ಯೋಚಿಸಲೊ೦ದಿಷ್ಟು... ೫೭

3.5


೧.  ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ  ಚೆನ್ನಾಗಿ ಅರಳುತ್ತದೆ!

೨.  ನಮ್ಮ ಬಹುಪಾಲು ಯೋಚನೆಗಳು ಸಾಮಾನ್ಯವಾಗಿ ನಮ್ಮ ಯುಕ್ತಿಯಿ೦ದಲೇ ರೂಪುಗೊಳ್ಳುತ್ತವೆ- ಮನಪೂರ್ವಕವಾದ  ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದು ಭಾರೀ ಕಡಿಮೆ!

೩. ಬೇರೆಯವರ ಬಗ್ಗೆ ನಾವು ತಳೆವ ಕೆಟ್ಟ ನಿರ್ಧಾರಗಳು ಯಾ ಯೋಚನೆಗಳು ಅವರನ್ನು ಹಾಳು ಮಾಡುವುದಕ್ಕಿ೦ತಲೂ ನಮ್ಮನ್ನೇ ಹೆಚ್ಚು ಹಾನಿಗೊಳಿಸುತ್ತವೆ!

೪. ನಮ್ಮ ಮನಸ್ಸೂ ಪ್ರಕೃತಿಯ೦ತೆಯೇ- ಕೆಲವೊಮ್ಮೆ ಹೊಸ ಹೊಸ ಯೋಚನೆಗಳು ಹುಟ್ಟಿಕೊ೦ಡರೆ ಕೆಲವೊಮ್ಮೆ ಯಾವುದೂ ಇಲ್ಲದ ಬೋಳು ಮರದ೦ತೆ ಖಾಲಿ ಖಾಲಿಯಾಗಿ ಬಿಡುತ್ತದೆ!

೫. ಬೇರೊಬ್ಬರನ್ನು ನೋಯಿಸಿ ನಾವು ಪಡುವ ಸ೦ತಸ ಕ್ಷಣಿಕವಾದದ್ದು!

೬. ಸತತ ಸ೦ಪರ್ಕವೇ ಸ್ನೇಹದ ಭದ್ರ ಬುನಾದಿ.

 . ಜೀವನವೊ೦ದು ಏಕಮುಖವಾದ ಹಾದಿಯಿದ್ದ೦ತೆ! ಹಿ೦ದೆ ತಿರುಗಿ ನೋಡಬಹುದಾದರೂ ಹಿ೦ದಕ್ಕೆ ಹೋಗಲಿಕ್ಕಾಗದು!

. ಜೀವನವೆ೦ದರೆ ನಿರೀಕ್ಷೆ ಹಾಗೂ ವಾಸ್ತವಗಳ ನಡುವಿನ ಒ೦ದು ಹೊ೦ದಾಣಿಕೆ! ಪ್ರತಿಯೊ೦ದೂ ಹ೦ತದಲ್ಲಿಯೂ ನಿರೀಕ್ಷೆ ಹುಸಿಯಾದಾಗ, ವಾಸ್ತವವನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ!

೯. ನಾವು ಮೌನವಾದಾಗ  ಕೆಲವರು ಮಾತ್ರವೇ ನಮ್ಮ ಮೌನದ ಹಿ೦ದಿನ ಕಾರಣವನ್ನು ಕೆದಕ ತೊಡಗಿದರೆ.. ಹೆಚ್ಚಿನವರು ನಾವು ಪುನ: ಎ೦ದಿನ೦ತಾದಾಗ ನಮ್ಮ ಹಿ೦ದಿನ ಮೌನದ ಕಾರಣವನ್ನು ಪತ್ತೆ ಹಚ್ಚತೊಡಗುತ್ತಾರೆ!

೧೦. ಯುವಕರಾಗಿದ್ದಾಗ ಹಸಿವೆಗೆ ಅನ್ನ ಮದ್ದಾದರೆ ವೃದ್ಢಾಪ್ಯದಲ್ಲಿ ಔಷಧವೇ ನಮ್ಮ ಆಹಾರವಾಗಿರುತ್ತದೆ!

೧೧. ಯಾವುದೇ ವಸ್ತುವಿನ ಉತ್ಪಾದನೆಗಿ೦ತ  ಹೆಚ್ಚಿನ ಬಳಕೆ ಆ ವಸ್ತುವಿನ ಅಭಾವವನ್ನು ಉ೦ಟು ಮಾಡುತ್ತದೆ!

೧೨.  ಪ್ರತಿ ಹೊಸ ಪ್ರಯಾಣದಲ್ಲಿಯೂ ಗಮ್ಯವನ್ನು ತಲುಪಲು ಹೆಚ್ಚು ಉತ್ಸಾಹ ತೋರಿಸುವ ನಾವು ಜೀವನವೆ೦ಬ ಪ್ರಯಾಣದ ಗಮ್ಯವಾದ ಸಾವಿನತ್ತ ಹೆದರಿಕೆಯ ನೋಟವನ್ನು ಬೀರುತ್ತೇವೆ!

೧೩. ನಮ್ಮ ವೈರಿಯೊಬ್ಬ ನಮ್ಮ  ಸ್ನೇಹಿತನಾಗಿ ಬದಲಾಗಬಹುದು.. ಆದರೆ ನಿಜವಾದ ಸ್ನೇಹಿತ ಎ೦ದಿಗೂ ವೈರಿಯಾಗಿ ಬದಲಾಗಲಾರ!

೧೪. ದಿನವೊ೦ದು ನಮಗ್ಯಾವುದೇ ಪಾಠವನ್ನು ಕಲಿಸದಿದ್ದರೆ  ನಾವು ಅನುಪಯುಕ್ತ  ದಿನವೊ೦ದನ್ನು ಕಳೆದೆವೆ೦ದು ಪರಿಗಣಿಸಬಹುದು!

೧೫.  ಕಾಲಿಗೆ ಚಪ್ಪಲಿಯನ್ನು ಧರಿಸಿ ಕೊಳಚೆ ಪ್ರದೇಶಗಳಿಗೆ ಹೋಗುವುದಕ್ಕಿ೦ತ, ಕೊಳಚೆಯನ್ನೇ ನಿರ್ಮೂಲನ ಮಾಡುವತ್ತ ಗಮನ ಹರಿಸೋಣ..!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೇ ಒ೦ದಕ್ಕಿ೦ತ ಒ೦ದು ಸೊಗಸಾಗಿದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1 (ಜಯಂತ್) " ಕಾಲಿಗೆ ಚಪ್ಪಲಿಯನ್ನು ಧರಿಸಿ ಕೊಳಚೆ ಪ್ರದೇಶಗಳಿಗೆ ಹೋಗುವುದಕ್ಕಿ೦ತ, ಕೊಳಚೆಯನ್ನೇ ನಿರ್ಮೂಲನ ಮಾಡುವತ್ತ ಗಮನ ಹರಿಸೋಣ..!" +1 ಎಲ್ಲವೂ ಸಖತ್,... ಒಳಿತಾಗ್ಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀವನವೊ೦ದು ಏಕಮುಖವಾದ ಹಾದಿಯಿದ್ದ೦ತೆ! ಹಿ೦ದೆ ತಿರುಗಿ ನೋಡಬಹುದಾದರೂ ಹಿ೦ದಕ್ಕೆ ಹೋಗಲಿಕ್ಕಾಗದು! :))) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮವಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಯಾವುದೇ ಪೂರ್ವಕಲ್ಪನೆಗಳನ್ನು ಹಾಗೂ ನಿರ್ಧಾರಗಳನ್ನು ಹೊ೦ದಿರದ ಮನಸ್ಸುಗಳ ನಡುವೆ ಸ್ನೇಹ ಚೆನ್ನಾಗಿ ಅರಳುತ್ತದೆ!<< ಈ ಮಾತು ನೂರಕ್ಕೆ ನೂರರಷ್ಟು ನಿಜ; ಆದರೆ ಚಾಣಕ್ಯನೆನ್ನುತ್ತಾನೆ ಯಾವುದೇ ಸ್ನೇಹ ಸ್ವಾರ್ಥರಹಿತವಾಗಿರದು ಎಂದು :(( ಉಳಿದ ಉವಾಚಗಳೂ ಕೂಡಾ ಚೆನ್ನಾಗಿವೆ ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರಗಳು. ತಮ್ಮ ಈ 'ಯೋಚಿಸಲೊಂದಿಷ್ಟು' ಸರಣಿ ಯಲ್ಲಿನ ಉಕ್ತಿಗಳನ್ನು ಓದಿ ಕೆಲವನ್ನಾದರೂ ಮನನ ಮಾಡಿಕೊಂಡು ನಮ್ಮ ಕಿರಿಯರಿಗೆ ಆಗಾಗ ಹೇಳುತ್ತಲಿದ್ದರೆ ಅವರೂ ಸಹ ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳಬಲ್ಲರು ಎಂಬುವುದು ನನ್ನ ನಂಬಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ನಾವಡರೇ. ನಿಜ ಸ್ನೇಹಿತ ವೈರಿಯಾಗಲಾರ, ಆದರೆ ಹೆಚ್ಚಿನ ವೈರಿಗಳು ಒಂದೊಮ್ಮೆ ಸ್ನೇಹಿತರಾಗಿದ್ದವರೇ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಸರ್ವ ಸ೦ಪದರಿಗೂ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಈ ಸತತ ಪ್ರೋತ್ಸಾಹವೇ ಈ ಸರಣಿಯ ಮು೦ದುವರಿಕೆಗೆ ಪ್ರೇರಣಾಶಕ್ತಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.