ಮೊದಲ ಅನುಭವ

1

(ನನ್ನ ಗೆಳೆಯ "ವಿಜಯನ" ಕವನ)

ಮೊದಲ ಅನಭವ

ಆಕೆ ಸುಂದರವಾದ ಹುಡುಗಿ.

ನಾನೊಮ್ಮೆ ಆಕೆಗೆ ಅಂದೆ,

ವಾ!! ನೀ ವೈಯಾರದ ಬೆಡಗಿ.

ಇದನ್ನು ಕೇಳಿದ ಅವರಣ್ಣ,

ತುಗೊಂಡು ಬಂದ ಬಡಿಗಿ.

ನಾ ಅದನ್ನು ನೋಡಿ,

ಅಂಜಿ ನಡುಗಿ,

ನಾಲ್ಕು ದಿನ

ಅಲ್ಲ ಇಲ್ಲಿ ಅಡಗಿ,

ಬಿಟ್ಟು ಹೋಗಬೇಕಾಯಿತು

ಅವರ ಮನೆ ಬಾಡಗಿ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

[quote]ತುಗೊಂಡು ಬಂದ ಬಡಗಿ.[/quote]
ಮೊದಲ ಬಾರಿ ಓದಿದಾಗ ಮರದ ಕೆಲಸದ ಬಡಗಿ ಅಂತ ಅಂದ್ಕೊಂಡೆ.
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ ಕಡೆ, ಬಡಿಯಲು ಬಳಸುವ ಕೋಲನ್ನು ಬಡಿಗೆಯನ್ನು, ’ಬಡಗಿ’ ಅನ್ನುತ್ತೇವೆ. ’ಬಡಿಗ್ಯಾ’ ಅಂದರೆ ನೀವು ಹೇಳುವ ಬಡಿಗ. ಹೀಗೆ ಒಂದೊಂದ್ ಕಡೆ ಒಂದೊಂದು ಬಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ!

ಅಶೋಕರು, ಬಹುಶಃ ಹಂಪೆ-> ಹಂಪಿ, ಮನೆ-> ಮನಿ ಆಗುವಂತೆ, ಬಡಿಗೆ -> ಬಡಿಗಿ ಆಗುವುದು ಎಂದು ಎಣಿಸಿದ್ದರು ಅನ್ನಿಸುತ್ತೆ (ನನ್ನಂತೆಯೇ)

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

’ಬಡಿಗಿ’ (=ಬಡಿಯಲು ಬಳಸುವ ಕೋಲು) ಸರಿ ಅಂತ ತೋರಿದ್ದರಿಂದ ಹಾಗೇ ಮಾಡಿದ್ದೇನೆ. ಆಡು ಮಾತಲ್ಲೂ ಬಡಿಗಿನೇ.

ನನ್ನಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಗನಗೌಡ್ರ ನೀವೂ ಹಗುರ ಇಲ್ರೀ ಮತ್ತ.....
ಆ ಹುಡುಗಿ,ಬೆಡಗಿ, ಅವರಣ್ಣನ ಕೈಯಾಗ ಬಡಗಿ, ನೀವು ನಡುಗಿ, ಅಡಗಿ ಕಡೆಗೆ ಬಾಡಗಿ ಕೊಡದ ಪಲಾಯನ ಮಾಡಿದ ಪ್ರಾಸ ಮಸ್ತ ಐತ್ರಿ.
ನಿಮ್ಮವ,
ಗಿರೀಶ ರಾಜನಾಳ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.