ಮನುಷ್ಯ V/s. ಸಸ್ಯ

3

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ?

ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಮೊನ್ನೆ ಹಬ್ಬಕ್ಕೆಂದು ಊರಿಗೆ ಹೋದಾಗ ಇದೇ ರೀತಿಯ ಕೆಲವು ಸಸ್ಯಗಳನ್ನು ಗಮನಿಸಿದೆ. ಕೆಳವು ಗೋಡೆಗಳ ಮೇಲೆ ಬೆಳೆದುಕೊಂಡಿದ್ದರೆ, ಇನ್ನು ಕೆಲವು ಹೆಂಚು, ದೋಣಿ (ನೀರು ಹೋಗಲು ಹೆಂಚಿನ ತುದಿಗೆ ಹಾಕಿರುವ ಅರ್ಧಚಂದ್ರಾಕಾರದ ಉದ್ದವಾದ ಪೈಪ್/ ದಬ್ಬೆಯ ತುಂಡು) ಇತ್ಯಾದಿ ಜಾಗಗಳಲ್ಲಿ ಬೆಳೆದುಕೊಂಡಿದ್ದವು. ಅದನ್ನು ನೋಡಿದ ಮೇಲೆ ನಮಗೆ ಬದುಕುವುದಕ್ಕೆ ಸಸ್ಯಗಳಿಗಿಂತ ಕಷ್ಟವೇ ಎಂದು ಕೇಳಿಕೊಳ್ಳುವಂತಾಯಿತು..

-ಚಿತ್ರಗಳು: ಪ್ರಸನ್ನ.ಎಸ್.ಪಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಜೀವ ಚೈತನ್ಯವೆಂದರೆ ಇದೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು! ಧನ್ಯವಾದ, :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ವರದಿ ಪ್ರಸನ್ನ ನಾನೆಲ್ಲೊ ನೀವು ಅನಾದಿಕಾಲದಿಂದಲು ನಡೆದಿರುವ ಸಸ್ಯವರ್ಗ ಪ್ರಾಣಿವರ್ಗ (ಮನುಷ್ಯ) ನಿಗೆ ನಡೆದಿರುವ ನಿರಂತರ ಉಳಿವಿನ ಹೋರಾಟವನ್ನು ಹೇಳಲಿದ್ದೀರಿ ಅಂತ ಅಂದುಕೊಂಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಧನ್ಯವಾದ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ಕಷ್ಟ ಪಡುತ್ತೇವೆಯೇ? ಹಿಮ ಪ್ರದೇಶದ0ತಹ ಸ್ಥಳಗಳಲ್ಲೂ ಎಸ್ಕಿಮೋಗಳು ಬದುಕಿರುತ್ತಾರೆ. ಅರೇಬಿಯಾದ ಮರಳುಗಾಡಿನಲ್ಲೂ ಸಹ ಬದುಕುವುದನ್ನು ನಾವು ರೂಢಿಸಿಕೊ0ಡಿದ್ದೇವೆ. ಆದರೆ ಎಲ್ಲಾ ಸಸ್ಯಗಳೂ ಎಲ್ಲಾ ವಾತಾವರಣದಲ್ಲಿ ಹೊ0ದಿಕೊಳ್ಳಲಾರವು. ಆದರೆ ಮನುಷ್ಯ ಮಾತ್ರ ಎಲ್ಲಾ ತರಹದ ವಾತಾವರಣದಲ್ಲಿ ಬದುಕುವುದನ್ನು ಕಲಿತಿದ್ದಾನೆ. ಎಲ್ಲಿ ಅಸ್ತಿತ್ವ ಮುಖ್ಯವಾಗುತ್ತದೆಯೋ ಅಲ್ಲಿ ಆಕ್ಶ್ಹೇಪಣೆಯಿರಲಾರದು. ಅಸ್ತಿತ್ವಕ್ಕೆ ಧಕ್ಕೆಯಾಗದಿದ್ದರೆ ಮಾತ್ರ ವಿಲಾಸದ ಯೋಚನೆಗಳು ಬ0ದು ಬಿಡುತ್ತವೆ. ಆಗ ಅದು ಸರಿಯಿಲ್ಲ, ಇದು ಸರಿಯಿಲ್ಲ ಎನ್ನುವ ಮಾತುಗಳು ಬರುವುದು. ಹಣವಿಲ್ಲದಿದ್ದಾಗ ಸ್ಲಮ್ಮಿನ ಮನೆಯೂ ಆಪ್ತ, ಹಣವಿದ್ದಾಗ ಫ್ಲಾಟು ಬೋರಾಗಿ ರೋ ಹೌಸ್ ಬೇಕೆನ್ನಿಸುವ ಹಾಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಬಹುಷಃ ಒಂದು debatable topic. ಮನುಷ್ಯ ಮರಳುಗಾಡು, ಹಿಮಪ್ರದೇಶದಲ್ಲಿ ಹೇಗೆ ಬದುಕುತ್ತಾನೋ ಹಾಗೆಯೇ ಸಸ್ಯಗಳೂ ಬಂಡೆಗಳ ಮೇಲೆ, ಬಾಗಿಲ ನಿಲದ ನಡುವೆ (ನಮ್ಮ ಮನೆಯ ಬಾಗಿಲ ನಿಲದ ನಡುವೆ ಒಂದು ತುಂಬೆ ಗಿಡ ಹುಟ್ಟಿ ಹೂ ಕೂಡಾ ಬಿಡ್ತಿತ್ತು!), ಇತ್ಯಾದಿ extreme conditionಗಳಲ್ಲಿ ಬದುಕುತ್ತವೆ. ಎಲ್ಲಾ struggle for existence.. ಇದನ್ನು ಬರೆದ ಮೇಲೆ ನನಗೂ ಒಂದಿಷ್ಟು ತಪ್ಪಿದೆ ಅನ್ನಿಸ್ತಿತ್ತು. ಅದನ್ನು ಕೆದಕುವಲ್ಲಿ ನಿಮ್ಮ ಕಾಮೆಂಟ್ ಸ್ವಲ್ಪ ಸಹಾಯಕವಾಯ್ತು.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನವ್ರೆ ಒಳ್ಳೆಯ ಲೇಖನ. ಆದರೂ ನಾವು ಮನುಷ್ಯರು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುತ್ತೇವಲ್ಲ. ಶೀತ ಜ್ವರ ಇವೆಲ್ಲ ಸ್ಥಳ ಬದಲಾದಾಗ ಬರುವ ಕಾಯಿಲೆಗಳು, ಸಸ್ಯಗಳಿಗೂ ಹಾಗೇ ಆಗಬಹುದೇನೋ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು! ಧನ್ಯವಾದ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.