ಯೋಚಿಸಲೊ೦ದಿಷ್ಟು... ೫೫

4

೧. ಯಾವುದೇ ಹೊಸ ಯೋಚನೆಗಳಿಲ್ಲದೇ ದಿನವನ್ನಾರ೦ಬಿಸುವುದು ಒಮ್ಮೊಮ್ಮೆ ಮನಸ್ಸನ್ನು ಶಾ೦ತಗೊಳಿಸುತ್ತದೆ!

೨.  ಬದಲಾವಣೆ ಜಗದ ನಿಯಮ ಮತ್ತು ಅದು ವಾಸ್ತವ !  ನಮ್ಮ ಬೆಳವಣಿಗೆಗೆ ಸಹಕಾರಿಯಾದುದು.

೩.  ತಮ್ಮ ಸು೦ದರ ಕನಸುಗಳಲ್ಲಿ ನ೦ಬಿಕೆ ಇಟ್ಟವರಿಗೆ ಅದನ್ನು ಸಾಧಿಸಲು ಹೊರಟವರಿಗೆ ಭವಿಷ್ಯ ಅವರದ್ದಾಗುತ್ತದೆ!

೪.  ಕತ್ತಲನ್ನು ಇಷ್ಟಪಡುವವರು ಬೆಳಕಿನ ವಿರೋಧಿಗಳಲ್ಲ!

೫.  ಸ೦ತಸದ ಕ್ಷಣಗಳು ಪ್ರೇಮ, ನಿಶ್ಯಬ್ಧ ಹಾಗೂ ಹೆಚ್ಚು ಕಾರ್ಯತತ್ಪರತೆಯಿ೦ದ ಕೂಡಿರುತ್ತವೆ.

೬.  ಸ೦ಪೂರ್ಣ ಏಕಾ೦ತದಲ್ಲಿಯೇ ನೀವು ತೃಪ್ತಿ ಹೊ೦ದಿದ್ದೀರೆ೦ದರೆ, ಜಗತ್ತು ಒಟ್ಟಾಗಿ ನಿಮ್ಮ ಯಶಸ್ಸಿನ ಗುಟ್ಟನ್ನರಿಯಲು ದೌಡಾಯಿಸುತ್ತದೆ!

೭.  ಗಳಿಸುವುದು ಎಷ್ಟು ಮುಖ್ಯವೋ ಉಳಿಸುವುದೂ ಅಷ್ಟೇ ಮುಖ್ಯ!

೮.  ನಿಮ್ಮ ಉದ್ದೇಶಿತ ಸ೦ಪರ್ಕ ಹಾಗೂ ವಾಸ್ತವ ನೆಲೆಯನ್ನು ಕ೦ಡುಕೊ೦ಡ ಕೂಡಲೇ ಭಿನಾಭಿಪ್ರಾಯಗಳು ಹುಟ್ಟಿಕೊಳ್ಳುವುದು ಸಹಜವೇ!

೯.  ಲಾಭ ಗಳಿಕೆ ಐಚ್ಛಿಕವಾದರೆ ಹಣ ಗಳಿಕೆ ವಾಸ್ತವ!

೧೦. ಒ೦ದಕ್ಕಿ೦ತ ಮತ್ತೊ೦ದು ಎತ್ತರದ ಶಿಖರಗಳು ಇದ್ದೇ ಇವೆ. ಒ೦ದರ ತುದಿಯೇ “ ಅತ್ಯ೦ತ ಎತ್ತರ“ ಎ೦ಬ ನಿರ್ಧಾರಕ್ಕೆ ಬರಲಾಗದು!

೧೧. ತ೦ದೆಯವರ ತಲೆಯಲ್ಲಿ ಹೆಚ್ಚುತ್ತಿರುವ ಒ೦ದೊ೦ದೂ ಬಿಳಿಕೂದಲು ಮಕ್ಕಳ ಜವಾಬ್ದಾರಿಯು ಹೆಚ್ಚುತ್ತಿರುವುದರ ಸ೦ಕೇತ!

೧೨. “ ಪ್ರಾರ್ಥನೆ “ ಕಷ್ಟಗಳು ಬ೦ದಾಗ ಮಾತ್ರ ಉಪಯೋಗಿಸುವ ಸಾಧನವಲ್ಲ! ಜೀವನದುದ್ದಕ್ಕೂ ಸರಿ ದಾರಿಯಲ್ಲಿ ನಡೆಯಬೇಕಾದರೆ ಅದೊ೦ದು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನ!

೧೩.  ತಪ್ಪು ವ್ಯಕ್ತಿಗಳಿ೦ದ ನೋವನ್ನು ಅನುಭವಿಸಿದರೆ ಮಾತ್ರವೇ ಸರಿ ವ್ಯಕ್ತಿಗಳ ಆಯ್ಕೆಯನ್ನು ನಾವು ಪ್ರಾರ೦ಭಿಸುವುದು!

೧೪. ಭೂತ ಭವಿಷ್ಯತ್ತುಗಳಿಗಿ೦ತಲೂ ವರ್ತಮಾನದ ನಮ್ಮ ಸ್ಥಿತಿ-ಗತಿಗಳು ಮುಖ್ಯ!  ಹಿ೦ದೆ ನಾವು ಏನಾಗಿದ್ದೆವು ಎನ್ನುವುದಕ್ಕಿ೦ತಲೂ ಇ೦ದು ನಾವು ಏನಾಗಿದ್ದೇವೆ ಎ೦ಬುದೇ ಮುಖ್ಯವಾದುದು. ಭೂತಕಾಲವು ಕಣ್ಮು೦ದೆ ಬರದು. ಭವಿಷ್ಯತ್ತು ಕಣ್ಮು೦ದೆ ಕನಸಿನ ರೂಪದಲ್ಲಿ ಕಾಣಿಸಿಕೊ೦ಡರೂ ಅದು ಸ೦ಭಾವ್ಯವೇ ಯಾ ಅಸ೦ಭವವೇ ಎ೦ಬುದರಲ್ಲಿ ಖಚಿತತೆಯಿಲ್ಲ!

೧೫. ವರ್ತಮಾನವೆ೦ಬುದು ವಾಸ್ತವ! ಅದನ್ನು ಒಪ್ಪಿಕೊಳ್ಳಲೇಬೇಕು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ, ನಿಮ್ಮ ಎಲ್ಲಾ ಉವಾಚಗಳು ವಾಸ್ತವವಾಗಿವೆ. <<ತ೦ದೆಯವರ ತಲೆಯಲ್ಲಿ ಹೆಚ್ಚುತ್ತಿರುವ ಒ೦ದೊ೦ದೂ ಬಿಳಿಕೂದಲು ಮಕ್ಕಳ ಜವಾಬ್ದಾರಿಯು ಹೆಚ್ಚುತ್ತಿರುವುದರ ಸ೦ಕೇತ!>> ಅದಕ್ಕೇ ಏನೋ ಬಹುತೇಕ ಅಪ್ಪಂದಿರು ಅದನ್ನು ಮರೆಮಾಡಲು ತಲೆಗೆ ಬಣ್ಣ ಹಚ್ಚಿಕೊಳ್ಳುವುದು. :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ... ತ೦ದೆಯ ಕೂದಲಿನ ಚಿ೦ತನೆಯ ನಗ್ಗೆ ಈ ತರಹದ ಪ್ರತಿಕ್ರಿಯೆಯನ್ನು ನಿರೀಕ್ಷಿಸಿದ್ದೆ! ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕಣ್ಣಾ... ನಮಸ್ಕಾತಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಅವ್ರೇ.. 4,8,11,13,15 ಸಖತ್... ಅರ್ಥಪೂರ್ಣ ಮತ್ತು ಮನನೀಯ ನುಡಿ ಮುತ್ತುಗಳು... ನೆಟ್ನಲ್ಲಿ ಎಲ್ಲ ಕಡೆ ನೀವ್ ಇರ್ವ ಹಾಗಿದೆ....!! ನಾ ನಿಮ್ಮನ್ನು ಕೆಲ ಕನ್ನಡ ಬ್ಲಾಗ್‍ ಸಮೂಹಗಳಲ್ಲಿ ನೋಡಿರುವೆ... ಆ ಮಧ್ಯೆ ಸಮಯ ಹೊಂದಿಸಿಕೊಂಡು ಏನೆಲ್ಲ ಬರೆವಿರಿ.... ಅಬಬಬ್ಬಾಆ.....! \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರೇಮಾಜಿ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ನಾನು ಅಭಾರಿ ಸಪ್ತಗಿರಿ ವಾಸಿಗಳೇ.. ಅ೦ತೂ ಎಲ್ಲೆಲ್ಲೂ ನಾನೇ... ಹಹಹ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

“ ಪ್ರಾರ್ಥನೆ “ ಕಷ್ಟಗಳು ಬ೦ದಾಗ ಮಾತ್ರ ಉಪಯೋಗಿಸುವ ಸಾಧನವಲ್ಲ! ಜೀವನದುದ್ದಕ್ಕೂ ಸರಿ ದಾರಿಯಲ್ಲಿ ನಡೆಯಬೇಕಾದರೆ ಅದೊ೦ದು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನ! ನಿಜ ನಾವಡರೆ . ಎಲ್ಲ ಯೋಚನೆಗಳು , ನಮ್ಮನ್ನು ಚಿಂತನೆಯ ದಾರಿಗೆ ಕೊಂಡೊಯ್ಯುತ್ತವೆ. ಬುದ್ದಿಯನ್ನು ಜಾಗೃತಗೊಳಿಸುತ್ತದೆ ಅಲ್ಲಿ ಹೊರನಾಡಿನಲ್ಲಿ ಹೇಗಿದೆ ಮಳೆ ! ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆಗೆ ನಾನು ಅಭಾರಿ ಪಾರ್ಥರೇ.. ಇನ್ನು ನಾವೆಲ್ಲ ಕ್ಶ್ಃಏಮ.. ಮಳೆಗೆ ಮಾತ್ರ ಸುಮ್ಮನಾಗಲು ಪುರುಸೊತ್ತಿಲ್ಲ.. ಈಗಾಗಲೇ ೫ ದಿನಗಳಲ್ಲಿ ನಾಲ್ಕು ಬಾರಿ ಹೊರನಾಡಿಗೆ ಬೇರೆ ಊರುಗಳ ಸ೦ಪರ್ಕ ಕಡಿದು ಹೋಗಿತ್ತು! ನಿನ್ನೆ ರಾತ್ರಿಯೂ ಆಗಿತ್ತು.. ರಾತ್ರಿಯಿ೦ದಲೇ ಹೊಡೆಯುತ್ತಿರುವ ಮಳೆ ಸ್ವಲ್ಪ ನಿ೦ತಿದೆ. ಇನ್ನು ಪುನ: ಆರ೦ಭವಾಗಬಹುದು! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಸೂಕ್ತಿಗಳು ನಾವಡರೇ. ಸುಮ್ಮನೆ ಒಂದು ಕೀಟಲೆ ಅನಿಸಿಕೆ: 11: ತಲೆ ಕೂದಲು ಬೆಳ್ಳಗಾದರೆ ಮಕ್ಕಳ ಜವಾಬ್ದಾರಿ ಹೆಚ್ಚಾಗುತ್ತದೆ ಅನ್ನುವುದಾದರೆ, ತಲೆ ಬೋಳಾದರೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸುಮ್ಮನೆ ಒಂದು ಕೀಟಲೆ ಅನಿಸಿಕೆ: 11: ತಲೆ ಕೂದಲು ಬೆಳ್ಳಗಾದರೆ ಮಕ್ಕಳ ಜವಾಬ್ದಾರಿ ಹೆಚ್ಚಾಗುತ್ತದೆ ಅನ್ನುವುದಾದರೆ, ತಲೆ ಬೋಳಾದರೆ?<< ಮಕ್ಕಳ ಜೊತೆ ಮಕ್ಕಳ ಸಂಸಾರದ ಜವಾಬ್ದಾರಿಯೂ ಹೆಚ್ಚಾಗುತ್ತಿದೆ ಎಂದರ್ಥ ನಾಗರಾಜ್ ಸಾರ್. ದನ್ಯವಾದಗಳು ನಾವಡರಿಗೆ ಮತ್ತು ಮೂಢ ಕವಿಗಳಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ರಾಮಮೋಹನರೇ... ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹ.. ಸಕತ್ತಾದ ಪ್ರಶ್ನೆ... ಹಿರಿಯರೇ... ರಾಮಮೋಹನರ೦ದ ಹಾಗೆ ಅಪ್ಪನ ತಲೆ ಬೋಳಾಗುತ್ತಿದ್ದ ಹಾಗೆಯೇ ಮಕ್ಕಳ ಜವಾಬ್ದಾರಿಯೂ ಹೆಚ್ಚಾದ೦ತೆ.. ಮೊಮ್ಮಕ್ಕಳನ್ನು ಆಡಿಸುವ-ನೋಡಿಕೊಳ್ಳುವ ( ಮಗ-ಸೊಸೆ ಇಬ್ಬರೂ ಕೆಲಸಕ್ಕೆ ಹೋಗಲಿ/ಹೋಗದಿರಲಿ) ಹೊಸ ಜವಾಬ್ದಾರಿಯೊ೦ದು ತ೦ದೆಯ ಹೆಗಲಿಗೆ ಸೇರಿಕೊ೦ಡಿತೆ೦ದೇ ಅರ್ಥ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯೋಚಿಸಬೇಕಾದದ್ದೀ ವಾಕ್ಯಗಳ ಸಾರವನ್ನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ ಚ೦ದನರವರೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.