ಪುಳಿಯೋಗರೆ ಮತ್ತು ಬಿಸಿಬೇಳೆ ಹುಳಿಯನ್ನ ...

4

 ತಲೆಬರಹ ನೋಡಿ, ಇದೇನು, ಅಡಿಗೆ ಶಾಲೆ ಶುರು ಮಾಡ್ತೀರಾ ಅಂದ್ರಾ? ಮಾಡಿದ್ರೆ ತಪ್ಪೇನಿಲ್ಲ, ಆದ್ರೆ ಸದ್ಯಕ್ಕಂತೂ ಯೋಚನೆ ಇಲ್ಲ ಅದರದ್ದು. ಇನ್ನು ಮುಂದೆ ಯಾವಾಗಲಾದ್ರೂ ಮಾಡೋಹಾಗಿದ್ರೆ ನಿಮಗೆ ಹೇಳೋದಂತೂ ಮರೆಯೋದಿಲ್ಲ! ಈಗ ಈ ಹಳೇ ಒಂದು ವಿಷಯದ ನೆನಪು ನನ್ನ ತಲೆಯೊಳಗೆ ಹೊಕ್ಕಿತ್ತು. ಅದಕ್ಕೇ ಅಂತಾನೇ ಈ ಪುಳಿಯೋಗರೆ ಮತ್ತೆ ಬಿಸಿಬೇಳೆ ಹುಳಿಯನ್ನದ ಪುರಾಣ ಹೇಳೋಕೆ ಹೊರಟಿದ್ದು.
 ನನಗಂತೂ ಅನ್ನವಿಲ್ಲದೇ ಒಂದು ಇದ್ದರೂ ಏನೋ ಕಳೆದುಕೊಂಡ ಹಾಗಾಗುತ್ತೆ. ದಿನಾಲೂ ತಿನ್ನೋ ಆ ಅನ್ನಕ್ಕೆ ಅಷ್ಟು ಸತ್ವ ಇರುತ್ತೆ ಅಂತ ಗೊತ್ತಾಗಿದ್ದು ನಾನು ಮಹಾರಾಷ್ಟ್ರದಲ್ಲಿ ಕೆಲಸ ಮಾಡಲು ಹೋದಾಗಲೇ. ಇನ್ನೂ ಬಾಡಿಗೆ ಮನೆ ಸಿಕ್ಕಿರಲಿಲ್ಲ. ಯಾವುದೋ ಒಂದು ಹಾಸ್ಟೆಲ್ ನಲ್ಲಿ ವಾಸ, ಮತ್ತೆ ಒಂದು ಮೆಸ್ ನಲ್ಲಿ ಊಟ. ಆ ಮೆಸ್ ನಡೆಸುವಾಕೆಯಂತೂ ಚಪಾತಿ ಪಲ್ಯವನ್ನು ಬಡಿಸುವಾಗ ಅಷ್ಟೇನೂ ಹಿಂದೆಗೆಯದಿದ್ದರೂ, ಅನ್ನ ಬಡಿಸಲು ಮಾತ್ರ ಕಪಿಮುಷ್ಟಿಯೇ ಸರಿ! ಚಮಚಾಗಳ ಲೆಕ್ಕದಲ್ಲಿ ಅನ್ನ ಹಾಕಿದರೆ ದಿನಾ ಅನ್ನ ತಿನ್ನುವಂತಹವರಿಗೆ ಅದೆಷ್ಟು ಹಿಂಸೆ ಆಗಬಹುದು ಅಂತ ಗೊತ್ತಾಗಿದ್ದೇ ಆಗ. ಒಂದು ೩-೪ ವಾರ ಗಳಲ್ಲಿ ಮನೆ ಬಾಡಿಗೆಗೆ ಸಿಕ್ಕಿ, ನಾನು ನನ್ನ ಕೈಯಡುಗೆಯನ್ನೇ ತಿನ್ನುವಂತಾದ ಮೇಲೆ ಬದುಕಿದೆ.

ಒಂದೆರಡು ತಿಂಗಳಲ್ಲಿ ಬರೀ ಬದುಕುವಷ್ಟೇ ಅಲ್ಲದೆ ಚೆನ್ನಾಗೇ ಬದುಕುವಷ್ಟೂ ಅಡುಗೆ ಕೈ ಹತ್ತಿತು ಅನ್ನಿ. ನನ್ನ ಕೈ ರುಚಿ ನನ್ನ ಜೊತೆ ಕೆಲಸ ಮಾಡುತ್ತಿದ್ದವರಿಗೂ ಹತ್ತಿ, ಸಂಜೆ ಭೇಟಿ ಕೊಡತೊಡಗಿದರು. ಊಟದ ಸಮಯಕ್ಕೆ ಮನೆಗೆ ಬಂದವರನ್ನು ಊಟಕ್ಕೇಳಿ ಅನ್ನೋದು ಕನ್ನಡಿಗರಿಗೆ ಬಿಡಿ, ರಕ್ತದಲ್ಲೇ ಬಂದಿರುತ್ತೆ ಅನ್ನೋದು ನಿಮಗೂ ಗೊತ್ತಿದೆ. ಹಾಗಾಗಿ, ನನ್ನ ಅಡುಗೆಯ ರುಚಿಯನ್ನ ಅವರೂ ಆಗಿಂದಾಗ್ಗೆ ಕಾಣತೊಡಗಿದರು. ಊಟದ ದೆಸೆಯಿಂದಲೋ ಅಲ್ಲವೋ, ನಮ್ಮ ಮನೆಗೆ ಗೆಳೆಯರ ಹಾಯ್ದಾಟ ಹೆಚ್ಚೇ ಇತ್ತು, ನಾನು ಆ ಊರು ಬಿಡುವವರೆಗೆ.

ಈ ಊಟದ ವಿಷಯ ಮಾತಾಡೋವಾಗ ನೆನಪಿಗೆ ಬಂತು. ಯಾಕೋ ಬಹಳ ಜನ ಕನ್ನಡಿಗರಿಗೆ ಪುಳಿಯೋಗರೆಯನ್ನ ಚೆನ್ನಾಗಿ ಮಾಡೋಕೆ ಬರೋದಿಲ್ಲ. ಆದ್ರೆ, ಕನ್ನಡಿಗರು ಬಿಸಿಬೇಳೇ ಹುಳಿಯನ್ನ ಮಾಡೋದ್ರಲ್ಲಿ ಎತ್ತಿದ ಕೈ. ಬೇಕಿದ್ರೆ ಈ ಎರಡೂ ಮಾತು ಸರೀನೋ ಅಲ್ವೋ ಅನ್ನೋಕೆ ಒಂದಷ್ಟು ಕನ್ನಡದವರ ಮನೆಯಲ್ಲಿ ಎರಡನ್ನೂ ರುಚಿ ನೋಡಿ. ನಿಮಗೇ ಅನ್ಸತ್ತೆ. ಇಲ್ಲದಿದ್ರೆ. ಬೇರೆ ತಮಿಳೋರನ್ನೋ, ತೆಲುಗರನ್ನೋ ಕೇಳಿ. ಬಿಸಿಬೇಳೇ ಅನ್ನ ಮಾಡೋದ್ರಲ್ಲಿ ಕನ್ನಡಿಗರನ್ನ ಬಿಟ್ರಿಲ್ಲ ಅಂತ ಅವರುಗಳೂ ಒಮ್ಮತದಿಂದಲೇ ಒಪ್ಕೋತಾರೆ. ಹೀಗೆ ಒಂದನ್ನ ಚೆನ್ನಾಗಿ ಮಾಡೋವ್ರು ಇನ್ನೊಂದನ್ನು ಚೆನ್ನಾಗಿ ಮಾಡ್ದೇ ಇರೋದು ಒಂದು ಬೇಜಾರಿನ ವಿಷಯ ಅಲ್ವೇ ಅಂತ ಅನ್ನಿಸುತ್ತಿತ್ತು.

ಆದ್ರೆ, ಹಾಗೇನು ಮಾಡೋ ಗೋಜಿಲ್ಲ ಅಂತ ಈಗೀಗ ಗೊತ್ತಾಗ್ತಿದೆ. ಇದನ್ನ ಸರಿಪಡಿಸುವುದು ಬಹಳ ಸಲೀಸು. ಒಂದೇ ದಾರಿ. ಕನ್ನಡಿಗರು ಇನ್ಮೇಲೆ ಪುಳಿಯೋಗರೆ ಮಾಡೋದೇ ಬೇಡ. ಅದರ ಬದಲು ಬರೀ ಬಿಸಿಬೇಳೆ ಹುಳಿಯನ್ನ ಮಾತ್ರ ಮಾಡ್ಬೇಕು. ಎಲ್ಲೋ ನೂರರಲ್ಲಿ ಹತ್ತೋ ಇಪ್ಪತ್ತೋ ಜನ ಚೆನ್ನಾಗಿ ಪುಳಿಯೋಗರೆ ಮಾಡ್ಬಿಟ್ರೆ ಸಾಲದು. ಉಳಿದವರು ಎಲ್ಲಿಗೆ ಹೋಗ್ಬೇಕು? ಅವರಿಗೇನು ತಮಗೆ ಪುಳಿಯೋಗರೆ ಮಾಡೋಕೆ ಬರೋಲ್ಲ ಅಂತ ಹೇಳಿಸಿಕೊಳ್ಳೋಕೆ ಹುಚ್ಚೇ? ಇಲ್ಲ ಸುಮ್ಮ ಸುಮ್ಮನೆ ಅವರು ಕಷ್ಟ ಪಟ್ಟು ಕಲಿತ್ಕೋಬೇಕೇನು ಬೇರೆಯವರನ್ನ ಮೆಚ್ಚಿಸೋಕೆ? ಅದರ ಬದಲು ಪುಳಿಯೋಗರೆ ಮಾಡೋಗೆ ಬರೋವ್ರಿಗೇನೇ  ನೀವು ಇನ್ಮೇಲೆ ಪುಳಿಯೋಗರೆ ಮಾಡೋಹಾಗಿಲ್ಲ ಅಂತ ಕಟ್ಟುಪಾಡು ಮಾಡಿದ್ರಾಯ್ತಪ್ಪ.

ಏನಂತೀರ?

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಶ್ರೀಹರ್ಷ ಸಾಲಿಮಠ ಅವರೆ, ಅವಸರದಲ್ಲಿ ಓದಿ ತೀರ್ಮಾನಿಸಿದಿರಿ ಕಾಣುತ್ತದೆ. ಇಲ್ಲಿ ಕನ್ನಡಿಗರನ್ನು ಕೀಳಾಗಿ ಅವರು ಬರೆದಿಲ್ಲ. "ಹೇಗೇ ಮಾಡಿ, ತಮಿಳರು ಮಾಡಿದಷ್ಟು ಚೆನ್ನಾಗಿ ಪುಳಿಯೋಗರೆ ನಮ್ಮಿಂದ ಸಾಧ್ಯವಿಲ್ಲ" ಎಂದು ನಾವು ತಮಿಳರ ಪುಳಿಯೋಗರೆಯನ್ನು ಹೊಗಳುವೆವು. ಅದೇ ರೀತಿ ಅವರೂ ಸಹ "ಬಿಸಿ ಬೇಳೆ ಬಾತ್ ನಿಮ್ಮಲ್ಲಿ ತಿಂದ ರುಚಿ ಬೇರೆಲ್ಲೂ ಇಲ್ಲಾ.."ಹೀಗೇ ಹೊಗಳುವರು. ಅದ್ಯಾಕೋ ಗೊತ್ತಿಲ್ಲ. ಈಗ ಬಿಡಿ..ರೆಡಿ ಮೇಡ್ ಪುಳಿಯೋಗರೆ ಮಿಕ್ಸ್(MTR)ಗಳು ದೊರಕುತ್ತವೆ. ಆದರೂ ಆ ರುಚಿ ಬರುವುದಿಲ್ಲ. ಇದನ್ನು ಹೀಗೇ ಸುಮ್ಮನೆ ಹಂಸಾನಂದಿಯವರು ಅವರ ಸ್ಪೆಷಾಲಿಟಿ ಅಡುಗೆ ನಾವು ಮಾಡುವುದು ಬೇಡ..ಎಂದಿರುವುದು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ ಅವರೆ, ಮತ್ತೊಂದು ಸಲ ಬೂದುಗಾಜು ಹಾಕಿಕೊಂದು ನನ್ನ ಬರಹವನ್ನ ಮತ್ತೆ ಓದಿಬಿಟ್ಟೆ! ನನ್ನ ಪ್ರಬಂಧದಲ್ಲಿ ತಮಿಳರು ಚೆನ್ನಾಗಿ ಪುಳಿಯೋಗರೆ ಮಾಡ್ತಾರೆ ಅನ್ನೋ ಮಾತೇ ಬಂದಿಲ್ಲ - ಕನ್ನಡಿಗರು ಚೆನ್ನಾಗಿ ಬಿಸಿಬೇಳೆ ಹುಳಿಯನ್ನ ಮಾಡ್ತಾರೆ ಅಂತ ಮಾತ್ರ , ನನ್ನ ಅನುಭವದ ಮಾತನ್ನು (ಮತ್ತೆ ಬೇರೆಯವರು ಹೇಳುವ ಮಾತನ್ನೂ) ಬರೆದಿದ್ದೇನೆ. ಶ್ರೀಹರ್ಷ ಅವರೆ, ನಿಮಗೆ ಬೇರೆ ಆಹಾರ ಪದಾರ್ಥಗಳನ್ನು ಕಡ್ಡಾಯ ಮಾಡುವ ಮಾತಿದ್ದರೆ, ಅದನ್ನು ತಡೆಯಲು ನಾನು ಯಾರು? ಖಂಡಿತ ಮುಂದುವರೆಸಿ :) ಆದ್ರೆ ಪುರೋಹಿತಶಾಹಿ ಅದು ಇದು ಅನ್ನೋ ಮಾತು ತೆಗೀಬೇಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೆ, "ತಮಿಳರು ಮಾಡಿದಷ್ಟು ಚೆನ್ನಾಗಿ ಪುಳಿಯೋಗರೆ ನಮ್ಮಿಂದ ಸಾಧ್ಯವಿಲ್ಲ" ಎಂದು ನಾನು ಹೇಳಿದ್ದು ,ನೀವಲ್ಲ. ನಾನು ಬರೆದ ಕೊನೆಯ ವಾಕ್ಯ- >>>ಇದನ್ನು ಹೀಗೇ ಸುಮ್ಮನೆ ಹಂಸಾನಂದಿಯವರು ಅವರ ಸ್ಪೆಷಾಲಿಟಿ ಅಡುಗೆ ನಾವು ಮಾಡುವುದು ಬೇಡ..ಎಂದಿರುವುದು. ಈ ವಾಕ್ಯ ತಿದ್ದುಪಡಿ- ಇದನ್ನು "ಹೀಗೆ ಸುಮ್ಮನೆ" ಹಂಸಾನಂದಿಯವರು,"ಕನ್ನಡಿಗರು ಇನ್ಮೇಲೆ ಪುಳಿಯೋಗರೆ ಮಾಡೋದೇ ಬೇಡ. ಅದರ ಬದಲು ಬರೀ ಬಿಸಿಬೇಳೆ ಹುಳಿಯನ್ನ ಮಾತ್ರ ಮಾಡ್ಬೇಕು...." ಎಂದಿರುವುದು. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಹೇಳ್ತಿಲ್ಲ ಸ್ವಾಮಿ ತಾವುಗಳು ಸಾವಿರಾರು ವರುಷಗಳಿಂದ ಮಾಡಿಕೊಂಡು ಬಂದದ್ದನ್ನೇ ಹೇಳಿದ್ದೇನೆ. ಈಗೂ ಹಾಗೇ ಆಗಬೇಕು ಅನ್ನುತ್ತಿದ್ದೀರಲ್ಲ... ಅದರ ಬಗೆಗೆ ಹೇಳಿದೆ ಅಷ್ಟೇ! ಇಂತಹ ಕೆಲಸ ಮಾಡಿಕೊಂಡು ಬಂದವರು ಪುರೋಹಿತಶಾಹಿಗಳಲ್ಲದೇ ಮತ್ತಾರು ಎಂದು ತಿಳಿಸೋಣವಾಗುತ್ಯೇ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

> ...ಕೀಳು ಮಟ್ಟದ ಲೇಖನವನ್ನು ಆಯ್ದ ಲೇಖನ ಮಾಡಿದ ಮಹಾನುಭಾವರು ಪಾದವನ್ನು ಜೆರಾಕ್ಸ್ ಮಾಡಿಕೊಡಬೇಕೆಂದು ವಿನಂತಿ... ಪ್ರೀತಿಯ ಶ್ರೀಹರ್ಷ ಸಾಲಿಮಠ, ಈ ಲೇಖನವನ್ನು ಆಯ್ದ ಲೇಖನಕ್ಕೆ ಪ್ರಮೋಟ್ ಮಾಡಿದವನು ನಾನೇ. ಜೆರಾಕ್ಸ್ ರೆಡಿ ಇದೆ, ಬಂದು ತೆಗೆದುಕೊಂಡು ಹೋಗಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :) ನಲ್ಮೆಯ ಹರಿ, ಈ ಮಾತು ನಿಮ್ಮಿಂದ ಬರಲಿ ಅಂತ ನಾಲ್ಕು ವರುಷಗಳಿಂದ ಕಾಯುತ್ತಿದ್ದೆ... ಖಂಡಿತಾ ಬಿಡುವು ಮಾಡಿಕೊಂಡು ಬರುತ್ತೇನೆ... !!!! ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

2009ರಲ್ಲಿ ಮೊದಲು ಲಾಗಿನ್ ಆದವರು ನಾಲ್ಕು ವರ್ಷಗಳ ಕಾಲ ಯಾವ ಮಾತಿಗಾಗಿ ಎಲ್ಲಿ ಕಾಯುತ್ತಿದ್ದಿರಿ? ಬೇಜವಾಬ್ದಾರಿ ಪ್ರತಿಕ್ರಿಯೆಗಳು ಬೇಡ. ಮತ್ತೊಮ್ಮೆ ಸಂಪದದ‌ ಹೊಸ/ಹಳೆಯ ಸದಸ್ಯರಿಗೆ ಘಾಸಿ ಮಾಡುವಂತೆ "ಹಿಟ್ ಎಂಡ್ ರನ್" ರೀತಿಯಲ್ಲಿ ವರ್ತಿಸಿದರೆ ಸಂಪದದ ಸಂಹಿತೆಯಲ್ಲಿ ಅನ್ವಯಿಸುವಂತೆ ಕ್ರಮ ತೆಗೆದುಕೊಳ್ಳಬೇಕಾಗಬಹುದು. ಗಮನದಲ್ಲಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<ಕೀಳು ಮಟ್ಟದ ಲೇಖನವನ್ನು ಆಯ್ದ ಲೇಖನ ಮಾಡಿದ>>>> ಸ೦ಪದದಲ್ಲಿ ಯಾವುದಾದರೊ೦ದು ಲೇಖನ "ಆಯ್ದ ಲೇಖನ" ಆಗಬೇಕಾದಲ್ಲಿ ಇರುವ ಅರ್ಹತೆಯ ಮಾನದ೦ಡಗಳೇನು ಎನ್ನುವುದು ಇ೦ದಿಗೂ ನನ್ನನ್ನು ಕಾಡುತ್ತಿರುವ ಯಕ್ಷ ಪ್ರಶ್ನೆ. ಕೆಲವೊಮ್ಮೆ ಬಹಳ ಕಡಿಮೆ ಹಿಟ್ಸ್ ಇರುವ, ಪ್ರತಿಕ್ರಿಯೆಗಳೇ ಇಲ್ಲದೆ ತು೦ಬಾ ನೀರಸವಾಗಿರುವ ಲೇಖನಗಳು "ಆಯ್ದ ಲೇಖನ" ವಿಭಾಗದಲ್ಲಿ ಪ್ರತ್ಯಕ್ಷವಾಗಿವೆ. ಅತಿ ಹೆಚ್ಚು ಹಿಟ್ಸ್ ಹಾಗೂ ಪ್ರತಿಕ್ರಿಯೆಗಳಿದ್ದ ಲೇಖನಗಳು "ಆಯ್ದ ಲೇಖನ" ಆಗುವುದೇ ಇಲ್ಲ! ಸ೦ಬ೦ಧಿಸಿದವರಿ೦ದ ಉತ್ತರ ನಿರೀಕ್ಷಿಸಬಹುದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜವಾಗಲೂ ಯಕ್ಷ ಪ್ರಶ್ನೆ ಮಂಜುನಾಥ್! ಇದಕ್ಕೆ ಉದಾಹರಣೆ - ಈ ಲೇಖನವನ್ನು ಓದಿದ ಮೇಲೆ "ಐಯಂಗಾರ್ ಪುಳಿಯೋಗರೆಯ ರಹಸ್ಯ" ಎಂಬ ಪುಟ್ಟ ಬರಹವೊಂದನ್ನು ಅಪ್ ಲೋಡ್ ಮಾಡಿದೆ. ಹಾಗಂತ ಅದು ತುಂಬಾ "ನೀರಸ"ವಾಗಿರಲಿಲ್ಲ - ಯಾಕೆಂದರೆ ಅದು ರಸವತ್ತಾದ ವಿಷಯದ ಬಗ್ಗೆಯೇ ಆಗಿತ್ತಲ್ಲ!!! ಮರುಕ್ಷಣದಲ್ಲೇ ಅದು "ಆಯ್ದ ಲೇಖನ" ವಾಗಿ ಕಾಣಿಸಿಕೊಂಡಿತು! ಈ ಕ್ಷಣದವರೆಗಿನ ಹಿಟ್ಸ್ - ೨೭; ಪ್ರತಿಕ್ರಿಯೆಗಳು - ೧!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೇಶವರೆ, ನಿಮ್ಮ "ಐಯಂಗಾರ್ ಪುಳಿಯೋಗರೆಯ ರಹಸ್ಯ" ತು೦ಬಾ ರಸವತ್ತಾಗಿದೆ. ನೀರಸ ಅನ್ನಿಸಲಿಲ್ಲ! "ಆಯ್ದ ಲೇಖನ"ವಾಗಲು ಅರ್ಹವಾಗಿದೆ ಅನ್ನಿಸಿತು. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿ ಸರ್, ಇಗೋ ಇಲ್ಲಿದೆ ಪುಳಿಯೋಗರೆ ರೆಸಿಪಿ.http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನ ಓದುವಾಗ ಒಂದು ಹಂತಕ್ಕೆ ಖುಷಿ ಅನ್ನಿಸಿತು. ಆದರೆ ಪ್ರತಿಕ್ರಿಯೆಗಳು ಮುಂದುವರೆದಂತೆ...ಅಹಂಕಾರಗಳ ಸರಣಿ ಬಾಂಬ್ ಸ್ಫೋಟ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸ ನಂದಿ ಅವ್ರೆ, ಈ ಹಳೆಯ ಬರಹವನ್ನ, ಈಗಷ್ಟೆ ಓದಿದೆ, ಪುಳಿಯೋಗರೆ ನಮಗೆ ಹೊಸದು (ಉತ್ತರ ಕರುನಾಡಿನ ನಾವ್ ರೊಟ್ಟಿ ಖಾರ-ಪಲ್ಯ-ಅಣ್ಣ -ಸಾರು ತಿಂದು ದು ಜಾಸ್ತಿ) ಬೆಂಗಳೂರಿಗೆ ಬಂದ ಮೇಲೆ ನಾವೂ ಪುಳಿಯೋಗರೆ ಹುಲಿ ಅಣ್ಣ ಡ ಹಿಡಿತಕ್ಕೆ ಸಿಕ್ಕಿದೆವು...!! ಈಗಲೂ ಪುಳಿಯೋಗರೆ ಅಂದ್ರೆ ಹೆಸರು ಮಾತ್ರಕ್ಕೆ ಬಾಯಲ್ಲಿ ನೀರು:)).. ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಅಚ್ಚರಿ ಮೂಡಿಸಿದವು... ನೀವ್ ತಟ್ಟೇಲಿ ಹಾಕಿ ಸಂಪದಕ್ಕೆ ಸೇರ್ಸಿದ ಆ ಪುಳಿಯೋಗರೆ ನನ್ನ ಬಾಯಲ್ಲಿ ನೀರ್ ಊರ್ಸಿತು! ಬರಹ ನನಗೆ ಹಿಡಿಸಿತು.. ನಿಮ್ಮ ಅನುಭವವೂ:)೦೦೦೦
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.