ಲಕ್ಷ್ಮೀ ಚೇಳು

3

ಚೇಳುಗಳು ಮಲೆನಾಡಿನಲ್ಲಿ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭದಲ್ಲಿ, ಬಿರು ಬೇಸಿಗೆಗಳ ಸಂಜೆ ಸಮಯದಲ್ಲಿ ಕಾಣಬರುತ್ತವೆ. ಈ ಚಿತ್ರದಲ್ಲಿರುವ ಚೇಳಿಗೆ ನಮ್ಮಲ್ಲಿ ಕೆಂಪು ಬೆಣ್ಣೆ ಚೇಳು ಅಥವಾ ಲಕ್ಷ್ಮೀ ಚೇಳು ಎಂದು ಕರೆಯುತ್ತಾರೆ. ಇದು ಲಕ್ಷ್ಮಿಯ ಪ್ರತೀಕ ಎನ್ನುವ ಭಾವನೆ ನಮ್ಮಲ್ಲೆಲ್ಲಾ ಇದೆ. ಹಾಗಾಗಿ ಇದು ಮನೆಗೆ ಬಂದರೆ ಅದಕ್ಕೆ ಮೊದಲು ಅರಿಷಿನ ಕುಂಕುಮಗಳನ್ನು ಹಾಕಿ ನಂತರ ಅದನ್ನು ಅಕ್ಕಿ ವನಿಯುವ ಮರ ಗಳಲ್ಲಿ (ವಂದರಿಗಳಲ್ಲಿ) ಹಿಡಿದು ಹೊರಗೆ ಬಿಟ್ಟು ಬರುವುದು ವಾಡಿಕೆ. ಹಾಗೇ ಈ ಚಿತ್ರದಲ್ಲಿಯೂ ಚೇಳಿನ ಮೇಲೆ ಅರಿಷಿಣ ಕುಂಕುಮ ಹಾಕಿರುವುದನ್ನು ಕಾಣಬಹುದು. ಇದು ಕಂಡು ಬರುವುದು ಸ್ವಲ್ಪ ಅಪರೂಪವೇ ಸರಿ. ಬೇರೆಲ್ಲಾ ಚೇಳುಗಳನ್ನು ನಿರ್ದಯವಾಗಿ ಹೊಡೆದು ಸಾಯಿಸಿದರೂ ಇದನ್ನು ಮಾತ್ರಾ ಸಾಯಿಸುವವರು ಕಡಿಮೆ.

ಹಾಗಂತ ಇದು ಕಚ್ಚಿದರೂ ಸಹ ಸುಮಾರು 24 ಗಂಟೆಗಳ ಕಾಲ ಉರಿ ಇದ್ದೇ ಇರುತ್ತದೆ. (ನನಗೂ ಕಚ್ಚಿಸಿಕೊಂಡ ಅನುಭವ ಇದೆ) ಇದು ಕಚ್ಚಿದಾಗ ಉರಿ ಕಡಿಮೆ ಗೊಳಿಸಲು ಹಿಂದೆ ಹಣ್ಣಕೆಯ ರಸವನ್ನು ತೆಗೆದು ಗಾಯಕ್ಕೆ ಹಾಕುವುದು, ಎಲೆ ಅಡಿಕೆ ಬಾಯಲ್ಲಿ ಅಗಿದು ಅದರ ರಸವನ್ನು ಗಾಯದ ಜಾಗಕ್ಕೆ ಹಾಕುವುದು ಮಾಡುತ್ತಿದ್ದುದು ನನಗೆ ಅನುಭವಿಸಿದ ನೆನೆಪು.

ಇದೇ ರೀತಿಯ ಚೇಳುಗಳು ಬಯಲು ಸೀಮೆಗಳಲ್ಲಿ ಇರುವಂಥವುಗಳು ಮಾರಣಾಂತಿಕ ಎಂದು ಹೇಳುತ್ತಾರೆ. ನಮ್ಮ ಕಡೆಗಳಲ್ಲಿ ಮಾತ್ರಾ ಹಾಗೇನಿಲ್ಲ. ಒಂದು ದಿನಗಳ ಕಾಲ ಉರಿ ತಡೆಯುವುದು ಮಾತ್ರಾ ಕಷ್ಟದ ಕೆಲಸವೇ ಸರಿ. 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಫೋಟೋದಲ್ಲಿ ಚೇಳೇ ಕಾಣಿಸ್ತಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಕಾಣಿಸುತ್ತಿರಬೇಕು. ಚಿತ್ರ ಸರಿಯಾಗಿ ಕ್ರಾಪ್ ಆಗಿರಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಾ.. ಕಾಲು ನೀಡಿಕೊಂಡು ಆರಾಮ ಸಂಪದ ಓದುತ್ತಿದ್ದೆ. ಈಗ ಕುರ್ಚಿ ಮೇಲೆ ಕಾಲು ಮಡಚಿ ಕುಳಿತುಕೊಳ್ಳುವ ಹಾಗೆ ಮಾಡಿದಿರಿ.. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ಸೇರಿಸಿದವರು ದೇವರು ಆರ್ ಭಟ್, ನಾನಲ್ಲ. ಕ್ರೆಡಿಟ್ಸ್ ಅವರಿಗೆ ಸಲ್ಲಬೇಕಾದ್ದು. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ಇದನ್ನ ಹಳ್ಳಿ ಕಡೆ ಸಾವಿರಕಾಲು ಎಂಬುದಾಗಿ ಕರೆಯುತ್ತಾರೆ. ಇದು ಮನೆಗೆ ಬಂದರೆ, ಇದನ್ನ ನೋಡಿದರೆ ಅದೃಷ್ಟ ಖುಲಾಯಿಸಿತೆಂದೆ ಭಾವನೆ. ಇದನ್ನು ಮನೆಯಿಂದ ಆಚೆಗೆ ಬಿಡುವುದಿಲ್ಲ ಬದಲಾಗಿ ಮನೆಯಿಂದ ಹೊರ ಹೋಗದಂತೆ ನೋಡಿಕೊಳ್ಳುತ್ತಾರೆ. ದೂಪ/ಗಂಧದ ಕಡ್ಡಿ ಅಂಟಿಸಿ ಪೂಜೆ ಮಾಡುತ್ತಾರೆ. ಶುಕ್ರವಾರವೇನಾದರೂ ಮನೆಗೆ ಬಂದಲ್ಲಿ ಸಾಕ್ಷಾತ್ ಲಕ್ಷ್ಮಿಯೇ ಮನೆಗೆ ಬಂದಂತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನ, ಬರಹಗಳಿಗೆ ಚಿತ್ರಗಳನ್ನು ಅಪ್ಲೋಡ್ ಮಾಡುವಾಗ ಈಗಲೂ ನನಗೆ ಸಮಸ್ಯೆ ಇದೆ ಚಿತ್ರಗಳನ್ನು ಚಿಕ್ಕದು ಮಾಡಿದರೂ ಸಹ ಕ್ರಾಪ್ ಮಾಡಿ ಎಂದು ಬರುತ್ತದೆ. ಅದೇನೇ ಇರಲಿ ತಮ್ಮೆಲ್ಲರಿಗೂ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೇವರು ಬರೀ ಚಿತ್ರಗಳಣನ್ ಒಂದರ ಮೇಲೆ ಒಂದು ಸಂಪದಕ್ಕೆ ಸೇರಿಸುವರು ಎಂದು ತಿಳಿದಿದ್ದ ನಂಗೆ ಇವತ್ತು ಇಲ್ಲಿ ಲಕ್ಸ್ಮಿ ಚೇಳು ಬಗ್ಗೆ ಓದಿದ ಅಲ್ಲಿ ಅವ್ರು ಮರು ಪ್ರತಿಕ್ರಿಯಿಸಿದ್ದು ನೋಡಿ ಅಂತೂ ದೇವರು ಮಾತಾಡಿದರು ಅಲ್ಲಲ್ಲ ಪ್ರತಿಕ್ರಿಯಿಸಿದರೂ ಅಂತ ಖುಷಿ ಆಯ್ತು.. ಒಳ್ಳೆ ಮಾಹಿತಿ ಸಿಕ್ಕಿತು.. ವಂದನೆಗಳು ನಾ ನಿಮ್ಮ ಈ ಬರಹಕ್ಕೆ ಗಣೇಶ್ ಅವರ ಬರಹದ ಲಿಂಕು ಮೂಲಕ ಬಂದೆ... ಚೀಟಿ ಮಹಾತ್ಮೆ.. | ಸಂಪದ - Sampada http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.