗಿರುತ್ತೆ ಬಿಡಿ :)) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು, ಪ್ರಳಯ ಚಾನಲ್+ ಜ್ಯೋತಿಷಿಗಳು ಮೌನವಾಗುವುದು- ಸಾಧ್ಯವೇ ಇಲ್ಲ. ಮುಖ ಒರೆಸಿಕೊಂಡು ಪುನಃ ಹೊಸ ಡೇಟ್ ಫಿಕ್ಸ್ ಮಾಡುವರು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ... ಮದ್ಯ : ಗಂಗಾ ಜಲ ತಂದಿದ್ದರೆ ಹೀಗಾಗುತ್ತಿರ‌ಲಿಲ್ಲ ... ಮುಂದಿನ‌ ಸಾರಿಯಿಂದ‌ ಹಾಗೆ ಮಾಡ‌ಬೇಡಿ ಅಂತ‌ ಹೇಳಿಬಿಡಿ ಚಿಕ್ಕು :‍))) ಪ್ರಳ‌ಯ: "ಶ‌ರ‌ಣಾಗ‌ಬ‌ಹುದು" ... ಒಳ್ಳೇ ಜೋಕ್ :‍)))) ಚಿನ್ನ: "ಅವನ ಪತ್ನಿಗೆ ಹೇಳಿದನು" ... ತಪ್ಪು ಏನು ಅಂತ ಅರ್ಥ ಆಯ್ತಲ್ಲ :‍) ಪರಿಹಾರ: ನಮ್ಮಲ್ಲಿ ಒಬ್ಬರಿದ್ದರು. ಇಂಕ್ರಿಮೆಂಟ್ ಸಿಗುವುದಿಲ್ಲ ಎಂದು ತಿಳಿದಾಕ್ಷಣ ರೆಸಿಗ್ನೇಷನ್ ಕೊಡುತ್ತಿದ್ದರು. ಇದ್ದೊಬ್ಬ ಅಕೌಂಟೆಂಟ್ ಬಿಟ್ಟುಕೊಡುವುದು ಬೇಡ ಅಂತ ಮೇನೇಜ್ಮೆಂಟ್ ಇಂಕ್ರಿಮೆಂಟ್ ಕೊಡುತ್ತಿದ್ದರು !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು ಎಲ್ಲವೂ ಸೂಪರ್...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಳಿ ಮತ್ತು ಪರಿಹಾರವೆರಡೂ ಸೊಗಸಾಗಿವೆ.. ಮದ್ಯದ್ದ೦ತೂ ಬಿಡಿ! ಮಾತಿಲ್ಲ.. ಒಟ್ಟಿಗೆ ಚುರುಮುರಿ ಈ ಮಳೆಯಿ೦ದ ಉ೦ಟಾದ ತಣ್ಣನೆಯ ಚಳಿಗೆ ನಿಧಾನವಾಗಿ ಶರೀರವನ್ನು ಬಿಸಿಯಾಗಿಸುತ್ತದೆ! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತೀಶವ್ರೆ - ಸಕತ್ ಕವಿ ಸರ್ ಧನ್ಯವಾದ ಪ್ರಕಾಶವ್ರೆ ಧನ್ಯವಾದ ಸಗಿಯವ್ರೆ ಧನ್ಯವಾದ ಪಾರ್ಥವ್ರೆ - :) :) ಧನ್ಯವಾದ ಗಣೇಶಣ್ಣ - :) :) ನಿಜ, ಮುಖಕ್ಕೆ ಪ್ಲಾಸ್ಟಿಕ್ ಕವರ್ ಹಾಕೊಂಡಿರ್ತಾರೆ. ಧನ್ಯವಾದ ಭಲ್ಲೆಯವ್ರೆ - ಗಂಗಾಜಲಕ್ಕಿಂತ, ಬಾಟಲ್ ಜಾಲವೇ ಶ್ರೇಷ್ಠ ಅಂತ ಅವ್ನು ಹೋಗಿರ್ಬೇಕು!!, ಪುಣ್ಯ ಮಾಡಿದ್ದ ಅಕೌಂಟೆಂಟ್ ಜಯಂತ್ ಧನ್ಯವಾದ ನಾವಡವ್ರೆ - :) :) ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.