ಮತ್ತೊಂದಿಷ್ಟು....

3

 ೧. ಒಂದು ಹಿಡಿ 
ಪ್ರೀತಿ ಮತ್ತು ಅನ್ನಕ್ಕಾಗಿ 
ಈ ಬದುಕು- ನವರಸ. 
ಕೊನೆಗೆ ಕಾಣದ 
ಊರಿನ ಕನಸು.
ಸುಮ್ಮನೆ ಮುಗಿದು 
ಹೋಗುವ ಸಾಲು, ದಾರಿ, ಬಂಧ. 
 
೨. ಮಾತಿನ ಶವ 
ಬಿದ್ದ ಮನದಂಗಳದಲಿ 
ನೆನಪುಗಳೇ 
ಸಂಗಾತಿಗಳು.
 
೩. ಉಸಿರ ಲಾಲಿಯ 
ಹಾಡಲಾಗದ 
ಮೂಕಿ ನಾನು. 
ಬಾ ಮತ್ತೊಮ್ಮೆ 
ಎದೆಗೂಡಿಗೆ 
ನನ್ನೆದೆಯ ಪ್ರೀತಿಯ 
ಮಂದ್ರ ಸ್ವರ 
ಕೇಳಿಸುವೆ. 
 
೪. ಮುಖವಾಡಗಳ 
ಸಂತೆಯಲಿ 
ಆಂತರ್ಯದ ಕನ್ನಡಿಯ 
ಮುಂದೆ ನಿಂತ 
ಜೋಗಿ ನಾನು. 
 
೫. ಸುಮ್ಮನೇ ಬದುಕುವ 
ಹಾಗೇ ಪ್ರೀತಿಸುವ 
ಕಾರ್ಯ- ಕಾರಣದ 
ಹಂಗಿಲ್ಲದಿರುವ ಜಾಗದಲ್ಲಿ 
ಬಿದ್ದ ನವಿಲು ಗರಿಯಲಿರುವ 
ನಿನ್ನ ಜೇನು ಕಂಗಳ 
ಕನಸಾಗಿದೆ ಇಂದು. 
 
೬. ದಿನವೂ ಹುಟ್ಟು 
ಸಾವಿನ ಶಾಪಗ್ರಸ್ಥ 
ಸೂರ್ಯ. 
ಬೆಳೆಯುವ ಕುಗ್ಗುವ 
ಚಂದ್ರ. 
ಧುಮ್ಮಿಕ್ಕುವ 
ಮೌನ ತಾಳುವ 
ಸಮುದ್ರ. 
ಅಚ್ಚರಿಗಳ 
ಸಂತೆಯಲಿ ತಿರುಗುತ್ತಲೇ 
ಇರುವ ಭೂಮಿ 
ಮತ್ತು..... ಕವಿ. 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೊಗಸಾದ ಹನಿಗಳು... ಮೊದಲನೆಯ ಹಾಗೂ ಕೊನೆಯ ಹನಿಗಳು ಮನಸ್ಸನ್ನು ತೀವ್ರವಾಗಿ ತಟ್ಟಿದವು.. ಹೀಗೆ ಮತ್ತೊ೦ದಿಷ್ಟು ... ಹರಿಯುತ್ತಿರಲಿ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ರಾಘು ಸರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ಮೆಚ್ಚಿದ್ದಕ್ಕೆ ನಮನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸು0ದರವಾಗಿದೆ ನಿಮ್ಮ ಭಾಷಾ ಜ್ನಾನ.ಕವಿತೆ ಚೆನ್ನಾಗಿದೆ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ನಮನಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥಪೂರ್ಣ ಕಿರು ಸಾಲುಗಳು ಕು೦ಬಾರರೆ, ಆದರೂ ೨ನೆಯದು ಬಹುವಾಗಿ ಕಾಡಿತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಸಿಕೆಗಳಿಗೆ ಧನ್ಯವಾದಗಳು ಮಂಜು ಸಾರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿ ಅವರೇ, ಎಲ್ಲ ಭಾವಗಳು ಚೆನ್ನಾಗಿವೆ. ಐದನೆಯದ್ದು ಸೂಪರ್ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು ವೆಂಕಟೇಶ್ ರಿಗೆ. ತುಂಬಾ ದಿನಗಳ ನಂತರ ಬರೆದ ಸಾಲುಗಳು ಇವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.