ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ...

4
ತಿ೦ಗಳುಗಳೆರಡು ಕಳೆದರೂ ನೆನಪಿನಲೆಗಳಿ೦ದ ತಪ್ಪಿಸಿಕೊಳ್ಳಲಾಗುತ್ತಿಲ್ಲ.. ಅಮ್ಮ ಇಲ್ಲ ಅನ್ನೋದನ್ನು ಒಪ್ಪಿಕೊಳ್ಳೋದು ಅಷ್ಟು ಸುಲಭವಲ್ಲ.. ಮನಸ್ಸು ಭಾರವಾಗುತ್ತದೆ. ಬೇಡ..ಬೇಡವೆ೦ದರೂ ಸುತ್ತಿಕೊಳ್ಳುವ ನೆನಪುಗಳ ಸುಳಿಗೆ ಮನಸ್ಸನ್ನು ದೂಡಲೇಬೇಕಾಗುತ್ತದೆ.. ಒಮ್ಮೊಮ್ಮೆ ಸಿಹಿಯನ್ನು ನೀಡಿದರೆ ಮತ್ತೊಮ್ಮೆ ನೆನೆಕೆಯಿ೦ದಲೇ ಕ೦ಬನಿ ಉಕ್ಕುತ್ತದೆ.. ಕೆಲಸಕ್ಕೆ ಹೊರಡುವಾಗ ಚಾವಡಿಯಲ್ಲಿನ ಅಮ್ಮನ ಭಾವಚಿತ್ರ ಹರಸಿದ೦ತೆ ಕ೦ಡರೆ ಮನೆಯೊಳಗೆ ಕಾಲಿಟ್ಟಕೂಡಲೇ ಆ ಭಾವಚಿತ್ರದಲ್ಲಿನ ಅಮ್ಮನನ್ನು ಅರಸುತ್ತೇನೆ.. ಮನಸ್ಸೊಮ್ಮೆ ಮೂಕವಾಗುತ್ತದೆ.. ಕ್ಷಣ ಮಾತ್ರ.. ಹಿ೦ದೆ ಮು೦ದೆ ಯಾರೂ ಇಲ್ಲವೆ೦ದೆನೆಸಿ ಅನಾಥನಾದೆ ಎನ್ನುವ ಭಾವ ಕಾಡಿದರೂ ಶ್ರೀಮತಿಯ ನಗು ಎಲ್ಲವನ್ನೂ ಮರೆಸುತ್ತದೆ! ಶ್ರೀಮತಿಯಲ್ಲಿಯೇ ಶ್ರೀಮಾತೆಯನ್ನೂ ಕ೦ಡುಕೊಳ್ಳಬಹುದೆನ್ನುವ ಭಾವವೇ ಮನಸ್ಸಿಗೊಮ್ಮೆ ಮುದ ನೀಡುತ್ತದೆ.. ಆರೈಕೆಯನ್ನು ಅನುಭವಿಸಲು ಮನಸ್ಸು ಹಾತೊರೆಯುತ್ತದೆ! ಶ್ರೀಲೇಖಳ ಮ೦ದಹಾಸ ಶೇಷುವಿನ ಅರಳು ಹುರಿಗಟ್ಟುವ ಮಾತುಗಳು ಭಾವ ಬ೦ಧನದಲ್ಲಿ ಆಗಾಗ ಕಳೆದುಹೋಗುವ ನನ್ನ ಮನಸ್ಸಿಗೆ ಸಾ೦ತ್ವನ ನೀಡುತ್ತಿರುವುದ೦ತೂ ಹೌದು.. ಹೌದು.. ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ ವಾಸ್ತವತೆಯನ್ನು ಅರ್ಥೈಸಿಕೊಳ್ಳಲಾರ೦ಭಿಸಿದ್ದೇನೆ..
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ, ನನ್ನ ಅನುಭವದಲ್ಲಿ ಹೆಂಡತಿಯು ತಾಯಿಯ ಕೊರತೆ ಸಂಪೂರ್ಣವಾಗಿ ತುಂಬಲಾರಾದರು ಸಾಕಾಷ್ಟು ಮಟ್ಟಿಗೆ ತುಂಬಬಲ್ಲರು. ಮಕ್ಕಳಂತೂ ನಿಮಗೇ ಚೆನ್ನಾಗಿ ಅನುಭವಕ್ಕೆ ಬಂದಿರುವ ವಿಷಯವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ನಮಸ್ತೆ ನಿಮ್ಮ ಹೃದಯದ ನೋವು ನನಗೆ ಅರ್ಥವಾಗುತ್ತೆ , ಸ್ವ ಅನುಭವ ಆದರೆ ಅರ್ಥಮಾಡಿಕೊಳ್ಳಿ ಕಾಲನ ಕಾಲ್ತುಳಿತದಲ್ಲಿ ಎಲ್ಲ ನೆನಪುಗಳು ಮುಸುಕಾಗುತ್ತೆ, ಹೊಸ ಚಿಗುರುಗಳು ಮೂಡುತ್ತ , ಹಳೆಯ ಬೇರುಗಳು ನೆಲಸೇರಿ ಮರೆಯಾಗುತ್ತೆ ನೀವು ಈ ನೋವಿನಿಂದ ಹೊರಬರಬಲ್ಲಿರಿ ಮತ್ತು ಬರಬೇಕು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ ನಾವಡರೆ, ವಂದನೆಗಳು. " ಬಂಡೆಗಳು ಎದುರಾದರೂ ನದಿ ತನ್ನ ಚಲನೆಯನ್ನು ನಿಲ್ಲಿಸಲಾರದು" ನಿಮ್ಮದೇ ಮಾತಿನಲ್ಲಿ ಹೇಳುವುದಾದರೆ - ಕಾಲವೇ ಕನ್ನಡಿ ಮನದ ಭಾವನೆ ಕವನದ ಮೂಲಕ ತೆರೆದಿಟ್ಟ ತಮಗೆ ನಮನಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರಗಳು. ತಮ್ಮ ಮಾತೋಶ್ರಿಯವರ ಆತ್ಮಕ್ಕೆ ಶಾಂತಿ ಯನ್ನು ಕೋರುತ್ತಾ,ತಮ್ಮ ನೋವಿನಲ್ಲಿ ನಾನು ಸಹ ಭಾಗಿ ಯಾಗಿದ್ದೇನೆ. ಅವರ ಅಗಲಿಕೆಯಿಂದ ಉಂಟಾದ ತೆರವನ್ನು ಯಾರಿಂದಲೂ ತುಂಬಲು ಸಾದ್ಯವಾಗದಿದ್ದರೂ,ಅವರ ಆದರ್ಶ ಜೀವನವು ತಮಗೆ ದಾರಿದೀಪ ವಾಗಲೆಂದು ಬಯಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಅಮ್ಮನ ಪವಿತ್ರ ಸ್ಥಾನವನ್ನು ಬಹುಶಃ ಬೇರಾರಿ೦ದಲೂ ತು೦ಬಲಾಗದು. ಮಡದಿ, ಮುದ್ದು ಮಕ್ಕಳ ಮುಖ ನೋಡುತ್ತ ಮನದ ನೋವ ಮರೆಯುವುದೇ ಸಧ್ಯದ ಪರಿಹಾರ. ನಿಮ್ಮ ನೋವಿನಿ೦ದ ಹೊರಬನ್ನಿ, ಧೂಳು ಹಿಡಿದಿರುವ ಕಾಲದ ಕನ್ನಡಿಯನ್ನೊಮ್ಮೆ ಧೂಳು ಕೊಡವಿ ದಿಟ್ಟಿಸಿ. ಶುಭವಾಗಲಿ, ಅಮ್ಮನವರ ಆತ್ಮಕ್ಕೆ ಶಾ೦ತಿ ಸಿಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ತಿಳಿದಿದ್ದನ್ನು ಹೇಳುತ್ತೇನೆ ... ನಿಮ್ಮ ಯಾವ ಕೆಲಸ ಅಮ್ಮನಿಗೆ ಪ್ರಿಯವಾಗಿತ್ತೋ ಆ ಕೆಲಸವನ್ನು ಮಾಡಿ .... ಆಕೆಗೆ ಅದು ತಲುಪುತ್ತದೆ ಎಂಬ ನಂಬಿಕೆ ಇರಲಿ ... ಆಗ ನಿಮಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದು ಸ್ವ ಅನುಭವ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೆನಪುಗಳಿಂದ ಹೊರಬರುವುದೆಂದರೆ ಕಷ್ಟಾನೇ, ನೆನಪುಗಳೊಡನೆ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ. ವಾಸ್ತವವನ್ನು ಒಪ್ಪಿಕೊಳ್ಳುವುದು ಎಷ್ಟೋಸಲ ಕಷ್ಟ, ಆದರೂ ಅದನ್ನು ಒಪ್ಪಬೇಕಾದ ಅನಿವಾರ್ಯತೆಯಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ ನಾವಡರೆ, ನಿಮ್ಮ ಮನದಾಳದ ನೋವ ಬಿತ್ತರಿಸುವ ಕವನದ ಸಾಲುಗಳು ಮನ ಕಲಕುತ್ತವೆ. ಅವರಿಲ್ಲವೆಂದು ಕೊರಗದಿರಿ ಅವರಿಹರು ನಿಮ್ಮೊಳಗೆ ಹೊರಗೆ ಅವರೆಸಗಿದ ಪ್ರತಿ ಕಾರ್ಯಗಳೊಳಗೆ ಅಮ್ಮ ಎಂದೂ ನಮ್ಮಿಂದ ದೂರವಾಗುವುದಿಲ್ಲ. ಪ್ರತಿಕ್ಷಣ ನಮ್ಮೊಂದಿಗೇ ಇರುತ್ತಾಳೆ. ನಮ್ಮ ಪ್ರತಿ ಕಾರ್ಯಕ್ಕೂ ಅವಳೇ ಪ್ರೇರಣೆ, ಅವಳ ನೆನಪೆ ಸ್ಫೂರ್ತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+೧ ನಾವಡರೆ, ೨ ವರ್ಷ ಮೊದಲು ಇದೇ ದಿನ(೧೩ ಮಾರ್ಚ್) ನನ್ನ ತಾಯಿಯವರು ನಮ್ಮನಗಲಿದರು. ಇದುವರೆಗೂ ಅವರನ್ನು ನೆನಪಿಸದೇ ಇರುವ ದಿನವಿಲ್ಲ. ಯಾವುದೇ ವಿಷಯವಿರಲಿ ಕೊನೆಗೆ- "ಅಮ್ಮ ಇರುತ್ತಿದ್ದರೆ ಹೀಗೆ ಹೇಳುತ್ತಿದ್ದರು......", ನನ್ನಾಕೆ- " ಅತ್ತೆಯವರಿಗೆ ಇದು ಬಹಳ ಇಷ್ಟ....." ಎಂದೋ ಮಾತು ಅಮ್ಮನ ಸುತ್ತ ಸುತ್ತುತ್ತಿರುತ್ತದೆ. ಮೊಬೈಲ್ ಕ್ಯಾಮರಾದಲ್ಲಿ ತೆಗೆದ ಫೋಟೋ, ವಿಡಿಯೋಗಳು ಕಂಪ್ಯೂಟರ್‌ನಲ್ಲಿ ಹಾಕಿಟ್ಟಿರುವೆ. ಮೊಮ್ಮಕ್ಕಳಿಂದ ಅಜ್ಜಿಯ ಸಂದರ್ಶನನೂ ಮಾಡಿಸಿಟ್ಟಿರುವೆ-ನೆನಪಾದಾಗ ಹಾಕಿ ನೋಡುವೆ. ಹಿಂದೆಯೂ ನನ್ನ ಜತೆ ಇದ್ದರು, ಈಗಲೂ ಇದ್ದಾರೆ, ಇನ್ನೂ ಇರುವರು. ದುಃಖಿಸುವ, ಮರೆಯುವ ಪ್ರಶ್ನೆಯೇ ಇಲ್ಲ. ಪದ್ಮ ಅವರು ಹೇಳಿದಂತೆ- "ನಮ್ಮ ಪ್ರತಿ ಕಾರ್ಯಕ್ಕೂ ಅವಳೇ ಪ್ರೇರಣೆ, ಅವಳ ನೆನಪೆ ಸ್ಫೂರ್ತಿ" ಆಗಿರಲಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಧಾನವಾಗಿ ಆ ನೆನಪುಗಳಿ೦ದ ಹೊರಬರಲಾರ೦ಭಿಸಿದ್ದೇನೆ ವಾಸ್ತವತೆಯನ್ನು ಅರ್ಥೈಸಿಕೊಳ್ಳಲಾರ೦ಭಿಸಿದ್ದೇನೆ.. ------------------------------------------------------------------ ರಾಘವೇಂದ್ರ ಅವ್ರೆ- ಅದೊಮ್ಮೆ ಆಸು ಹೆಗ್ಡೆ ಆವ್ರು ಅವರ ತಾಯಿಯವರ ನೆನಪು ಕುರಿತು ಬರೆದ ಬರಹ ಒಂದನ್ನ ಓದಿದ ನೆನಪು.. (ಅತ್ರಾಡಿ ಯ ಮನೆಯಲಿ) ಈಗ ನೀವು ಸಹಾ ನಿಮ್ಮ ತಾಯಿಯವರ ನೆನಪು ಬಗ್ಗೆ ಬರಹ ಬರ್ದಿದೀರಾ... ಪ್ರತಿಕ್ರಿಯೆಗಳೂ ಓದಿದೆ.. ನಿಮ್ಮ ಈ ಬರಹಕ್ಕೆ ಬಂದ ಹಲ ಪ್ರತಿಕ್ರಿಯೆಗಳಲ್ಲೇ ಅದಕ್ಕೆ ಪರಿಹಾರವೂ -ಸಂತೈಸುವಿಕೆಯೂ .. ಸಮಾಧಾನವೂ ಇದೆ ಅನ್ನಿಸಿದೆ... ಗಣೇಶ್ ಅಣ್ಣ ಅವ್ರ ಪ್ರತಿಕ್ರಿಯೆ ನನ್ನ ಗಮನ ಸೆಳೆಯಿತು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ನನ್ನ ಹೃದಯಪೂರ್ವಕ ಸಹಾನುಭೂತಿಗಳು.ಹೇಳಿಕೊಳ್ಳಲಾಗದ ಭಾವಗಳು ತಲೆಯಲ್ಲಿ ಧಿಮಿಗುಡುತ್ತಿದ್ದು ನನ್ನ ಮನಸ್ಸೂ ಭಾರವಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೆಲ್ಲರ ಹಾರೈಕೆ ಪೂರ್ವಕ ಸಾ೦ತ್ವನದ ನುಡಿಗಳಿಗೆ ನಾನು ಚಿರಋಣಿ. ನಿಮ್ಮ ಹರಕೆ ಹಾಗೂ ಹಾರೈಕೆಗಳು ನನ್ನ ಮೇಲಿರಲಿ ಎ೦ಬ ಕೋರಿಕೆಯೊ೦ದಿಗೆ,, ನಿಮ್ಮ ಸತತ ಪ್ರೋತ್ಸಾಹವನ್ನು ನಿರೀಕ್ಷಿಸುತ್ತಾ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ಖಂಡಿತವಾಗಿ ಸಂಪದಿಗರೆಲ್ಲರ ಹಾರೈಕೆ ಮತ್ತು ಪ್ರೋತ್ಸಾಹ ನಿಮಗೆ ಸದಾಕಾಲ ಇರುತ್ತದೆ. ಅದಕ್ಕೆ ಹರಿದು ಬಂದಿರುವ ಪ್ರತಿಕ್ರಿಯೆ ಮತ್ತು ಸಾಂತ್ವನದ ನುಡಿಗಳೇ ಸಾಕ್ಷಿ. ಕಾಲದ ಕನ್ನಡಿಯನ್ನು ಮತ್ತೆ ಚುರುಕುಗೊಳಿಸಿ ನಿಮ್ಮ ತಾಯಿಯವರು ಅದನ್ನು ನೋಡಿ ಸಂತಸ ಪಡುತ್ತಿದ್ದಾರೆಂದು ತಿಳಿದು ಮಾಡಿ. ನಾವೆಲ್ಲರೂ ನಿಮ್ಮ ಕಷ್ಟ ಸುಖದಲ್ಲಿ ಭಾಗಿಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.