ವಿವಾಹದ ಭಾವಚಿತ್ರ..!

3ನಲ್ಲೆ, ನಿನ್ನಿ೦ದ ಅಗಲುವುದೆ೦ದರೆ

ನನ್ನ ಜೀವನದ ಕೆಟ್ಟ ಕ್ಷಣಗಳೆ೦ದವನು

ಮರುದಿನ ಬೆಳಿಗ್ಗೆ ನೋಡಿದ್ದು

ಮತ್ತೊಬ್ಬನ ತೋಳಿನ  ತೆಕ್ಕೆಯಲ್ಲಿದ್ದ ನಲ್ಲೆಯನ್ನು!!

ಎಲ್ಲರೂ ಒಟ್ಟಾಗಿಯೇ ಇರಬೇಕೆ೦ದು ಬಯಸುತ್ತಿದ್ದವನು

ತನ್ನ ಮಗನಿಗಾಗಿ  ಮನೆ ಬಿಟ್ಟು ಹೊರಡಬೇಕಾಯ್ತು!

ಪ್ರತಿದಿನವೂ ಬಹಳ ದೂರದಿ೦ದ ನಡೆದು ಬರುತ್ತಾಳೆ೦ದು

ಕುಡಿಯಲು ನೀರು ಕೊಡುತ್ತಿದ್ದವನು

ಮು೦ದೊ೦ದು ದಿನ ಅವಳಿ೦ದಾಗಿ ವಿಷ ಸೇವಿಸಬೇಕಾಯ್ತು!

ಕತ್ತಲೆಯನ್ನು ಇಷ್ಟಪಟ್ಟವನು ಕೊನೆಗೂ ಬೆಳಕಿಗಾಗಿ

ಹಾತೊರೆದ  ! ಫಕ್ಕನೆ ಕಣ್ಮು೦ದೆ ಬೆಳಗಿದ ಬೆಳಕನ್ನು

ಕ೦ಡು ಶಾಶ್ವತನಾಗಿ ಕುರುಡನೇ ಆದ!!

ಬೆಳಿಗ್ಗೆಯಿ೦ದಲೂ ಬಲು ಬೇಸರದಿ೦ದಿದ್ದ

ಅಜ್ಜ ಅಟ್ಟದಲ್ಲಿನ ಕಸದ ರಾಶಿಗಳ ನಡುವೆ ಹುಡುಕುತ್ತಿದ್ದಾದರೂ
ಏನನ್ನೆ೦ದು ಯೋಚಿಸುತ್ತಲೇ ಸೋತಿದ್ದ ಅಜ್ಜಿಯ ಕಣ್ಣುಗಳಲ್ಲಿ

ಫಕ್ಕನೇ ಬೆಳಕು ಮೂಡಿದ್ದು ಅಜ್ಜ ಹುಡುಕಿದ

ಅವರಿಬ್ಬರ   ವಿವಾಹದ ಭಾವಚಿತ್ರವನ್ನು ಕ೦ಡು...!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ, ನಿಮ್ಮ ಚುಟುಕುಗಳು ಚೆನ್ನಾಗಿವೆ. ನಿಮ್ಮದೇ ಧಾಟಿಯಲ್ಲಿರುವ ಹಳೆಯ ಚುಟುಕವೊಂದು ಜ್ಞಾಪಕಕ್ಕೆ ಬಂತು. ಎದುರು ಮನೆಯಾತನನ್ನು ತನ್ನಾಕೆ ನೋಡಿ ನಕ್ಕಾಗ ಹಲ್ಲು ಮಸೆದ, ಎದುರು ಮನೆಯವನ ಹೆಂಡತಿ ತನ್ನನ್ನು ನೋಡಿ ನಕ್ಕಾಗ ಹಲ್ಲು ಕಿಸಿದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರೇ... ನಿಮ್ಮ ಚುಟುಕು ಸಕತ್ತಾಗಿ ಪ್ರಾಸಬಧ್ಧವಾಗಿದೆ.. ಮಸೆಯುವುದು ಮತ್ತು ಕಿಸಿಯುವುದು!! ಹಹಹಹ.... ಎದುರು ಮನೆ ಮೀನಾ!!! ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಎಲ್ಲ ಚುಟುಕುಗಳು ಚೆನ್ನಾಗೆವೆ ... ಜೀವನದ ಹಲವು ಮಜಲುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.. ಪಾರ್ಥರೇ.. ವಾಸ್ತವ ಪ್ರತಿಬಿ೦ಬಿಸುವತ್ತ ಇತ್ತೀಚೆಗೆ ಏಕೋ ಹೆಚ್ಚು ಹೆಚ್ಚು ಮನಸ್ಸು ಕಾರ್ಯೋನ್ಮುಖವಾಗುತ್ತಿದೆ! ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಲ್ಕು ನೆಗಟಿವ್ ಭಾವನೆ ಕವನಗಳನ್ನು ಓದಿ ಬೇಸರಿಸಿಕೊಂಡು ಒಂದು ಪಾಸಿಟಿವ್ ಓದಿದ ಮೇಲೆ ಮನಸ್ಸು ಉಲ್ಲಾಸಗೊಂಡಿತು ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+೧ ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು +೧ ಕೊಟ್ಟಿರೆ೦ದರೆ ಮುಗಿಯಿತು! ಖುಷಿಯಾಗಿದೆ ಅ೦ತಾಯ್ತು.. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಗಣೇಶಣ್ಣ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೇ ಉಲ್ಲಾಸಗೊ೦ಡಿರೆ೦ದರೆ ನನಗಿನ್ನೇನು ಬೇಕು ಭಲ್ಲೇಜಿ? ವಿಜಯ ಕರ್ನಾಟಕದಲ್ಲಿ “ಅಕ್ಕ“ಳ ಬಗ್ಗೆ ಪ್ರಕಟವಾದ ಎರಡೂ ಲೇಖನಗಳೂ ಸೊಗಸಾಗಿದ್ದವು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದ್ಹನ್ಯವಾದಗಳು ನಾವಡರೇ :‍)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಎಲ್ಲ ಚೆನ್ನಾಗಿದೆ. ಕೊನೆಯದ೦ತೂ ಮಸ್ತ್..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೂ ಇತ್ತೀಚೆಗೆ ಹೆಚ್ಚೆಚ್ಚು ವಿಭಿನ್ನ ಬರಹಗಳೊ೦ದಿಗೆ ಸ೦ಪದದಲ್ಲಿ ಕಾಣಿಸಿಕೊಳ್ಳುತ್ತಿದ್ದೀರಿ! ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಜಯ೦ತರೇ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾವ್!! ನಾವಡರೇ, ಸೊಗಸಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ವಾವ್!! ಎ೦ದಿರೆ೦ದರೆ ನಾನ೦ತೂ ಹುರ್ರೇ... ಹುರ್ರೇ.. ಎ೦ದು ಕುಣಿಯುವುದೊ೦ದೇ ಬಾಕಿ ನಾಗರಾಜರೇ.. ನೀವು ನನ್ನ ಚುಟುಕುಗಳಿ೦ದ ಸ೦ತಸಪಟ್ಟಿದ್ದು ನನಗೆ ಸ೦ತಸ ನೀಡಿದೆ. ಧನ್ಯವಾದಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆ ಎಸ್ ರಾಘವೇಂದ್ರ ನಾವಡರಿಗೆ ವಂದನೆಗಳು ' ವಿವಾಹದ ಭಾವ ಚಿತ್ರ ' ಎಲ್ಲ ಐದೂ ಸೂಪರ್ಬ ಬರಹಗಳು ಅದರಲ್ಲೂ ಅಜ್ಜ ಅಜ್ಜಿಯರ ವಿವಾಹದ ಭಾವ ಚಿತ್ರ ಕುರಿತ ದಾಖಲೆ ಹೃದಯ ತಟ್ಟಿತು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡರೆ, ಚಿಕ್ಕದಾಗಿ ಚೊಕ್ಕವಾದ ಪ್ರಸ್ತುತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕತ್ತಲೆಯನ್ನು ಇಷ್ಟಪಟ್ಟವನು ಕೊನೆಗೂ ಬೆಳಕಿಗಾಗಿ ಹಾತೊರೆದ ! ಫಕ್ಕನೆ ಕಣ್ಮು೦ದೆ ಬೆಳಗಿದ ಬೆಳಕನ್ನು ಕ೦ಡು ಶಾಶ್ವತನಾಗಿ ಕುರುಡನೇ ಆದ!!" ನಾವಡ ಅವ್ರೇ. ಮೊದಲಿಗೆ ಶೀರ್ಶಿಕೆ ಓದಿ ನಾ ನೀವು ಬಹುಶ ನಿಮ್ಮ ಮದುವೆಯ ಭಾವ ಚ್ಹಿತ್ರ ಹಾಕಿರುವಿರಿ ಅಂದುಕೊಂಡಿದ್ದೆ,,!! ಎಲ್ಲ ಸಾಲುಗಳು ಸಖತ್.. ಅದ್ರಲ್ಲು ಕೊನೆಯದು ಸುಪರ್... ಒಳಿತಾಗಲಿ... ನನ್ನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.