ಸಂಕ್ರಾಂತಿಯಂದದರೂ some-ಕ್ರಾಂತಿಯಾಗಲಿ..!!

5

 ಚಳಿಯಲೆಯ ಸಾಗರದಿ ದಿನಮಣಿಯ ಆಗಮನ 
ಸಪ್ತವರ್ಣದ ಕಿರಣ ರಂಗವಲ್ಲಿಯ ಕವನ
ಬಂಗಾರ ಬೆಳಕಿನಲಿ ವಿಜೃಂಭಿಸಿದೆ ಭುವನ
ಶೂನ್ಯಪರ್ವದ ಸಮಯ ಈ ಚಲನವಲನ

ದೀರ್ಘರಾತ್ರಿಗಳುಪರಿ ಕಿರುಹಗಲ ಆಕ್ರಮಣ
ಉತ್ತರಾಯಣ ಜನನ ದಕ್ಷಿಣಾಯಣ ಮರಣ
ಹಳೆ ಸೂರ್ಯ ಹಳೆ ಭೂಮಿ ಹೊಸ ಲಯದ ಭ್ರಮಣ
ಶುಭವ ತರಲೆಲ್ಲರಿಗೆ ಮಕರ ಸಂಕ್ರಮಣ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.