ವಾರಸುದಾರನಿಲ್ಲದ ಒಂಟಿ ಚಪ್ಪಲಿ

2

 ೧. 

ವಾರಸುದಾರನಿಲ್ಲದ ಒಂಟಿ 
ಚಪ್ಪಲಿಯಂತಾಗಿದೆ ಮನ
ಜೊತೆ  ಸಾಗಿದ  ಹಾದಿಗಳ
ನೆನಪಲ್ಲಿ  ಸಾಕಿ
ಬಂದು ಬಿಡು 
ಕೊನೆಯ ಬಾರಿ 
ಬದಿಯ ಬೇಲಿಯ ಮೇಲಿನ 
ಹೂವು ಒಮ್ಮೆಯಾದರೂ 
ನಕ್ಕೀತು.
೨.
ಎರೆಡೂ ಬದಿಯ 
ಮೌನದ ನಡುವೆ 
ಅನಾಥವಾಗಿವೆ 
ನೆನಪುಗಳು.
೩.
ಆಗಂತುಕ 
ರಾತ್ರಿಗಳಲ್ಲಿ 
ಕಳೆದುಹೋಗಿವೆ 
ಪರಿಚಿತ 
ನೆನಪುಗಳು.
೪. 
ನೊಂದ ಹೃದಯವಿದೆ
ಕೊಂದ ಕನಸುಗಳಿವೆ 
ಸಾಗಬೇಕಿದೆ ಒಂಟಿ 
ಯಾತ್ರಿಕ ನಾನು 
ನೆನಪುಗಳ ಕ್ರೂರ 
ಬಿಸಿಲಲ್ಲಿ.
೫.
ನೆನೆಪ ಜಾತ್ರೆಯಲಿ 
ಅದೆಷ್ಟು ಮುಖಗಳು?
ಯಾವ ಮುಖದ 
ಭರವಸೆಗೆ 
ಕಣ್ಣೀರಾಗಲಿ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

೪. ನೊಂದ ಹೃದಯವಿದೆ ಕೊಂದ ಕನಸುಗಳಿವೆ ಸಾಗಬೇಕಿದೆ ಒಂಟಿ ಯಾತ್ರಿಕ ನಾನು ನೆನಪುಗಳ ಕ್ರೂರ ಬಿಸಿಲಲ್ಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೊಂದ ಹೃದಯವಿದೆ ಕೊಂದ ಕನಸುಗಳಿವೆ ಸಾಗಬೇಕಿದೆ ಒಂಟಿ ಯಾತ್ರಿಕ ನಾನು ನೆನಪುಗಳ ಕ್ರೂರ ಬಿಸಿಲಲ್ಲಿ. ೫. ನೆನೆಪ ಜಾತ್ರೆಯಲಿ ಅದೆಷ್ಟು ಮುಖಗಳು? ಯಾವ ಮುಖದ ಭರವಸೆಗೆ ಕಣ್ಣೀರಾಗಲಿ? ----------------------- ರವಿ ಕುಮಾರ್ ಅವ್ರೆ- ಕವನ ಅದರ ಭಾವಾರ್ಥಗಳಿಂದಾಗಿ ನನಗೆ ಬಹು ಹಿಡಿಸಿತು... ನನಗೆ ಹಿಡಿಸಿದ ಸಾಲುಗಳನ್ನ ಯಥವಾತ್ತಾಗಿ ಛಾಪಿಸಿರುವೆ... ಆದರೆ ನಾಲ್ಕನೇ ಸಾಲುಗಳು ಸ್ವಲ್ಪ ಬದಲಾವಣೆಗೆ ಅಗತ್ಯವಾಗಿವೆ ಅನ್ನಿಸುತ್ತಿದೆ... ಸವೆಸಬೇಕಿದೆ ದಾರಿ ಅಥವಾ ಸಾಗಬೇಕಿದೆ ಯಾನ ಒಂಟಿ ಯಾತ್ರೆ ಅಥವಾ ಒಂಟಿ ಯಾತ್ರಿಕ ನಾ ನೆನಪುಗಳ ಕ್ರೂರ ಬಿಸಿಲಲ್ಲಿ ಹೀಗಿದ್ದರೆ ಚೆನ್ನ ಇತ್ತು ಅಲ್ಲವೇ? >>>> ನಿಮ್ಮದೇ ಬರಹದ ನಾಲ್ಕನೇ ಸಾಲುಗಳನ್ನ ಮತ್ತೆ ನೀವು ಪ್ರತಿಕ್ರಿಯೆಗಳಲ್ಲಿ ಯಾಕೆ ಹಾಕಿದಿರೋ ಗೊತ್ತಾಗಲಿಲ್ಲ..!! ಮೊದಲಿಗೆ ನಾ ಬಹುಶ ಅಲ್ಲಿ ಏನೋ ತಪ್ಪು ಆಗಿ ಅದನ್ನ ತಿದ್ದಿಕೊಂಡು ಓದಲಿ ಅಂತ ಹಾಕಿರಬಹುದು ಅಂತ ಮತ್ತೊಮ್ಮೆ ನಾಲ್ಕನೇ ಸಾಲುಗಳನ್ನ ನೋಡಿದರೆ ತೇಟ್ ಹಂಗೆ ಇದ್ದುವಲ್ಲ...?? ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಸಪ್ತಗಿರಿವಾಸಿ, ನಿಮ್ಮ ಅಭಿಮಾನಕ್ಕೆ ಶರಣು. ನಾನು ನಾಲ್ಕನೇ ಹನಿಯನ್ನು ಅಪ್ಲೋಡ್ ಮಾಡಿದಾಗ ನನಗೆ ಸರಿಯಾಗಿಲ್ಲ ಅನಿಸಿತ್ತು ಅದಕ್ಕೆ ಮತ್ತೆ ಪ್ರತಿಕ್ರಿಯೆಯಲ್ಲಿ ಹಾಕಬೇಕಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.