ನಾ ಕಾಯ್ವೆನು?.

ನಾ ಕಾಯ್ವೆನು?.

ಎತ್ತ ಸಾಗುತಿದೆ ನಮ್ಮಯ ಸತ್ವ
ಎತ್ತ ಸಾಗುತಿದೆ ನಮ್ ನುಡಿಯ ಪಕ್ವ
ನಾನೆಂಬ ಅಹಂಕಾರದ ಪರಕೀಯಾ ಮಾಯೆಯೊಳ್.

ನಮ್ ತನುವನು ಬದಿಗಿಟ್ಟು
ನಮ್ ನೆಲವನು ತೆರದಿಟ್ಟು
ಬಾ ಬಾ ನೀ ಓ ಪರಕೀಯಾ ಮಾಯೆ ಎಂಬೆನುತ.

ತೋರಣವಂ ಕಟ್ಟಿ, ಅಂಗಳವಂ ಗುಡುಸಿ,
ಬಕ್ಷ ಭೋಜನವಮ್ ಮುಂದಿಟ್ಟು ಕಾಯುರ್ತಿಪ
ಕನ್ನಡದ ಕಳಂಕಿಂತರನ್ ಏನೆನ್ನಬೇಕು ?.

ತನು ಕನ್ನಡ ಮನ ಕನ್ನಡ
ಧನ ಕನ್ನವೆಂಬ್ ಪಾಡಿದ
ನಮ್ ಕನ್ನಡದ ಕವಿಗಳನ್ ಕಾಯುವುದೆಂತು?.

ನಮ್ಮದಲ್ಲದ ಭಾರವನು ಹೊತ್ತು
ದೇಶ ವಿದೇಶವೆಂದು ಸಾಗುರ್ತಿಪ
ನಮ್ ಕನ್ನಡದ ಕಂದಗಳನ್ ರಕ್ಷಿಪರಾರು.

ನಮ್ ನೆಲದ ಸತ್ವವನು
ನಾವೇ ಮರೆತರೆ ಅರ್ಥವುಂಟೆ ?.
ನಮ್ ನೆಲದ ರುಣವನ್ ತೀರ್ಪರಾರು.

ರನ್ನ ಪಂಪರಂ ಕಂಡ ನಮ್ ಈ ಕಂಗಳು
ಹಕ್ಕ ಬುಕ್ಕರಾಡಿ ಹೊಗಳಿದ ನಮ್ ರಾಜ್ಯದಲಿ
ಕನ್ನಡಮ್ಮನಿಗೆ ಕಣ್ ಕಟ್ಟಿ ಕುರುಡು ಬಂದಿದೆಯಂದ್
ಪೊಳ್ ನುಡಿವ ಕಳಂಕಿತರನ್ ಶಿಕ್ಷೆಗೈಪರಾರು?.

ಬಸವಣ್ಣ ನುಡಿದ, ಸರ್ವಜ್ಞ ಪಾಡಿದ,
ಅಲ್ಲಮ ಅಕ್ಕಮಹಾದೇವಿರಂತ,
ವೆಕ್ತಿಗಳನ್ ಕಂಡ ನಮ್ ರಾಜ್ಯದಲಿ
ಕನ್ನಡಕೆ ಕಾಯಕವಂ ಮಾಡಬೇಕಿದೆ.
ಪರಕೀಯಾ ವ್ಯಾಮೋಹಿಗಳಂ ಹಿಡಿದು
ಕನ್ನಡದ ಕಷಾಯವಂ ಕುಡಿಸಿ
ನಮ್ ಕನ್ನಡ ತನವನ್ನು ನಲ್ಮೆಯಿಂದ್ ಕಲಿಸಿ
ಅಕ್ಕರೆಯ ಮಾತಿನೊಳ್ ಸಕ್ಕರೆಯನು ಸವೆಸಿ
ಕನ್ನಡವ ಮರೆಯದಿರು
ಕನ್ನಡತನವ ತೊರೆಯದಿರು ಎಂಬೇಳಿ
ನಮ್ ತಾಯಿ ದರ್ಪದಿಂದ್ ಬೀಗುವ
ಕಾಲ ಬರುವುದೆಂತ್ ನಾ ಕಾಯ್ವೆನು ????.

                                                             ವಸಂತ್

 

Rating
No votes yet

Comments