ಸರಿ, ಇವೆಲ್ಲ ಹಳೆ ಜೋಕುಗಳು ...

ಸರಿ, ಇವೆಲ್ಲ ಹಳೆ ಜೋಕುಗಳು ...

ಸರಿ, ಇವೆಲ್ಲ ಹಳೆ ಜೋಕುಗಳು ... ಆದ್ರೇನೀಗ? ಇನ್ನೊಮ್ಮೆ ಓದಿ ನಗಬಾರದೇಕೆ?

 

೧)ಬೆಕ್ಕಿನ ಜಾತಿಗೆ ಸೇರಿದ ನಾಲ್ಕು ಪ್ರಾಣಿಗಳನ್ನು ಹೆಸರಿಸಿ.

ಶಿವರಾಮ: ತಾಯಿ ಬೆಕ್ಕು, ತಂದೆ ಬೆಕ್ಕು, ಮಗ ಬೆಕ್ಕು ಮತ್ತು ಮಗಳು ಬೆಕ್ಕು

 

೨)ಆರು ಕಾಡು ಪ್ರಾಣಿಗಳನ್ನು ಹೆಸರಿಸಿ.

ಶಿವರಾಮ: ನಾಲ್ಕು ಹುಲಿಗಳು, ಎರಡು ಸಿಂಹಗಳು       

 

೩)ಟೀಚರ್:ಹಿಂದಿನ ಹುಟ್ಟುಹಬ್ಬದ ದಿನ ನಿಂಗೆ ಎಷ್ಟು ವಯಸ್ಸಾಗಿತ್ತು?

ಶಿವರಾಮ:೭ ವರ್ಷ 

ಟೀಚರ್:ಮುಂದಿನ ಹುಟ್ಟುಹಬ್ಬದ ದಿನ ನಿಂಗೆ ಎಷ್ಟು ವಯಸ್ಸಾಗುತ್ತೆ?

ಶಿವರಾಮ:೯ ವರ್ಷ

ಟೀಚರ್: ಲೋ... ಹಾಗಾಗೋಕೆ ಸಾಧ್ಯವೇ ಇಲ್ಲ. 

ಶಿವರಾಮ:ನಿಜವಾಗಲೂ, ಟೀಚರ್. ನಂಗಿವತ್ತು ಎಂಟು ವರ್ಷ 

 

೪)ಮೂರಕ್ಕೆ ಮೂರಕ್ಕೆ ಮೂರರಿಂದ ಗುಣಿಸಿದರೆ ಒಂಬತ್ತು. ಒಂಭತ್ತಕ್ಕೆ ಒಂಭತ್ತರಿಂದ ಗುಣಿಸಿದರೆ ಎಂಭತ್ತೊಂದು. ಈಗ ಹೇಳಿ, ಎಂಭತ್ತೊಂದಕ್ಕೆ ಎಂಭತ್ತೊಂದರಿಂದ  ಗುಣಿಸಿದರೆ?

ಶಿವರಾಮ:ಇದು ಅನ್ಯಾಯ ಟೀಚರ್. ಸುಲಭದ್ದೆಲ್ಲಾ ನೀವೇ ಇಟ್ಕೊತೀರ. ನಮಗೆ ಕಷ್ಟದ ಪ್ರಶ್ನೆ ಕೇಳ್ತೀರಾ.

 

೫)ಮೊದಲ ದಿನ ಶಾಲೆಯಿಂದ ವಾಪಸ್ ಬಂದಾಗ ಶಿವರಾಮನನ್ನು ತಾಯಿ ಕೇಳಿದರು: ಶಾಲೆಯಲ್ಲಿ ಮೊದಲ ದಿನ ಹೇಗಿತ್ತು, ಮಗು?    

ಶಿವರಾಮ: ಮೊದಲ ದಿನ? ಅಂದರೆ ನಾನು ನಾಳೆನೂ ಶಾಲೆಗೇ ಹೋಗಬೇಕಾ?

 

೬)ಅದೊಂದು ದೊಡ್ಡ ಶಾಲೆ. ಈ ಸಲ ಸುಮಾರು ಜನ ಹೊಸ ಶಿಕ್ಷಕರು ಸೇರಿದ್ದರು. ಯಾವುದೋ ಒಂದು ತರಗತಿಯಿಂದ ಸಿಕ್ಕಾಪಟ್ಟೆ ಗದ್ದಲ ಕೇಳಿ ಬರ್ತಾ ಇತ್ತು. ಹೆಡ್ ಮಾಸ್ತರ್ ಬಂದರು. ಉಳಿದವರಿಗಿಂತ ಸ್ವಲ್ಪ ಎತ್ತರಕ್ಕಿದ್ದ ಒಬ್ಬ ಹುಡುಗ ಎಲ್ಲರಿಗಿಂತ ಹಚ್ಚು ಗಲಾಟೆ ಮಾಡುತ್ತಿದ್ದಂತೆ ಅವರಿಗೆ ಕಂಡಿತು. ಅವನ ಕಾಲರ ಹಿಡಿದು ಎಳೆದುಕೊಂಡು ಹೋಗಿ ತರಗತಿಯ ಹೊರಗಿನ ಬಯಲಲ್ಲಿ ಬಿಟ್ಟು, ಅಲ್ಲೇ ನಿಂತಿರುವನೆ ಹೇಳಿ  ಮತ್ತೆ ತರಗತಿಯ ಒಳಗೆ ಬಂದರು.

ಹೆಡ್ ಮಾಸ್ತರ್: ಎಲ್ರೋ ನಿಮ್ಮ ಮಾಸ್ತರರು?

ಶಿವರಾಮ: ಸರ್, ನೀವೇ ಅವರನ್ನು ಹೊರಗೆ ನಿಲ್ಸಿ ಬಂದ್ರಲ್ಲ?    

 

 

ಕೆಲವಕ್ಕೆ ಆಧಾರ:

696 Silly School Jokes & Riddles By Joseph Rosenbloom

Rating
No votes yet

Comments