ಉಗ್ರವಾದ

4.6

ಮೊದಲೊಮ್ಮೆ
ಅಪರೂಪದ
ಗಿಡವೊಂದು
ಕಣ್ಣಿಗೆ ಬಿತ್ತು
ಹಾಗೆಯೇ ಬಿಡಲು
ಮನಸ್ಸಾಗದೇ
ಎತ್ತಿ ತಂದು
ಜೋಪಾನವಾಗಿ
ಮನೆಯೊಳಗೆ
ಇಟ್ಟು ಪೋಷಿಸಿದೆ
ಈಗ ಅದೇ
ನನ್ನೆಲ್ಲವನ್ನೂ
ಅಪೋಷಣೆಯಾಗಿಸಿದೆ
ಸ್ವಂತಿಗೆಗೆ
ಆಸ್ಪದವೇ
ಇಲ್ಲದಂತೆ ಆವರಿಸಿ
ಬೆಳೆದು ಬಿಟ್ಟಿದೆ
ಸಾರ್ವತ್ರಿಕವಾಗಿಬಿಟ್ಟಿದೆ!!
ಈಗ ನಾನೇ
ಅನ್ವೇಷಣೆಯಲ್ಲಿದ್ದೇನೆ
ನೆಮ್ಮದಿಯಿಂದಿರಲು ನೆಲ
ಮೇಲೊಂದು ಸೂರು

ಚಿತ್ರ ಕೃಪೆ: ಶ್ರೀಕಾಂತ್ ಮಾಂಜ್ರೇಕರ್

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೋಪಿನಾಥರೆ ಚೆನ್ನಾಗಿದೆ.. ಚಿತ್ರ ನೋಡಿ ಬರೆದಿದ್ದೋ?ಅಥವಾ ಬರೆದು ಚಿತ್ರ ಹುಡುಕಿದ್ದೋ? ಏನೇ ಇರಲಿ ಸದ್ಯದ ಪರಿಸ್ಥಿತಿ ಅಳೆದು ತೂಗಿ ಹೇಳುವ ಕವನ.. ಬಹಳ ಇಷ್ಟವಾಯಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತರೇ ಕವನಕ್ಕೆ ಸರಿಯಾದ ಚಿತ್ರ ಹುಡುಕುತ್ತಲಿದ್ದೆ ನಿನ್ನೆ ಸಿಕ್ಕಿತು ಪ್ರತಿಕ್ರಿಯೆಗೆಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ಒಳ್ಳೆಯ ಉಪಮೆ..ನನಗನ್ನಿಸುವಂತೆ ಇಲ್ಲಿ ಮರ ಮೊದಲೇ ಇತ್ತು, ಗುಡಿಸಲು ಆಮೇಲೆ ಕಟ್ಟಿದಂತೆ ತೋರುತ್ತದೆ... ಅಚ್ಚರಿ ಏನೆಂದರೆ ನಿಮ್ಮ ಈ ಉಗ್ರವಾದದ ಉಪಮೆ ಅಲ್ಲಿಗೂ ಸರಿಹೊಂದುತ್ತದೆ!! ತನ್ನ ಪಾಡಿಗೆ ತಾನಿದ್ದ ಆ ಮರವನ್ನು ಆ ಗುಡಿಸಲು ನುಂಗಿ ಹಾಕಿ ಹೇಗೆ ಆ ಮರವನ್ನೇ ನಿರ್ಜೀವದಂತೆ ಮಾಡಿದೆ ಆಲ್ವಾ. ಅಪರೂಪದ ಚಿತ್ರ-ಕವನಕ್ಕೆ ಧನ್ಯವಾದಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಾಯಕ್ ಅವರೇ ಪ್ರತಿಕ್ರಿಯೆಗೆ ಧನ್ಯವಾದಗಳು ಸಮಾಜ ಘಾತಕ ಶಕ್ತಿಯಿಂದ ನಾವೆಲ್ಲಾ ಹೇಗೆ ಸ್ವಲ್ಪ ಸ್ವಲ್ಪವಾಗಿ ಆಕ್ರಮಿಸಲ್ಪಡುತ್ತೇವೆ, ನೋಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ. ಚಿತ್ರ ಕವಿತೆ ಎರಡೂ ಮ್ಯಾಚಿಂಗ್ ಮ್ಯಾಚಿಂಗ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಚೇತೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೂಕ ಪ್ರೇಕ್ಷಕರಾಗುಳಿದು, ಹೆಮ್ಮರವಾಗಿ ಬೆಳೆಯಲು ಬಿಡುವ ಮೊದಲೇ, ಕಾರ್ಯತತ್ಪರರಾಗಿದ್ದಿದ್ದರೆ, ನಮ್ಮಲ್ಲಿ ಇದ್ದಿರುತ್ತಿರಲಿಲ್ಲ ಇಂದು ಈ ಕೊರಗು ಉಗ್ರವಾದ ಎನ್ನುವುದು ಕಣ್ಣಿಗೆ ಕಾಣಿಸುವುದಷ್ಟೇ ಅಲ್ಲ ಒಮ್ಮೊಮ್ಮೆ ಯೋಚಿಸಿ ನೋಡಿದರೆ ಆವರಿಸಿಬಿಟ್ಟಿದೆ ಹೊರಗಿನಂತೆ ನಮ್ಮಲ್ಲೆರ ಮನಸ್ಸಿನ ಒಳಗೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಹೆಗ್ಡೆಯವರೇ ನಾವು ಇನ್ನೂ ಎಚ್ಚೆತ್ತು ಕೊಂಡಿಲ್ಲ ಮುಂದಿನ ತಲೆಮಾರಿಗೆ ಏನನ್ನು ಉಳಿಸುತ್ತೇವೆಯೋ...? ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಉಗ್ರವಾದವನ್ನು ಪೋಷಿಸಿದ ಪಾಕ್ ಈಗ ತಾನೇ ನೆಲವನ್ನು ಕ೦ಡುಕೊಳ್ಳಬೇಕಾಗಿದೆ ಎನ್ನುವ ಸತ್ಯವನ್ನು ಚೆನ್ನಾಗಿ ನಿರೂಪಿಸಿದ್ದೀರ. ಪಾಕ್ ಈಗಾಗಲೇ ಅವನತಿಯತ್ತ ಸಾಗುತ್ತಿರುವ ದೇಶ ಎನಿಸಿಕೊಳ್ಳುತ್ತಿದೆ ಅದು ಬೆಳೆಸಿದ ಮರ ಈಗ ಅದನ್ನೂ ಮೀರಿ ಇತರೆಡೆಗೆ ಕೊ೦ಬೆ ಚಾಚಿ ಆ ಜಾಗವನ್ನೂ ಹಾಳು ಮಾಡುತ್ತಿದೆ ನಮ್ಮವರೂ ಅದನ್ನು ಪೂರ್ತಿ ಕತ್ತರಿಸಲಾಗದೇ ಕೇವಲ ಅದರ ಎಲೆಗಳನ್ನು ಮಾತ್ರ ತು೦ಡರಿಸಿ ಬೀಗುತ್ತಿದ್ದಾರೆ (ಅದೂ ಕೆಲವೊಮ್ಮೆ). ಬಲಿತ ಬಲಿಷ್ಟ ಕೊ೦ಬೆ, ಬಿಳುಲುಗಳನ್ನು ಬಿಟ್ಟು ನಮ್ಮ ನೆಲದಲ್ಲಿ ಅದರ ಬೇರನ್ನು ಬಿತ್ತುತ್ತಿದೆ.ಅದನ್ನೇ ನಿಜ ಮರವೆ೦ದು ನ೦ಬಿದ ಮ೦ದಿ ಅದರಡಿ ಆಶ್ರಯ ಪಡೆದು ಅದರಾಣತಿಯ೦ತೆ ನಡೆದು ನಮ್ಮ ನೆಲವನ್ನೇ ವಿಷವಾಗಿಸಲು ತೊಡಗಿದ್ದಾರೆ ಎ೦ಬುದು ವಿಷಾದನೀಯ ಪುಣ್ಯಕೋಟಿ ತನ್ನ ದೊಡ್ಡಿಗೆ ಬ೦ದಾಗ ಕ೦ಡದ್ದು ಇದೇ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹರೀಶ್ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪರೂಪದ ಚಿತ್ರಕ್ಕೊಂದು ಅಪರೂಪದ ಕವಿತೆ ಎನ್ನಲೆ, ಅಥವಾ ಅಪರೂಪದ ಕವಿತೆಗೆ ಅಸಾಮಾನ್ಯ ಚಿತ್ರ ಎನ್ನಲೆ, ನಿಮ್ಮ ಕವಿತೆಯಲ್ಲಿನ ಭಾವನೆಗಳನ್ನು ಮೆಚ್ಚಲೆ, ಆ ಚಿತ್ರದಲ್ಲಿನ ಭವ್ಯ ಸಂದೇಶವನ್ನು ಮೆಚ್ಚಲೆ, ಏನೇ ಇರಲಿ, ಗೋಪಿನಾಥರೆ, ನೀವು ಭಲೆ ಭಲೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಆತ್ಮೀಯ ಪುರಸ್ಕಾರಕ್ಕೆ ಧನ್ಯವಾದಗಳು ಮಂಜು ಅವರೇ ಅದೇ ನನ್ನ ಕವನಕ್ಕೆ ಸ್ಪೂರ್ತಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.