ನಿವೃತ್ತಿ ದುಡಿಯಲಾಗದುದನ್ನು, ವಿಮೆಯು ಸತ್ತ ಮೇಲಿನ ಪ್ರಯೋಜನವನ್ನು, ವೈದ್ಯಕೀಯವು ಸಾಯಲೊಂದು ಕಾರಣವನ್ನು, ಅಪಘಾತವು ಬದುಕಿನ ನೋವನ್ನು ವಿವರಿಸುತ್ತವೆ
(೯೬) ನಿಮ್ಮನ್ನು ನೀವೇ ದೇವರೆಂದು ಭಾವಿಸಿಬಿಡುವಷ್ಟು ಶಕ್ತಿಯನ್ನು ಅಧಿಕಾರವು ನೀಡುತ್ತದೆ. ಅದು ನಿಶ್ಯಕ್ತ ದೈವದ ಪವಾಡ!
(೯೭) ಯಾರನ್ನಾದರೂ ಮತಿಹೀನರೆಂದು ಕರೆಯುವುದೇ ಮತಿಹೀನವೆಂದು ಭಾವಿಸುವುದು ಮತಿವಂತರ ಕೆಲಸ.
(೯೮) ತಂತ್ರಜ್ಞಾನವೆಂಬುದು ದೈವದ ಅದ್ಭುತ ಸೃಷ್ಟಿಯಾದ ಮನುಷ್ಯನ ವ್ಯವಹಾರಗಳಿಗೆ ಲಗ್ಗೆ ಹಾಕಿದ ಮನುಷ್ಯ ಸೃಷ್ಟಿ.
(೯೯) ಮೊದಲಿಗೆ ಮನುಷ್ಯ ದೇವರನ್ನು ಸೃಷ್ಟಿಸಿದ. ನಂತರ ಮಾನವ ತಂತ್ರಜ್ಞಾನವನ್ನು ಅನ್ವೇಷಿಸಿದ. ಆ ತಂತ್ರಜ್ಞಾನವು ದೇವರನ್ನು ಮಿಥ್ಯೆಯನ್ನಾಗಿಸಿಬಿಟ್ಟಿತು.
(೧೦೦) ನೀವು ಸಾಯುವ ಮುನ್ನವೇ ದುಡಿವ ಸಾಮರ್ಥ್ಯ ಕಳೆದುಕೊಳ್ಳುತ್ತೀರೆಂದು ನಿವೃತ್ತಿ ನಿಮ್ಮನ್ನು ನಂಬಿಸಿಬಿಡುತ್ತದೆ. ನಿಮ್ಮ ಬಂಧುಗಳಿಗೆ ನೀವು ದುಡಿದುಹಾಕುವುದು ನೀವು ಸತ್ತ ಮೇಲಷ್ಟೇ ಎಂದು ವಿಮಾಯೋಜನೆ ನಿಮಗೆ ಗ್ಯಾರಂಟಿ ಕೊಡುತ್ತದೆ. ವೈದ್ಯಕೀಯ ಉಪಚಾರವು ನೀವು ಸಾಯಲೊಂದು ಕಾರಣ ನೀಡುತ್ತದೆ. ಅಪಘಾತವು ಬದುಕೆಂಬ ನಿಮ್ಮ ನೋವನ್ನು ಶೀಘ್ರವಾಗಿ ನಿವಾರಿಸುತ್ತದೆ. ನೀವು ಸತ್ತಾಕ್ಷಣ ನಿಮ್ಮ ದೇಹದೊಳಗೆ ಉಳಿದಿರಬಹುದಾದ ಅಂಗಗಳ ಪಟ್ಟಿಮಾಡುವುದನ್ನು ಶವಪರೀಕ್ಷೆ ಎನ್ನುತ್ತೇವೆ. ನಾವು ಹೋಗುವ ಮುನ್ನವೇ ಕೆಲವರನ್ನು ಎಲ್ಲಿಯೂ ಅಲ್ಲದೆಡೆ ಕಳಿಸುವುದನ್ನು ದಯಾಮರಣವೆನ್ನುತ್ತೇವೆ!
Comments
ಉ: ನಿವೃತ್ತಿ ದುಡಿಯಲಾಗದುದನ್ನು, ವಿಮೆಯು ಸತ್ತ ಮೇಲಿನ ಪ್ರಯೋಜನವನ್ನು, ...