ಅವಳ ಈ ಮನಸ್ಸೇ ಹೀಗೆ..

0

       ಅವಳ ಈ ಮನಸ್ಸೇ  ಹೀಗೆ...
       ಏನೆಲ್ಲ  ಹೂತಿಟ್ಟು  ಬೇಯಿಸುತ್ತದೆ.

       ಬಾಡಿಗೆ ಮನೆಯ ಮುರುಕು
       ಗೇಟಿನ ಹಿಂದೆ ನಿಂತ  ಅವಳಿಗೆ
        ಮದುವೆಗೆ ಮುಂಚಿನ
        ದಿನದ ಕನಸುಗಳ ನೆನಪು.........

        ರಸ್ತೆಯಂಚಿನಲಿ ಹಾದು ಹೋಗುತ್ತಿರುವ
         ಕಟ್ಟುಮಸ್ತಾದ ಯುವಕ..
         ಕಾರಿನಲಿ ಕಿಲ ಕಿಲ ನಗುತ್ತಾ ಸಾಗುತ್ತಿರುವ ದಂಪತಿ.!
         ಎದುರಿಗಿರುವ ಭವ್ಯ ಬಂಗಲೆ..
         ಇನ್ನೂ..  ಏನೇನೊ

         " ನಾನು ಮೋಸ ಹೋದೆ!"
           ನಡುಗುವ ಕರಗಳಿಂದ......
           ಗೇಟಿನ ಸರಳು ಹಿಡಿದು..

           ದವಾಖಾನೆಗೆ ಹೋದ
           ಗಂಡನ ಬರುವಿಕೆಯ ನಿರೀಕ್ಷೆಯಲ್ಲಿ....

             ಅಷ್ಟರಲ್ಲಿ ಯಾರೋ ಸೀರೆ ಜಗ್ಗಿದಂತಾಗಿ
              ಬೆಚ್ಚಿದಳು....!

             "ಅಜ್ಜೀ ಅಮ್ಮ ಕರೀತಿದಾಳೆ"
             ಪುಟ್ಟ ಮೊಮ್ಮಗಳ ಗಿಳಿ ಮಾತು

             ಮನಸ್ಸಿನಲ್ಲೇ ನಕ್ಕು ಒಳ ನಡೆದಳು.....
                
              ಅವಳ ಈ ಮನಸ್ಸೇ  ಹೀಗೆ...
              ಏನೆಲ್ಲ  ಹೂತಿಟ್ಟು  ಎಲ್ಲರನ್ನೂ ಬೇಯಿಸುತ್ತದೆ.


        

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಳ್ಳೆಯ ಕವನ. ಆದರೆ ಈ ಮನಸ್ಸು ಅವಳಿಗೆ ಮಾತ್ರವೇ? ಅಥವಾ ಅವನಿಗೂ ಹಾಗೆಯೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಧುರವರೆ, ಅವನಿಗೂ ಇರಬಹುದೇನೊ............ಗೊತ್ತಿಲ್ಲ. ಆದರೆ ಅವಳಲ್ಲಿದೆ ಎಂಬ ಕಲ್ಪನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೆ, ಚನ್ನಾಗಿ ನಿರೂಪಿಸಿದ್ದೀರ ಮನಸ್ಸಿನ ದ್ವಂದ್ವವನ್ನು.. " "ಅಜ್ಜೀ ಅಮ್ಮ ಕರೀತಿದಾಳೆ" ಪುಟ್ಟ ಮೊಮ್ಮಗಳ ಗಿಳಿ ಮಾತು" ಈ ಸಾಲುಗಳೇ ಅವಳ ಜೀವನದ ಸಾರ್ಥಕ್ಯವನ್ನು ಬಿಂಬಿಸುತ್ತವೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ವಿನಾಯಕರವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.