ಮಾಲ್ಗುಡಿ ಡೇಸ್ ಕನ್ನಡದಲ್ಲಿ ಪ್ರಸಾರವಾಗಲಿ

3.833335

ಕರ್ನಾಟಕದ ಹೆಮ್ಮೆಯ ನಟ, ನಿರ್ದೇಶಕ ಶಂಕರನಾಗ್ ಅವರು ನಿರ್ದೇಶಿಸಿ ನಟಿಸಿದ ಮೂಲವಾಗಿ ಹಿಂದಿಯಲ್ಲಿ ತಯಾರಾಗಿದ್ದ ಮಾಲ್ಗುಡಿ ಡೇಸ್ ಅನ್ನೋ ದಾರಾವಾಹಿ ಜನಶ್ರಿ ಕನ್ನಡ ಸುದ್ದಿ ವಾಹಿನಿಯಲ್ಲಿ ಇದೇ ಜೂನ್ ೧೬ ರಿಂದ ಪ್ರಸಾರವಾಗಲಿದೆ. ಇದು ಖುಶಿ ಪಡುವ ವಿಚಾರವಾದರೂ, ಇದರ ಹಿಂದೆ ಬೇಸರ ಅಡಗಿದೆ. ಯಾಕಂದ್ರೆ, ಇದು ಕನ್ನಡ ಸಬ್ ಟೈಟಲಿನೊಂದಿಗೆ ಹಿಂದಿಯಲ್ಲೇ ಪ್ರಸಾರವಾಗಲಿದೆ ಎಂದು ಜನಶ್ರೀ ಹೇಳಿಕೊಂಡಿದೆ. ಕನ್ನಡಿಗರೇ ನಟಿಸಿರುವ ಕನ್ನಡ ನಾಡಿನಲ್ಲೇ ತಯಾರಾಗಿರುವ ಕನ್ನಡ ಸಂಸ್ಕ್ರುತಿಯನ್ನೇ ಬಿಂಬಿಸುವ ಒಂದು ದಾರಾವಾಹಿಯನ್ನು ಕನ್ನಡದ ಸುದ್ದಿ ವಾಹಿನಿಯಲ್ಲೇ ಬೇರೊಂದು ಭಾಷೆಯಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿರುವುದು ಕನ್ನಡಿಗರ ದೌರ್ಬಾಗ್ಯವೇ ಎನ್ನಬೇಕು. ಕರ್ನಾಟಕದಲ್ಲಿ ಡಬ್ಬಿಂಗಿಗೆ ಯಾವುದೇ ನಿಷೇದ ಇಲ್ಲದಿದ್ದರೂ, ಡಬ್ಬಿಂಗ್ ಎಂಬುದು ಸಂವಿಧಾನಾತ್ಮಕ ಕ್ರಮವಾದರೂ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡದೇ ಬೇರೊಂದು ಭಾಷೆಯಲ್ಲಿ ಕೇವಲ ಕನ್ನಡ ಸಬ್ ಟೈಟಲ್ಲಿನಲ್ಲಿ ಪ್ರಸಾರ ಮಾಡುತ್ತಿರುವುದು ಅದನ್ನು ಕನ್ನಡದಲ್ಲಿ ನೋಡಬೇಕೆಂದು ಬಯಸುವ ಕೋಟ್ಯಂತರ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದೆ. ಆದಕಾರಣ ಈ ವಿಷಯದ ಕುರಿತಾಗಿ ಜನಶ್ರೀ ವಾಹಿನಿಯ ಗಮನ ಸೆಳೆಯಲು ಮತ್ತು ಆ ಮೂಲಕ ಕನ್ನಡ ಪ್ರೇಕ್ಷಕರ ಬೇಡಿಕೆಯನ್ನು ಪರಿಗಣಿಸಿ ದಾರಾವಾಹಿಯನ್ನು ಕನ್ನಡದಲ್ಲೇ ಪ್ರಸಾರ ಮಾಡುವಂತೆ ಕೋರಲು ಒಂದು ಮಿಂಬಲೆ ಮನವಿಯನ್ನು (ONLINE PETITION) ಸಲ್ಲಿಸಲಾಗುತ್ತಿದೆ. ತಾವೂ ಕೂಡ ಇದಕ್ಕೆ ತಮ್ಮ ಸಹಿ ಮಾಡುವುದರ ಮೂಲಕ ಕನ್ನಡ ಪ್ರೇಕ್ಷಕರ ಆಗ್ರಹಕ್ಕೆ ಬೆಂಬಲ ಸೂಚಿಸಬೇಕೆಂದು ಕೇಳಿಕೊಳ್ಳುತ್ತೇವೆ.

http://www.change.org/petitions/janashree-news-telecast-kannada-version-...

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಖಂಡಿತಾ ಈ ಧಾರವಾಹಿ ಕನ್ನಡದಲ್ಲಿ ಪ್ರಸಾರವಾಗಬೇಕು. ಕನ್ನಡಿಗರು ಇದನ್ನು ಕನ್ನಡದಲ್ಲಿ ನೋಡಲು ಇಚ್ಚಿಸುತ್ತಾರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಈ ಪೆಟಿಶನ್ ಗೆ ಸಹಿ ಮಾಡಿದ್ದೇನೆ. ಅಂದ ಹಾಗೆ ಮರಾಠಿಯಲ್ಲಿ ಅಮೀರ್ಖಾನರ 'ಸತ್ಯಮೇವ ಜಯತೆ' ಧಾರಾವಾಹಿ ಇದೇ ರೀತಿ ಅಂದರೆ ಮರಾಠಿಯ ಸಬ್-ಟೈಟಲ್ ದೊಂದಿಗೆ ಪ್ರಸಾರವಾಗುತ್ತಿದೆ. ಡಬ್ಬಿಂಗ್ ಬೇಡ ಎಂದು ಇಡೀ ಕಾರ್ಯಕ್ರಮವನ್ನೇ ಕಳೆದುಕೊಳ್ಳುವುದಕ್ಕಿಂತ ಇದು ಒಳ್ಳೆಯದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+ ೧ ಆ ಧಾರಾವಾಹಿ ಈಗ ನೋಡುವ ಆಶೆಯಾಗಿದೆ... ಯಾವತ್ತೂ ಅದನ್ನು ನಾ ನೋಡಿದ ನೆನಪಿಲ್ಲ... ಅಂದ್ ಹಾಗೆ ಈ ಆನ್‌ಲೈನ್ ಪೇಟಿಷನ್ ಸುವರ್ಣ ವಾಹಿನಿಗೆ ನೀವ್ ಹೇಗೆ ತಲುಪಿಸುವಿರಿ? ತಿಳಿಸುವಿರಾ?... ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಿರಿವಾಸಿಗಳೇ ಅದು ಸುವರ್ಣ ಅಲ್ಲ ಜನಶ್ರೀ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಿದ್ದ್ದಿದ ಸಾಲು.... ಪ್ರಭು ಅವ್ರೆ ಎಛ್ಹರಿಸಿದ್ದಕೆ ನನ್ನಿ..... ಆ ಧಾರಾವಾಹಿ ಈಗ ನೋಡುವ ಆಶೆಯಾಗಿದೆ... ಯಾವತ್ತೂ ಅದನ್ನು ನಾ ನೋಡಿದ ನೆನಪಿಲ್ಲ... ಅಂದ್ ಹಾಗೆ ಈ ಆನ್‌ಲೈನ್ ಪೇಟಿಷನ್ , ಜನಶ್ರೀ ವಾಹಿನಿಗೆ ನೀವ್ ಹೇಗೆ ತಲುಪಿಸುವಿರಿ? ತಿಳಿಸುವಿರಾ?... ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲ್ಗುಡಿ ಡೇಸ್ ಕನ್ನಡದಲ್ಲಿ ನೋಡಲು ಕಾಯುತ್ತಿರುವೆನು....ಆದರೆ ಅದು ಕನ್ನಡ ಸಬ್ ಟೈಟಲ್ ನಲ್ಲಿ ಪ್ರಸಾರವಾಗಲು ಕಾರಣ ಬಹುಶಃ ಸುದ್ದಿವಾಹಿನಿಯಾದ್ದರಿಂದ ಟ.ಆರ್ ಪಿ ಹಾಗು ಬಜೆಟ್ ಇರಬಹುದು.ಹೇಗಾದರು ಇಪ್ಪತ್ತು ವರ್ಷ ಹಳೆಯ ಕನ್ನಡಿಗರ ಆರಾಧ್ಯ ದೈವ ಹೆಮ್ಮೆಯ ಶಂಕರಣ್ಣ ನಿರ್ದೇಶನದ ಧಾರವಾಯಿಯನ್ನು ಪನಃ ನೋಡುವ ಪುಣ್ಯ ಕನ್ನಡಿಗರದು. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.