ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!

5

ಓ ಹುಡುಗಿ, ನಾನು ಮೊದಲೇ ನಾಚುಬುರುಕ,

ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?!

ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ

ಗುಂಡಿಗೆಯ ಏರಿಳಿತವ!?

ನಿನ್ನ ಮೊಗವ ದಿಟ್ಟಿಸಿ ನೋಡಿದರೆ,

ಮುಖ ತಿರುಗಿಸಿ ಹೋಗದಿರು ಗೆಳತಿ.

ಚಿಗುರುತ್ತಿರುವ ಎಲೆಯ ಚಿವುಟುವ

ಆಸೆ ನಿನಗದೇಕೆ!?

ಹೊರಚೆಲುವಿಗೆ ಮನ ಸೋಲುವ

ಮೂಳ ಅಂತ ಜನ ಬೈದುಕೊಂಡರೂ

ಚಿಂತೆಯಿಲ್ಲ, ’ಮುಂಗಾರು ಮಳೆ’ಯ

ಗಣೇಶನಂತೆ ಒಳ್ಳೇ ತರದಿ

ಮಾಡುವೆ ಬಾಳ್ವೆಯ!

ಈ ನೇರ, ಸರಳ ಮನದಿಂಗಿತ

ತಿಳಿದು, ಹೇಳದಿದ್ದರೂ ಒಳಭಾವ

ನೀನೇ ಇಣುಕಿ ನೋಡಿ,

ಕಣ್ಣಿನೊಂದಿಗೆ ಕಣ್ಣನೊಮ್ಮೆ

ಬೆಸೆದು, ನಗು ಬೀರಬಾರದೇ?!

ಮಾತಾಡುವ ಧೈರ್ಯ ಮಾಡಿ

ನಾ ಬಂದರೆ, ನಾಚಿ ನೆಲ

ನೋಡುತ್ತ, ಮುಗುಳ್ನಕ್ಕು, ಮೆಲುನುಡಿಯಲಿ

ಸಮ್ಮತಿ ತಿಳಿಸಬಾರದೇ?!

ನನ್ನ ಪುಕ್ಕಲು ಹ್ರುದಯಕ್ಕೆ,

ನೀಡಬಾರದೇ ನಗುವಿನ ಮದ್ದು?!

ಭಯ ನೀಗಿ ಮುನ್ನುಗ್ಗದೇ ಒಲವನೇಕೆ

ಕೊಲ್ಲುವೆ ಹುಟ್ಟುವ ಮೊದಲೇ?!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಂಗನಗೌಡರೆ, ಕವಿತೆ ಚೆನ್ನಾಗಿದೆ. ಅದರಲ್ಲೂ ಈ ಲೈನ್ ನನಗೆ ಬಹಳ ಇಷ್ಟವಾಯಿತು- ಗಣೇಶನಂತೆ ಒಳ್ಳೇ ತರದಿ ಮಾಡುವೆ ಬಾಳ್ವೆಯ! -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಗಣೇಶ್, ನಿಮ್ಮ ಹೆಸರು ಗಣೇಶ ಆಗಿದ್ದಕ್ಕೆ ಆ ಸಾಲು ಇಸ್ಟವಾಗಿದ್ದರೂ ಸರಿಯೇ, ನನ್ನಿ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.