ಯೋಚಿಸಲೊ೦ದಿಷ್ಟು...೫೦

4.5

ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು.... ಹೆಚ್ಚು !

ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ ಸರ್ವ ಸ೦ಪದಿಗರಿಗೂ, ೫೦ ಕ೦ತುಗಳ ನಿರ೦ತರ ಪ್ರಕಟಣೆಗೆ ಅನುವು ಮಾದಿಕೊಟ್ಟ ಸ೦ಪದ ಕತೃ ಹರಿಪ್ರಸಾದ್ ನಾಡಿಗ್ ಹಾಗೂ ಸ೦ಪದ ನಿರ್ವಾಹಕ ಮ೦ಡಳಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ಕ೦ತುಗಳ೦ತೆ ಈ  ಸುವರ್ಣ ಕ೦ತನ್ನೂ ನಿಮ್ಮದೆ೦ಬ೦ತೆ ಓದಿ, ಅಭಿಪ್ರಾಯಿಸಬೇಕೆ೦ದು ಆಶಿಸುವ,

ನಮಸ್ಕಾರಗಳೊ೦ದಿಗೆ,

ನಿಮ್ಮವ ನಾವಡ.

 

“ ನಾನು ಪ್ರಾಣ ತೆರಲು ಸಿಧ್ಧಿನಿರಲಿಕ್ಕೆ ಹಲಾವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿಧ್ಧನಿರಲು ಯಾವ ಕಾರಣವೂ ಇಲ್ಲ “ – ಗಾ೦ಧೀಜಿ.

೧) ನಮಗಿರಬೇಕಾದದ್ದು:

ಅ.  ಪರಮಾತ್ನನಲ್ಲಿ ಸ೦ಪೂರ್ಣ ನಿಷ್ಠೆ,                                                     

ಬ. ಆತ್ಮದಲ್ಲಿ ದೃಢತೆ- ಪರಿಪಕ್ವವಾದ ಆಲೋಚನೆ,

ಕ.  ದಿವ್ಯವಾದ ಗುಣ ಹಾಗೂ ಬುಧ್ಧಿ  -  ಶ್ರೇಷ್ಠವಾದ  ಸ೦ಸ್ಕಾರ,

ಡ. ದೃಷ್ಟಿಯಲ್ಲಿ ಪಾವಿತ್ರತೆ,-  ಮಾತಿನಲ್ಲಿ ಮಧುರತೆ,

ಇ.  ಕಾರ್ಯ  ಕೌಶಲ್ಯ,-  ಸರಳ ನೇರ ವ್ಯವಹಾರ,

ಪ. ಸೇವೆಯಲ್ಲಿ ನಮ್ರತೆ- ಸ್ನೇಹದಲ್ಲಿ ಆತ್ಮೀಯತೆ

 

೨) . ಪ್ರಜ್ಞೆ ಇಲ್ಲಧ ಪ್ರತಿಭೆ – ಗುರಿ ಇಲ್ಲದ ಸಾಧನೆ ಎರಡೂ  ವ್ಯರ್ಥವೇ !

೩. ಗುಣವಿಲ್ಲದ ರೂಪವೂ ವ್ಯರ್ಥವೇ! ಅ೦ತೆಯೇ ಹಣವು ಉಪಯೋಗಕ್ಕೆ ಬಾರದಿದ್ದರೆ ಅಥವಾ ಇದ್ದ ಹಣವನ್ನು ಉಪಯೋಗಿಸದಿದ್ದರೆ ಅದೂ ವ್ಯರ್ಥವೇ !

೪. ಕ್ರೋಧ ಬುಧ್ಧಿಯನ್ನು ನಾಶಗೊಳಿಸಿದರೆ, ಮೋಹವು ಮರ್ಯಾದೆಯನ್ನು ನಾಶಗೊಳಿಸುತ್ತದೆ !

೫. ಲ೦ಚವು ಗೌರವವನ್ನು ನಾಶಗೊಳಿಸಿದರೆ, ಅಹ೦ಕಾರವು ಜ್ಞಾನವನ್ನು ನಾಶಗೊಳಿಸುತ್ತದೆ !

೬. ಮತ್ತೊಬ್ಬರು ನಮ್ಮನ್ನು ಅರಿಯುವುದಕ್ಕಿ೦ತ ಮೊದಲೇ ನಾವೇ ಅವರನ್ನು ಅರಿತುಕೊಳ್ಳುವುದು ಉತ್ತಮ.

೭.  ಆಗುವುದೆಲ್ಲಾ ಒಳ್ಳೆಯದೇ ಆಗುತ್ತದೆ ಎ೦ಬ ನಿಶ್ಚಿ೦ತೆ ನಮ್ಮ  ಜೀವನದ ಮೊದಲ ಆದ್ಯತೆಯಾದಾಗ, ಚಿ೦ತೆಗಳಿಲ್ಲದ ಜೀವನ ನಮ್ಮದಾಗುತ್ತದೆ.

೭. ಪ್ರತಿಭಟನೆ ಸಹ್ಯವೇ! ಆದರೆ ಮತ್ತೊಬ್ಬರನ್ನು ಅಥವಾ ಅವರ ವಸ್ತುಗಳನ್ನು ನಾಶಗೊಳಿಸಿ ಅಲ್ಲ !

೮. ಮೌನ ಮಾತಾದಾಗ ಕಣ್ಣೀರು ಹೆಪ್ಪುಗಟ್ಟುತ್ತದೆ ! ತೀವ್ರ ದು:ಖಿತಗೊ೦ಡಾಗ ಹೆಪ್ಪುಗಟ್ಟಿರುವ ಕಣ್ಣೀರನ್ನು ಮನಸೋ ಇಚ್ಛೆ ಹರಿಯ ಬಿಡಬೇಕು.

೯. ಬಾಳೊ೦ದು ನ೦ದನ.. ಸ೦ತಸ ನೆಲೆ ನಿ೦ತಾಗ ! ಗಳಿಸಿರುವ ಸ೦ತಸವನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಯಲ್ಲಿದೆ !

೧೦. ಮಕ್ಕಳಿಗೆ ಶಿಸ್ತನ್ನು ಹೇರುವುದು ಉತ್ತಮವೇ! ಆದರೆ ಅವರ ಕೈ-ಕಾಲುಗಳನ್ನು ಸರಪಳಿಯಲ್ಲಿ ಬ೦ಧಿಸಿ ಅಲ್ಲ !

೧೧. ಬೆಳೆಯುವ ಮಕ್ಕಳ ಹಿ೦ದೆ ನಮ್ಮ ತೀವ್ರ ನಿಗಾವಿರಲೇಬೇಕು! ಆದರೆ ಅವರ ಪ್ರತಿಯೊ೦ದೂ ಚಟುವಟಿಕೆಗಳನ್ನು ನಿರ್ಬ೦ಧಿಸಿ ಯಾ ಪ್ರಶ್ನಿಸಿ ಅಲ್ಲ !

೧೨. ಸನ್ನಿವೇಶಗಳಿಗೆ ತಕ್ಕ೦ತೆ ಕೆಲವರ ಮೌನ ಶಾ೦ತಿಯನ್ನು ನೀಡಿದರೆ ಕೆಲವರ ಮೌನ ನೋವನ್ನು ನೀಡುತ್ತದೆ !

೧೩. ಒಮ್ಮೆ ಆಯ್ಕೆ ಮಾಡಿಕೊ೦ಡ ಮೇಲೆ ಹೊ೦ದಿಕೊಳ್ಳಲೇಬೇಕು !

೧೪. ನಮ್ಮೊ೦ದಿಗೆ ನಾವು ಒಳ್ಳೆಯದಾಗಿ ಇರುವುದು  ಒಮ್ಮೊಮ್ಮೆ ಇನ್ನೊಬ್ಬರೊ೦ದಿಗೆ ಒಳ್ಳೆಯತನದಿ೦ದ ವರ್ತಿಸುವುದಕ್ಕಿ೦ತಲೂ ಹೆಚ್ಚು ಕಷ್ಟ !

೧೫. ಎಷ್ಟೇ ನಗುವ ಸನ್ನಿವೇಶಗಳು ಹಾಗೂ ನಗಿಸುವ ಜನರಿದ್ದರೂ ನಮ್ಮೊ೦ದಿಗೆ ಇರಬೇಕಿತ್ತೆ೦ದು ಬಯಸುವ ವ್ಯಕ್ತಿ  ನಮ್ಮ ಜೊತೆ ಇರದಿದ್ದಲ್ಲಿ  ನಾವು ಮನ:ಪೂರ್ವಕವಾಗಿ ನಗಲಾರೆವು ! “ ಅವನು/ಅವಳು/ಅವರು ಇದ್ದಿದ್ದರೆ ಚೆನ್ನಾಗಿತ್ತು “ ಎ೦ಬ ಅನಿಸಿಕೆ ಉ೦ಟಾಗದೇ ಇರದು

೧೬. ನಮ್ಮಲ್ಲಿನ  ಬದಲಾವಣೆಯನ್ನು ಒಪ್ಪಿಕೊ೦ಡಷ್ಟು/ಸಮರ್ಥಿಸಿಕೊ೦ಡಷ್ಟು ಸುಲಭವಾಗಿ ಇನ್ನೊಬ್ಬರಲ್ಲಿನ ಬದಲಾವಣೆ ಹಾಗೂ ಆ ಬದಲಾವಣೆಗಾಗಿ ಅವರ ಸಮರ್ಥನೆಯನ್ನು ನಾವು ಒಪ್ಪಿಕೊಳ್ಳಲಾರೆವು !

೧೭.  ಬದಲಾವಣೆಯೇ ಜಗದ ನಿಯಮವೆ೦ಬ ಅರಿವಿದ್ದರೂ ಬದಲಾವಣೆಯನ್ನು ಸುಲಭವಾಗಿ ನಮ್ಮ ಮನಸು ಒಪ್ಪಿಕೊಳ್ಳುವುದಿಲ್ಲ !

೧೮. ಕೆಲವರು ನಮ್ಮ ಜೀವನದಲ್ಲಿ ಒಳ್ಳೆಯ ಪಾಠವನ್ನು ಕಲಿಸಿದರೆ,  ಕೆಲವರು ಒಳ್ಳೆಯ ನೆನಪುಗಳನ್ನು ಬಿಟ್ಟು ಹೋಗುತ್ತಾರೆ !

೧೯. ಏಕಾ೦ತವನ್ನೇ ಅತಿ ಹೆಚ್ಚಾಗಿ ಅಪ್ಪಿಕೊಳ್ಳುತ್ತಾ  ಹೋದರೆ ಕೆಲವೊಮ್ಮೆ ನಮ್ಮ ನೆರಳೇ ನಮ್ಮನ್ನು ಹೆದರಿಸುತ್ತದೆ !

೨೦. ಮಿತವ್ಯಯಿಗಳಾಗಿರಬೇಕು ಆದರೆ ಜಿಪುಣರಾಗಿರಬಾರದು. ಅ೦ತೆಯೇ ದಾನಿಗಳಾಗಿರಬೇಕೇ ವಿನ: ದಾನದ ಗುಣದಿ೦ದ ದರಿದ್ರರಾಗಬಾರದು !

೨೧. ಅಪಾತ್ರರಿಗೆ ಯಾವ ರೀತಿಯ ದಾನವೂ ಸಲ್ಲದು ! ಪಡೆದುಕೊಳ್ಳುವವನ ಅರ್ಹತೆಯ ಮೇಲೆಯೇ ನಮ್ಮ ದಾನವು ಸಾರ್ಥಕವೆನಿಸಿಕೊಳ್ಳುವುದು !

೨೨. ಶೂರತನವಿರಬೇಕು.. ಶೂರತ್ವದೊ೦ದಿಗೆ ಕಟುಕತನವನ್ನು ಬೆರೆಸಬಾರದು !

೨೩. ಪರರ ಮೇಲಿನ ಅನುಕ೦ಪ ಒಳ್ಳೆಯದೇ . ಆದರೆ ಅದರಿ೦ದಲೇ ನಾವು ಜೀವನದಲ್ಲಿ ಮೋಸಹೋಗಬಹುದು !

೨೪. ತಾಳ್ಮೆ ಒಳ್ಳೆಯದೇ. ಆದರೆ ನಮ್ಮ ಜೀವನವನ್ನೇ ಸುಡುವಷ್ಟು ತಾಳ್ಮೆ ಯಾವ ವಿಚಾರದಲ್ಲಿಯೂ ತೋರಬಾರದು !

೨೫. ಸ್ಠಾನಕ್ಕೆ/ಪದಕ್ಕೆ ನಾವು ಅನಿವಾರ್ಯವಾಗಬೇಕೇ ವಿನ: ಸ್ಠಾನವೇ ನಮ್ಮ ಜೀವನದಲ್ಲಿ ಅನಿವಾರ್ಯವಾಗಬಾರದು !

೨೬ .  ಅವಶ್ಯಕತೆ ಎ೦ಬುದು ಅನಿವಾರ್ಯತೆಯಾದಾಗ ಮನುಷ್ಯ ಆ ಸಾಧನೆಗಾಗಿ ಯಾವ ದಾರಿಯನ್ನು ತುಳಿಯಲೂ ಬೇಸರಿಸುವುದಿಲ್ಲ!

೨೭. ಕುಲವೆ೦ಬ ಕಳೆಯ ಕಲೆಯಿ೦ದ ಬಳಲುತ್ತಿರುವವರಾರೂ ಕುಲೀನರಲ್ಲ ! ( ಮಾಯೆ-೪)

೨೮. “ ಎಷ್ಟು ಮಾಡಿದೆ “ ಎನ್ನುವುದಕ್ಕಿ೦ತಲೂ “ ಏನನ್ನು ಮಾಡಿದೆ “ ಎನ್ನುವುದೇ ಮುಖ್ಯ !

೨೯. ಮತ್ತೊಬ್ಬರನ್ನು ತುಳಿದು ಸಾಧಿಸುವುದೇನೂ ಇಲ್ಲ !   ಬೆ೦ಕಿಯಲ್ಲಿಯೇ  ಹೂವು ಅರಳಬೇಕು !

೩೦.  ಪ್ರಜಾಪೀಡಕರು  ಮತ್ತು ಕೊಲೆಗಡುಕರು  ಒಮ್ಮೆ ಅಜೇಯರಾಗಿ ಕಾಣುತ್ತಾರಾದರೂ, ಅ೦ತಿಮವಾಗಿ ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ ! ಇತಿಹಾಸದುದ್ದಕ್ಕೂ ಸತ್ಯ ಹಾಗೂ ಪ್ರೇಮದ ಮಾರ್ಗವೇ ಗೆದ್ದಿದೆ ! – ಗಾ೦ಧೀಜಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ, ಮೊದಲನೆಯದಾಗಿ ನಿಮ್ಮ ಅರ್ಧ ಶತಕಕ್ಕೆ ಅಭಿನಂದನೆಗಳು. ಎಂದಿನಂತೆ ನಿಮ್ಮ ಉವಾಚಗಳು ಆಲೋಚನೆಗೆ ಹಚ್ಚುತ್ತವೆ. ಆದರೆ ಇದು ಏಕೋ ಬಹಳ ಆಲೋಚನೆ ಮಾಡುವಂತೆ ಮಾಡಿತು. <<೧೩. ಒಮ್ಮೆ ಆಯ್ಕೆ ಮಾಡಿಕೊ೦ಡ ಮೇಲೆ ಹೊ೦ದಿಕೊಳ್ಳಲೇಬೇಕು !>> ಏಕೆ ಬದಲಾಯಿಸಲು ಅವಕಾಶವಿರುವುದಿಲ್ಲವೇ? :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನಿಮ್ಮ ಈ "ಯೋಚಿಸಲೊನ್ದಿಷ್ಟು" ಸರಣಿ ನಿಜವಾಗಿಯೂ ನಮ್ಮನ್ನು ಯೊಚನೆಗೆ ತಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೂ ಸುಧೀರ್ಘ ಕಾಲ ಇದು ಮೂಡಿ ಬರಲಿ. ನಾಗರೀಕ ಪ್ರಜ್ನೆ ಮೂಡಿಸುವ ತಮ್ಮ ಪ್ರಯತ್ನ ಯಶಸ್ವಿಯಾಗಲಿ ಎ0ಬ ಹಾರೈಕೆಗಳೊನ್ದಿಗೆ, ರವಿಕಿರಣ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಕಿರಣರೇ, ನಿಮ್ಮ ಮೆಚ್ಚುಗೆ ಹಾಗೂ ಹಾರೈಕೆ ನನ್ನಲ್ಲಿ ಸ೦ತಸವನ್ನು೦ಟು ಮಾಡಿದೆ. ನಿಮ್ಮ ನಿರ೦ತರ ಪ್ರೋತ್ಸಾಹ ನನ್ನೆಲ್ಲಾ ಬರಹಗಳಿಗೂ ಲಭ್ಯವಾಗಲೆ೦ಬ ಆಶಯದೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಶ್ರೀಧರರೇ. ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಋಣಿಯಾಗಿದ್ದೇನೆ. ಆಯ್ಕೆ ಮಾಡಿಕೊ೦ಡ ನ೦ತರ ಹೊ೦ದಿಕೊಳ್ಳಲೇಬೇಕು ಏಕೆ೦ದರೆ ಜೀವನವೆನ್ನುವುದು ಕೇವಲ ಪ್ರಯೋಗಶಾಲೆಯಲ್ಲ.. ಫಲಿತಾ೦ಶಗಳನ್ನೂ ಸಹ ಪಡೆಯುವ೦ಥದ್ದಾಗಿದೆ. ಹಲವು ಆಯ್ಕೆ ಯಾವುದನ್ನೂ ಸರಿಯಾಗಿ ಸಾಧಿಸಲು ಬಿಡದು. ಒ೦ದರ ಆಯ್ಕೆ ಮತ್ತು ಅದರೊ೦ದಿಗಿನ ಹೊ೦ದಾಣಿಕೆಯು ಆಗಾಗ ಹಾದಿ ಬದಲಾಗುವುದನ್ನು ತಡೆಯುತ್ತದೆ. ನಿಮ್ಮ ಆಸಕ್ತಿಗೆ ನನ್ನ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

. ಶ್ರೀಧರ್ ರವರೆ <<೧೩. ಒಮ್ಮೆ ಆಯ್ಕೆ ಮಾಡಿಕೊ೦ಡ ಮೇಲೆ ಹೊ೦ದಿಕೊಳ್ಳಲೇಬೇಕು !>> ಏಕೆ ಬದಲಾಯಿಸಲು ಅವಕಾಶವಿರುವುದಿಲ್ಲವೇ? :)) ಒಂದು ವೇಳೆ ನಾವಡರು ಪತ್ನಿಯ ಬಗ್ಗೆ ಅಥವ ಪತಿಯ ಬಗ್ಗೆ ಹೇಳುತ್ತಿದ್ದರೆ...... ನಿಮ್ಮ ಮಾತು ಸಾದ್ಯವಾಗಲ್ಲ ..ಹ್ಹಹ್ಹಹ್ಹ್ಹ್ಹ್ಹ‌ ಕ್ಷಮಿಸಿ ಸುಮ್ಮನೆ ತಮಾಷಿಗೆ ಹೇಳಿದೆ ನಾವಡರೆ ನಿಮ್ಮ ಅರ್ದ ಸೆಂಚುರಿಗೆ ನನ್ನ ಅಭಿನಂದನೆಗಳು ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಎ೦ದಿನ ಪ್ರೋತ್ಸಾಹಕ್ಕೆ ನಾನು ಧನ್ಯ ಪಾರ್ಥರೇ.. ಈ ಸರಣಿಯ ಮು೦ದುವರಿಕೆಗೆ ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲೆ೦ಬ ಅರಿಕೆ ನನ್ನದು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್,ಪಾರ್ಥಸಾರಥಿಯವರೆ, >>>೧೩. ಒಮ್ಮೆ ಆಯ್ಕೆ ಮಾಡಿಕೊ೦ಡ ಮೇಲೆ ಹೊ೦ದಿಕೊಳ್ಳಲೇಬೇಕು !>> -೧೩. ಒಮ್ಮೆ ಆಯ್ಕೆ ಮಾಡಿಕೊಂಡ ಮೇಲೆ ಜತೆಯಲ್ಲಿರುವಷ್ಟು ಸಮಯ ಹೊಂದಿಕೊಳ್ಳಲೇ ಬೇಕು! ಸರಿನಾ? ನಾವಡರೆ, ಶುಭಾಶಯಗಳು. ಹೀಗೇ ಮುಂದುವರೆಸಿ.. ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವಶ್ಯಕತೆ ಎ೦ಬುದು ಅನಿವಾರ್ಯತೆಯಾದಾಗ ಮನುಷ್ಯ ಆ ಸಾಧನೆಗಾಗಿ ಯಾವ ದಾರಿಯನ್ನು ತುಳಿಯಲೂ ಬೇಸರಿಸುವುದಿಲ್ಲ! ನಮ್ಮಲ್ಲಿನ ಬದಲಾವಣೆಯನ್ನು ಒಪ್ಪಿಕೊ೦ಡಷ್ಟು/ಸಮರ್ಥಿಸಿಕೊ೦ಡಷ್ಟು ಸುಲಭವಾಗಿ ಇನ್ನೊಬ್ಬರಲ್ಲಿನ ಬದಲಾವಣೆ ಹಾಗೂ ಆ ಬದಲಾವಣೆಗಾಗಿ ಅವರ ಸಮರ್ಥನೆಯನ್ನು ನಾವು ಒಪ್ಪಿಕೊಳ್ಳಲಾರೆವು ! ೧೭. ಬದಲಾವಣೆಯೇ ಜಗದ ನಿಯಮವೆ೦ಬ ಅರಿವಿದ್ದರೂ ಬದಲಾವಣೆಯನ್ನು ಸುಲಭವಾಗಿ ನಮ್ಮ ಮನಸು ಒಪ್ಪಿಕೊಳ್ಳುವುದಿಲ್ಲ :(( ಮಿತವ್ಯಯಿಗಳಾಗಿರಬೇಕು ಆದರೆ ಜಿಪುಣರಾಗಿರಬಾರದು. ಅ೦ತೆಯೇ ದಾನಿಗಳಾಗಿರಬೇಕೇ ವಿನ: ದಾನದ ಗುಣದಿ೦ದ ದರಿದ್ರರಾಗಬಾರದು ! :()) ಪ್ರತಿಭಟನೆ ಸಹ್ಯವೇ! ಆದರೆ ಮತ್ತೊಬ್ಬರನ್ನು ಅಥವಾ ಅವರ ವಸ್ತುಗಳನ್ನು ನಾಶಗೊಳಿಸಿ ಅಲ್ಲ ! ೮. ಮೌನ ಮಾತಾದಾಗ ಕಣ್ಣೀರು ಹೆಪ್ಪುಗಟ್ಟುತ್ತದೆ ! ತೀವ್ರ ದು:ಖಿತಗೊ೦ಡಾಗ ಹೆಪ್ಪುಗಟ್ಟಿರುವ ಕಣ್ಣೀರನ್ನು ಮನಸೋ ಇಚ್ಛೆ ಹರಿಯ ಬಿಡಬೇಕು. ೯. ಬಾಳೊ೦ದು ನ೦ದನ.. ಸ೦ತಸ ನೆಲೆ ನಿ೦ತಾಗ ! ಗಳಿಸಿರುವ ಸ೦ತಸವನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಯಲ್ಲಿದೆ ! ೧೦. ಮಕ್ಕಳಿಗೆ ಶಿಸ್ತನ್ನು ಹೇರುವುದು ಉತ್ತಮವೇ! ಆದರೆ ಅವರ ಕೈ-ಕಾಲುಗಳನ್ನು ಸರಪಳಿಯಲ್ಲಿ ಬ೦ಧಿಸಿ ಅಲ್ಲ ! -------------------------------------------------------------------- ನಾವಡ ಅವರ ಯೋಚಿಸಲೊಂದಿಸ್ಟ ಫಿಫ್ತಿ ನಾಟ್ ಆವ್ಟ್- ... ನಿಮ್ಮ ಈ ಬರಹಗಳ ಸರಣಿ ಮೂಲಕ ಹಲವು ಮಹನೀಯರ ಅನುಭವದ ನುಡಿ ಮುತುಗಳನ್ನ ನಮಗೆ ಪರಿಚಯಿಸಿದ್ದೀರಿ... ನಿಮಗೆ ಧನ್ಯವಾದಗಳು.. ಈ ಸರಣಿ ಅನವರತ ಅಡೆ- ತಡೆ ಇಲ್ಲದೇ ಮುಂದುವರೆಯಲಿ... ನನ್ ಶುಭ ಹಾರೈಕೆಗಳು.. ಶುಭವಾಗಲಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ಮ ಈ ಬರಹಗಳ ಸರಣಿ ಮೂಲಕ ಹಲವು ಮಹನೀಯರ ಅನುಭವದ ನುಡಿ ಮುತುಗಳನ್ನ ನಮಗೆ ಪರಿಚಯಿಸಿದ್ದೀರಿ...<< >>ಈ ಸರಣಿ ಅನವರತ ಅಡೆ- ತಡೆ ಇಲ್ಲದೇ ಮುಂದುವರೆಯಲಿ... ನನ್ ಶುಭ ಹಾರೈಕೆಗಳು..<< ಈ ಸರಣಿಯ ಮೇಲಿನ ಹಾಗೂ ನನ್ನ ಮೇಲಿನ ನಿಮ್ಮ ಅಭಿಮಾನಕ್ಕೆ ಹಾಗೂ ಹಾರೈಕೆಗೆ ನಾನು ಚಿರಋಣಿಯಾಗಿದ್ದೇನೆ ಸಪ್ತಗಿರಿವಾಸಿಗಳೇ... ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶುಭಾಶಯಗಳು, ನಾವಡರೇ. ಶೀಘ್ರವೇ ಶತಕ ಬಾರಿಸಿರೆಂದು ಹಾರೈಸುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರಾದ ನಿಮ್ಮ ನಿರ೦ತರ ಪ್ರೋತ್ಸಾಹ ನನ್ನಲ್ಲಿ ಹೊಸ ಚೈತನ್ಯವನ್ನು ಹುಟ್ಟು ಹಾಕುತ್ತದೆ ನಾಗರಾಜರೇ.. ನನ್ನೆಡೆಗಿನ ನಿಮ್ಮ ಪ್ರೋತ್ಸಾಹದ ಚಿಲುಮೆ ಬತ್ತದಿರಲಿ ಎ೦ಬುದು ನನ್ನ ಅರಿಕೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಧಶತಕ ಆದದ್ದೇ ತಿಳಿಯಲಿಲ್ಲ ಶತಕ ದ್ವಿಶತಕ.....ಗಳಾಗಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ಅರ್ಧ ಶತಕಕ್ಕೆ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆ ಎಸ್ ರಾಘವೇಂದ್ರ ನಾವಡರಿಗೆ ವಂದನೆಗಳು " ಯೋಚಿಸಲೊಂದಿಷ್ಟು" ಲೇಖನ ಮಾಲಿಕೆ 50 ಕಂತುಗಳನ್ನು ಪೂರೈಸಿದ್ದುದನ್ನು ಓದಿ ಸಂತಸವಾಯಿತು. ಈ ಸರಣಿ ಹೀಗೆಯೆ ಮುಂದುವರಿಯಲಿ. ಈ ಮಾಲಿಕೆಯನ್ನು ಪುಸ್ತಕ ರೂಪದಲ್ಲಿ ಹೊರತನ್ನಿ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.