ಒಂದು ಎರಡು ಬಾಳೆಲೆ ಹರಡು..

4

ನನ್ನ ಮಗಳು "ಇಸ್ರಾ" ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು.  

ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ "ಅಹ್ಮದ್" ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ " ಅಯ್ಮನ್" ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು...

ಡಮ್ಮರೆ ಡಮ್ಮಮ್ಮ, ಮನೆ ಸುಟ್ಟೋಯ್ತು

ಯಾರ ಮಾನೆ 

ಪೂಜಾರಿ ಮಾನೆ

ಯಾವ ಪೂಜಾರಿ 

ಜುಟ್ಟು ಪೂಜಾರಿ 

ಯಾವ ಜುಟ್ಟು 

ಕೋಳಿ ಜುಟ್ಟು

ಯಾವ ಕೋಳಿ 

ಬಾತು ಕೋಳಿ 

ಯಾವ ಬಾತು 

ಕೇಸರಿ ಬಾತು 

ಯಾವ ಕೇಸರಿ 

ತಿನ್ನೋ ಕೇಸರಿ 

ಯಾವ ತಿನ್ನೋದು 

ಹೊಡ್ತ ತಿನ್ನೋದು

ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. 

ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ. ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, " ನಿಧಾನಮು ಪ್ರಧಾನಮು" ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ?      

ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ... ಕೃಪೆ ನನ್ನ ಮುದ್ದಿನ ಮಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಾಲ್ಯದ ದಿನಗಳನ್ನು ನೆನಪಿಸುವ ನಿಮ್ಮ ಕವಿತೆ ತುಂಬಾ ಸೊಗಸಾಗಿದೆ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಪ್ರಸಾದ್ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಎರಡು ಬಾಳೆಲೆ ಹರಡು ಮೂರು ನಾಕು ಅನ್ನ ಹಾಕು ಐದು ಆರು ಬೇಳೆಯಸಾರು ಏಳು ಎಂಟು ಪಲ್ಯಕೆ ದಂಟು ಒಂಬತ್ತು ಹತ್ತು ಎಲೆಮುದುರೆತ್ತು ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು||
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಜ್ಞಾಪಕ ಇಟ್ಟು ಕೊಂಡಿದ್ದೀರಾ, ಶ್ರೀಧರ್. ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ದುಲ್, "ಮಕ್ಕಳಿರುವ ಮನೀಗೆ ಬೀಸಣಕಿ ಯಾತಾಕ, ಕೂಸು ಕಂದಮ್ಮ ಒಳ ಹೊರಗ ಆಡಿದರೆ ತಣ್ಣಾನ ಗಾಳಿ ಸುಳೀತಾವು" ಎಂಬ ಜನಪದ ಗೀತೆ ನೆನಪಾಯ್ತು. ಮಕ್ಕಳಿದ್ದರೆ ಮನೆಗೆ ಅಂದ, ಮನಸ್ಸಿಗಾನಂದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕವನವೂ ಓದಿದ ನೆನಪು ಮಂಜು. ಹೌದು ಮಕ್ಕಳು ಎಂದರೆ a blessing
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ದುಲ್, ಬಾಲ್ಯವು ಮನಸ್ಸಿನ ಸ್ಮೃತಿಪಟಲದಲ್ಲಿ ಬ೦ದು ಮರೆಯಾಯಿತು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಮಲ್ಲೇಶ್. ಬಾಲ್ಯ ನೆನೆದರೆ ನಿಟ್ಟುಸಿರು ತಂತಾನೇ ಹೊರಡುತ್ತದೆ ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕಂದಿನಲ್ಲಿ ಈ ಸಾಲುಗಳನ್ನು ಹೇಳ್ತಿದ್ದ ನೆನಪು: ಅಚ್ಚಚ್ಚು ಬೆಲ್ಲದಚ್ಚು, ಅಲ್ಲಿ ನೋಡು, ಇಲ್ಲಿ ನೋಡು, ಸಂಪಂಗಿ ಮರದಲ್ಲಿ ಗುಂಪು ನೋಡು, ಯಾವ ಗುಂಪು, ಕಾಗೆ ಗುಂಪು, ಯಾವ ಕಾಗೆ, ಕಪ್ಪು ಕಾಗೆ, ಯಾವ ಕಪ್ಪು, ಇದ್ದಿಲು ಕಪ್ಪು, ಯಾವ ಇದ್ದಿಲು, ಸೌದೆ ಇದ್ದಿಲು, ಯಾವ ಸೌದೆ, ಕಾಡು ಸೌದೆ, ಯಾವ ಕಾಡು, ಸುಡುಗಾಡು, ಯಾವ ಸುಡು, ರೊಟ್ಟಿ ಸುಡು, ಯಾವ ರೊಟ್ಟಿ, ತಿನ್ನೋ ರೊಟ್ಟಿ, ಯಾವ ತಿನ್ನು, ಏಟು ತಿನ್ನು.. ಹೀಗೆ ಹೇಳಿ ಪಕ್ಕದಲ್ಲಿದವರಿಗೆ ಜೋರಾಗಿ ಏಟು ಕೊಡ್ತಿದ್ವಿ. -ಅನಿಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪಂಗಿ ಮರ? ಅಥವಾ ಸಂಪಿಗೆ ಮರ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪಂಗಿ ಮರ ಅಂತ ಹೇಳ್ತಿದ್ ನೆನಪು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಿ ನೊಡು ಅಲ್ಲಿ ನೋಡು ಅಲ್ಲಿ ನೋಡು ಸಂಪಂಗಿ ಮರದಲ್ಲಿ ಹಕ್ಕಿ ಗೂಡು ... ರಮೇಶ್ ಸಿನಿಮಾದಲ್ಲಿ ಒಂದು ಹಾಡು ಇದೆ . ಅನಿಲ್ ರಮೆಶ್ ಅಲ್ಲ ರಮೆಶ್ ಅರವಿಂದ್ ..ಸಿನಿಮಾದಲ್ಲಿ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ನಮ್ಮ ಕನ್ನಡ ಶಾಲೆಯಲ್ಲಿ ನಾವು ಕಲಿಸುತ್ತಿರುವ ಪದ್ಯ ಅಚ್ಚಚ್ಚು ಬೆಲ್ಲದಚ್ಚು, ಅಲ್ಲಿ ನೋಡು, ಇಲ್ಲಿ ನೋಡು, ಸಂಪಂಗಿ ಮರದಲ್ಲಿ ಗುಂಪು ನೋಡು, (ಸಂಪಿಗೆ) ಯಾವ ಗುಂಪು, ಕಾಗೆ ಗುಂಪು, ಯಾವ ಕಾಗೆ, ಕಪ್ಪು ಕಾಗೆ, ಯಾವ ಕಪ್ಪು, ಕಸ್ತೂರಿ ಕಪ್ಪು ಯಾವ ಕಸ್ತೂರಿ, ಕನ್ನಡ ಕಸ್ತೂರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ದುಲ್ ರವರೆ, ನಿಮ್ಮ ಲೇಖನ ಸೊಗಸಾಗಿದೆ :) ದೂರದೂರಿನಲ್ಲಿ ಇದ್ದರೂ ಸಹ ನಿಮ್ಮ ಮತ್ತು ನಿಮ್ಮ ಸೋದರಿಯವರ ಕನ್ನಡ ಪ್ರೇಮ ನಿಜವಾಗಿಯೂ ಕನ್ನಡಿಗರಾದ ನಮಗೆ ದಾರೀದೀಪ. ಕಾರುನಾಡಿನಲ್ಲೇ ಕನ್ನಡ ಅಂಗ್ಲ ಸಂಸ್ಕೃತಿಯ ದಾಳಿಯಲ್ಲಿ "ಕಣ್ಮರೆ" ಯಾಗುತ್ತಿರುವ ಸಮಯದಲ್ಲೇ ನಿಮ್ಮ ಮತ್ತು ಅವರ ಕನ್ನಡದ ಮೇಲಿನ ಕಾಳಜಿ/ಪ್ರೀತಿ ಸದಾ ಅನುಕರಣೀಯ :). ನಿಮ್ಮ ಮುದ್ದಿನ ಮಗಳು ಸಹಾ ನಿಮ್ಮಂತೆ ಅಪ್ಪಟ ಕನ್ನಡ ಕುವರಿಯಾಗಿ ಕನ್ನಡವನ್ನು ಕಲಿತು, ಕನ್ನಡವನ್ನು ಬೆಳಗಿಸಲಿ ಎಂದು ಈ ಕನ್ನಡಿಗನ ಹಾರೈಕೆ :) :) "ಚಿಣ್ಣರ ಚಿಲಿಪಿಲಿ" ಮತ್ತು "ಚಿಣ್ಣರ ಮುತ್ತಿನ ಹಾಡುಗಳು" ಎಂಬ ಸಿಡಿಗಳು ತುಂಬಾ ಚೆನ್ನಾಗಿದೆ. ಅದಲ್ಲದೆ ಬಿ.ಆರ್.ಛಾಯಾ ಅವರು ಹಾಡಿರೋ ಅನೇಕ ಶಿಶು ಗೀತೆಗಳು ಬೆಂಗಳೂರಿನ ಸಪ್ನಾ ಬುಕ್ ಸ್ಟಾಲ್ ನಲ್ಲಿ ಸಿಗುತ್ತವೆ. ಕೆಲವು ಪದ್ಯಗಳಂತೂ ತುಂಬಾನೇ ಚೆನ್ನಾಗಿವೆ. ನೀವು ಬೆಂಗಳೂರಿಗೆ ಬಂದಾಗ ಇದನ್ನು ಪಡೆಯಬಹುದು. ಅಥವಾ ಈ ಕೊಂಡಿಯಲ್ಲಿ http://www.sapnaonli... ಸಹ ಚರ್ಚಿಸಿ ಅನ್ ಲೈನ್ ಖರೀದಿ ಮಾಡಬಹುದು. -- ಇತಿ. ನಿಮ್ಮ ವಿನಯ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಒಂದು ಎರಡು ಊಟಕೆ ಬಾಳೆಲೆ ಹರಡು ಎರಡು ಒಂದು ಮೂರು ಎಲೆಯ ಮುಂದೆ ನೀರು ಮೂರು ಒಂದು ನಾಲ್ಕು ತುಪ್ಪ ಇದ್ದರೆ ಹಾಕು ನಾಲ್ಕು ಒಂದು ಐದು ಹಾಕಬೇಡ ಬೈದು ಐದು ಒಂದು ಆರು ಬಿಸಿ ಬೇಳೆ ಸಾರು ಆರು ಒಂದು ಏಳು ಬೇಗ ಬೇಗ ಏಳು ಏಳು ಒಂದು ಎಂಟು ತಗೋ ಹಾಸಿಗೆ ಗಂಟು ಎಂಟು ಒಂದು ಒಂಭತ್ತು ರೈಲು ಬಂದೇ ಬಿಟ್ಟಿತು ಒಂಭತ್ತು ಒಂದು ಹತ್ತು ಟಿಕೆಟ್ ತಗೊಂಡು ಹತ್ತು (ನಮ್ಮ ತಂದೆ ಲೇ ಶ್ರೀ ಹಾ ಲ ಮಂಜುನಾಥ್ ಅವರ ಸಂಗ್ರಹದಿಂದ ಹೆಕ್ಕಿದ್ದು ) ವಂದನೆಗಳು ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾ ಅವರೇ, ಚೆನ್ನಾಗಿದೆ ಮಕ್ಕಳಿಗೆ ಹೇಳಿಕೊಡಲು. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕಮಲ ಅವರೇ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ. ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾರವರಿಗೆ ನಮಸ್ಕಾರಗಳು. ಹಾಲ.ಮಂಜುನಾಥ್ [ಹಾಲ್ಮನ] ಹೆಸರು ಕಂಡಕೂಡಲೇ ನಿಮ್ಮ parichaya ಮಾಡಿಕೊಳ್ಳಬೇಕೆನಿಸಿತು.ಹಾಸನದ ರಾಜಘಟ್ಟದಲ್ಲಿದ್ದ ನಿಮ್ಮ ತಂದೆಯವರ ಮನೆಗೆ ಆಗಿಂದಾಗ್ಗೆ ಬರುತ್ತಿದ್ದೆ. ನಿಮ್ಮನ್ನು ನೋಡಿದ ನೆನಪಿಲ್ಲ. ಇರಲಿ. ನನ್ನ ಬ್ಲಾಗ್ ವೀಕ್ಷಿಸಿ, ಸಂಪರ್ಕದಲ್ಲಿರಿ. -ಹರಿಹರಪುರಶ್ರೀಧರ್, ಹಾಸನ www.vedasudhe.blogsp...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ. ಹಾಸನದವರು ಎಂದ ಕೂಡಲೇ ಅವ್ಯಕ್ತ ಆನಂದ ಉಂಟಾಗುತ್ತದೆ. ನೀವು ನಿಮ್ಮ ಭಾವಚಿತ್ರವನ್ನು ಹಾಕಿದ್ದಿದ್ದರೆ ನೋಡಿರುವ ನೆನಪಾಗುತ್ತಿತ್ತೇನೋ ಎಂದುಕೊಳ್ಳುತ್ತೇನೆ. ಈಗಲೇ ನಿಮ್ಮ ಬ್ಲಾಗ್ಗೆ ಪ್ರವೇಶ ಮಾಡುತ್ತಿದ್ದೇನೆ. ಇನ್ನು ಮುಂದೆ ಖಂಡಿತಾ ಓದುತ್ತಿರುತ್ತೇನೆ. ನನಗೆ ಬರವಣಿಗೆಯ ಅಭ್ಯಾಸವಿಲ್ಲ. ಓದಿ ಆನಂದಿಸುತ್ತೇನೆ. ಕೆಲವೊಮ್ಮೆ ಅಭಿಪ್ರಾಯ ಬರೆಯುತ್ತೇನೆ ಅಷ್ಟೇ. ನನ್ನ ತಂದೆಯವರ ಲೇಖನಗಳನ್ನು ಬರೆಯಬೇಕೆಂದು ಒಂದು ಬ್ಲಾಗ್ ಆರಂಭಿಸಿದ್ದೇನೆ. ಕೆಲಸದ ಒತ್ತಡ ಹಾಗು ಸಮಯಾಭಾವದಿಂದ ಪ್ರಕಟಿಸಿಲ್ಲ. ಮುಂದೆ ಪ್ರಯತ್ನ ಮಾಡುತ್ತೇನೆ. ತಮಗೂ ತಿಳಿಸುತ್ತೇನೆ. ಮಹದಾನಂದವಾಯಿತು. ವಂದನೆಗಳು. ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.