ನನ್ನ ಇತ್ತೀಚಿನ ಓದು

ನನ್ನ ಇತ್ತೀಚಿನ ಓದು

ಡಾ.ಪ್ರಭುಶಂಕರ ಬರೆದ ಬಸವಣ್ಣನ ಕುರಿತಾದ ’ಬೆರಗು’ ಎಂಬ ಪುಸ್ತಕವನ್ನೂ ಅರ್ಧ ಓದಿದೆ . ಒಳ್ಳೇ ಪುಸ್ತಕ . ಬಸವಣ್ಣನ ಕುರಿತು ಅವನ ಸುತ್ತಲ ಜನರು ಏನು ಯೋಚಿಸಿರಬಹುದು ಎಂಬ ಕಲ್ಪನೆಗಳ ಪುಸ್ತಕ . ಬಸವಣ್ಣನನ್ನು ತಿಳಿಯಲು ಇದು ಸಹಾಯ ಮಾಡುವದು . ( ೧೯೮೨ ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕ , ೨೦೦೧ ರಲ್ಲಿ ಮರು ಮುದ್ರಣಗೊಂಡು ನನ್ನ ಕೈಗೆ ೨೦೦೮ ರಲ್ಲಿ ಬಂದಿದೆ! . )

ಇತ್ತೀಚೆಗೆ ಕುಂ.ವೀರಭದ್ರಪ್ಪ ಬರೆದ ’ಅರಮನೆ’ ಎಂಬ ಬೃಹತ್ ಕಾದಂಬರಿಯನ್ನು ಕೊಂಡೆ . ಆಮೇಲೆ ತಿಳಿಯಿತು ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ ಅಂತ . ಮೊದಲೇ ಏನನ್ನಾದರೂ ಓದುವದು ( ಸಮಯ ಸಿಗದಿರುವದೂ , ಟೀವೀ , ಪೇಪರ್ , ಇಂಟರ್ನೆಟ್ಟ್ ಇತ್ಯಾದಿಗಳು ಸಮಯ ಬೇಡುತಿರುವುದೂ ಕಾರಣ ) ಕಷ್ಟವಾಗಿರುವಾಗ ೬೦೦ ಪುಟಗಳ ಪುಸ್ತಕ ಆಡುಭಾಷೆಯಲ್ಲಿರುವ ಈ ಪುಸ್ತಕ ಓದುವದೂ ಒಂದು ಸಾಹಸವೇ . ದಿನಕ್ಕೆ ೧೦-೨೦ ಪುಟ ಮಾತ್ರ ಸಾಧ್ಯವಾಗುತ್ತಿದೆ. ಮುಗಿಸಲು ಒಂದೆರಡು ತಿಂಗಳೇ ಬೇಕೆಂದು ಕಾಣುತ್ತದೆ. ಇಲ್ಲಿ ಎ, ಏ , ಒ , ಓ , ಔ , ಐ ಅಕ್ಷರಗಳೇ ಇಲ್ಲಿ ಕಾಣುವದಿಲ್ಲ ! . ಅವುಗಳ ಬದಲಾಗಿ ಯೆ, ಯೇ, ವೊ , ವೋ , ಅವ್ , ಅಯ್ ಬಳಸಿದ್ದಾರೆ .

ಅವರ ’ಭಳಾರೆ ವಿಚಿತ್ರಂ’ ಕತೆಗಳ ಪುಸ್ತಕ ಪುಟ್ಟದಾಗಿದ್ದರೂ ತನ್ನ ಓದಿನಲ್ಲಿ ಇದಕ್ಕಿಂತ ನೂರು ಪಟ್ಟು ಸುಖ ನೀಡುತ್ತದೆ !

Rating
No votes yet