ಲೈಫ್ ಸ್ಟೈಲ್??

0

ಕಳೆದ ವರ್ಷ ನನ್ನ ನಾದಿನಿಯ (ನನ್ನ ಮನೆಯವರ ಮಾವನ ಮಗಳು) ಗಂಡ ರಸ್ತೆಯಲ್ಲಿ ನಡೆಯುತ್ತಿರುವಾಗಲೇ ತಲೆಸುತ್ತು ಬಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಡಾಕ್ಟರ್ ಹೇಳಿದ್ದು ಕೇಳಿ ತಲೆಸುತ್ತು ಬರುವ ಸರದಿ ನಮ್ಮದಾಗಿತ್ತು. ಅವರ ಮೆದುಳಿನಲ್ಲಿ ಸಣ್ಣ ಬ್ಲಡ್ ಕ್ಲಾಟ್ ಬಂದಿತ್ತು. ಅವರ ಜೀವನದ ಒಳ್ಳೆಯ ಕರ್ಮವೋ, ದೇವರ ದತೆಯೋ ಅಂತೂ ಇಂತೂ ಅವರನ್ನು ಉಳಿಸಿಕೊಳ್ಳಲು ಡಾಕ್ಟರರಿಗೆ ಯಶಸ್ಸು ಸಿಕ್ಕಿತು. ಆರು ತಿಂಗಲ ಹಿಂದೆ ನಮ್ಮ ಮನೆಯವರ ಜೊತೆ ಕೆಲಸ ಮಾಡುವ ವ್ಯಕ್ತಿಯೊಬ್ಬರಿಗೂ ಹೀಗೆ ಆಗಿ, ಬ್ಲಡ್ ಕ್ಲಾಟ್ ನಿಂದಾಗಿ ಕಿಡ್ನಿಕೂಡ ಫ಼ೇಲ್ ಆಗುವ ಪರಿಸ್ಥಿತಿ ಬಂದು ಅಂತೂ ಇಂತೂ ಅವರನ್ನೂ ಉಳಿಸಿಕೊಳ್ಳಲಾಯಿತು. ಮೂರು ತಿಂಗಳ ಹಿಂದೆ ನನ್ನ ಆಪ್ತ ಗೆಳತಿಯ ಗಂಡ ಆರೋಗ್ಯ ತಪಾಸಣೆಗೆಂದು ಎಲ್ಲ ರಿಪೋರ್ಟ್ಸನ್ನು ತೆಗೆಸಿದಾಗ ಅವರಿಗೆ ತಿಳಿದದ್ದೇನೆ? ಅವರ ಹೃದಯ ಕೇವಲ ೩೦% ಅಷ್ಟೇ ಕೆಲಸ ಮಾಡುತ್ತಿದೆ ಎಂದು ಅವರು ತಕ್ಷಣ ಅವರು ನಂಬುವ ಹಾರ್ಟ ಸ್ಪೆಶಾಲಿಸ್ಟ್ರಲ್ಲಿಗೆ ಹೋದರು ಅವರು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸರಿಯಾಗಿ ತಿಳಿಸದೆ ಅವರ ಪರಿಸ್ಥಿತಿ ಎರಡು ತಿಂಗಳಲ್ಲೇ ಇನ್ನೂ ೧೦% ಹಾಳಾಯಿತು. ದೇವರ ದಯೆಯಿಂದ ಇವರೆಲ್ಲ ಬದುಕುಳಿದರೂ ಈಗ ಬಹಳಷ್ಟು ಡಯಟ್ ಪ್ರೊಗ್ರಾಮನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದಾರೆ. ಮಿದುಳಿನಲ್ಲಿ ಬ್ಲಡ್ ಕ್ಲಾಟ್ ಬರುವುದಕ್ಕೆ, ಹೃದಯದ ಕಾರ್ಯ ಕಡಿಮೆಯಾಗುವುದಕ್ಕೆ ಡಾಕ್ಟರುಗಳಲ್ಲಿರುವುದು ಒಂದೇ ಕಾರಣ ‘ಲೈಫ಼ ಸ್ಟೈಲ್’ .
ಇದನ್ನೆಲ್ಲ ಕೇಳಿ ತಲೆ ಕೆಡಿಸಿಕೊಂಡು ನಿದ್ದೆಯಿಲ್ಲದೆ ಬೇಸರಪಟ್ಟು ದಿನ ಕಳೆಯುತ್ತಿರುವಾಗ ನಮ್ಮ ಮನೆಯವರು ಸಿಗರೇಟ್ ಸೇದುವುದನ್ನು ನೋಡಿ ಅದನ್ನು ಬಿಟ್ಟಿಬಿಡಲು ಹೇಳೆ ಹೇಳಿ ಸಾಕಾಗಿ ಮೊನ್ನೆಯೊಮ್ಮೆ ಅದೇ ವಿಷಯಕ್ಕೆ ಜೋರಾಗಿ ಜಗಳವಾಡಿದಾಗ ಅವರು ಹೇಳಿದ್ದನ್ನು ಕೇಳಿ ನಾನೂ ಇನ್ನೂ ಕುಗ್ಗಿ ಹೋದೆ. ಅವರ ಜೊತೆ ಕೆಲಸ ಮಾಡುತ್ತಿರುವವರೊಬ್ಬರು ೩೮-೩೯ ವರ್ಷ ವಯಸ್ಸಿನವರಿರಬಹುದು, ಸೇದುವ, ಉಡಿಯುವ, ಮಾಂಸ ತಿನ್ನುವ ಯಾವುದೇ ಅಭ್ಯಾಸವಿರದ ಗುಜರಾತಿ ಮನುಷ್ಯನೊಬ್ಬನಿಗೆ ಆರು ತಿಂಗಳಿಂದ ಊಟ ನಾಡುದರೆ ನಾಲಿಗೆಯಲ್ಲಿ ಉರಿ ಎಂದು ಡಾಕ್ಟರಲ್ಲಿಗೆ ಹೋದರೆ ತಿಳಿದದ್ದೇನು? ನಾಲಿಗೆಯ ಕ್ಯಾನ್ಸರ್ ನ ಕೊನೆಯ ಹಂತ, ಇದಕ್ಕೂ ಡಾಕ್ಟರಲ್ಲಿರುವುದು ಒಂದೇ ಉತ್ತರ ಲೈಫ಼್ ಸ್ಟೈಲ್ ಸರಿಯಿಲ್ಲ ಅನ್ನುವುದು. ವೇಗವಾಗಿ ಓಡುತ್ತಿರುವ ಇಂದಿನ ಜಗತ್ತಿನಲ್ಲಿ ತಮ್ಮನ್ನು ತಾವು ಸಾಬೀತು ಪಡಿಸಲು ದಿನದ ಹನ್ನೆರಡು, ಹದಿಮೂರು ಘಂಟೆಗಳಿಗಿಂತಲು ಹಾಗೂ ತಮ್ಮ ಕ್ಷಮತೆಗಿಂತಲೂ ಹೆಚ್ಚೆಚ್ಚು ಕೆಲಸ ಮಾಡುತ್ತಿರುವ ಇಂದಿನ ಪೀಳಿಗೆಯ ಭವಿಷ್ಯವೇನು? ಎಂದು ಯೋಚಿಸಿ ಭಯವಾಗುತ್ತದೆ. ಮೇಲೆ ಉದಾಹರಿಸಿದ ಎಲ್ಲರಿಗೂ ಡಾಕ್ಟರ್ ಇನ್ನು ಮುಂದೆ ಹೆಚ್ಚು ಕೆಲಸ ಮಾಡಬಾರದು, ಹೆಚ್ಚು ತಲೆಬಿಸಿಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ, ಆದರೆ ಬದುಕಲು, ಹೆಂಡತಿ ಮಕ್ಕಳನ್ನು ಸಾಕಲು ಕೆಲಸವಂತೂ ಮಾಡಲೇ ಬೇಕು, ಕೆಲಸ ಮಾಡಬೇಕಾದರೆ ತಲೆಬಿಸಿ ಬಂದೇ ಬರುತ್ತದೆ, ಹಾಗಾದರೆ ಬದುಕುವುದಾದರೂ ಹೇಗೆ? ನಾವು ಚಿಕ್ಕವರಿದ್ದಾಗಲೆಲ್ಲ ನಮ್ಮಮ್ಮ ಸರಿಯಾದ ಸಮಯಕ್ಕೆ ಊಟ ಮಾಡಬೇಕು, ಸರಿಯಾದ ಸಮಯಕ್ಕೆ ನಿದ್ದೆ ಮಾಡಬೇಕು, ಎಂದೆಲ್ಲ ಹೇಳುತ್ತಿದ್ದದರ ಮಹತ್ವ ಈಗ ಅರ್ಥವಾಗುತ್ತಿದೆಯಾದರೂ ವೀಗವಾಗಿ ಓಡುತ್ತಿರುವ ಈ ಕಾಲದಲ್ಲಿ ಸಮಯವನ್ನು ಅನುಸರಿಸುವುದಾದರೂ ಹೇಗೆ ಅನ್ನುವ ಪ್ರಶ್ನೆ ಕಾಡುತ್ತಿದೆ, ಅಂದುಕೊಂಡರೂ ಯಾವುದೇ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಲಾಗುತ್ತಿಲ್ಲ ಅನ್ನುವುದು ಅನೇಕರ ಕೊರಗು. ಹೆಚ್ಚು ಹಣ ಗಳಿಸಲು, ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲು ಸಮಯ ಸಾಲದಿರುವಗ ಲೈಫ಼್ ಸ್ಟೈಲನ್ನು ಬದಲಿಸಲು ಸಮಯವೆಲ್ಲಿದೆ?
ಹಾಗಾದರೆ ಇವೆಲ್ಲದರ ಪರಿಣಾಮವಾಗಿ ನಮ್ಮ ಶರೀರದಲ್ಲಿ ಪ್ರವೇಶಿಸುವ ರೋಗಗಳನ್ನು ಸ್ವಾಗತಿಸಲು ನಾವು ಸಜ್ಜಾಗಬೇಕೆ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.