ಯೋಗ್ಯ ರಾಗಿ ಭೋಗ್ಯ ಮ್ಯಾಗಿ!

0

"ಒಂದು ಬಾರಿ ಉಣ್ಣುವವನು ಯೋಗಿ .ಎರಡು ಬಾರಿ ಉಣ್ಣುವವನು ಜೋಗಿ . ಮೂರು ಬಾರಿ ಉಣ್ಣುವವನು ರೋಗಿ . ನಾಲ್ಕು ಬಾರಿ ಉಣ್ಣುವವನನ್ನ ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗಿ!....

ಮ್ಯಾಗಿ ಈಗ ನಮ್ಮನೆಯ ಮಹಾಪ್ರಸಾದವಾಗಿ ಪರಿಣಮಿಸಿದೆ . ಮೊದ ಮೊದಲು ಈ ಮ್ಯಾಗಿಯನ್ನು ನಾನು ಕಂಡಿದ್ದು 8 ವರ್ಷಗಳ ಹಿಂದೆ ನನ್ನ ಗೆಳಯ ಶ್ರೀಧರ ಬೆಂಗಳೊರಿನಲ್ಲಿ ಒಂದು ಹೋಟೆಲ್ಲಿಗೆ ಕರೆದುಕೊಂಡು ಹೋಗಿದ್ದಾಗ. ಒಳಗೆ ಹೋಗುವ ಮೊದಲೇ ಇದು ಸಸ್ಯಾಹಾರಿ ಹೋಟೆಲ್ ಹೌದೋ ಅಲ್ಲವೋ ಎಂದು ದೃಡಪಡಿಸಿಕೊಂಡ ಮೇಲೆ ಒಳಗೆ ಹೋಗಿದ್ದು. ಏಕೆಂದರೆ , ಶ್ರೀಧರ ನಿಜವಾಗಿಯೂ ಜನಿವಾರದ ಹುಡುಗನೇ ಆಗಿದ್ದರು ಅನಂತರ Engineering ಕಲೆತು ಮುಗಿಸುವಸ್ಟರಲ್ಲೇ ಎಲ್ಲ ಜಾನುವಾರಗಳನ್ನು ಜಗಿದಿದ್ದ.

ಆನಂತರ ಅವನು ನನಗೆ ಕೇಳಿದ ಏನ್ಬೇಕು ಆರ್ಡರ್ ಮಾಡು ಎಂದು. ನಾನು ಮಸಾಲೆ ದೋಸೆ ಎಂದೆ. ಅದಕ್ಕೆ ಅವನು "ಎ ಡಾಲ್ಡಾ " (ಜಿಡ್ಡು ನನ್ನ ಮಗನೆ) ಏನಾದರು ಸ್ಪೆಷಲ್ ಆರ್ಡರ್ ಮಾಡು ಎಂದ. ಈ ಸ್ಪೇಷಲಗಳ ಅನುಭವವಿರುವುದರಿಂದ ನನಗೆ ಅದೇ ಸಾಕು ಎಂದೆ. (ಒಂದು ದಿವಸ ಹೋಟೆಲ್ಗೆ ಹೋದಾಗ ಪಾಯಸವನ್ನು ಅಂದರೆ "ನವರತ್ನ ಕುರ್ಮಾ" ವನ್ನು ನೆಂಚಿಕೊಂಡು ರೋಟಿ ತಿಂದಿದ್ದು). ಇರಲಿ ಬಿಡು ಮಗ ನನಗೆ ಮಸಾಲೆ ಅಥವಾ ತುಪ್ಪದ ದೋಸೆನೆ ಸಾಕು, ನಿನಗೇನು ಬೇಕೋ ನೀನು ಆರ್ಡರ್ ಮಾಡಿಕೋ ಎಂದೆ. ಅವನು ನನಗೆ ಒಂದು ತುಪ್ಪದ ದೋಸೆ ಮತ್ತು ತನಗೆ ಮಂಚೂರಿ ಮತ್ತು ನೋಡಲ್ಸ ಆರ್ಡರ್ ಮಾಡಿದ.

ಮಾಣಿ ಸ್ವಲ್ಪ ಸಮಯದ ನಂತರ ಇಬ್ಬರ ತಿಂಡಿಯನ್ನು ತಂದಿಟ್ಟ. ನನ್ನಗೆ ಹೇಗಿದ್ದರೂ ಗೊತ್ತಿತಲ್ಲ ಅದಕ್ಕೆ ನಾನು ನನ್ನ ಪ್ಲೇಟ್ ಮಾತ್ರ ತಿನ್ನುತ್ತಿದ್ದೆ . ಅವನಿಗೆ ಎಲ್ಲ ಪ್ಲೇಟ್ ಗಳ ರುಚಿ ನೋಡುವ ಅಭ್ಯಾಸ. ನನ್ನ ಪ್ಲೆಟಿಗೂ ಕೈ ಹಾಕಿದ "ಏ ಮಚ್ಚ ಬೇಡ" ಎಂದೆ ಕೋಪದಿಂದ . ಏಕೆ? ಎಂದಾಗ ಇದೇನೋ ಚಿಕೆನ್ನು ಮತ್ತು ಅದರ ಕರಳುಗಳನ್ನ ತಿಂತ ಇದ್ದೀಯ ನನ್ನ ತಿಂಡಿ ಮುಟಬೇಡ please ...ಎಂದೆ. ಅದಕ್ಕೆ ಅವನು ನಗುತ್ತ ಇದು ಗೋಬಿ ಮಂಚೂರಿ ಅಂತ ಇದನ್ನ ಎಲೆ ಕೊಸಿನಿಂದ ಮಾಡುತ್ತಾರೆ ಇದು ಪೂರ್ತಿ ಸಸ್ಯಾಹಾರಿ ಎಂದ .

ಮತ್ತೇ ಅದು ... ಎಂದು ನಾನು ರಾಗವೆತ್ತಿದಾಗ ಅದು ನಮ್ಮ ಶಾವಿಗೆ ತರಹನೆ ಕಣೋ ಆದರೆ ಸ್ವಲ್ಪ ದಪ್ಪಗಾಗಿರುತ್ತೆ ಎಂದ. ಇದು ಕೂಡ ಸಸ್ಯಹಾರಿನೆ, "Chinese Special" ಆಹಾರ ಎಂದು ಸಣ್ಣ ಭಾಷಣ ಬಿಗಿದ. ಅವನಿಗೆ ನನ್ನ ತಿಂಡಿಯಲ್ಲಿಯ ಸ್ವಲ್ಪ ಭಾಗ ನಾನೇ ಕೊಟ್ಟು , ಇನ್ನು ನನ್ನ ಪ್ಲೇಟ್ ಕಡೆ ತಲೆ ಹಾಕಬೇಡಪ್ಪ ಅಂತ ಹೇಳಿ, ನನ್ನ ತಿಂಡಿಯನ್ನ ತಿಂದು ಮುಗಿಸಿದೆ. ಅವನು ತಿನ್ನುವ ಅವಸ್ಥೆ ನೋಡಿ ದಂಗಾದೆ. ಎರಡು ಕಡ್ಡಿಗಳಿಂದ ಹಿಡಿದು ತಿನ್ನುತಿದ್ದ. ಲೇ ಕೈಗಲಿಂದಲೇ ತಿನ್ನಪ್ಪ ಎಷ್ಟು ಹೊತ್ತು ಮಾಡ್ತಿಯ ನನ್ನ ಬಸ್ ಇರೋದು 7 ಘಂಟೆ ಗೊತ್ತು ತಾನೆ ಎಂದೆ. ಅದು ಟೇಬಲ್ ಮ್ಯಾನರ್ಸ್, ಹಾಗೆಯೆ ತಿನ್ನ ಬೇಕು ಅಂತ ಹೇಳಿ ಹಾಗೆಯೆ ತಿಂದು ಮುಗಿಸಿದ್ದ .ಬೆಂಕಿ ಪೊಟ್ಟಣದ ಕಡ್ಡಿಗಳೆಲ್ಲ ಆ ಗೋಬಿ ಮಂಚುರಿಯ ಮೇಲೆ ನೋಡಿ ನಕ್ಕು ಸುಮ್ಮನಾದೆ.

ಹೋಟೆಲಿನಿಂದ ಹೊರಗೆ ಬಂದ ಮೇಲೆ ಹೇಳಿದೆ ಚೈನೀಸ್ ತಿನ್ದಿದಕ್ಕೆ ಕಣೋ ನಿನ್ನ ಕಣ್ಣುಗಳು ಸ್ವಲ್ಪ ಚಿಕ್ಕದಾಗಿವೆ ಎನ್ದೆ ತಮಾಷೆಗಾಗಿ . ಹೀಗೆ ಚೈನೀಸ್ ತಿಂತ ಇದ್ರೆ ನಿನಗ್ಯಾರು ಬ್ರಾಹ್ಮಣ ಕನ್ಯಾ ಕೊಡಲ್ಲ ಎಂದು ಸತಾಯಿಸಿದೆ.

ಈಗ ನಮ್ಮನೆಯಲ್ಲಿ ಮಾಗಿಯ ಚಳಿಯೇ ಇರಲಿ... ಇಲ್ಲ ಉರಿಬಿಸಿಲೆ ಇರಲಿ... ಮನೆಯಲ್ಲಿ ಮಾತ್ರ ಮ್ಯಾಗಿಯ ಮಂತ್ರ. ನನ್ನ ಮಡದಿ ಮತ್ತು ಮಗನಿಗೆ ಮ್ಯಾಗಿ ಇದ್ದರೆ ಸಾಕು ಅದೇ ಪಂಚ ಪಕವಾನವಿದ್ದಹಾಗೆ. ಅಷ್ಟೇ ಏಕೆ ಒಂದು ದಿವಸ ತಿಂದು ಉಳಿದ ಮ್ಯಾಗಿಯನ್ನು ನಮ್ಮನೆಯ ಗೋಡೆ ಮೇಲೆ ಹಾಕಿದ್ದೆ ಅದನ್ನು ತಿಂದ ಒಂದು ಕಾಗೆ ಮರುದಿನವೂ ಹಾಜರ ಆಗಿ ... ಕಾ .. ಕಾ .. ಎನ್ನುವ ಬದಲು ಮ್ಯಾಗಿ .. ಮ್ಯಾಗಿ .. ಅಂತ ಜಪ ಮಾಡುತ್ತಿತ್ತು!.

ಹೀಗೆ ಒಂದು ದಿವಸ ಬ್ರಿಗೇಡ್ ರೋಡ್ನಲ್ಲಿ ನನ್ನ ಮಡದಿ ,ಮಗನೊಂದಿಗೆ ಹೋಗುತ್ತಿದ್ದಾಗ ಒಂದು ನಿಗ್ರೋ ಹುಡುಗಿಯ ತಲೆಯನ್ನು ನೋಡಿ "ಮ್ಯಾಗಿ .. ಮ್ಯಾಗಿ .." ಅಂತ ಅಳಹತ್ತಿದ. ಮತ್ತೇ Chinees ಹೋಟೆಲ್ಲಿಗೆ ಹೋಗಿ ಮ್ಯಾಗಿ ತಿನ್ನಿಸಿ ಕರೆದುಕೊಂಡು ಬಂದಾಗ ಸಮಾಧಾನವಾಗಿತ್ತು . ಇಗ ಮಗನ ಜೊತೆ ಈ ಜೋಗಿಗು ಅಭ್ಯಾಸವಾಗಿ ಬಿಟ್ಟಿದೆ .

ನಿಮಗೆ ಯಾವತ್ತಾದರೂ ಶ್ರೀನಿವಾಸನಗರದ ಕಡೆಯಿಂದ ಹೋಗುತ್ತಿದ್ದಿರ ದಯವಿಟ್ಟು ನಿಲ್ಲದೆ ಹಾಗೆ ಹೋಗಿ , ಇಲ್ಲದ್ದಿದರೆ ನಿಮಗೂ ಸಿಗುವುದು ಮ್ಯಾಗಿ ... ಮ್ಯಾಗಿ!!!.

ರಾಗಿ ತಿನ್ನುವದು ನಿರೋಗಿಯಾಗಿರಲು . ಮ್ಯಾಗಿ ತಿನ್ನುವದು ನನ್ನ ಮಗನಿಗಾಗಿ ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಳ್ಳೆ ಮ್ಯಾಗಿ ಕಥೆ ಚೆನ್ನಾಗಿದೆ......
ಮ್ಯಾಗಿ ತಿನ್ನುವದು ನನ್ನ ಮಗನಿಗಾಗಿ ....
ಮಗನಿಗೋಸ್ಕರ ಇನ್ನೇನ್ ತಿಂತೀರ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

tumba tindiddene. helalu aguvudilla.:p

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಏಕೆಂದರೆ , ಶ್ರೀಧರ ನಿಜವಾಗಿಯೂ ಜನಿವಾರದ ಹುಡುಗನೇ, ಆಗಿದ್ದರು ಅನಂತರ Engineering ಕಲೆತು ಮುಗಿಸುವಸ್ಟರಲ್ಲೇ ಎಲ್ಲ ಜಾನುವಾರಗಳನ್ನು ಅಸ್ವಾದಿಸಿದ್ದ" . ಇದೊಂದು ಬಿಟ್ಟು ಉಳಿದುದೆಲ್ಲ ಆಸ್ವಾದಿಸಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<"ಏಕೆಂದರೆ , ಶ್ರೀಧರ ನಿಜವಾಗಿಯೂ ಜನಿವಾರದ ಹುಡುಗನೇ, ಆಗಿದ್ದರು ಅನಂತರ Engineering ಕಲೆತು ಮುಗಿಸುವಸ್ಟರಲ್ಲೇ ಎಲ್ಲ ಜಾನುವಾರಗಳನ್ನು ಅಸ್ವಾದಿಸಿದ್ದ" > ಸುಮ್ನೆ ತಮಾಷೆಗೆ ಬರೆದಿದ್ದು. ಮೆಚ್ಚಿದ್ದಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.