ಸಲ್ಲದ ಬಿಂಕವೇಕೆ

0

     ಜಗದ ಪೋಷಕ ಹಗಲದೀವಿಗೆ ದಿನಕರಗಿಲ್ಲ ಕಿಂಚಿತಹಂಕಾರ

    ತಂಬೆಳಕನಿತ್ತು ತಂಪೆರೆವಾ ತಂಗದಿರಗಿಲ್ಲ ಒಂದಿನಿತಹಂಕಾರ

    ತಂನೆಳಲು, ತಣಿವಣ್ಣು, ಹೂವನೀವ ವೃಕ್ಷಕ್ಕಿಲ್ಲಿಂತಿಷ್ಟಹಂಕಾರ

     ನಿನಗೇಕೆ ಬೇಕು ಸಲ್ಲದ ಬಿಂಕ ಬಿಗುಮಾನ - ನನ ಕಂದ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿರಿಯರೇ ನಿಮ್ಮ ಸಲ್ಲದ ಬಿಂಕವೇಕೆ? ಎರಡು ಸಲ ಸೇರ್ಸಿದ್ದೀರ, http://sampada.net/a... --------------------------------------------------------------------------------------------------------------------------------- ಒಂದಕ್ಕೆ ಆರು ಇನ್ನೊಂದಕ್ಕೆ ೮ ಹಿಟ್ಸ್ ಬಿದ್ದಿದೆ... ಎರಡೂ ಬ್ಲಾಗ್ ಬರಹಗಳೇ... ಶನಿವಾರ, 21 January 2012 - 5:52pm ವಿಧ: ಬ್ಲಾಗ್ ಬರಹ ಹಿಟ್ಸ್: 8 ಸಲ್ಲದ ಬಿಂಕವೇಕೆ ಪದ್ಮ.ಎ ಶನಿವಾರ, 21 January 2012 - 5:51pm ವಿಧ: ಬ್ಲಾಗ್ ಬರಹ ಹಿಟ್ಸ್: 6 ಅದ್ನ ತೆಗೆಯುವ ಬಗೆ ನನಗೂ ಗೊತ್ತಿಲ್ಲ, ಒಂದನ್ನ ನೀವು ಎಡಿಟ್ ಮಾಡಿ ಬೇರೆ ಬರಹ ಸೇರಿಸಬಹುದು ಅನ್ಸುತ್ತೆ... ------------------------------------------------------------------------------------------------------------------------------------ ಇವತ್ತು ಸಂಪದ ಲೋಡ್ ಆಗಲು ತಡ ಅದಾಗ ಆ ತರಹ ಆಗಿರಬೇಕು ಅನ್ಸುತ್ತೆ ... ನಿಮ್ಮ ಕವನದ ಬಗ್ಗೆ; ಒಳ್ಳೆಯ ಕವನ.. ಅರ್ಥಪೂರ್ಣವಾಗಿದೆ... ನಾಲ್ಕೇ ಸಾಲುಗಳಲ್ಲಿ ಒಳ್ಳೆಯ ಮಾತು ಹೇಳಿದೀರ... ಈ ವಾಕ್ಯ ('ತಂಗದಿರಗಿಲ್ಲ')ನನಗೆ ಅರ್ಥ ಆಗಲಿಲ್ಲ, -------------------------------------------- ತಂಬೆಳಕನಿತ್ತು ತಂಪೆರೆವಾ 'ತಂಗದಿರಗಿಲ್ಲ' ----------------------------------------------------- ನಾ ಚಂದಿರ-ಅಥವಾ ಗಾಳಿ ಅನ್ಕೊಂಡಿರ್ವೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ನೀವು ಹೇಳಿರುವಂತೆ ಎರಡು ಬಾರಿ ಲೋಡ್ ಆಗಿದ್ದು ನನ್ನ ಗಮನಕ್ಕೂ ಬಂತು ತೆಗೆಯುವುದು ಹೇಗೆ ತಿಳಿಯಲಿಲ್ಲ ಸುಮ್ಮನಾದೆ. ನಿಮ್ಮ ನಿರಂತರ ಪ್ರತಿಕ್ರಿಯೆಗೆ ಧನ್ಯವಾದಗಳು. ತಂಗದಿರ = ಚಂದ್ರ, ತಂಪಾದ ಕಿರಣಗಳನ್ನು ಹೊಂದಿರುವವನು, (ಬೆಂಗದಿರ= ಸೂರ್ಯ) ಕದಿರ್=ಕಿರಣ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಪ್ತಗಿರಿ ನಿಮ್ಮ ಸಲಹೆ ಚೆನ್ನಾಗಿದೆ ಅನ್ನಿಸಿತು 'ಸಲ್ಲದ ಬಿಂಕವೇಕೆ' ಒಂದನ್ನ ಎಡಿಟ್ ಮಾಡಿ ಬೇರೆ ಬರಹ ಸೇರಿಸಿದ್ದೇನೆ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.