ಪಥಗೀತ

4

ಮಸುಕು ಮಸುಕಿನ ಹಾದಿ, ದೂರ ಮಿಣುಕಿನ ದೀಪ, ಮರಳಿ ಮುರಳಿಯ ಗಾನ ಸೆಳೆತ
ಅಂತರಂಗದ ಕೊಳದ ಬಿಳಿಯ ಕೊಕ್ಕರೆಯೀಗ ಒಂಟಿಕಾಲಲಿ ಧ್ಯಾನ ನಿರತ

ಕಿವಿ ತಮಟೆಯಲ್ಲೀಗ ಅಸ್ಪಷ್ಟ ಧ್ವನಿ ರೂಪ,ಯಾವ ಭಾಷೆಯ ಸ್ವರವೋ ಕಾಣೆ
ಆಗಾಗ ಎದೆಯಲ್ಲಿ ತಂತಿ ಮೀಟಿದ ಶಬ್ದ, ಬೆಚ್ಚಿ ಕೂತಿದೆ ಹೃದಯ ವೀಣೆ

ಕಲಬೆರಕೆ ಕನಸುಗಳು ಕಲಸಿದಂತಹ ಬದುಕು, ಆಗಿ ಹೋಗಿದೆ ಅಸ್ತವ್ಯಸ್ತ
ಇಷ್ಟುದಿನ ಸಲಹಿರುವ, ಕೈಹಿಡಿದು ನಡೆಸಿರುವ, ಹಸ್ತದಿಂದಲೇ ಶಾಪಗ್ರಸ್ತ

ಉಳಿಯ ಝಳಪಿಸಿ ಶಿಲ್ಪಿ ಹೊಡೆಯದಿದ್ದರೆ ಚಾಣ, ಶಿಲ್ಪವಾಗುವುದೇಗೆ ಕಲ್ಲು?
ದಿನದಿನವೂ ಕರಗುವನು ಶುಕ್ಲಪಕ್ಷದ ಚಂದ್ರ, ಕಲೆಗಳಿವೆ ಶಶಿವದನದಲ್ಲೂ

ಇಳಿದು ಬರಬಹುದೀಗ ಇಳೆಯ ಬೆಳಗುವ ಬೆಳಕು ಶಕ್ತಿ ಮೂಲದ ಕೇಂದ್ರದಿಂದ
ಉತ್ತರಿಸಬೇಕಿಲ್ಲ ಕ್ಲಿಷ್ಟಕರ ಪ್ರಶ್ನೆಗಳ, ಕತ್ತರಿಸು ಕತ್ತಲೆಯ ಬಂಧ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ಪದೇ ಪದೇ ಒಂದೊಂದೇ ಸಾಲುಗಳನ್ನು ಓದಿ ಅರ್ಥ ಮಾಡಿಕೊಂಡೆ. ಒಳ್ಳೆಯ ಕವಿತೆ ಕೊಟ್ಟಿದ್ದಕ್ಕೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 ಸು0ದರ ಕವಿತೆ.. ಇಷ್ಟವಾಯ್ತು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1

ವಂದನೆಗಳು ಎಲ್ಲವರಿಗೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮತ್ತು ಮೌಲ್ಯ ಕೊಡುವ ಚಿತ್ರ ಎರಡೂ ಸುಂದರ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ಸುಮ್ನೆ ಗೇಚಿದ್ದು.. ಮೆಚ್ಚುಗೆಗೆ ನಮನ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಭಾವದ ಕವನ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಬುದ್ಧ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು..

ನಿಮ್ಮ ಭಾವನೆಗೆ ನಮ್ಮ ವಂದನೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವವನ್ನ ಒಳ್ಳೆಯ ಲಯದಲ್ಲಿ ಹಿಡಿದಿಟ್ಟಿರುವಿರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಕವನ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ವಂದನೆಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಯವರಿತದ್ದಕ್ಕೆ ಧನ್ಯವಾದಗಳು ಸುಂದರೇಶ್