ಮೊದಲ ಸಂದರ್ಶನ!

3.5

2007 ರಲ್ಲಿ ನಾ ಪ್ರೇಮವಿವಾಹವಾಗಿ ಈ ರಾಜಧಾನಿಗೆ ಕಾಲಿರಿಸಿದೆ.( ಬೆಂಗಳೊರಿನ ಬಗ್ಗೆ ಕಿಂಚಿತ್ತು ಅರಿವಿರಲಿಲ್ಲ) ಬಂದದಾಯಿತು ಹೊಟ್ಟೆ ಪಾಡಿಗೆ ಕೆಲಸಬೇಕಲ್ಲ, ಕೆಲಸ ಹುಡುಕಲು ಪ್ರಾರಂಭಿಸಿದೆ( ಎಲ್ಲಿ ಕೆಲಸ ಖಾಲಿ ಇದೆ,ಎಲ್ಲಿಗೆ ಹೋಗಬೇಕು, ಯಾರನ್ನು ಸಂಪರ್ಕಿಸಬೇಕು ಒಂದು ತಿಳಿದಿರಲಿಲ್ಲ) ನನ್ನ ಪ್ರಯತ್ನಕ್ಕೆ ನನ್ನ ಗೆಳೆಯ ಸಹಾಯ ಹಸ್ತವನ್ನಿತ್ತ ಇಬ್ಬರು ಒಟ್ಟಿಗೆ ಸೇರಿ ವಿಜಯ ಕರ್ನಾಟಕ ಪೇಪರ್ ಕೊಂಡು ಅದ್ರಲ್ಲಿ ಕೆಲ್ಸಕ್ಕೆ ಬೇಕಾಗಿದ್ದರೆ ಎಂಬ ಜಾಹಿರಾತನ್ನು ನೋಡಿ ಕೆಳಗೆ ಕೊಟ್ಟಿದಂತಹ ವಿಳಾಸವನ್ನು ನಮೂದಿಸಿಕೊಂಡು ಏನೊಂದು ಆಲೋಚಿಸದೆ, ಹತ್ತಿರದ ಸೈಬರ್ ಕೆಫೆ ಗೆ ಹೋಗಿ ೩೦ ರುಪಾಯಿ ಕೊಟ್ಟು ರೆಸುಮೆ ಮಾಡಿಸಿ ಕೊಂಡು ಬಸ್ಸನ್ನೇರಿ ಸಂದರ್ಶನಕ್ಕೆ ಹೊರಟೆವು ,ಬಸಲ್ಲಿ ಹೋಗುವಾಗಿನ ಸಂವಾದವೆಲ್ಲ ಸಂಬಳ ಎಷ್ಟು ಸಿಗಬಹುದು ಎಷ್ಟು ಉಳಿಸಬಹುದು ಹೀಗೆ ಏನೇನೊ ಹುಚ್ಚು ಕಲ್ಪನೆಯಾಗಿತ್ತು! .

ಬಸ್ ಮಜೆಸ್ಟಿಕ್ ತಲುಪಿತು ನಂತರ ನಮಗೆ ಮಜೆಸ್ಟಿಕ್ನ ಬಳಿ ಇರುವ ಅಲಂಕಾರ್ ಪ್ಲಾಜ ಹುಡುಕುವುದೇ ಕ್ಲಿಷ್ಟಕರ ಸಂಗತಿಯಾಗಿತ್ತು ಅಂದಿನ ಆ ಸಮಯಕ್ಕೆ, ಹಾಗೋ ಹೀಗೋ 10.00 ಗಂಟೆಗೆ ಅಲಂಕಾರ್ ಪ್ಲಾಜ ತಲುಪಿದೆವು ,ಅಲ್ಲಿನ ವಾತಾವರಣ ನನ್ನ ಊಹೆಗಿಂತ ವಿಚಿತ್ರವಾಗಿತ್ತು , 2nd floor ನಲ್ಲಿ ಇದ್ದ ಒಂದು ಚಿಕ್ಕ office ಅದು, ಸರಿ ಒಳಹೊಕ್ಕವರೆ ಯಾರನ್ನ ಮಾತಾಡಿಸೋದು ಅಂತ ತಿಳಿಯದೆ ಸುಮ್ಮನೆ ಒಂದು ಕುರ್ಚಿ ಎಳೆದು ಕೂತುಕೊಂಡೆವು.
ಸ್ವಲ್ಪ ಸಮಯದ ನಂತರ ಅಲ್ಲಿದ್ದ ಒಬ್ಬ receptionist ನಮ್ಮನು ಕರೆದು ಏತಕ್ಕೆ ಬಂದಿದೆವೆಂದು ವಿಚಾರಿಸಿದ, ನಾವು ಬಂದ ವಿಚಾರ ತಿಳಿಸುತ್ತಾ ನನ್ನ ಪರವಾಗಿ ನನ್ನ ಸ್ನೇಹಿತ ಮಾತಾಡತೊಡಗಿದ“ಸರ್ ಪ್ಲೀಸ್ ಇವನಿಗೆ ಒಂದು ಕೆಲಸ ಕೊಡಿ ಈಗ ತಾನೇ ಮದ್ವೆ ಆಗಿದ್ದಾನೆ ಇಂಗ್ಲಿಷ್ ಚೆನ್ನಾಗಿ ಮಾತಾಡ್ತಾನೆ,ಏನ್ ಕೆಲಸ ಬೇಕಾದರು ಮಾಡ್ತಾನೆ ಕೆಲಸ ಕೊಡಿ ಸರ್ “( ನೆನದರೆ ಈಗಲು ನಗು ಬರುವ ಸಂಗತಿ). ಆಗ ಅವ ಹೇಳಿದ ನೀನೆ ಎಲ್ಲ ಮಾತಡ್ತಿದ್ದಿಯಲ್ಲಪ್ಪ ಇವನ್ಗೂ ಸ್ವಲ್ಪ ಮಾತಾಡಕ್ಕೆ ಬಿಡು ಆಗ ನಾನು ನನ್ನ ಬಗ್ಗೆ ಹೇಳಿದೆ ನಂತರ
ಅವ್ನು: ಕೇಳಿದ ಏನಪ್ಪಾ ನಿನ್ ಫ್ರೆಂಡ್ ಹೇಳ್ತಿದ್ದಾನೆ ಇಂಗ್ಲಿಷ್ ಚೆನ್ನಾಗಿ ಮಾತಾಡ್ತಾನೆ ಅಂತ, ನಿಂಗೆ ಇಂಗ್ಲಿಷ್ ಚೆನ್ನಾಗಿ ಬರುತ್ತಾ?
ನಾನು : ಪರವಾಗಿಲ್ಲ ಸರ್ ಮಾತಾಡ್ತೀನಿ ಅಂದೇ.
ಅವ್ನು : "Okay how do you came to know about us " ಅಂತ ಕೇಳಿದ.
ಅವನು ಕೇಳಿದ ಪ್ರಶ್ನೆ ನನಗೆ ಅರ್ಥವಾಗಲೇ ಇಲ್ಲ ನಾನು I'm sorry ಅಂತ ಹೇಳಿ ಸುಮ್ಮನಾದೆ, ತಕ್ಷಣ ಅವನು ನಮ್ಮೊಟ್ಟಿಗೆ ಕುಹಕ ನಗೆ ಬೀರಿ ಸುಮ್ಮನಾದ, ಆ ಕ್ಷಣವೇ ನಮ್ಮಿಬ್ಬರಿಗೆ ಅರ್ಥವಾಯಿತು ನಂಮ್ಗೆಷ್ಟು ಇಂಗ್ಲಿಷ್ ಗೊತ್ತು ಅಂತ, ನಂತರ ಅವನೇ ಮಾತಿಗೆಳೆದು, ಸರಿ ಮದ್ವೆ ಅಗ್ಗಿದ್ದಿಯ ಅಂತಿಯ ಒಂದ್ ಕೆಲಸ ಕೊಡಿಸ್ತೀನಿ ಬಿಡು, ಈಗ ೪೦ ರುಪಾಯಿ registration ಫೀ ಕಟ್ಟಿ ಅಲ್ಲಿ ಕೂತ್ಕೋ ನಂತರ ತಿಳಿಸ್ತೀವಿ ಅಂತ ಹೇಳಿದ, ನಮ್ಮ ಹತ್ತಿರ ಇದ್ದದೆ 60 ರುಪಾಯಿ ಆದುದರಿಂದ ಸರಿ ನಾನೇ ಸಂದರ್ಶನ ಕೊಡುವುದು ಲೇಸೆಂದು ನಾನು ನನ್ನ ಗೆಳೆಯ ಇಬ್ಬರು ತೀರ್ಮಾನಿಸಿ ಹಣ ಕಟ್ಟಿ ಬಳಿ ಇದ್ದ ಚೇರಲ್ಲಿ ಆಸಿನರಾದೆವು.

ಸುಮಾರು ಅರ್ಧ ಗಂಟೆ ಕಳೆದ ನಂತರ, ನನ್ನನು ಒಂದು ಕೊಟ್ಟಡಿಯೊಳಕ್ಕೆ ಕಳುಹಿಸಲಾಯಿತು, ಅಲ್ಲಿ ಒಬ್ಬ ಹೆಂಗಸು ಕುಳಿತಿದ್ದಳು, ನಾನು excuse me ಎಂದು ಕೇಳಿ ಒಳಹೋದೆ, ಅವರು ತಮ್ಮನ್ನು ಪರಿಚಯಿಸಿಕೊಂಡರು, ನಂತರ ನನ್ನ ಸರದಿ, ನಾ ಹೇಳಿದೆ ಮೇಡಂ ನಾನು B .com ಓದ್ದಿದೇನೆ, ಆದ್ರೆ ೬ ನೇ sem ವ್ಯೆಕ್ತಿಕ ಕಾರಣಗಳಿಂದ ಬರೆಯಲಾಗಲ್ಲಿಲ್ಲ ಎಂದೆ, ಕಾರಣ ಕೇಳಿದರು ಹೇಳಿದೆ ಲವ್ ಮ್ಯಾರೇಜ್ ಅಂತ ಅಂದೆ, ಸರಿ ಕೊನೆಗೆ ಅವರು ಏನು ಯೋಚನೆ ಮಾಡಬೇಡ ೨ ಡೇಸ್ ನಲ್ಲಿ ಕೆಲಸ ಕೊಡ್ಸ್ತಿನಿ ಅಂದ್ರು ನಿನ್ನ ಫೋನ್ ನಂಬರ್ ಇದೆ ಅಲ್ವ ಎಂದು RESUME ಪರೀಕ್ಷಿಸಿದರು, ಸರಿ ಭರವಸೆ ಪಡೆದ ನಾನು ಹುರುಪಿನಿಂದ ಹೊರಬಂದೆ, ಇದಾದ ಕೆಲ ದಿನ ಅವರ ಫೋನ್ ಕರೆಗೆ ಕಾದೆ ಪ್ರತ್ಯುತ್ತರ ಇಲ್ಲ, ಆಮೇಲೆ ನಾನೇ ಕೆಲಸ ಹುಡ್ಕಿ ಕೊಂಡೆ, ಇಂದಿಗೆ ೫ ವರ್ಷ ವಾಯಿತು ಕೆಲಸ ಕೊಡಿಸುವವರು ಇಲ್ಲಿಯವರೆಗೂ ನನಗೆ ಕಾಲ್ ಮಾಡಲೇ ಇಲ್ಲ!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರೀಶ್ ಅವ್ರೆ- ನಿಮಂ ಮದುವೆಯಾಗಿ ೫ ನೆ ವರ್ಷ-- ಶುಭಾಶಯಗಳು... ೧೦೬ ಕಾಲ ಸತಿ ಪತಿ ಖುಷಿಯಾಗಿ ಬಾಳಿ... ಇಂತಹ ಮಹಾನಗರದಲ್ಲಿ ಪ್ರೀತಿಸಿ ಮದುವೆಯಾಗಿ ಬಂದು ಸೆಟ್ಟಲ್ ಆಗಿ ಬದುಕೋದು ಅಂದ್ರೆ ಸುಮ್ನೆ ಅಲ್ಲ, ಇಲ್ಲಿ ಹಣ -ಜನ ಬೆಂಬಲ ಸ್ನೇಹಿತರ ಬೆಂಬಲ ಇದ್ದರೂ ಕೆಲವೊಮ್ಮೆ ತಣ್ನೀರೆ ಗತಿ..!! ಆದರೂ ಸ್ನೇಹಿತರಂತು ಸಹಾಯ ಮಾಡೇ ಮಾಡುತ್ತಾರೆ.. ಆಪತ್ತಿಗಾದವನೇ ಸ್ನೇಹಿತ ಅಂತ ಸುಮ್ನೆ ಹೇಳವ್ರೆಯೇ?.. ನೀವು ಹೇಳಿದ ಅನುಭವ(ಕಾಸು ಕೊಡಿ ನೊಂದಾಯಿಸಿ ನಿಮಗೆ ಕಾಲು ಮಾಡುವೆವು ಕೆಲಸ ಕೊಡುವೆವು!!) ನಮ್ಮ ಸ್ನೇಹಿತರಿಗೆ ಹಲವು ಸಾರಿ ಆಗಿದೆ- ಅವರೊಂಥರ ಹಗಲು ಕಂಡ ಬಾವಿಗೆ ಇರುಳು ಬಿದ್ದವರು!! ನನಗಂತೂ ಮೊದಲಿಂದಲೂ ಈ ತರಹದ ಜಾಹೀರಾತುಗಳಲ್ಲಿ ನಂಬಿಕೆ ಇರಲಿಲ್ಲ, ನಾ ನೋಡುತ್ತಿದ್ದುದು ಟೈಮ್ಸ್ ಆಫ್ ಇಂಡಿಯಾದ ಅಸ್ಸೆಂಟ್ ಮತ್ತು ಫ್ರೀ ಯಾಡ್ಸ್ ಮಾತ್ರ ಅದೂ ಪಬ್ಲಿಕ್ ಲೈಬ್ರರಿ ನಲ್ಲಿ !! ಅದರಲ್ಲಿ ಒಳ್ಳೊಳ್ಳೆ ಕಂಪನಿಗಳ ಸತ್ಯವಾದ ಜಾಹೀರಾತುಗಳು ಇರುತ್ತವೆ, ಈ ನೀವ್ ಹೇಳಿದ ಆತರಹ ಪೆಪ್ರನಲ್ಲಿ ಬರೀ ಪೊಳ್ಳು ಸುಳ್ಳು ಜಾಹೀರಾತುಗಳು... ಕೆಲಸ ಹುಡುಕುವ ಬದುಕುವ ಸಮಸ್ಯೆ ಒಬ್ಬರದಾದರೆ, ಅದನ್ನೇ 'ಬಂಡವಾಳ' ಮಾಡಿಕೊಂಡು ನಮ್ಮ ಸಮಯ 'ವೆಸ್ಟ್' ಮಾಡಿಸಿ ಹಣ ಪೀಕೊ ಇಂತ ಕಂಪನಿಗಳು ಏಜೆನ್ಸಿ ಗಳು ಬೆಂಗಳೂರಲ್ಲಿ ನಾಯಿ ಕೊಡೆ ತರಹ ಎದ್ದಿವೆ.. ಹುಷಾರಾಗಿರಬೇಕು.,.. ನಾ ಪ್ರಯತ್ನಿಸಿದ್ದು ಎಲ್ಲ ದೊಡ್ಡ ಅಲ್ಲದಿದ್ದರೋ ಸಣ್ಣ ಪುಟ್ಟ ಕಂಪ್ಯೂಟರ್ ಹಾರ್ಡ್ವೇರ್ ಅಂಗಡಿಗಳು ನಾ ಅದಾಗಲೇ ಕೋರ್ಸ್ ಮಾಡಿ ಅನುಭವ ಇದ್ದುದರಿಂದ ಕೆಲಸ ಸಲೀಸಾಗಿ ಸಿಕ್ಕಿತು, ಆಗಲೂ ಈಗಲೂ ನಾ ಅವಿವಾಹಿತ!!... ಯಾವುದೇ ತೊಂದ್ರೆ ಇಲ್ಲದೆ ಆರಾಮಾಗಿ ಜೀವನ ಕಳೆಯುತ್ತಿರುವೆ... ನಿಮ್ಮ ಜೀವನದ ಒಂದು ಒಳ್ಳೆ ಅನುಭವವನ್ನ ಇಲ್ಲಿ ಹಂಚಿಕೊಂಡಿದ್ದೀರ, ಓದಲು .......ವಿಷ್ಯ ಆದರೂ ನಗುವೂ ಬಂತು:()) .. ಅನುಭವ ಎಲ್ಲವನ್ನು ಕಲಿಸುತ್ತದೆ ... ನಿಮಗೆ ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿವಾಸಿಯವರೇ. ನಿಮ್ಮ ಹಾರೈಕೆಗೆ ಧನ್ಯವಾದಗಳು. ಸ್ನೇಹಿತರಂತು ಸಹಾಯ ಮಾಡೇ ಮಾಡುತ್ತಾರೆ. ಇದ್ದಕನುವಾಗಿ ಬ್ಲಾಗ್ ಒಂದನ್ನು ಬರೆದಿದ್ದೇನೆ. ಓದಿ ನೋಡಿ ನಾ ಪಟ್ಟ ಪಾಡು ನನಗೆ ಸಾದ್ಯವಾದ ರೀತಿ ಬಣ್ಣಿಸಿದೇನೆ. ಇನ್ನಷ್ಟು ನನ್ನ ಅನುಭವಗಳನ್ನ ಮುಂದೆ ಹಂಚಿಕೊಳ್ಳಲಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.