ಅವನಿರುವನೇ

0

ಅವನಳಿವ ಕೆಲವರು, ಪೂಜಿಪರನೇಕರು.

ಸೋತು ತೆಗಳುವರು, ಭಜಿಸುವರು ಜಯದಿ |

ನನ್ನೆ ನಾ ತಿಳಿದಿಲ್ಲ ಸವೆಸಿಷ್ಟು ಬಾಳ,

ನಾ ಏನ ಹೇಳಲಿ ದೇವನ ಪಂಡಿತಪುತ್ರ ||

-- ದೇವರ ಇರುವಿಕೆಯ ಬಗ್ಗೆ..ಸಮಾಜದಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ...ಕೆಲವರು ಅವನಿಲ್ಲವೆಂದೂ....ಕೆಲವರು ಇದ್ದಾನೆಂದೂ..ವಾದಿಸುತ್ತಾರೆ...ಅವರಿಗೆಲ್ಲಾ ನಾ ಹೇಳುವುದಿಷ್ತ್ಟೆ..ನಾ ಯಾರೆಂಬುದೇ ಇನ್ನೂ ನಾ ಅರಿತಿಲ್ಲಾ..ದೇವರನ್ನು ಏನೆಂದು ಹೇಳಲಿ....ಇನ್ನೊಂದು ರೀತಿಯಲ್ಲಿ....ನಾನು ಯಾರೆಂದು ತಿಳಿದರೆ ದೇವನಾರೆಂದು ತಿಳಿದಂತೆಯೇ....

Taxonomy upgrade extras: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಂಡಿತ ಪುತ್ರರೆ ನಿಮ್ಮೀ ಕವನಗಳು ಚೆನ್ನಾಗಿ ಮೂಡಿ ಬರುತ್ತಿವೆ. ಹೀಗೆಯೆ ಮುನ್ನಡೆಯಲಿ ನಿಮ್ಮ ಕಾವ್ಯಧಾರೆ.

"ತನ್ನ ತಾನ್ ಅರಿತರೆ ತನ್ನರಿವೆ ಗುರು" ಎಂದು ಹೇಳಿರುವರಲ್ಲವೆ. ಪುರಂದರದಾಸರೂ ಕೂಡ ತಮ್ಮ ಕವನವೊಂದರಲ್ಲಿ ಹೇಳಿದ್ದಾರೆ

ತನ್ನೊಳು ತಾನು ಅರಿತರೊಂದು ಸ್ನಾನ
..
ಸ್ನಾನವ ಮಾಡಿರೊ ಜ್ಞಾನತೀರ್ಥದಲಿ
ನಾನು ನೀನೆಂಬ ಅಹಂಕಾರವನು ಬಿಟ್ಟು

ದೇವರೆಲ್ಲಿದ್ದಾನೆ, ಆತನು ಇರುವನೋ ಇಲ್ಲವೋ, .. ಹೀಗೆ ಅನಾದಿ ಕಾಲದಿಂದಲೂ ನಡೆದು ಬಂದಿರುವುದು ಚರ್ಚೆ. ಜನರು, ತಂತಮ್ಮ ಅನುಕೂಲಕ್ಕೆ ತಕ್ಕಂತೆ ದೇವರನ್ನು ಸೃಷ್ಟಿಸಿಕೊಂಡೊ ಅಥವಾ ಅವನ್ನನು ಇಲ್ಲವಾಗಿಸಿಕೊಂಡೊ ಜೀವಿಸುತ್ತಾ ಬಂದಿದ್ದಾರೆ. ಬಹುಪಾಲು ಮಂದಿಗೆ ದೇವರು ಒಂದು ಚರ್ಚೆಯ ವಸ್ತು. ಅವರೊಳಗೆ ಅವರನ್ನು ಕಾಣಲು ಹೆದರಿ, ದೇವರನ್ನು ಯಾವುದೊ ಒಂದು ಬಾಹ್ಯ ವಸ್ತುವಾಗಿ ಗುರುತಿಸಿಕೊಂಡು ಅವರು ಚರ್ಚಿಸುತ್ತಾರೆ. ಆದರೆ, ಮೊದಲಿಂದಲೂ ಪ್ರಾಜ್ಞರು ಹೇಳಿದಂತೆ, ದೇವರು ಚರ್ಚೆಗೆ ಸಿಲುಕದವ. ಅವನನ್ನು ಕಂಡುಕೊಳ್ಳಬೇಕಾದದ್ದು ಅನುಭವದಿಂದ, ವಾದ-ವಿವಾದದಿಂದಲ್ಲ.

ಈ ಸಂದರ್ಭದಲ್ಲಿ ಡಿ.ವಿ.ಜಿಯವರನ್ನು ಉಲ್ಲೇಖಿಸುತ್ತಾ ನಾನು ಹೇಳುವುದೆಂದರೆ

ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಂತಹವರ ಸಹವಾಸ ಮತ್ತು ಉತ್ತೇಜನದಿಂದಲೇ...ಇಶ್ಟೆಲ್ಲಾ ಬರೆಯುತ್ತಿರುವುದು...ಹಾ ನಮ್ಮ ಬುದ್ಧಿಯವರು(dvg) ಯಾವಾಗಲೋ ಇವನ್ನೆಲ್ಲಾ ಹೇಳಿದ್ದಾರೆ ಬಿಡಿ...ನಮಗೆ ಬರೆಯುವ ಚಟವಲ್ಲವೇ, ಅದಕ್ಕೆ ಬರೆಯುವುದಶ್ಟೆ....ನಾನು ಬರೆಯುತ್ತಿರುವುದು ನನಗೆ ಮಾತ್ರ ಹೊಳೆಯುವುದೆಂಬ ಭ್ರಮೆ ಮಾತ್ರ ನನಗಿಲ್ಲ (ಅನ್ನಿಸುವುದೂ ಬೇಡ)....

ಮತ್ತೊಮ್ಮೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.