ಕಣ್ಣಿನ ಶಬ್ದ

0

ನೋಡು ಅಲ್ಲಿ ಒಂದು ಕನಸಿನ
ಕಳೇಬರವ ಹೂಳಲಾಗಿದೆ
ಮೋಡ ಚೆಲ್ಲಿ ಇಂದು ಬಿರುಸಿನ
ಮಳೇಬರುವ ವೇಳೆಯಾಗಿದೆ


ಬಿದ್ದ ರಭಸಕೆ
ಎದ್ದು ಕೂತು
ಸುದ್ದಿ ಮಾಡುವುದೇ ಈ ಸ್ವಪ್ನ?


ಖಾಲಿಪುಟದಲಿ ಗೀತೆಯೊಂದನು
ಬರೆದು ಬರೆದು ಅಳಿಸಲಾಗಿದೆ
ಬಾನಿನಂಚಲಿ ನೋಡುತಿದ್ದೆನು
ಕವನವೊಂದು ಮಿಂಚಿ ಹೋಗಿದೆ


ಗೀಚಿದ ಸಾಲಿನ
ಸೂಚಿತ ಅರ್ಥಕೆ
ಈಚೆಗೆ ಬರಬಹುದೇ ಈ ರಾಗ?


ಶಶಿಯ ವದನದ ಕಲೆಯ ಕಾಂತಿಯು
ಮೂಕಮನದಲಿ ಸ್ತಬ್ಧವಾಗಿದೆ
ಋಷಿಯ ಮೂಲದ ಮೂಲೆಯಲ್ಲಿ
ಕರಿಯ ಗುಡುಗಿನ ಶಬ್ಧವಾಗಿದೆ


ಕೇಳದ ಸಿಡಿಲಿಗೆ
ಏಳುವ ಅಣಬೆಯ
ಬಾಳನು ತೋರುವುದೇ ಈ ಭಾವ?


ವರ್ಣರಂಜಿತ ಮನದ ಪುಟಗಳ
ತಿಕ್ಕಿ ತಿಕ್ಕಿ ತೊಳೆಯಲಾಗಿದೆ
ವರುಣನಿಂಗಿತ ಅರಿತ ಮೇಘವು
ಬಿಕ್ಕಿ ಬಿಕ್ಕಿ ಅಳುವ ಹಾಗಿದೆ


ಸಣ್ಣ ಹನಿಯೂ
ಬಣ್ಣವಾಗಿ
ಕಣ್ಣ ಸೇರುವುದೇ ಈ ಚಿತ್ರ?ಸ್ವಪ್ನದ ಲೋಕದ ರಾಗದ ಭಾವಕೆ ಕಣ್ಣಿನ ಶಬ್ದಕೆ


ಮಳೆಯಾಗಿದೆ
ಮಿಂಚಾಗಿದೆ
ಗುಡುಗಾಗಿದೆ..


ಅಂತೂ ಇಳೆ ಹಸಿಯಾಗಿದೆ, ಜೀವ ಖುಷಿಯಾಗಿದೆ.


 


 


 


 


 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಾಯ, ಬೇಕು ನಿನ್ನ ಸಹಾಯ, ಪದ್ಯ ಅರ್ಥ ಆಯ್ದಿಲ್ಲೆ, ಮಾರಾಯ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಗಳೇ, ಇದರಲ್ಲಿ ಅಂಥ ಅರ್ಥ ಮಾಡಿಸುವಂತದ್ದು ಎಂತ ಇಲ್ಲೆ.. ಪ್ರೀತಿ ಪ್ರೇಮ ಎಲ್ಲಾ ಬೇಡ ಹೇಳಿ ಕೂತಂವ ಮಳೆ ಬರುವ ಕಾಲಕ್ಕೆ ಈ ರೀತಿ ಆಲೋಚನೆ ಮಾಡ್ತಾ.. ಆ ಮಳೆಯ ರಭಸಕ್ಕೆ ಎದ್ದು ಕೂತುಬಿಡುವ ಸತ್ತ ಕನಸು.. ಮಿಂಚಿಗೆ ಬರಬಹುದಾದ ಯಾವುದೋ ಹಳೇ ರಾಗ.. ಗುಡುಗಿಗೆ ಹೆದರಿ ಹೊರಗೆಬರುವ ಭಾವ.. ಹನಿ ಜೊತೆಗೆ ಬರುವ ಚಿತ್ರ... ಇವೆಲ್ಲಾ ಸೇರಿ ಅವನ ತಲೆ ತಿಂತೋ.. ಎಲ್ಲಿ ಮತ್ತೆ ತಾನು ಪ್ರೀತಿ ಹಿಂದೆ ಬೀಳ್ತೆ ಹೇಳೋ ಹೆದರಿಕೆಯಿಂದ ಶುರುವಾದದ್ದು ಕೊನೆಗೆ ಮಳೆಬಂದು ಖುಷಿಯಾಗಿ ಮುಗೀತು.. ಈ ಪದ್ಯ ಅರ್ಥ ಆಗಿಗಿದ್ರೆ ಬೇಜಾರ್ ಮಾಡ್ಕಂಬುದು ಬೇಡ.. ಇದ್ರಲ್ಲಿ ಅಂಥ ವಿಶೇಷ ಎಂತದೂ ಇಲ್ಲೆ.. ಬರೀ ಶಬ್ದದ ಆಟ ಅಷ್ಟೇಯಾ.. ಓದದ್ದಕ್ಕೆ ಧನ್ಯವಾದ.. ಕಾಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಕಾಯ ಅವರೇ, ಸರಿ ...ಈಗ ಒಂದಿಷ್ಟು ಅರ್ಥ ಆತು. <<ಈ ಪದ್ಯ ಅರ್ಥ ಆಗಿಗಿದ್ರೆ ಬೇಜಾರ್ ಮಾಡ್ಕಂಬುದು ಬೇಡ.. ಇದ್ರಲ್ಲಿ ಅಂಥ ವಿಶೇಷ ಎಂತದೂ ಇಲ್ಲೆ.. ಬರೀ ಶಬ್ದದ ಆಟ ಅಷ್ಟೇಯಾ.>> ಇಲ್ಲೇ ... ನಂಗೊತ್ತಿದ್ದು ಪದ್ಯ ಎಲ್ಲ ಅರ್ಥ ಮಾಡ್ಕಂಬ ಶಕ್ತಿ ಕಡಿಮೆ ..ಆದ್ರೂ ಪ್ರಯತ್ನ ಮಾಡ್ತೆ ಇರ್ತೆ. ಏನೇ ಆಗ್ಲಿ "ಪದ್ಯ ಅರ್ಥ ಆಗಿಗಿದ್ರೆ ಬೇಜಾರ್ ಮಾಡ್ಕಂಬುದು ಬೇಡ.. ಇದ್ರಲ್ಲಿ ಅಂಥ ವಿಶೇಷ ಎಂತದೂ ಇಲ್ಲೆ" ಹೇಳಿ reassure ಮಾಡದ್ಯಲ; ಖುಶೀ ಆತು ನೋಡು. <<ಓದದ್ದಕ್ಕೆ ಧನ್ಯವಾದ..>> ನಂಗೆ ಅರ್ಥ ಆತು; ಮಜಾ ಅಂದ್ರೆ ಹವ್ಯಕ ಕನ್ನಡ ಬರ್ದೇ ಇದ್ರೆ 'ಥ್ಯಾಂಕ್ಸ್ ಫಾರ್ ನಾಟ್ ರೀಡಿಂಗ್' ಹೇಳಿ ಅರ್ಥ ಬಪ್ಪಂಗಿದ್ದು :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕಾತ್ತಾಗಿದೆ ಪದ್ಯ, ಹಲವೆಡೆ ರೂಪಕ, ಪ್ರತಿಮೆಗಳು ಹೊಚ್ಚಹೊಸದಾಗಿ ನಳನಳಿಸಿದೆ ಕವಿತೆ. "ಅಂತೂ ಇಳೆ ಹಸಿಯಾಗಿದೆ, ಜೀವ ಖುಷಿಯಾಗಿದೆ." ಈ ಕವಿತೆ ಓದಿ ಮನಸ್ಸು ಕೂಡ..:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಣ್ಣಂಚಿನಿಂದಲೇ ಹೊರ ಇಣುಕಿ ಕಣ್ಣ ತುಂಬಿಕೊಳ್ಳುವ ತವಕವೇ? ಕಣ್ಣು ಕಾಣದ ಕನಸುಗಳ ಮನದ ಮೂಲಕ ಕಣ್ಣಲ್ಲಿ ತುಂಬುವಾಸೆಯೇ? ಕನಸ ಸಮಾಧಿಯ ಮೇಲೆ ಮನದ ಮೇಘಗಳಿಂದ ಮಳೆ ಸುರಿಸಿ ನೆಲವನ್ನು ಹಸಿರಾಗಿಸಿ ಮತ್ತೆ ಆ ಕನಸ ಚಿಗುಗಿರುವಾಸೆಯೇ? - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಸು ಪದಮಾಲೆಗೆ ಧನ್ಯವಾದ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.