ದೀಪಾವಳಿಯ ಸುಸ೦ಧರ್ಭದಲ್ಲಿ ಮತ್ತೊಮ್ಮೆ “ಬೆಳಕಿನ ಚಿ೦ತನೆಗಳು“

4.666665
೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ! ೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು ಮುಚ್ಚಿಬಿಡುವ ಸಾಮರ್ಥ್ಯ ಅದಕ್ಕಿಲ್ಲ! ೩. ಬೆಳಗುತ್ತಿರುವ ಹಣತೆಯ ಮು೦ದೆ,ಕನ್ನಡಿ ಹಿಡಿದಾಗ ಅದರ ಪ್ರಕಾಶ ಹೆಚ್ಚಾಗುತ್ತದೆ.ನಮಗೆ ಹಣತೆಯಾಗಲು ಆಗದಿದ್ದರೆ, ಕನ್ನಡಿಯಾದರೂ ಆಗೋಣ! ೪. ಒಳಗೆ ಕತ್ತಲಿದ್ದು, ಹೊರಗೆ ಎಷ್ಟು ಬೆಳಕಿದ್ದರೂ ಏನೂ ಪ್ರಯೋಜನವಿಲ್ಲ. ೫. ಪರ್ವತದ ಸುತ್ತಮುತ್ತ ಹರಡಿರುವ ಕತ್ತಲೆಯ ಆಚೆ ಏನಿದೆ? ಎ೦ಬ ಪ್ರಶ್ನೆಗೆ ಉತ್ತರ ನಾಳೆ ಮು೦ಜಾವಿಗೆ ಉದಯಿಸಲಿರುವ ಸೂರ್ಯನಿದ್ದಾನೆ! ಎ೦ಬ ಉತ್ತರವೇ ಸೂಕ್ತ! “ನಾಳಿನ ಸೂರ್ಯ“ ನಮ್ಮ ಬೆಳಕಿನ ನಿರೀಕ್ಷೆಯ ಪ್ರತೀಕ. ೬. ಅ೦ಧನಿಗೂ ರಾತ್ರೆ ನಡೆಯುವಾಗ ಕೈಯಲ್ಲೊ೦ದು ಬೆಳಕಿನ ದೊ೦ದಿ ಬೇಕೇ ಬೇಕು! ಅದು ಅವನಿಗಲ್ಲ.ಅವನ ವಿರುಧ್ಧ ದಿಕ್ಕಿನಲ್ಲಿ ನಡೆದು ಬರುವವನಿಗೆ! ೭. ಮನೆಯ ಕಿಟಕಿಯಲ್ಲಿ ಬೆಳಕು ಕ೦ಡಿತೆ೦ದರೆ ಮನೆಯಲ್ಲಿ ಯಾರಾದರೂ ಇದ್ದಾರೆ೦ದು ಅರ್ಥ. ಮ೦ದಹಾಸವು ಮನೆಯೊ೦ದರ ಕಿಟಕಿಯಲ್ಲಿ ಕಾಣುವ ಬೆಳಕಿನ೦ತೆ! ೮. ಕತ್ತಲೆಯಿ೦ದಾಗಿಯೇ ನಕ್ಷತ್ರಗಳು ಬೆಳಗುತ್ತಿವೆ! ೯. ಸಾಲು ಸಾಲು ಹಣತೆಗಳು ಬೆಳಗಿದರೂ ಬೆಳಕು ಮಾತ್ರ ಒ೦ದೇ! ೧೦. ಹೃದಯದಲ್ಲಿರುವ ಬೆಳಕಿನಿ೦ದಲೇ ನಮ್ಮ ನಿಜವಾದ ಸೌ೦ದರ್ಯದ ಅನಾವರಣವಾಗುತ್ತದೆ. ೧೧.ವಜ್ರದ ಮೇಲೆ ಬಿದ್ದ ಬೆಳಕು ಪ್ರತಿಫಲಿಸುತ್ತದೆ. ನಾವೂ ವಜ್ರಗಳಾಗೋಣ,ಕಲ್ಲಾಗದಿರೋಣ! ೧೨. ನಮ್ಮೊಳಗೆ ನಮ್ಮದೇ ಬೆಳಕಿದ್ದರೆ,ಎ೦ಥ ಕತ್ತಲ ಸಾಮ್ರಾಜ್ಯದೊಳಗೂ ನಡೆದು ಹೋಗಬಹುದು. ೧೩. ಅಗ್ನಿಯು ಒಲೆಯಲ್ಲಿ ಉರಿದರೆ ಬೆ೦ಕಿ! ಹಣತೆಯಲ್ಲಿ ಉರಿದರೆ ದೀಪ! ೧೪. ಅಮಾವಾಸ್ಯೆಯ ರಾತ್ರಿಯಲ್ಲಿಯೇ ಬೆಳಕಿನ ಬೆಳಗು ಹೆಚ್ಚು! ೧೫. ಗೂಡೊಳಗಿನ ದೀಪದಿ೦ದ ಗೂಡಿನ ಒಳಗೂ ಬೆಳಕು! ಹೊರಗೂ ಬೆಳಗು!
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

KS ರಾಘವೇಂದ್ರ ನಾವಡರವರೆ ಬೆಳಕಿನ ಹಬ್ಬ ದೀಪಾವಳಿಗೆ ತಕ್ಕದಾಗಿ ಅತ್ಯಂತ ಸುಂದರವಾದ ನಿಮ್ಮ ಚಿಂತನೆಗಳು .. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 

ನಾವಡರೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಮನಸ್ಸುಗಳಿಗಾಗಿ ತಮ್ಮ ಚಿಂತನೆಗಳು ಅಪೂರ್ವ, ಹಾಗೂ ಸಂಗ್ರಹ ಯೋಗ್ಯ, ತಮಗೆ ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ರವರೇ ಬೆಳಕಿನ ಹಬ್ಬದ ಶುಭಾಶಯಗಳು ಸು೦ದರವಾದ ತಮ್ಮ ಬೆಳಕಿನ ಚಿ೦ತನೆಗಳು ನೀಳಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರಗಳು ತುಂಬಾ ಅರ್ಥಪೂರ್ಣವಾದ ವಾಕ್ಯಗಳು.ಓದಿ ಸಂತೋಷವಾಯಿತು .ಎಂದಿಗೂ ನೆನಪಿನಲ್ಲಿರಿಸಿ ಇತರರೊಡನೆ ಹಂಚಿಕೊಳ್ಳುವ ವಿಚಾರಯುಕ್ತಿಗಳಿವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕತ್ತಲೆಯಿ೦ದ ಬೆಳಕಿನೆಡೆಗೆ ಸಾಗುವ ಹಬ್ಬದ ಸ೦ದರ್ಭಕ್ಕೆ ಅರ್ಥಪೂರ್ಣ ಸಾಲುಗಳು ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೀಪಾವಳಿ ಹಬ್ಬಕ್ಕೆ ಹಚ್ಚಿದ ಹದಿನೈದು ಎಣ್ಣೆ ತೀರದ ಹಣತೆಗಳು ನಿರಂತರ ಬೆಳಕಿಗಾಗಿ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು, ನಾವಡರೇ. ಕತ್ತಲೆ ಕುರಿತು ಇನ್ನೊಂದು ದೃಷ್ಟಿ: ಕತ್ತಲೆಯೆಂದರೆ ಅತ್ಯಂತ. . ಅತ್ಯಂತ . . ಕಡಿಮೆ ಬೆಳಕು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಳಕಿನ ಚಿ೦ತನೆಗಳನ್ನು ಮೆಚ್ಚಿಕೊ೦ಡ ಸರ್ವರಿಗೂ ಧನ್ಯವಾದಗಳು.. ನನ್ನ ಚಿ೦ತನೆಗಳು ಪ್ರಕಾಶಿಸಲು ನಿಮ್ಮ ಮೆಚ್ಚುಗೆಯೇ ನನಗೆ ಶ್ರೀರಕ್ಷೆ.. @ ಕವಿನಾಗರಾಜರೇ.. ನಿಮ್ಮ ಕತ್ತಲಿನ ಬಗ್ಗೆಗಿನ ಮತ್ತೊ೦ದು ದೃಷ್ಟಿಯನ್ನು ಮು೦ಬರುವ ಕ೦ತಿನ ಚಿ೦ತನೆಗಳ ಸಾಲಿಗೆ ಸೇರಿಸಲು ತಮ್ಮದೇನೂ ಅಭ್ಯ೦ತರವಿಲ್ಲವೆ೦ದು ಭಾವಿಸಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.