ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ ...!

4
ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಸತಿ-ಸುತರಿಗಾಗಿ ಏನಾದರೂ ಕೂಡಿಡಲೇ ಬೇಕಾಗಿದೆ. ನೀರಿಲ್ಲವೆ೦ದು ಬಾವಿಯನ್ನೇ ಮುಚ್ಚಿಸಲಾಗದು! ತೊಟ್ಟಿಕ್ಕುತ್ತಿರುವ ನಲ್ಲಿಯ ಪೈಪನ್ನು ಶುಧ್ಧೀಕರಿಸಿ ನೀರಿನ ಝರ-ಝರ ಸದ್ದನ್ನು ಕೇಳಬೇಕಿದೆ.. ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಸೋರುತ್ತಿರುವ ಮನೆಯ ಮಾಳಿಗೆಯನ್ನು ಭದ್ರಪಡಿಸಬೇಕಿದೆ... ಹನಿ ನೀರೂ ಒಳಬರದ೦ತೆ ಲೆಪ್ಪ ಹಾಕಬೇಕಿದೆ... ಸದಾ ಸೋರುವುದಾದರೂ ಸದ್ಯಕ್ಕೆ ಸೋರುವುದನ್ನು ತಡೆಗಟ್ಟಲೇ ಬೇಕಿದೆ.. ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಊರುಗೋಲಿನ ಸಹಾಯವಿಲ್ಲದೇ ಸ್ವತ: ನಡೆಯಲು ದಿವ್ಯೌಷಧ ಒ೦ದನ್ನು ಹುಡುಕಬೇಕಿದೆ.. ಮಾಡುವ ಪ್ರಯತ್ನಗಳಿಗೆಲ್ಲಾ ನಿರಾಶೆಯೇ ಕಟ್ಟಿಟ್ಟ ಬುತ್ತಿಯಾದರೂ ಜಯಿಸುವ ದಾರಿಯನ್ನೀಗ ಹುಡುಕಬೇಕಿದೆ... ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ.. ಹತ್ತಾರು ದಾರಿಗಳ ನಡುವೆ ನನ್ನದೇ ಏಕೈಕ ಮಾರ್ಗವೊ೦ದನ್ನು ಕ೦ಡುಕೊಳ್ಳಬೇಕಿದೆ.. ಜಲ್ಲಿಕಲ್ಲುಗಳ ಕಚ್ಚಾರಸ್ತೆಯಲ್ಲಿಯೇ ಹೆಜ್ಜೆಗಳಡಿ ಮಣ್ಣು ಸೇರುತ್ತಿರುವ ರಕ್ತದ ಹನಿಗಳನ್ನು ಗಮನಿಸದೇ ನಡೆಯಬೇಕಿದೆ. ಗಮ್ಯವನ್ನು ತಲುಪಬೇಕಿದೆ..
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಹತ್ತಾರು ದಾರಿಗಳ ನಡುವೆ ನನ್ನದೇ ಏಕೈಕ ಮಾರ್ಗವೊ೦ದನ್ನು ಕ೦ಡುಕೊಳ್ಳಬೇಕಿದೆ.. ಜಲ್ಲಿಕಲ್ಲುಗಳ ಕಚ್ಚಾರಸ್ತೆಯಲ್ಲಿಯೇ ಹೆಜ್ಜೆಗಳಡಿ ಮಣ್ಣು ಸೇರುತ್ತಿರುವ ರಕ್ತದ ಹನಿಗಳನ್ನು ಗಮನಿಸದೇ ನಡೆಯಬೇಕಿದೆ. >> ಸಾಲುಗಳು ಸೂಪರ್ !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆ ಸಹಿತ ಪ್ರತಿಕ್ರಿಯೆಗೆ ಧನ್ಯವಾದಗಳು ಕಾಮತರೇ. ನಿಮ್ಮ ನಿರ೦ತರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರ‌ ಸೊಗಸಾದ ಕವನ‌ ಮೊದಲಿಗೆ, ಅಡ್ಡ ದಾರಿ ಹಿಡಿವುದು ತಪ್ಪು ಎಂದರಿತ ಸದ್ಭಾವನ ಮನಸಿಗರಿಗೆ 'ಕಚ್ಛಾ ರಸ್ತೆ,ರಕುತದ ಹನಿ ವಿಧಿ ಲಿಖಿತ' ಎರಡನೆಯದಾಗಿ, ಕಚ್ಛಾರಸ್ತೆಯಲ್ಲೇ ಹಲವಾರು ಜನ ನೆಡೆದಾಗ ಅದೂ ಸಮತಟ್ಟಾಗುತ್ತದೆ ಅಲ್ಲವೇ? ಅದನ್ನು 'ಕಚ್ಛಾ' ಎಂಬ ಅಳುಕು ಮನದಿಂದ ಹೋಗಬೇಕು ಅಷ್ಟೇ. ಮೂರನೆಯದಾಗಿ, ಕಷ್ಟವೆಂದರಿತೂ ಅದೇ ಹಾದಿಯಲ್ಲಿ ಸಾಗುವ ಮನದ ನಿಮಗೆ ಶುಭವಾಗಲಿ ಕೊನೆಯದಾಗಿ ಬುದ್ದ ಅಥವಾ ಬುಧ್ಧ ಯಾವುದು ಸರಿ ಎಂದು ತಿಳಿಸಿ .... ನನ್ ಬುದ್ದೀಗೆ ಹೊಳೀತಿಲ್ಲ :‍)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆ ಸಹಿತ ಪ್ರತಿಕ್ರಿಯೆಗೆ ಧನ್ಯವಾದಗಳು ಭಲ್ಲೇಜಿ. “ಬುದ್ಧ“ ನೇ ಸರಿ.. ನನ್ನದೇ ತಪ್ಪು ಟೈಪಿಸುವಿಕೆ. ಕ್ಷಮಿಸುವಿರಾಗಿ ನ೦ಬಿರುತ್ತೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸದ್ಯಕ್ಕಿಲ್ಲ ಬುಧ್ಧನಾಗುವ ಇಚ್ಛೆ.. ಹತ್ತಾರು ದಾರಿಗಳ ನಡುವೆ ನನ್ನದೇ ಏಕೈಕ ಮಾರ್ಗವೊ೦ದನ್ನು ಕ೦ಡುಕೊಳ್ಳಬೇಕಿದೆ.. ಹತ್ತಾರು ದಾರಿಗಳ ನಡುವೆ ಬುದ್ದನಾಗುವುದು ಒಂದು ದಾರಿಯೆ ಆಗಿದ್ದೀತು ಅಥವ ನೀವು ನಿಮ್ಮದೆಂದು ಹಿಡಿದ ಹಾದಿಯು ಬುದ್ದನಡೆಗೆ ಕೊಂಡೋಯ್ದೀತು ನನಗನ್ನಿಸುತ್ತದೆ ಕಡೆಗೆ ಪ್ರತಿಯೊಬ್ಬರ ಹಾದಿಯು ಬುದ್ದನ ಕಡೆಗೆ ಸಾಗಿದೆಯುಂದು ... ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಯ ಮನಸ್ಸಿನೊಳಗೆ ಹೊಕ್ಕು, ಆ೦ತರ್ಯವನ್ನು ಅರಿಯುವ ನಿಮ್ಮ ಬುಧ್ಧಿಗಿದೋ ಶರಣು ಪಾರ್ಥರೇ.. ಕವಿಯ ಮನಸ್ಸಿನ ತೊಳಲಾಟವೂ ಅ೦ತಹದ್ದೇ... ಹೋಗಲೋ..ಬಿಡಲೋ.. ಒಮ್ಮೊಮ್ಮೆ ಗಟ್ಟಿ.. ಮಗದೊಮ್ಮೆ ಟೊಳ್ಳು ಮನಸ್ಸು.. ನಿಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಪಾರ್ಥರ ಪ್ರತಿಕ್ರಿಯೆಗೆ ನನ್ನ ಸಹಮತವಿದೆ. ಬುದ್ಧನಾಗ ಹೊರಟರೆ ಜನ ಬುದ್ಧುವೆಂದು ತಿಳಿಯುತ್ತಾರೆ ಬುದ್ಧಿವಂತರೆನಿಸಿಕೊಂಡ ಜನ ಅದಕ್ಕೆ ಬಹುಶ: ಈ ಜಿಗ್‍ನಾಸೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಸಿಕೆ ಚೆನ್ನಾಗಿದೆ, ನಾವಡರೇ. ಬದ್ಧತೆಯ ಜೀವನ, ಶುದ್ಧ ಜೀವನ ನಡೆಸುವವರೂ ಬುದ್ಧರೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವನು ಮಾಡುತ್ತಿದ್ದು ಒಳಗೆ "ಬುದ್ದ" ನಾಗಿರಬೇಕು ಅದೇ ಸಾಧನೆ. ಸುಂದರವಾದ ಕವನ ರಾಘವೇಂದ್ರ ನಾವಡರೇ ....ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬುದ್ಧನಾಗಬೇಕು ಏಕೆ? ಬುದ್ಧನಂತಾಗಬೇಕು ಏಕೆ? ಲೋಕ ಕಲ್ಯಾಣ ಮಾಡಹೋಗಿ ಜನರ ದುರ್ಬುದ್ಧಿಗೆ ನೆಪವಾಗುವ ಬದಲು ಬದುಕಲಾರೆನೆ ನಾನು ನನ್ನಷ್ಟಕ್ಕೆಯೆ ಆನಂದವನೇ ಅನುಭವಿಸುವ ಇಚ್ಚೆಯಿದ್ದಲ್ಲಿ ಇರದೇ ಅದು ಮನದೊಳಗೆ ಹುಡುಕಲು ಇನ್ನೊಂದು ಕನ್ನಡಿ ಬೇಕೆ!!!??? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಆನಂದವನೇ ಅನುಭವಿಸುವ ಇಚ್ಚೆಯಿದ್ದಲ್ಲಿ ಇರದೇ ಅದು ಮನದೊಳಗೆ ಆಚಾರ್ಯರೆ ಮನದೊಳಗೆ ಆನಂದವನ್ನು ಶಾಂತಿಯನ್ನು ಅರಸುವ ಪರಿಯನ್ನೆ ಅಲ್ಲವೆ ಬುದ್ದನಡಗೆ ನಡೆವ ದಾರಿಯೆಂದು ಅನ್ನುವುದು ಮನದಳಗಿನ ತುಮಲವನ್ನು ಹೊರಗಿನ ಪ್ರಪಂಚವೆಂಬ ಕನ್ನಡಿಯಲ್ಲಿ ಕಾಣುವೆವೆ ಎಂಬುದು ನಮ್ಮ ಜೀವನದ ಪರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ಕವಿತೆ ಸೂಪರ್. ಇಂತಹ ಅಡತಡೆಗಳೇ ಬುದ್ಧನಾಗುವುದಕ್ಕೆ ಅವಕಾಶ ಕಲ್ಪಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.