ಬಾಡಿಗೆ ಮನೆ ....

4

ಮಂಜನ ಮನೆಗೆ ಹೋಗಿದ್ದೆ. ಈ ಗ್ಯಾಸ್ ಆಗಿಬಿಟ್ಟರೆ ಊಟ ಮಾಡೋದು ಕಷ್ಟ ಎಂದು ಮಂಜ ಬೇಜಾರಿನಿಂದ ಮಾತನಾಡುತ್ತಾ ಇದ್ದ. ಹಾಗಾದರೆ ಮನೆಯಲ್ಲಿ ಅಡುಗೆ ನಿನ್ನದೆ ಎಂದು ಆಯಿತು ಎಂದೆ. ಲೇ....ನೀನು ನಿನ್ನ ವಿಷಯ ಬೇರೆಯವರ ಮೇಲೆ ಹಾಕಿ ಖುಷಿಪಡಬೇಡ ಎಂದು ನನಗೆ ತಿರುಗು ಬಾಣ ಬಿಟ್ಟ. ಆಗ ನಕ್ಕೂ, ಊಟಕ್ಕೆ ನಮ್ಮ ಮನೆಗೆ ಬಂದು ಬಿಡು ಎಂದೆ. ಹಾ... ಏನು? ಎಂದ. ಊಟಕ್ಕೆ ನಮ್ಮ ಮನೆಗೆ ಬಾ, ಇಲ್ಲ ನನ್ನ ಮನೆಯಲ್ಲಿರುವ ಸಿಲಿಂಡರ್ ತೆಗೆದುಕೊಂಡು ಹೋಗು ಎಂದೆ. ಲೇ ... ನಾನು ಅದನ್ನು ಹೇಳುತ್ತ ಇಲ್ಲ ಕಣೋ ಎಂದು ಗಹ.. ಗಹಿಸಿ.. ನಗುತ್ತಾ.... ಗ್ಯಾಸ್ ಆಗಿದ್ದು ಹೊಟ್ಟೆಯಲ್ಲಿ ಎಂದ. ನಾನು ತಮಾಷೆಗೆ ಇದನ್ನ ಭಾರತ್ ಅಥವಾ ಏಚ್ ಪೀ ಗ್ಯಾಸ್ ಏಜೆನ್ಸೀ ಅವರಿಗೆ ತಿಳಿದರೆ ಕಷ್ಟ ನಿನ್ನನ್ನು ಎತ್ತಿಕೊಂಡು ಹೋಗಿ ಬಿಡುತ್ತಾರೆ ಎಂದೆ.

ಮತ್ತೆ ಏನು? ರಾಯರು ತುಂಬಾ ದಿವಸದ ಮೇಲೆ ಇಲ್ಲಿಗೆ ಪ್ರಯಾಣ ಬೇಳಿಸಿದ್ದೀರಿ ಎಂದ. ಬಾಡಿಗೆ ಮನೆ ನೋಡಿ ಕೊಂಡು ಬರೋಣ ಬರುತ್ತೀಯಾ? ಎಂದು ಕೇಳಿದೆ. ನೀನು ಇದ್ದರೆ ಸ್ವಲ್ಪ ಧೈರ್ಯ ಇರುತ್ತೆ. ಮತ್ತು ಚೌಕಾಸಿ ಮಾಡಲು ನೀನೆ ಸರಿ ಎಂದೆ. ನಾನು ಬರಲ್ಲ, ನೀನು ಬೇಕಾದರೆ ಹೋಗು ಎಂದ. ಕಡೆಗೆ ಒಬ್ಬನೇ ಮನೆ ಹುಡುಕಲು ಹೊರಟೆ. ಗಾಡಿ ಮೇಲೆ ತಲೆ ಅತ್ತ.. ಇತ್ತ.. ಮಾಡುತ್ತಾ ಹೋಗುವ ನನ್ನನ್ನು ನೋಡಿ ತುಂಬಾ ಜನ ವಿಚಿತ್ರವಾಗಿ ನೋಡಿ ನಕ್ಕಿದ್ದು ಆಯಿತು. ಹಲ್ಲು ಇದ್ದಾಗ ಕಡ್ಲೆ ಇರಲ್ಲ , ಕಡ್ಲೆ ಇದ್ದಾಗ ಹಲ್ಲು ಇರಲ್ಲ ಎಂಬ ಗಾದೆ ಹಾಗೆ ನನ್ನ ಅವಸ್ಥೆ ಆಗಿತ್ತು. ಒಂದು ಮನೆ ಕೂಡ ಸಿಗಲೇ ಇಲ್ಲ. ಕಡೆಗೆ ನನಗೆ ನೋ ಪಾರ್ಕಿಂಗ್ ಎಂಬ ಬೋರ್ಡ್ ಕೂಡ ಮನೆ ಬಾಡಿಗೆ ಎಂಬ ಹಾಗೆ ಕಾಣಿಸುತಿತ್ತು.

ಕಡೆಗೆ ಒಂದು ಮನೆ ಮುಂದೆ ಬಾಡಿಗೆಗೆ ಎಂಬ ಬೋರ್ಡ್ ನೇತು ಹಾಕಿದ್ದರು. ನಾನು ಒಳಗಡೆ ಹೋದೆ, ನನ್ನ ಮೇಲಿಂದ ಕೆಳಗಡೆವರೆಗೂ ಅನಾಮತ್ತಾಗಿ ನೋಡಿ ನಾವು ನಾನ್-ವೇಜ್ ನವರಿಗೆ ಕೊಡುವುದಿಲ್ಲ ಎಂದರು. ನಾನು ವೇಜ್ ಎಂದೆ. ನಾನು ಅದನ್ನೇ ಹೇಳಿದ್ದು ಕಣ್ರೀ ಎಂದರು. ಕಡೆಗೆ ಕಷ್ಟ ಪಟ್ಟು ತಿಳಿಸಿದ ಮೇಲೆ ಮನೆ ತೋರಿಸಿದರು. ಮನೆ ಅಷ್ಟು ಇಷ್ಟವಾಗಲಿಲ್ಲ. ಹೀಗಾಗಿ ಸುಮ್ಮನೇ ಮತ್ತೆ ಮುಂದೆ ಹೊರಟೆ.

ಮತ್ತೊಂದು ಬಾಡಿಗೆ ಮನೆ ಕಾಣಿಸಿತು. ಬೆಲ್ ಮಾಡಿ, ನಾನು ಅವರು ಕೇಳುವ ಮೊದಲೇ ನಾನು ಸಸ್ಯಾಹಾರಿ ಎಂದೆ. ಅವರು ಅವಾಕ್ಕಾಗಿ ನೋಡಿದರು. ಕಡೆಗೆ ಸುಧಾರಿಸಿಕೊಂಡು ಮನೆ ಬಾಡಿಗೆ ಎಂದೆ. ಓsss ಅದಾ ಎಂದು ಮನೆ ತೋರಿಸಿದರು. ಮನೆಯಲ್ಲಿ ಇರುವ ವಸ್ತು ಎಲ್ಲೆಲ್ಲಿ ಇಡಬೇಕು ಎಂದು ನಾನು ಯೋಚಿಸುತ್ತಿದ್ದರೆ, ಅವರು ಮಾತ್ರ ವಾಸ್ತು ಬಗ್ಗೆ ಪುರಾಣ ಶುರು ಮಾಡಿದ್ದರು. ಇದು ವಾಯು ಮೂಲೆ , ಅಗ್ನಿ ಮೂಲೆ ಎಂದೆಲ್ಲ ಹೇಳಿ ತಲೆ ತಿಂದಿದ್ದರು. ಇಲ್ಲಿ ಮೊದಲು ಒಬ್ಬ ಹುಡುಗ ಇರುತ್ತಿದ್ದ. ಬಂದ ಎರಡೇ ತಿಂಗಳಲ್ಲಿ ಮದುವೆ ಆಯಿತು ಎಂದರು. ಮತ್ತೆ ಎರಡು ವರ್ಷ ಇಲ್ಲೇ ಇದ್ದರು ಮತ್ತು ಒಂದು ಮಗು ಕೂಡ ಆಯಿತು ಎಂದರು. ನನಗೆ ಮೊದಲೇ ಮದುವೆ,ಮಗು ಎರಡು ಆಗಿದೆ ಎಂದು ಹೇಳೋಣ ಎಂದುಕೊಂಡೆ. ಆದರೂ ಸುಮ್ಮನೇ ಮನೆ ನೋಡಿ ಮನೆಯವರನ್ನೂ ಕರೆದುಕೊಂಡು ಬಂದು ತೋರಿಸಿ, ಆಮೇಲೆ ಹೇಳುತ್ತೇನೆ ಎಂದು ಕಾಲುಕಿತ್ತೆ.

ಮತ್ತೆ ಎಷ್ಟು ತಿರುಗಿದರು ಮನೆ ಸಿಕ್ಕಲಿಲ್ಲ. ಕಡೆಗೆ ಮನೆಗೆ ಬಂದೆ. ಅಷ್ಟರಲ್ಲಿ ಮಡದಿ ನಾನು ಒಂದು ಮನೆ ನೋಡಿದ್ದೇನೆ ಎಂದಳು. ಆಯಿತು ಅದನ್ನು ನೋಡಿಯೇ ಬಿಡೋಣ ಎಂದು ಹೋದೆವು. ಬಾಡಿಗೆ ಏನೋ ಕಡಿಮೆ ಇತ್ತು...ಆದರೆ ಮನೆ ಮಾತ್ರ ಉದ್ದವಾಗಿ ಪಟ್ಟಿಯ ಹಾಗೆ ಇತ್ತು. ಯಾವುದು ಬೆಡ್‌ರೂಮ್ ಯಾವುದು ಹಾಲ್ ಎಂದು ಪತ್ತೆ ಹಚ್ಚುವುದೇ ಒಂದು ಸಮಸ್ಯೆಯಾಗಿತ್ತು. ಅವರ ಎದುರಿಗೆ ಏನು ಹೇಳದೇ ಆಮೇಲೆ ಬರುತ್ತೇವೆ ಎಂದು ಹೇಳಿ ಹೊರಗಡೆ ಬಂದೆವು. ನನ್ನ ಮಡದಿಗೆ ಅದು ಇಷ್ಟವಾಗಿತ್ತು. ನಾನು ಮನೆ ಸರಿ ಇಲ್ಲ ಎಂದೆ. ನಿನ್ನ ಚಾಯ್ಸ್ ಸರಿ ಇಲ್ಲ ಕಣೇ ಎಂದೆ. ಅದು ನಿಜ ಕಣ್ರೀ ಈಗೀಗ ಅರ್ಥ ಆಗುತ್ತಾ ಇದೆ ಎಂದು ನನ್ನ ಮುಖ ನೋಡಿ ಅಂದಳು.

ಸಂಜೆ ಅಂತರ್ಜಾಲದಲ್ಲಿ ಒಂದೆರಡು ಬಾಡಿಗೆ ಮನೆ ಹುಡುಕಿದೆ. ಒಬ್ಬರಿಗೆ ಫೋನ್ ಮಾಡಿ ನಿಮ್ಮ ಮನೆ ಟುಲೆಟ್ ಇದೆ ಅಲ್ಲ ಎಂದೆ. ಅಲ್ಲಿಂದ ಯೂ ಆರ್ ಟೂ ಲೇಟ್ ಎಂದು ಉತ್ತರ ಬಂತು. ಮತ್ತೆ ಒಂದೆರಡು ಜನರಿಗೆ ಕರೆ ಮಾಡಿ ಅವರ ವಿಳಾಸ ತಿಳಿದು ನಾಳೆಗೆ ಹೋಗೋಣ ಎಂದು ನಿರ್ಧರಿಸಿ ಆಗಿತ್ತು.

ಮರುದಿನ ವಿಳಾಸ ಹಿಡಿದು ಹೊರಟೆ. ಒಂದು ಮನೆಯಲ್ಲಿ ಅಜ್ಜಿ ಮಾತ್ರ ಇದ್ದರು. ನನ್ನನ್ನು ಹೊರಗಡೆ ಇಂದ ಮಾತ್ರ ಮಾತನಾಡಿಸಿ ಕಳುಹಿಸಿದರು. ಮತ್ತೊಂದು ಮನೆಯಲ್ಲಿ ಅವರಿಗೆ ಬಾಡಿಗೆ ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿದೆ. ಅದಕ್ಕೆ ನಮ್ಮ ಮೋಟರ್ ಕೆಟ್ಟರೆ ನೀವು ದುಡ್ಡು ಕೊಡಬೇಕು ಎಂಬ ಉದ್ದಟ್ ವಾಗಿ ಹೇಳಿದರು. ಇವರ ಸಹವಾಸ ಸಾಕು ಎಂದು ಮತ್ತೊಂದು ಮನೆಗೆ ಹೋದೆ. ಮನೆ ತುಂಬಾ ಚೆನ್ನಾಗಿ ಇತ್ತು. ಸಂಜೆಗೆ ಹೋಗಿ ಮನೆ ಮಡದಿಗೂ ತೋರಿಸಿದೆ. ಅವಳಿಗೂ ಸರಿ ಅನ್ನಿಸಿತು. ಕಡೆಗೆ ಅದನ್ನೇ ಒಪ್ಪಿಗೆ ಸೂಚಿಸಿದೆವು. ಅವರು ನನ್ನ ಮಗನ ಜೊತೆ ತಮಾಷೆ ಮಾಡುತ್ತಾ, ಅವನಿಗೆ ಎ ಬಿ ಸಿ ಡಿ ಎಲ್ಲ ಕೇಳಿದರು. ಕೂದಲಿನ ಬಣ್ಣ ಏನು? ಎಂದು ಇಂಗ್ಲೀಶ್ ನಲ್ಲಿ ಕೇಳಿದರು. ಆಗ ಮಗ ನನ್ನ ಕೂದಲಿನ ಬಣ್ಣ ಕರಿ, ನಿಮ್ಮದು ಬಿಳಿ ಎಂದು ಬಿಟ್ಟ. ಸಧ್ಯ ಅವರು ಬೇಜಾರ್ ಮಾಡಿಕೊಳ್ಳಲಿಲ್ಲ. ಮನೆ ಬಾಡಿಗೆ ಎಲ್ಲವನ್ನು ಮಾತನಾಡಿ ಮನೆಗೆ ಬಂದೆವು.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಅನ್ನಿಸಿತು. ಮೊದಲನೆ ಮನೆ ಹುಡುಕಿ ಕೊಟ್ಟಿದ್ದು ನನ್ನ ಗೆಳೆಯ. ಮರುದಿನ ಬಾಡಿಗೆ ಮನೆ ಹುಡುಕಲು ಪಟ್ಟ ಕಷ್ಟದಿಂದ ಬಾಡಿ ಬೆಂಡಾಗಿ ಹೋಗಿತ್ತು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಓದುತ್ತಾ ಹೋದಂತೆ ಎಲ್ಲವನ್ನೂ ನಾನೇ ಅನುಭವಿಸಿದಂತಾಯ್ತು! :) -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಧನ್ಯವಾದಗಳು ಮತ್ತು ವಂದನೆಗಳು :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲರೆ, ಮಹಾನಗರದಲ್ಲಿ ನಿತ್ಯ ನಡೆಯುವ ಅನುಭವಕಥನವೇ ಸರಿ.ನವಿರಾದ ಹಾಸ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಧನ್ಯವಾದಗಳು ಮತ್ತು ವಂದನೆಗಳು :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲ್, ಚೆನ್ನಾಗಿದೆ ನಿಮ ಬಾಡಿಗೆ (ಮನೆ) ಪ್ರಹಸನ. ಯಾವಾಗಲು ಮಡದಿ ಹೇಳುವ ಮನೆಗೆ ಹೋದರೆ ಕ್ಷೇಮ. ಉದ್ದವಿರಲಿ, ಅಡ್ಡವಿರಲಿ ಇದು ನನ್ನ ಅನುಭವ. ಇರಲಿ , ನನ್ನ ಸ್ನೇಹಿತ ತನ್ನ ಮನೆ ಬಾಡಿಗೆಗೆ ಇದೆ ಯಾರಾನ್ನಾದರೂ ಹುಡುಕಿಕೊಡಯ್ಯ ಎಂದಿದ್ದ. ಅವನು ಇರುವುದು ಮುಂಬ್ಯೆನಲ್ಲಿ. ಹೀಗಾಗಿ ನಾನು ಜಾಹಿರಾತು ಹಾಕಿದೆ. 1bhk ಎಂದು. ಒಬ್ಬ ದಂಪತಿಗಳು ಬಂದರು. ಬರುವ ಮುಂಚೆ ಎಲ್ಲವನ್ನು ಫೋನಿನ್ನಲ್ಲಿ ವಿವ್ವರಿಸಿದ್ದೆ. ಆದರೂ ಮನೆ ನೋಡಿದ ಮೇಲೆ ಅವರ ಮಡದಿ ನಾನು ಎರಡು ರೂಂ ಇದೆ ಅಂದುಕೊಂಡಿದ್ದೆ ಎಂದರು. ನಾನು ಪಕ್ಕದ ಮನೆ ಮಹಡಿಯನ್ನು ತೋರಿಸಿ ಅಲ್ಲಿ ಒಂದು ರೂಂ ಖಾಲಿ ಇದೆ ಎಂದೆ. ಆಕೆ ನನ್ನನ್ನೆ ದುರುಗುಟ್ಟಿ ನೋಡಿದರು ತಲಹರಟೆ ಎನ್ನುವ ಹಾಗೆ. ಬಂದ ಒಂದು ಗಿರಾಖಿ ಹೋಯಿತು! ವಂದನೆಗಳು/ಮಧ್ವೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ ಹ ಹ ..ಪಕ್ಕದ ಮನೆ ಮಹಡಿ ರೂಮ್ ಚೆನ್ನಾಗಿರಲಿಲ್ಲವೇ ....? ಹ ಹ್ಹ ಹ್ಹ ........ತುಂಬಾ ಧನ್ಯವಾದಗಳು ಮತ್ತು ವಂದನೆಗಳು :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲ್ ಜಿ ನನ್ನನ್ನು ಕ್ಷಮಿಸಿ...ಅರ್ಥವಾಯಿತು ಎಂದುಕೊಳ್ಳುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ... :-))))))). ತುಂಬಾ ಧನ್ಯವಾದಗಳು ಮತ್ತು ವಂದನೆಗಳು :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

-:)) ನಾನೂ ಹಿಂದೊಮ್ಮೆ ಮನೆಗಾಗಿ ಪರದಾಡಿದ್ದ ವಿಷಯ ನೆನಪಿಸಿದಿರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಧನ್ಯವಾದಗಳು ಮತ್ತು ವಂದನೆಗಳು ಸರ್ :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊನ್ನೆ ರವಿವಾರ ನಮ್ಮ ಯಜಮಾನರ ಸ್ನೇಹಿತರೊಬ್ಬರಿಗೆ ಬಾಡಿಗೆ ಮನೆ ಹುಡುಕಿ ಕೊಡುವಷ್ಟರಲ್ಲಿ ಸಾಕಾಯ್ತು.. ಅವರು ಬೆಂಗಳೂರಿಗೆ ಹೊಸಬರು... ಅಬ್ಬ್ಬಬ್ಬಾ.... ಎರಡು ಮೋಟಾರ್ ಸೈಕಲ್ ತೊಗೊಂಡು ಇಬ್ಬರೂ ದಂಪತಿಗಳು ಮತ್ತಿಕೆರೆ ಸುತ್ತಿ ಸುತ್ತಿ ಸಕಾಯ್ತು... ಕೊನೆಗೆ ನಮ್ಮನೆ ಪಕ್ಕದಲ್ಲೇ ಸಿಕ್ತು.... ಪಕ್ಕದ್ ಮನೆ ಬಾಡಿಗೆ ಇದೆ ಅಂತಾನೇ ಗೊತ್ತಾಗಲ್ಲ ನೋಡಿ..... ಒಳ್ಳೇ ಅನುಭವದ ಲೇಖನ.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವೊಬ್ಬರು ಬೋರ್ಡ್ ಸಹಿತ ಹಾಕಿರಲ್ಲ .....ಕೊನೆಗೂ ಮನೆ ಸಿಕ್ಕಿತು ಸಂತೋಷ .... ತುಂಬಾ ಧನ್ಯವಾದಗಳು ಮತ್ತು ವಂದನೆಗಳು :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ತಾಗಿದೆ <ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಅನ್ನಿಸಿತು> ಅದ್ರ ಕಷ್ಟ ಯಾಕೆ ಹೇಳ್ತೀರಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನೆ ಏನೋ ಸಿಗುತ್ತವೆ ಆದರೆ ವಾಸ್ತು , ದೇವರ ಮನೆ ಎಲ್ಲ ಇರುವಂತಹ ಮನೆ ಸಿಕ್ಕೋದು ತುಂಬಾ ಕಷ್ಟ .... ಕೆಲವೊಂದು ನನಗೆ ಇಷ್ಟಆದರೆ...ನನ್ನ ಮಡದಿಗೆ ಇಷ್ಟವಾಗಲಿಲ್ಲ ... ಹೀಗೆ ...:-))))) ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಎಂದಿನಂತೆ ಮನಸ್ಸನ್ನು ಹಗುರವಾಗಿಸುವ ಬರವಣಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಧನ್ಯವಾದಗಳು ಮತ್ತು ವಂದನೆಗಳು :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊನೆಗೂ ಮನಸ್ಸಿಗೆ ಹಿಡಿಸಿಕೊಂಡ ಮನೆ ಸಿಕ್ಕಿತಲ್ಲಾ? ಗೋಪಾಲ್ ರವರೆ ಚೆನ್ನಾಗಿದೆ ಸಿಹಿ ಬರಹ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಧನ್ಯವಾದಗಳು ಮತ್ತು ವಂದನೆಗಳು :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದು ನಿಜ. . . ಬೆಂಗಳೂರುನಲ್ಲಿ ಬಾಡಿಗೆ ಮನೆ ಹುಡುಕುವುದು, ಹರಸಾಹಸೆವೇ ಸರಿ!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಧನ್ಯವಾದಗಳು ಮತ್ತು ವಂದನೆಗಳು.:-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.