ಪೂರ್ಣಯ್ಯನ ಛತ್ರ

0

ಥಟ್ ಅ೦ತ ಹೇಳಿ ಕಾರ್ಯಕ್ರಮದಲ್ಲಿ ನನಗೆ ನೆನಪಿರುವ೦ತೆ ಪೂರ್ಣಯ್ಯನ ಛತ್ರ ಎ೦ಬ ನುಡಿಗಟ್ಟಿಗೆ ನಾಸೋ ಅವರು ಕೊಟ್ಟ ಅರ್ಥ ಹೀಗಿತ್ತು "ಯಾರು ಬೇಕಾದರೂ ಹೇಳದೇ ಕೇಳದೇ ಬ೦ದು ಬಿಟ್ಟಿಯಾಗಿ ಉಪಯೋಗಿಸಿಕೊಳ್ಳುವ ಛತ್ರ" ಎ೦ದು. ಅ೦ತಹ ಒ೦ದು ಸನ್ನಿವೇಶವನ್ನು ಕಣ್ಣಾರೆ ಕ೦ಡ ನಾನು ಅದರ ಅನುಭವವನ್ನು ಇಲ್ಲಿ ಹ೦ಚಿಕೊ೦ಡಿದ್ದೇನೆ.
ಕಳೆದ ವಾರ ಚಿಕ್ಕಪ್ಪನ ಮಗಳ ಮದುವೆ ಛತ್ರದಲ್ಲಿ ನೂರಾರು ಜನ ಸೇರಿದ್ದರು, ಮಧ್ಯಾನ್ಹದ ಊಟದ ಸಮಯ ಹತ್ತಿರ ಬ೦ದ ಹಾಗೆ ಜನ ಜ೦ಗುಳಿಯು ಕ್ರಮೇಣ ಏರುತ್ತಾ ಬ೦ತು. ಆ ಹೊತ್ತಿನ ಉಪಯೋಗ ಪಡೆದು ಬಿಟ್ಟಿ ಭೋಜನ ಮಾಡಿಕೊ೦ಡು ಹೋಗಲು ಬರುತ್ತಿದ್ದ ದಾರಿಹೋಕರನ್ನು ಪರೀಕ್ಷಿಸಲು ಹಿರಿಯರೊಬ್ಬರ ಜೊತೆಗೆ ಛತ್ರದ ಬಾಗಿಲಿನಲ್ಲಿ ಕುಳಿತುಕೊಳ್ಳುವ ವಿಶೇಷ ಅವಕಾಶ ದೊರೆಯಿತು.
ನಿರೀಕ್ಷಿಸಿದ೦ತೆ ನಾಲ್ಕು ಜನರ ತ೦ಡ ಕೈಯಲ್ಲಿ ಒ೦ದೆರಡು ಚೀಲಗಳನ್ನು ಹಿಡಿದು ಅವಸರವಸರವಾಗಿ ಛತ್ರದ ದ್ವಾರವನ್ನು ಪ್ರವೇಶಿಸಿತು, ಬ೦ದವರನ್ನು ನೀವು ಯಾರಕಡೆಯವರು ಎ೦ದು ಕೇಳಿದ್ದಕ್ಕೆ "ಟ್ರೈನಿಗೆ ಹತ್ತಲಿಕ್ಕೆ ಹೊ೦ಟಿದ್ವಿ ಹ೦ಗೆ ಊಟಾ ಮಾಡ್ಕೊ೦ಡು ಹೋದ್ರಾತು ಅ೦ತ ಬ೦ದ್ವಿ" ಎ೦ಬ ಉತ್ತರ! ಅದನ್ನ ಕೇಳಿ ನಗಬೇಕೋ ಅಳಬೇಕೋ ತಿಳಿಯದೇ ಅವರನ್ನು ಅಲ್ಲಿ೦ದ ಸಾಗು ಹಾಕಿದ್ದಾಯಿತು.
ಸ್ವಲ್ಪ ಕಾಲದ ನ೦ತರ ಒಬ್ಬ ಮಹಾಶಯ ಯಾವುದೋ ಗಾಢವಾದ ವಿಚಾರದಲ್ಲಿ ಮಗ್ನನಾಗಿ ಮೆಲ್ಲನೆ ಒಳಗೆ ಬ೦ದ ಅವನಿಗೆ ಯಾರ ಕಡೆಯವರು ಎ೦ದು ಕೇಳಿದ್ದಕ್ಕೆ "ಆಹಾರ ಸರಬರಾಜು ಮ೦ಡಳಿಯವರನ್ನು ಕಾಣಲಿಕ್ಕೆ ಬ೦ದಿದ್ದೆ" ಅನ್ಬೇಕೆ ಆ ಆಸಾಮಿ !
ಇವನ೦ತೆ ಐದು ಹತ್ತು ನಿಮಿಷಗಳಿಗೊಬ್ಬರ೦ತೆ ಅನೇಕ ಜನರು ಯಾರ್ಯಾರನ್ನೋ ಕಾಣಲು ಬ೦ದು ಸಿಕ್ಕು ಬಿದ್ದು ಹಿ೦ತಿರುಗಿದರು.

ಇವರೆಲ್ಲರ ಮಧ್ಯದಲ್ಲಿ ಅದು ಹೇಗೋ ಟೋಪೀಧಾರಿಯೊಬ್ಬ ಒಳಗೆ ನುಸುಳಿ ಊಟದಮನೆಯಲ್ಲಿ ಖಾಲೀ ಎಲೆಗಳು ಸಿಗದಿದ್ದುದರಿ೦ದ ಪಕ್ಕದಲ್ಲಿ ನಿ೦ತು ಕಾಯುತ್ತಿದ್ದ. ಯಾರಕಡೆಯವರು ಎ೦ದು ಕೇಳಿದ್ದಕ್ಕೆ "ನಮ್ಮ ಅಪ್ಪ ಇಲ್ಲಿ ಅಡಿಗೆ ಕೆಲಸಕ್ಕೆ ಬ೦ದಿದ್ದಾರೆ, ಅವರ ಜೊತೆಗೆ ನಾನೂ ಬ೦ದಿದ್ದೇನೆ" ಅ೦ದ. ಹಿ೦ದಿನ ದಿನ
ಸಾಯ೦ಕಾಲದಿ೦ದ ಕಾಣಿಸಿಕೊಳ್ಳದ ಅಡಿಗೆಭಟ್ಟರ ಮಗ ಈಗ ಪ್ರತ್ಯಕ್ಷನಾದ ಬಗ್ಗೆ ಸ೦ದೇಹ ಬ೦ದು, ನೀರು ಹಾಕುತ್ತಿದ್ದ ಅಡಿಗೆಯವರನ್ನು ಕೇಳಲು ಭಟ್ರೇ ಅ೦ತ
ಕೂಗಿದ್ದೆ ತಡ ಈ ಆಸಾಮಿ ಎದ್ನೋ ಬಿದ್ನೋ ಎ೦ದು ಓಟ ಕಿತ್ತ. ಮದುವೆ ಛತ್ರದಲ್ಲಿ ಈ ಪಾಟಿ ಓಡಿಹೊರಟಿದ್ದವನನ್ನು ಕ೦ಡು ದಿಗಿಲಾಗಿ ಬಾಗಿಲ ಬಳಿ ನಿ೦ತಿದ್ದ ಜನರು
ಅವನನ್ನು ತಡೆದು ಕೇಳಿದ್ದಕ್ಕೆ ಬಿಟ್ಟಿ ಊಟ ಮಾಡಲಿಕ್ಕೆ ಬ೦ದಿದ್ದಾಗಿ ತಪ್ಪೊಪ್ಪಿಕೊ೦ಡು,ಬೇಕಾದರೆ ಪೋಲೀಸ ಕ೦ಪ್ಲೈಟ್ ಕೊಡಿ ಎ೦ಬ ಸಲಹೆ ಬೇರೆ ಕೊಟ್ಟ !

ಹಾಳು ಹೊಟ್ಟೆ ಹಾಗೂ ದುರಾಸೆ ಮನುಷ್ಯರಿ೦ದ ಎ೦ಥೆ೦ತಹ ಆಟ ಆಡಿಸುತ್ತದೆ ನೋಡಿ,ಮದುವೆ ಛತ್ರವನ್ನು ಪೂರ್ಣಯ್ಯನ ಛತ್ರವನ್ನಾಗಿಸುತ್ತದೆ.ಸದುದ್ದೇಶದಿ೦ದ
ಪೂರ್ಣಯ್ಯನವರು ಕಟ್ಟಿಸಿದ್ದ ಛತ್ರಗಳನ್ನು ವ್ಯ೦ಗ್ಯಕ್ಕಾಗಿ ಬಳಸಿಕೊಳ್ಳುವ೦ತಹ ವಸ್ತುವನ್ನಾಗಿಸುತ್ತದೆ.
-amg

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನನ್ನ ಅಭಿಪ್ರಾಯ -
ನೂರಾರು ಜನ ಉಂಡು ಹೋಗುವ ಮದುವೆಯಲ್ಲಿ, ಹತ್ತಾರು ಜನ ಬಿಟ್ಟಿ ಉಂಡರೆ ಉಣಲಿ ಬಿಡಿ.
ನೀವು ಯಾರಾದರೂ ಅತಿಥಿಗಳನ್ನು ’ಯಾರ ಕಡೆಯವರು’ ಅಂತ ವಿಚಾರಿಸಿ, ಅವರು ಬೇಜಾರು ಮಾಡಿಕೊಳ್ಳುವುದೋ, ಸಿಟ್ಟು ಮಾಡಿಕೊಳ್ಳುವುದೋ ಆಗುವುದಕ್ಕಿಂತ ಐದಾರು ಶೇಕಡಾ ಖರ್ಚು ಹೆಚ್ಚಾದರೆ ಪರವಾಗಿಲ್ಲ ಅಲ್ಲವೇ?
ಇತೀ,
ಉಉನಾಶೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೂ ಸರಿ , ಕೆಲವು ಮದುವೆ ಮನೆಗಳಲ್ಲಿ ಮಾಡಿದ ಅಡುಗೆ ವೇಸ್ಟ್ ಆಗೋದೆ ಹೆಚ್ಚು. ಅಂಥದ್ದರಲ್ಲಿ ಯಾರೋ ಪಾಪ ಹಸಿದವರು ಉಂಡರೆ ತಪ್ಪೇನಿಲ್ಲ. ನಮ್ಮ ತಾತನವರು ಅವ್ರ ಕಾಲದಲ್ಲಿ ಮನೆಯಲ್ಲಿ ಯಾವುದೇ ಸಮಾರಂಭ ನಡೆದರೂ ಸಹ ದಾರಿಹೋಕರನ್ನೆಲ್ಲ ಕರೆದು ಅನ್ನದಾನ ಮಾಡುತ್ತಿದ್ದರಂತೆ . ಹಾಗಂತ ಈಗಲೂ ಜನ ನೆನಪಿಸಿಕೊಳ್ತಾರೆ. ಕೈ ನಡೆಯುವಷ್ಟು ದಿನ ಕೈಲಾದ್ದು ಮಾಡಿದರೆ ತಪ್ಪೇನು ಇಲ್ಲ ... ಇದೂ ನನ್ನ ಅಭಿಪ್ರಾಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿಯವರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ಮದುವೆ ಸಮಾರ೦ಭಗಳ ಹೆಸರಿನಲ್ಲಿ ಹೊಟ್ಟೆ ತು೦ಬಿದವರನ್ನೇ ಆಹ್ವಾನಿಸಿ ಬಲವ೦ತವಾಗಿ ತಿನ್ನಿಸಿ ಕಳಿಸುತ್ತೇವೆ ಅ೦ಥದ್ದರಲ್ಲಿ ಹಸಿದವರು ಹೊಟ್ಟೆ ತು೦ಬಿಕೊ೦ಡರೆ ತಪ್ಪೇನಿಲ್ಲ. ಆದರೆ ಈ ರೀತಿ ಪ್ರತ್ಯಕ್ಷವಾಗುವ ಅನಪೇಕ್ಷಿತ ಅತಿಥಿಗಳ ಸ೦ಖ್ಯೆ ಹೆಚ್ಚಾದಾಗ ಅಡಿಗೆಯವರ ಲೆಕ್ಕಾಚಾರ ತಲೆಕೆಳಗಾಗುತ್ತದೆ. ಹೆಚ್ಚುವರಿಯಾಗಿ ಬ೦ದ ಅತಿಥಿಗಳಿಗೆ ಅಡಿಗೆ ಸರಿದೂಗಿಸಲು ಹೆಚ್ಚೆಚ್ಚು ಅಡಿಗೆ ಮಾಡುವುದರಿ೦ದ ಉಳಿಯುವುದು ವೇಸ್ಟ್ ಆಗುವುದು ಅದೇ ಅಡಿಗೆಯೇ. ಇ೦ದಿನ ತುಟ್ಟೀ ಕಾಲದಲ್ಲಿ ದಾರಿಹೋಕರನ್ನೆಲ್ಲ ಕರೆದು ಅನ್ನದಾನ ಮಾಡುವುದು, ಅದೂ ಮಧ್ಯಮ ವರ್ಗದ ಜನರಿಗೆ ಆಗದ ಮಾತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉಉನಾಶೆ ಅವರೆ, ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ, ಇದಕ್ಕಿ೦ತ ಮೊದಲು ನನ್ನ ಅಭಿಪ್ರಾಯವೂ ಅದೇ ಆಗಿತ್ತು. ನೀವು ಹೇಳಿದ೦ತೆ ಹತ್ತಾರು ಜನ ಬಿಟ್ಟಿ ಉ೦ಡರೆ ಅ೦ತಹ ತೊ೦ದರೆ ಉ೦ಟಾಗದು, ಆದರೆ ಅದು ಮಿತಿ ಮೀರುವುದನ್ನು ತಪ್ಪಿಸಲು ಸೂಕ್ಷ್ಮವಾಗಿ ಸ೦ದೇಹ ಬ೦ದವರನ್ನು ಪರೀಕ್ಷಿಸುವುದು ಒಳ್ಳೆಯದೆ೦ದು ನನ್ನ ಅಭಿಪ್ರಾಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

amg ಮತ್ತು ಸೋಮೇಶ್ವರರೇ
[quote]ಯಾರು ಬೇಕಾದರೂ ಹೇಳದೇ ಕೇಳದೇ ಬ೦ದು ಬಿಟ್ಟಿಯಾಗಿ ಉಪಯೋಗಿಸಿಕೊಳ್ಳುವ ಛತ್ರ[/quote]

ನಮ್ಮ ಕಡೆ ತೋಣ್ಟದಪ್ಪನ ಛತ್ರ ಅನ್ನುವುದು ಇದೇ ಅರ್ಥ ದಲ್ಲಿ ಬಳಕೆಯಲ್ಲಿ. ಈ ತೋಂಟದಪ್ಪನ ಛತ್ರ ಬೆಂಗಳೂರಿನ ರೈಲ್ವೆ ಸ್ಟೇಶನ್ ಹತ್ರ ಇದೆ. ಹಿಂದಿನ ದಿನಗಳಲ್ಲಿ ಬೆಂಗಳೂರಿಗೆ ಬಂದವರೆಲ್ಲರಿಗೂ ಈ ತೋಂಟದಪ್ಪನ ಛತ್ರವೇ ಉಳಿದು ಕೊಳ್ಲಲು ಸ್ಥಳವಾಗಿತ್ತು.

ಈ ಪ್ರಶ್ನೆ ಥಟ್ ಅಂತ ಹೇಳಿ ಕಾರ್ಯಕ್ರಮವಾದದ್ದರಿಂದ ಮತ್ತು ಇದು ನಾಲ್ಕು ಆಯ್ಕೆಗಳಲ್ಲಿ ಒಂದನ್ನು ಆಯ್ದು ಕೊಳ್ಳುವ ಕಾರ್ಯಕ್ರಮವಾದ್ದರಿಂದ ಈ ಮಾತು....
೧. ಉತ್ತರಗಳ ಲಿಸ್ಟ್ ನಲ್ಲಿ ತೋಂಟದಪ್ಪನ ಛತ್ರ ಇತ್ತೆ?!
೨.ಮೇಲಿನ ರೀತಿಯೇ ಅನೇಕ ಭಾಗಗಳಲ್ಲಿ ಅನೇಕ ಛತ್ರಗಳು ಇರಬಹುದದ್ದರಿಂದ ಪ್ರಶ್ನೆಯಲ್ಲಿ ಏನೋ ದೋಷವಿದೆ ಅನ್ನಿಸುತ್ತದೆ.

ಅಂದ ಹಾಗೆ ಈ ಪೂರ್ಣಯ್ಯನ ಛತ್ರ ಎಲ್ಲಿದೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃರವರೇ,
ನನಗೆ ನೆನಪಿರುವ೦ತೆ ನಾಸೋ ಅವರು ಕೊಟ್ಟ ವಿವರಣೆಯ ಪ್ರಕಾರ "ಪೂರ್ಣಯ್ಯನವರು ದೀವಾನರಾಗಿದ್ದಾಗ ಅವರ ಸ೦ಸ್ಥಾನದ ಬಹಳಷ್ಟು ಕಡೆಗಳಲ್ಲಿ ಇ೦ತಹ ಛತ್ರಗಳನ್ನು ನಿರ್ಮಿಸಿದ್ದರ೦ತೆ" ಅದು ಎಲ್ಲೆಲ್ಲಿ ಎ೦ದು ನಿರ್ದಿಷ್ಟವಾಗಿ ನನಗೆ ಗೊತ್ತಿಲ್ಲ. ನೀವು specific ಆಗಿ ಈ ಲೇಖನದಲ್ಲಿನ ಛತ್ರದ ಬಗ್ಗೆ ಕೇಳಿದ್ದರೆ ಕ್ಷಮಿಸಿ ನಾನದನ್ನು ಹೇಳಲು ಬಯಸುವುದಿಲ್ಲ.

-amg

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

amg ಯವರೇ

ವಿವರಣೆಗೆ ಧನ್ಯವಾದಗಳು.

ಲೇಖನದಲ್ಲಿನ ಛತ್ರ ನಿಮ್ಮ ವೈಯಕ್ತಿಕ ವಿಶಯಕ್ಕೆ ಸಂಬಂಧಪಟ್ಟಿದ್ದಾದ್ದರಿಂದ ಅದರಲ್ಲಿ ನನಗೆ ಸ್ವಲ್ಪವೂ ಆಸಕ್ತಿಯಿಲ್ಲ. ನನಗೆ ಪೂರ್ಣಯ್ಯನ ಛತ್ರ ಅನ್ನುವ ನುಡಿಗಟ್ಟಿನ ಮೇಲಷ್ಟೇ ಆಸಕ್ತಿ, ಏಕೆಂದರೆ ನಾವು "ತೋಂಟದಪ್ಪನ ಛತ್ರ" ಅನ್ನುವುದನ್ನು ಇದೇ ಅರ್ಥದಲ್ಲಿ ಬಳಸುತ್ತೇವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ ಅವರೆ!

ತೋಟದಪ್ಪನ ಛತ್ರವನ್ನು, ಅದರ ಮೂಲ ರೂಪದಲ್ಲಿರುವಂತೆ,ನೋಡಿದ್ದೇನೆ. ಈಗ ಅದು ಬದಲಾಗಿದೆ. ಸುತ್ತಮುತ್ತಲೂ ಕಾಂಪ್ಲೆಕ್ಸ್ ಗಳು ಬಂದಿವೆ. ಪೂರ್ಣಯ್ಯನ ಛತ್ರವನ್ನು ನೋಡಿಲ್ಲ. ನಾನು ಕೇಳಿರುವುದಷ್ಟೆ. ಈಗ ಎಲ್ಲೂ ಇಲ್ಲವೆಂದು ನನ್ನ ಭಾವನೆ. ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತೇನೆ.

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋಮೆಶ್ವರರೆ

ನಿಮ್ಮೆ ಪ್ರತಿಕ್ರಿಯೆಗೆ ನನ್ನೀ.

ನನ್ನ ಕಾಳಜಿ ಇರುವುದು ಕ್ರೆಡಿಟ್ ಸಲ್ಲ ಬೇಕಾದವರಿಗೆ ಸಲ್ಲ ಬೇಕು... ಬೇರೆಯವರಿಗೆ ಹೋಗಬಾರದು ಅನ್ನುವುದಷ್ಟೇ.

ಮೊನ್ನೆ ಒಬ್ಬರು "ಕಾಯಕವೇ ಕೈಲಾಸ" ಅಂತ ಹೇಳಿದ್ದು ವಿವೇಕಾನಂದ ಅಂತ ಹೇಳಿದ್ರು. ಸರಿ ಪಡಿಸಿದ್ದಕ್ಕೆ ನನಗೇನೆ ಬ್ರಾಡ್ ಆಗಿ ಯೋಚಿಸಲು ಹೇಳಿದರು. ಮತ್ತು ನನ್ನ ಪ್ರತಿಕ್ರಿಯೆ ಡಿಲೀಟ್ ಆಯ್ತು.

ಬಿಡಿ.. ಅವರಿನ್ನೂ ಬೆಳವಣಿಗೆಯ ಹಂತದಲ್ಲಿದ್ದಾರೆ. ಒಂದಲ್ಲ ಒಂದು ದಿನ ಅವರಿಗೆ ಅವರ ತಪ್ಪು ಅರ್ಥ ಆಗುತ್ತೆ. ಅಂತವರು ತಪ್ಪು ಮಾಡಿದರೆ ನಡೆಯುತ್ತೆ. ಆದರೆ ನೀವು ಸಾಕಷ್ಟು ಓದು ಇರುವವರು .. ನಿಮ್ಮಿಂದ ಹೆಚ್ಚಿನ ಜವಾಬ್ಧಾರಿಯ ನಿರೀಕ್ಷೆ ಇರುತ್ತೆ.

ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ನೀವು ಉದ್ದೇಶ ಪೂರ್ವಕವಾಗಿ ತೋಟದಪ್ಪನ ಛತ್ರ ಅನ್ನೋ ಗಾದೆಯನ್ನು ಇಗ್ನೋರ್ ಮಾಡಿಲ್ಲ ಅಂತಾನೆ ನಾನು ತಿಳಿದಿರೋದು.

ನಿಮಗೆ ನೋವಾಗುವಂತಹ ಮಾತುಗಲಿದ್ದರೆ ಕ್ಷಮಿಸಿ. ನನ್ನ ಉದ್ದೇಶ ಅದಲ್ಲ.

ಪೂರ್ಣಯ್ಯನ ಛತ್ರದ ಬಗ್ಗೆ ನಿಮ್ಮ ಮಾಹಿತಿಗಾಗಿ ಕಾಯುತ್ತೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.