ನಮ್ಮ ದೇಶದ ಮರ್ಯಾದೆಗೆ ಮೂರು ಕಾಸಿನ ಕಿಮ್ಮತ್ತಿಲ್ಲ...

1

ನೆನ್ನೆ ಅಂದರೆ, ೧೦-೧-೨೦೧೨ರಂದು ಟಿವಿ ನೋಡುತ್ತಿದ್ದಾಗ ಹೆಡ್ಲೈನ್ಸ್ ಟುಡೆ ಕಡೆಗೆ ನೋಟ ಹರಿಯಿತು. ಅದರಲ್ಲಿನ ಸುದ್ದಿ ಕೇಳಿ ಬಹಳ ಬೇಸರವಾಯಿತು. ಏನು ದುರ್ಗತಿ ಬಂತು ಸ್ವಾಮಿ ನಮ್ ದೇಶಕ್ಕೆ. ಇತ್ತೀಚೆಗೆ ನಮ್ ಎಸ್.ಎಂ.ಕೃಷ್ಣರವರು ಮಲೇಶಿಯಾಕ್ಕೆ ಭೇಟಿ ಕೊಟ್ಟಿದ್ದಾಗ, ಅಲ್ಲಿನ ರಾಯಭಾರಿಗಳೊಡನೆ ಔಪಚಾರಿಕ ಉಡುಗೊರೆ ವಿನಿಮಯವಾಗಿದೆ. ನಮ್ಮಿಂದ ಅವರಿಗೆ ಕೊಡಲಾಗಿದ್ದು ಬೆಳ್ಳಿಯ ಕೆಲವು ವಸ್ತುಗಳು. ಇಲ್ಲಿ ಏನೂ ಎಡವಟ್ಟಾಗಿಲ್ಲ. ಆದರೆ ನಂತರ ತಿಳಿದದ್ದು ಏನೆಂದರೆ ನಮ್ಮ ಭವ್ಯ ಭಾರತದ ಕಟ್ಟಾಳುಗಳು(ಸರ್ಕಾರಿ ಅಧಿಕಾರಿಗಳು) ಬೆಳ್ಳಿಯ ವಸ್ತುಗಳೆಂದು ಹೇಳಿ(ಲೆಕ್ಕ ತೋರಿಸಿ) ಯಾವುದೋ ಹಿತ್ತಾಳೆ ತಟ್ಟೆಗೆ ಬೆಳ್ಳಿ ಗಿಲೀಟು ಮಾಡಿದ ಕಳಪೆ ಉಡುಗೊರೆ ಕಳಿಸಿದ್ದಾರೆ. ಅಲ್ಲ ಸ್ವಾಮಿ ಇವರು ತಿಂದು ತೇಗೋ ಆರ್ಭಟದಲ್ಲಿ ನಮ್ಮ ದೇಶದ ಮಾನ ಮೂರು ಕಾಸಿಗೂ ಬೆಲೆಯಿಲ್ಲದಂತೆ ಹರಾಜು ಆಗೋಯ್ತಲ್ಲ. ಇದನ್ನ ಹೇಗೆ ಸರಿಪಡಿಸೋಕಾಗುತ್ತೆ? ಎಂಥ ನಾಚಿಕೆಗೇಡಿನ ಕೆಲಸ ಮಾಡಿದ್ದಾರಲ್ಲ ಇವರೆಲ್ಲ? ವಿಶ್ವದ ದೊಡ್ಡಣ್ಣನ ಮುಂದೆ ನಮ್ಮ ನಾಯಕರೆಲ್ಲ ದನಿಯಿಲ್ಲದವರು ಎನ್ನಿಸಿಕೊಂಡು ಮರ್ಯಾದೆ ಹೋಗಿದೆ. ಈಗ ಮಲೇಶಿಯಾದಂಥ ಚಿಕ್ಕ ರಾಷ್ಟ್ರದ ಮುಂದೆಯೂ ಗೌರವ ಕಳೆದು ಕೊಂಡೆವಲ್ಲ?

ಪೂರ್ಣ ವಿವರ ಈ ಕೆಳಗಿನ ಲಿಂಕ್ ನಲ್ಲಿದೆ.

http://indiatoday.intoday.in/story/giftgate-hits-ministry-of-external-af...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

(ಸರ್ಕಾರಿ ಅಧಿಕಾರಿಗಳು) ಬೆಳ್ಳಿಯ ವಸ್ತುಗಳೆಂದು ಹೇಳಿ(ಲೆಕ್ಕ ತೋರಿಸಿ) ಯಾವುದೋ ಹಿತ್ತಾಳೆ ತಟ್ಟೆಗೆ ಬೆಳ್ಳಿ ಗಿಲೀಟು ಮಾಡಿದ ಕಳಪೆ ಉಡುಗೊರೆ ಕಳಿಸಿದ್ದಾರೆ. >>>>>ಶೀರ್ಷಿಕೆ ಓದಿ, ಏನು ಆಯ್ತೋ ಅಂತ ಓದಿದಾಗ, ವಿವರ ಗೊತಾಯ್ತು.. ಸಧ್ಯ ವರು 'ಹಿತ್ತಾಳೆಗೆ' ಗಿಲೀಟು ಮಾಡಿ 'ಅದ್ನಾರ' ಕೊಟ್ರಲ್ಲ :) ಓದಿ .....'ಹ್ಯ ಅನಿಸ್ತು... ಅಲ್ಲ ಸ್ವಾಮಿ ಇವರು ತಿಂದು ತೇಗೋ ಆರ್ಭಟದಲ್ಲಿ ನಮ್ಮ ದೇಶದ ಮಾನ ಮೂರು ಕಾಸಿಗೂ ಬೆಲೆಯಿಲ್ಲದಂತೆ ಹರಾಜು ಆಗೋಯ್ತಲ್ಲ. >>>>೩ ಬಿಟ್ಟವರಿಗೆ................. ಅವ್ರು..... ಮಾನ ......ದೆ .......... ಅಂತ ಯೋಚ್ಸೋ ನಾವ್ ತಲೆ ತಗ್ಗಿಸಬೇಕು... ಇಂತವರ ತಪ್ಪಿಗೆ.. ಅವ್ರು ಮಾಡಿದ್ದು ಕ್ಚಮೆ ಇರಲಾರದ ತಪ್ಪು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರ್ಯಾದೆ ಇಲ್ಲದವನೇ ಊರಿಗೆ ದೊಡ್ಡೋನು ‍ ಎನ್ನುವ ಗಾದೆ ಮಾತಿನಂತೆ, ದೇಶದ ಮರ್ಯಾದೆ ತೆಗೆಯುವವರಿಗೇ ನಮ್ಮಲ್ಲಿ ದೊಡ್ಡ ದೊಡ್ಡ ಮಣೆ ಕೊಟ್ಟು ಕೂರಿಸಿಬಿಟ್ಟಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರ್ಯಾದೆ ಇಲ್ಲದವನೇ ಊರಿಗೆ ದೊಡ್ಡೋನು ‍ ಎನ್ನುವ ಗಾದೆ ಮಾತಿನಂತೆ, ದೇಶದ ಮರ್ಯಾದೆ ತೆಗೆಯುವವರಿಗೇ ನಮ್ಮಲ್ಲಿ ದೊಡ್ಡ ದೊಡ್ಡ ಮಣೆ ಕೊಟ್ಟು ಕೂರಿಸಿಬಿಟ್ಟಿದ್ದಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.