ಚರ್ಚೆಗೊಂದು ವಿಷಯ..ಕಾವ್ಯವನ್ನು ಅನುಭವಿಸಿ ಬರೆಯಬೇಕೆ ಅಥವಾ ಕಲ್ಪನೆಯೊಂದಿದ್ದರೆ ಸಾಕೆ?

0

ನನ್ನ ಕಾಲೇಜು ವ್ಯಾಸಂಗದ ದಿನಗಳ ನೆನಪು...ಭಾಷಾ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ ಏರ್ಪಡಿಸಿದ್ದರು.ಆ  ವಿಚಾರ ಸಂಕಿರಣದಲ್ಲಿ ನಮ್ಮ ಕನ್ನಡ ವಿಭಾಗದ ಪ್ರಮುಖ ಕವಿಗಳೆಂದು ಗುರುತಿಸಲ್ಪಟ್ಟ ಇಬ್ಬರು ಉಪನ್ಯಾಸಕರ ವಿಚಾರ ಮಂಡನೆ ಇತ್ತು.

        ಆ ಇಬ್ಬರು ಉಪನ್ಯಾಸಕರೂ ತಮ್ಮ ವಯಕ್ತಿಕ ದ್ವೇಷಗಳನ್ನು ಆಧರಿಸಿಯೇ ವಿಷಯ ಮಂಡಿಸಿದ್ದರಿಂದ ಅದು ಚರ್ಚಾಕೂಟವಾಗಿ ಹೋಯಿತು.ಆಗ ತಾನೆ ಕಾಲೇಜಿಗೆ ಸೇರಿದ್ದ ನಮಗೆ ಅವರ ಪ್ರೌಢ ಪದಭರಿತ ಭಾಷೆ ಅರಿಯದೇ ಗೆಳೆಯರೆಲ್ಲ ಸುಮ್ಮನೆ ಕೇಳಿಸಿಕೊಂಡು ಉಂಡೆದ್ದು ಬಂದಿದ್ದೆವು.

 ಚರ್ಚೆಯ ವಿಷಯದಲ್ಲಿ ನಾನು ಈಗಲೂ ತುಂಬಾ ಎಳಸು.ಸಂಪದದ ಅನುಭವಿಗಳ ಬಳಗದಲ್ಲಿ , ಈ ವಿಷಯಕ್ಕೊಂದು ಉತ್ತಮ ಚರ್ಚೆ ನಡೆದು ಉತ್ತರ ಸಿಗಬಹುದೆಂಬ ಆಶಾ ಭಾವನೆಯೊಂದಿಗೆ .......

      ವಿಷಯ : :..ಕಾವ್ಯವನ್ನು  ಅನುಭವಿಸಿ ಬರೆಯಬೇಕೆ  ಅಥವಾ ಕಲ್ಪನೆಯೊಂದಿದ್ದರೆ ಸಾಕೆ?
    

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬರಿಯ ಅನುಭವದಿಂದ ಕಾವ್ಯ ಸೃಷ್ಟಿ ಆಗದು. ಬರಿಯ ಕಲ್ಪನೆಯಿಂದಲೂ ಕಾವ್ಯ ಸೃಷ್ಟಿ ಆಗದು. ಬರೆಯಲೇಬೇಕೆಂದು ಕೂತರೆ ಕಾವ್ಯ ಸೃಷ್ಟಿ ಆಗದು. ಬರೆದದ್ದೆಲ್ಲಾ ಕಾವ್ಯವಾಗದು. ಬರೆಯುವ ಇಚ್ಚೆ ಇಲ್ಲದಿದ್ದರೂ ಕಾವ್ಯದ ಸೃಷ್ಟಿ ಆಗಿಬಿಡಬಹುದು. ಕಣು ಕಿವಿಗಳನ್ನು ಸದಾ ತೆರೆದಿಟ್ಟುಕೊಳ್ಳುವ ಮತ್ತು ಒಳಗೊಳಗೇ "ಅನುಭಾವ" ಅನುಭವಿಸುವ ಕವಿಹೃದಯ ಬೇಕು. ಮನದೊಳಗೆ ಮಂಥನ ನಡೆಸಿ ಭಾವನೆಗಳ ನವನೀತಕ್ಕೆ ಅಕ್ಷರ ರೂಪಕೊಡುವ ಜಾಣ್ಮೆ ಬೇಕು. ಅಕ್ಷರ ರೂಪಕ್ಕೆ ಇಳಿಸುವಾಗ ಬಳಸುವ ಭಾಷೆಯ ಮೇಲೆ ಹಿಡಿತ ಇರಬೇಕು. ತನ್ನ ಮನದ ಮಾತುಗಳು ಓದುಗರ ಹೃದಯಗಳಿನ್ನು ತಾಕಿ ಅಲ್ಲಿ ಪ್ರತಿಸ್ಪಂದನ ಉಂಟಾಗುವಂತೆ ಮಾಡುವ ಶಕ್ತಿ ಇರಬೇಕು. - ಆತ್ರಾಡಿ ಸುರೇಶ ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತ್, ಒಂದು ಚರ್ಚೆಯನ್ನು ಆರಂಭಿಸಿ ಕಾಣೆಯಾದಿರೇಕೆ? ಇಲ್ಲಿ ಚರ್ಚೆ ಆರಂಭಿಸುವಾಗ ನಿಮಗಿದ್ದ ಉದ್ದೇಶವನ್ನು ನೀವೇ ಒಪ್ಪಿಕೊಂಡಂತಿಲ್ಲ. ತೀರ ಆಶ್ಚರ್ಯಕರ ವಿಚಾರ, ಅಲ್ಲದೆ, ವಿಷಾದನೀಯ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ಚರ್ಚೆ ಆರಂಭಿಸುವಾಗ ನಿಮಗಿದ್ದ ಉದ್ದೇಶವನ್ನು ನೀವೇ ಒಪ್ಪಿಕೊಂಡಂತಿಲ್ಲ....ಖಂಡಿತ ಸರಿ ಆದರೆ ಸಂಪದಿಗರಿಂದ ಬಂದ ನೀರಸ ಪ್ರತಿಕ್ರೀಯೆ ನನ್ನನ್ನು ಸುಮ್ಮನಾಗಿಸುವಂತೆ ಮಾಡಿತು. ಈ ಬಗ್ಗೆ ತಿಳಿಯುವ ಕುತೂಹಲವಿತ್ತು.ನಿಮ್ಮ ಮೊದಲ ಪ್ರತಿಕ್ರೀಯೆಯಿಂದ ಒಂದಿಷ್ಟು ಉತ್ತರ ಸಿಕ್ಕಿದ್ದರಿಂದ ಸುಮ್ಮನಾದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ನನ್ನ ಮಾತುಗಳಿಂದ ಒಂದಿಷ್ಟು ಉತ್ತರ ಸಿಕ್ಕಿದೆಯೆಂದು ತಿಳಿದು ಸಮಾಧಾನವಾಯ್ತು. ನಿಮಗೂ ಧನ್ಯವಾದಗಳು. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.