ಭಾಗ್ವತ ರವರ ಬ್ಲಾಗ್

ಕಾವ್ಯ....ಕತ್ತಿಯಲ್ಲ..!

ನಾನು....


ಮೋಸ, ವಂಚನೆ ಸುಲಿಗೆಯ


ಕುರಿತು..ಕಾವ್ಯ ...ಬರೆಯಲಾರೆ


ಏಕೆಂದರೆ...


ಅವು .ಪ್ರತಿನಿತ್ಯ ..ನೋಡಲು


ಸಿಗುತ್ತವೆ....!


 ದರೋಡೆ,ಕೊಲೆ ಅತ್ಯಾಚಾರದ


ಕುರಿತು ಕವನ.... ಚಿತ್ರಿಸಲಾರೆ


ಏಕೆಂದರೆ..


ಅವು ಪ್ರತಿನಿತ್ಯ . ಓದಲು


ಸಿಗುತ್ತವೆ.. !


 ಅವನೆಂದ..


ನೀನು ಬರೆದರೇನು...ಬಿಟ್ಟರೇನು...


ಅವು  ನಿರಂತರ.......


ಜನರಿಗದು ಮೈಗೂಡಿದೆ.....


ಸುಮ್ಮನೆ ಓದಿ ನಕ್ಕು ಬಿಡುತ್ತಾರೆ..


ಕಾವ್ಯ....... ಕತ್ತಿಯಲ್ಲ... ಕತ್ತೆ...ಎಂದ.!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಳ್ಳೆಯವರಿಗೇ ಕಷ್ಟಗಳು ಹೆಚ್ಚು ಏಕೆ ?

ಗುಣವಂತಃ ಕ್ಲಿಶ್ಯಂತೇ ಪ್ರಾಯೇಣ ಭವಂತಿ ನಿರ್ಗುಣಾಃ ಸುಖಿನಃ


ಬಂಧನಮಾಯಾಂತಿ ಶುಕಾಃ ಯಥೇಷ್ಟಸಂಚಾರಿಣಃ ಕಾಕಾಃ


ಅರ್ಥ-


ಯಾವಾಗಲೂ ಗುಣವಂತರೇ ಕಷ್ಟಕ್ಕೆ ಒಳಗಾಗುತ್ತಾರೆ.ಗುಣ ಹೀನರೇ ಹೇಗೆ ಬೇಕೋ ಹಾಗೆ ಸ್ವೇಚ್ಛೆಯಾಗಿ ಬದುಕುತ್ತ ಬದುಕಿನ ಸುಖ ಅನುಭವಿಸುತ್ತಾರೆ


ಗಿಳಿಗಳು ಪಂಜರದಲ್ಲಿ ಬಂಧಿಸಲ್ಪಡುತ್ತದೆ. ಆದರೆ ಕಾಗೆಗಳು ಮನಸ್ಸಿಗೆ ಬಂದಂತೆ ಹಾರಾಡಿಕೊಂಡಿರುತ್ತದೆ.


ಪಂಜರದಲ್ಲಿರುವ ಗಿಳಿ ಬಂಧನ ಅನುಭವಿಸಿದರೂ ಅದನ್ನು ಮೆಚ್ಚುವವರಿದ್ದಾರೆ. ಆದರೆ ಸ್ವೇಚ್ಛೆಯಾಗಿ ಹಾರಾಡುವ


ಕಾಗೆಯನ್ನು ಪ್ರೀತಿಸುವವರಾರು ?


 


ಚಿತ್ರಕೃಪೆ-ಗೂಗಲ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.

ನಮಸ್ಕಾರದ ಚಮತ್ಕಾರ

ದೂರಸ್ಥಂ  ಜಲಮಧ್ಯಸ್ಥಂ ಧಾವಂತಂ ಧನಗರ್ವಿತಂ


ಕ್ರೋಧವಂತಂ ಮದೋನ್ಮತ್ತಂ ನಮಸ್ಕಾರೇಪಿ ವರ್ಜಯೇತ್


ಅರ್ಥ_


ದೂರದಲ್ಲಿ ಕಾಣುತ್ತಿರುವಾಗಲೇ  ನಮಸ್ಕರಿಸಬಾರದು


ನೀರಿನ ಮಧ್ಯದಲ್ಲಿರುವವನಿಗೆ ನಮಸ್ಕರಿಸಬಾರದು


ಓಡುತ್ತಿರುವವನಿಗೆ  ನಮಸ್ಕರಿಸಬಾರದು


ಹಣದ ಮದದಿಂದ ಗರ್ವಭರಿತನಾದವನಿಗೆ ನಮಸ್ಕರಿಸಬಾರದು (ಆದರೆ ಇವರಿಗೆ ನಮಸ್ಕರಿಸುವವರೇ ಹೆಚ್ಚು)


ಸಿಟ್ಟಿನಲ್ಲಿರುವವನಿಗೆ ನಮಸ್ಕರಿಸಬಾರದು


ಮದಭರಿತನಾದವನನ್ನು ನಮಸ್ಕಾರದಿಂದ ದೂರವಿಡಬೇಕು


-ಚಾಣಕ್ಯನ  ಈ ಮಾತು ನಮಸ್ಕಾರದ ಚಮತ್ಕಾರಕ್ಕಾಗಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಹಾಲು ಕುಡಿಯುವ ಬೆಕ್ಕು ಆಕಳನ್ನು ಸಾಕುವುದಿಲ್ಲ

ಉದ್ಯೋಗಃ ಖಲು ಕರ್ತವ್ಯಃ ಫಲಂ ಮಾರ್ಜಾರವತ್ ಭವೇತ್


ಜನ್ಮ ಪ್ರಭ್ರತಿ ಗೌರ್ನಾಸ್ತಿ ಪಯಃ ಪಿಬತಿ ನಿತ್ಯಶಃ


ಅರ್ಥ- ನಾವು ಮಾಡುವ ಪ್ರಯತ್ನ ಮಾಡುತ್ತಿರಬೇಕು.ಅದಕ್ಕೆ ಪ್ರತಿಫಲ ಬೆಕ್ಕಿಗೆ ಸಿಗುವಂತೆ ಒಂದು ದಿನ ಸಿಕ್ಕೇ ಸಿಗುತ್ತದೆ.


ಬೆಕ್ಕು ಹುಟ್ಟಿಧಾರಭ್ಯ ದನವನ್ನೇನೂ ಸಾಕದಿದ್ದರೂ ಪ್ರತಿನಿತ್ಯ ಹಾಲು ಕುಡಿಯುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಅರಿವು ನೀಡಿದ ಗುರುವಿಗೆ.............

 ಕೊಳಕ ತೊಳೆದು ಬೆಳಕ ಹಿಡಿದು ದಾರಿ ತೋರ್ದ ಗುರುವೆ

 ನೀವು ಜೊತೆಯಲಿದ್ದರೆಮಗೆ  ಬದುಕಲೆಂತು ಭಯವೇ?

 

  ದೋಷ ತಿದ್ದಿ  ಘಾಸಿಯಾಗದಂತೆ  ಮನಕೆ  ಮುದದಿ

  ಮೃದು ವಚನದಿ ಗೆಳೆಯನಂತೆ ನೆಲೆನಿಂತಿರಿ ಮನದಿ !

 

  ಸೋತು ಕುಳಿತ ಹೃದಯದಲ್ಲಿ ಗೆಲುವಿನೊರತೆ  ತರುವೆ

  ಸುಖದ ಸೊಗವ ಮನದಿ ಬೆಸೆವ ನಿಮ್ಮನೆಂತು ಮರೆವೆ !

  

   ದೇಶಕಟ್ಟುವಲ್ಲಿ ನಿಮ್ಮ ಕೊಡುಗೆ ಮರೆತ ನಾವು

   ನಿಮ್ಮ ದಿನದೇ ನಿಮಗೆ ಬೈಯ್ವ ವಿಷತುಂಬಿದ ಹಾವು  !

  

  

 

  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages

Subscribe to RSS - ಭಾಗ್ವತ ರವರ ಬ್ಲಾಗ್