2007 ರಲ್ಲಿ ಎನಗಾದ ಬಾಡಿಗೆ ಬವಣೆ

4

ಬೆಳಗ್ಗೆ 8 ಗಂಟೆ ಮನೆಯ ಬಗಿಲ್ಲು ಬಡಿದ ಸದ್ದಾಯಿತು, ಕಣ್ಣುಜ್ಜುತ್ತ ಬಾಗಿಲು ತೆರೆದೇ ಎದುರುಗಡೆ ಹಳಸಿದ ಮುಖದ ನನ್ನ ಮನೆಯ ಯಜಮಾನಿ ಯಥಾವತ್ ಬಿಕ್ಷುಕಿಯಂತೆ ಬಾಡಿಗೆ ಕೇಳಲು ನಿಂತಿದಳು, ಜೇಬಲ್ಲಿ ಕಾಸಿಲ್ಲದ ಕಾರಣ ಸಬೂಬು ಹೇಳಲು ನಾ ಮುಂದಾದೆ, ಆಂಟಿ ನಿಮಗೆ ಗೊತ್ತಲ್ಲ ನನಗಿನ್ನೂ ಕೆಲಸ ಸಿಕ್ಕಿಲ್ಲ ಬಾಡಿಗೆ ಸ್ವಲ್ಪ ಲೇಟ್ ಆಗಿ ಕೊಡ್ತೀನಿ ಅಡ್ಜಸ್ಟ್ ಮಾಡ್ಕೊಳಿ ಅಂದಿದ್ದೆ ತಡ ಅವಳ ಮೊಗ ಅವಳೇ ಮಾಡಿದ ಹೇಸಿಗೆಯನ್ನು ಅವಳೇ ತಿನ್ದಂತಾಗಿತ್ತು, " ಅದೆಲ್ಲ ಗೊತ್ತಿಲ್ಲ ಕಣಪ್ಪ ಸಂಜೆ ಅಷ್ಟೊತ್ತಿಗೆ ಬಾಡಿಗೆ ತಂದ್ಕೊಟ್ಬಿಡು, ನಾವು ಚೀಟಿ ಗೀಟಿ ಕಟ್ಕೊ ಬಾರದ ಅಂದು ಮುಖ ತಿರುಗಿಸಿ ಹೊರಟಳು ಈ ಸೌಭಾಗ್ಯಕ್ಕೆ ಮದ್ವೆ ಯಾಕೆ ಬೇಕಿತ್ತೋ ಇವಂಗೆ ಎಂದು ಗೊಣಗುತ್ತ" ಅವಳಾಕಡೆ ಹೊರಟಂತೆ ಬಾಗಿಲು ಮುಚ್ಚುತ್ತ ನೆನೆದೆ ಅಂದವಳಾಡಿದ ಮಾತೊಂದ " ನನ್ನ ಮಕ್ಳ ತರಹ ನೀವು, ನಿಮ್ಮ ಕಷ್ಟ ನಂಗೆ ತಿಳಿಯುತ್ತೆ ಅದ್ಕೆ ಬಾಡಿಗೆ ಯಾವಾಗ್ ಬೇಕಾದ್ರೂ ಕೊಡಿ ಅಂದಿದ್ಲು" ಅರೆರೆ ೩೦ ದಿನದಲ್ಲಿ ಎಷ್ಟ್ ಬದಲಾವಣೆ, ಸರಿ ಬಿಡು ದುಡ್ಡು ತಂದು ಇವಳ ಮುಕದ ಮೇಲೆ ಎಸೆದರಾಯಿತು ಎಂದು ನನ್ನಷ್ಟಕ್ಕೆ ನಾನೇ ಸಮಾಧಾನ ಪಟ್ಟು, ಸ್ನಾನಕ್ಕೆ ಹೊರಟೆ. ಸ್ನಾನ ಮಾಡುವಾಗಲು ಅವಳಂದ ಮಾತುಗಳೇ ಗುಯ್ಗುಟ್ಟುತ್ತಿದವು. ಸ್ನಾನ ಮುಗಿಸಿದವನೇ ಬಟ್ಟೆ ಧರಿಸಿ resume ಕೈಲಿ ಹಿಡಿದು ಬರ್ತಿನೆ ಎಂದು ಮಡದಿಗೆ ಹೇಳಿ ಹೊರ ಹೊರಟೆ.

ಪರಿಸ್ತಿತಿ ಅರಿವಿಲ್ಲದ ನನ್ನೀ ಹೊಟ್ಟೆ ಪಿಚುಗುಟ್ಟುತಿತ್ತು, ಆದರು ಹಸಿವನ್ನ ನೊಂದ ಮನಸ್ಸು ನಿಗ್ರಹಿಸುತ್ತಿತು.ಕಾಮಾಕ್ಷಿಪಾಳ್ಯದಿಂದ ಬಸ್ ಸ್ಟಾಪ್ನಲ್ಲಿ ನಿಂತು, ಮುಂದೇನೆಂದು ಯೋಚಿಸುತ್ತಿದೆ ತಕ್ಷಣ ಗೆಳೆಯನ ನೆನಪಾಯ್ತು, ಕ್ಷಣಮಾತ್ರ ಯೋಚಿಸದೆ ಅವನಿಗೆ ಫೋನಾಯಿಸಿದೆ.

ಫೋನ್ ನಲ್ಲಿ

ಹಲೋ: ಮಗ ನಾನು ಕಣೋ,
ಗೆಳೆಯ : ಏನ್ ಹೇಳೋ ಮಗ.
ನಾನು : ಮಗ ೧೫೦೦ ಬೇಕಾಗಿತ್ತು ಕಣೋ ಬಾಡಿಗೆ ಕಟ್ಟಕೆ
ಗೆಳೆಯ : ನನ್ ಹತ್ರ ಅಷ್ಟ್ ದುಡ್ಡಿಲ್ಲ ಕಣೋ, ಸರಿ ಒಂದ್ ಕೆಲಸ ಮಾಡು ಸೀದಾ ಸೋಲ್ದೆವನ ಹಳ್ಳಿ ಗೆ ಬಾ ನೋಡನ
ನಾನು : ಸರಿ ಮಗ ಸಂಜೆ ಅಷ್ತಲ್ಲಿ ಬರ್ತೀನಿ.
ಫ್ರೆಂಡ್ ಜೊತೆ ಮಾತಾಡಿದ ಮೇಲೆ ಸ್ವಲ್ಪ ನಿರಾಳವೆನಿಸಿದ್ರು, ಮನಸ್ಸಿಗೆ ಸಮಾಧಾನವಾಗಲಿಲ್ಲ. ಸರಿ ನನ್ನಣ್ಣನಿಗೆ ಫೋನಾಯಿಸಿದೆ.
ಹಲೋ: ನಾನು ಕಣೋ ಹರೀಶ.
ನನ್ನಣ್ಣ : ಹೇಳೋ
ನಾನು : ಏನಿಲ್ಲ ಒಂಸ್ವಲ್ಪ ಕಾಸ್ ಬೇಕಾಗಿತ್ತು.
ನನ್ನಣ್ಣ: ಯಾತಕ್ಕೆ.
ನಾನು : ಬಾಡಿಗೆ ಕಟ್ಟಕೆ ಕಣೋ.
ನನ್ನಣ್ಣ ; ನನ್ ಹತ್ರನೂ ಕಾಸಿಲ್ಲ ಕಣೋ ನೀನೆ 3000 ಸಾಲ ಮಾಡಿ ನಂಗೊಂದ್ ೧೦೦೦ ಕೊಡೊ.
ನಾನು : ಅದೇನೋ ಹೇಳ್ತಾರಲ್ಲ ಆಯ್ಕೊಂಡ್ ತಿನ್ನೋನ್ನ ***************.
ನನ್ನಣ್ಣ : ಸರಿ ಕಣ್ಲ ಫೋನ್ ಇಡ್ತೀನಿ.
ನಾನು: ಸರಿ ಸರ್.

ಫೋನ್ ಕಟ್ ಆದ ನಂತರ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು, ಇನ್ನೇನು ಮಾಡುವುದೆಂದು ಯೋಚಿಸಿ ಸಾಕಾಗಿ ಬದಿಯಲ್ಲಿದ ಪಾನ್ ಬೀಡ ಶಾಪ್ಗೆ ತೆರಳಿ ಒಂದು ಸಿಗೆರಟ್ ಹೊತ್ತಿಸಿದೆ, ನಂತರ ಕಾಸು ಕೊಡಲು ಜೇಬು ತಡಕಾಡಿದರೆ ದೊರೆತದ್ದು ೪ ರುಪಾಯಿ! ೨.೫೦ ಕೊಟ್ಟು ಸಿಗರೇಟ್ನವನಿಂದ ಋಣಮುಕ್ತನಾದೆ. ಉಳಿದ ೧.೫೦ ಯನ್ನು ಜೇಬಲ್ಲಿ ಭದ್ರಪಡಿಸಿ, ಬಸ್ ಹತ್ತಿ ಗೆಳೆಯನಿರುವಲ್ಲಿಗೆ ಹೊರಟೆ.

ಸರಿ ಸುಮಾರು ಮಧ್ಯಾನ್ಹ ೨.೩೦ ಕ್ಕೆ ಸೋಲದೆವನ ಹಳ್ಳಿ ತಲುಪಿ "ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ" ಯಾ ಮುಂದಿನ ಗೇಟ್ನ ಬಳಿ ಕುಳಿತೆ, ಹೊಟ್ಟೆ ಚುರುಗುಟ್ಟುತ್ತಿತ್ತು ಸರಿ ಒಂದು ಬನ್ನಾದರೂ ತಿನ್ನೋಣವೆಂದು ಅಲ್ಲೇ ಇದ್ದ ಅಂಗಡಿಗೆ ಹೋಗಿ ಬನ್ನೆಷ್ಟೆಂದು ಕೇಳಿದೆ ಅಂಗಡಿಯಾತ ೨.೫೦ ಎಂದ ನನ್ನ ಬಳಿ ರೊಕ್ಕ ಕಡಿಮೆ ಆದ್ದರಿಂದ ವಾಪಾಸ್ ಬಂದು ಸುಮ್ಮನೆ ಕುಳಿತೆ, ೩.೩೦ ಕ್ಕೆ ನನ್ನ ಗೆಳೆಯ ಬಂದವನೇ ಕೇಳಿದ ಊಟ ಆಯ್ತಾ?, ನಾನು ಇಲ್ಲ ಎಂದು ಕೊಲೆ ಬಸವನಂತೆ ತಲೆಯಲ್ಲಾಡಿಸಿದೆ, ನಂತರ ಅಲ್ಲೇ ಅವರ ಕಾಲೇಜ್ ಬಳಿಯ ಹೋಟೆಲಲ್ಲಿ ಊಟಕ್ಕೆ ಕುಳಿತೆವು, ನನ್ನ ಪರಿಚಯಿಸುತ್ತಾ ನನ್ನ ಗಳೆಯ ಅವನ ಸ್ನೇಹಿತರೊಟ್ಟಿಗೆ ಹೇಳಿದ, " ಮಗ ನನ್ನ ಚಡ್ಡಿ ದೋಸ್ತ್ ಹೇಳ್ತಿದ್ನಲ್ಲ recent ಆಗಿ ಲವ್ maariage ಆದ ಅಂತ ಅವ್ನೆ ಇವ್ನು" ಎಲ್ಲರೂ ಕಾಂಗ್ರತ್ಸ್ ಹೇಳಿದ್ದೆ ಹೇಳಿದ್ದು, ಆದ್ರೆ ನನ್ನ ಕಿಸೆ ಹತ್ತಿ ಉರಿತಿದ್ನ ಯಾರು ಗಮನಿಸಲಿಲ್ಲ, ಸರಿ ಊಟ ಆಯ್ತು, ಎಲ್ಲರೂ ಹೋಟೆಲ್ನಿಂದ ಹೊರಬಂದೆವು ( ನನ್ನ ಗೆಳೆಯನೆ ಬಿಲ್ ಕೊಟ್ಟ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ) ರಸ್ತೆ ಬದಿಯ ಟೀ ಅಂಗಡಿಯ ಬಳಿ ಕುಳಿತು ಸಿಗೆರಟ್ ಹೊತ್ತಿಸಿ ವಿಷಯ ಪ್ರಸ್ತಾಪಿಸಿದ, ಕಡ್ಡಿ ( ನನ್ನ ಅಡ್ಡ ಹೆಸರು) ನನ್ ಹತ್ರ ಇರೋದೇ ೧೦೦೦ ರುಪಾಯಿ, ೫೦೦ ರುಪಾಯಿ ಹೇಗಾದರು ಅಡ್ಜಸ್ಟ್ ಮಾಡ್ಕೊಳೋ ಅಂದ, ಸರಿ ಅದ್ನ ಒಪ್ಪಿ ೧೦೦೦ ರು ತೆಗೆದು ಕೊಂಡೆ ( ಹಣ ಪಡೆವಾಗ ಎಷ್ಟು ನಾಚಿಕೆಯಗುತ್ತಿತ್ತು. ಏಕೆಂದರೆ ಅವನ ಖರ್ಚಿನ ಹಣವನ್ನ ನಾನು ತೆಗೆದುಕೊಂಡಿದ್ದೆ), ಸ್ವಲ್ಪ ಸಮಯ ಅಲ್ಲೇ ಕಳೆದು, ಬಸ್ ಹತ್ತಿ ಉಳಿದ ೫೦೦ ನ್ನು ಹೇಗೆ ಹೊಂದಿಸುವುದೆಂದು ಆಲೋಚಿಸುತ್ತ ಸಂಜೆ 7.೦೦ ಗೆ ಕಾಮಾಕ್ಷಿಪಾಳ್ಯ ತಲುಪಿದೆ.
ಯೋಚನೆಯಲ್ಲಿ ಕಾಮಾಕ್ಷಿಪಾಳ್ಯ ತಲುಪಿದವನೇ,೫೦೦ನ್ನು ಸಂಪಾದಿಸುವುದು ಹೇಗೆ ಎಂದು ಚಿಂತಾಕ್ರಾಂತನಾದೆ, ಕೊನೆಗೆ ಏನೂ ತೋಚದೆ, ಮನೆಗೆ ಮರಳಿ ನನ್ನ ಹೆಂಡತಿಯ ಬಳಿ ಇದ್ದ ೩೦೦ ಪಡೆದು ಯಜಮಾನಿಯನ್ನ ಹೊರಕರೆದು ಅವಳಿಗೆ ೧೩೦೦ ರುಪಾಯಿ ಕೊಟ್ಟು ಉಳಿದಿದ್ದನ ಮುಂದಿನ ಬಾಡಿಗೆಯಲ್ಲಿ ಸೇರಿಸಿ ಕೊಡುತ್ತೇನೆಂದು ಹೇಳಿ, ಅವಳು ಹೇಳಿದ ಕಣಿ ಕೇಳಿ.
ಪೈಸ ಬಾಪ್ ಬನ್ಗಯಾ ರೆ

ಪೈಸ ಭಾಯಿ ಬಂಗಯ ರೆ

ಸಬ್ ಪೈಸಾಕ ದುನಿಯಾ ರೆ

ಸಬ್ ಪೈಸಾಕ ದುನಿಯಾ,  ಎಂದೆಂದುಕೊಳ್ಳುತ್ತಾ ಮನೆ ಹೊಕ್ಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನನ್ನ ಮಕ್ಳ ತರಹ ನೀವು, ನಿಮ್ಮ ಕಷ್ಟ ನಂಗೆ ತಿಳಿಯುತ್ತೆ ಅದ್ಕೆ ಬಾಡಿಗೆ ಯಾವಾಗ್ ಬೇಕಾದ್ರೂ ಕೊಡಿ ಅಂದಿದ್ಲು" ಅದೇನೋ ಹೇಳ್ತಾರಲ್ಲ ಆಯ್ಕೊಂಡ್ ತಿನ್ನೋನ್ನ ***************. :((( ಎಲ್ಲರೂ ಕಾಂಗ್ರತ್ಸ್ ಹೇಳಿದ್ದೆ ಹೇಳಿದ್ದು, ಆದ್ರೆ ನನ್ನ ಕಿಸೆ ಹತ್ತಿ ಉರಿತಿದ್ನ ಯಾರು ಗಮನಿಸಲಿಲ್ಲ, :())) ಪೈಸ ಬಾಪ್ ಬನ್ಗಯಾ ರೆ ಪೈಸ ಭಾಯಿ ಬಂಗಯ ರೆ ಸಬ್ ಪೈಸಾಕ ದುನಿಯಾ ರೆ ಸಬ್ ಪೈಸಾಕ ದುನಿಯಾ, --------------------------------------- ಹರೀಶ್ ಅವ್ರೆ- ನಿಮ್ಮ ಕಥೆ ಕೇಳಿ ವ್ಯಥೆ ಆಯ್ತು, ಮನ ಪೇಚಾಡಿತು, ನೀವ್ ಬರೆದದ್ದನ್ನೆಲ್ಲ ಕಲ್ಪ್ಸಿಕೊಂಡೇ ಓದಿದೆ, ಹಲ ಸಾಲುಗಳು ನಗೆ ಬಾರಿಸಿದವು... ಕೆಲವು ಮನುಷ್ಯನ ನೈಜ ಮುಖ ದರ್ಶನ ಮಾಡಿಸಿದವು.... ಹಣ ಮನುಷ್ಯನ ಸ್ವಭಾವವನ್ನೇ ಬದಲಾಯಿಸುವುದು.. ನಿಜವೇ... ಸಂಶಯವೇ ಇಲ್ಲ.... ಆದರೂ ನೀವ್ ಅದೆಲ್ಲ ಅಡೆ -ತಡೆ ದಾಟಿ ಈಗ ಸುಖವಾಗಿದ್ದೀರಲ್ಲ.... ಸುಖ ದುಖ ನೋವು ನಲಿವು ಎಲ್ಲವನ್ನು ಇಸ್ತು ಚಿಕ್ಕ ವಯಸಲ್ಲೇ ಭಾರೀ ಅನುಭವವನ್ಣ ಪಡೆದಿದ್ದೀರ, ಏನೇ ಆದರೂ ಬಂದ ದಾರಿ ಮಾರೆಬಾರದಂತೆ, ನಿಮ್ಮನ್ನು ನೋಡಿ ಎಲ್ಲಿ ತಮ್ಮನ್ನು ಸಹಾಯ ಮಾಡಿ ಕೇಳುತ್ತಾರೋ ಅಂತ ತಪ್ಪಿಸಿಕೊಂಡವರೂ, ಸಿಕ್ಕಿದರೂ ಮುಖ ತಿರುಗಿಸಿಕೊಂಡು ಹೋದವರಿಗೆ ಎಲ್ಲರಿಗೂ ನೀವ್ ಏನು ಅಂತ ತೋರಿಸುವ ಕಾಲ ಬಹು ದೂರ ಇಲ್ಲ, ನಿಮಗೆ ನನ್ ಶುಭ ಹಾರೈಕೆಗಳು ಯಾವತ್ತೂ ಇರುತ್ತವೆ... ಅಂದ್ ಹಾಗೆ ನಿಮ್ಮವರು ನಿಮ್ಮ 'ಸಿಗರೇಟ್ ಚಟ' ಬಿಡಿಸುವ ಪ್ರಯತ್ನ ಮಾಡಲೇ ಇಲವೇ!! ಬಿಟ್ಟು ಬಿಡಿ...... ಶುಭವಾಗಲಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಂದ ದಾರಿ ಮರೆಯಬಾರದೆಂದೇ ತೆನಾಲಿ ರಾಮನ ತರಹ ನನ್ನಾವೆದನ ಸಂಗತಿಗಳನ್ನ ಅಂದಂದೇ ದಿನಚರಿಯೊಂದರಲ್ಲಿ ನಮೂದಿಸಿದ್ದೇನೆ. ನನ್ನ ಸಿಗೆರಟ್ ಚಟಕ್ಕೆ, ನನ್ನ ಹೆಂಡತಿಯೇ ಮೂಲ ಕಾರಣ (ಅವಳೋಡನಾಟದ ಸಮಯದಲ್ಲಿ Possessive ಆಗಿದ್ದ ನಾನು ಅನಿರೀಕ್ಷಿತ ಸಮಯದಲ್ಲಿ ನನ್ನನು ನಾನು ಪ್ರಾಮಾಣಿಕ ಎಂದು ನನ್ನ ಗೆಳೆಯರಿಗೆ ಸಾಬಿತುಪಡಿಸಬೇಕಾದ ಪ್ರಸಂಗದಲ್ಲಿ ಸಿಗೆರಟ್ ಸೇದಿದೆ, ನಂತರ ಅದು ಚಟವಾಯಿತು).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.