ಎಲ್ಲಿದೆ ನಮ್ಮೆಲ್ಲರ ಸಂತೋಷ... ?

5ಅಯ್ಯೋ ಈ ತಾಪತ್ರಯಗಳ ಸಂತೆ
ಸಾಕಪ್ಪಾ ನಮಗೆ ಮಾತ್ರ ಅಂತೆ
ಎಂದೆಣಿಸೋ ಮೊದಲು ನೆನಪಿರಲಿ
ಗೋಚರ ನಮಗೆ ನಮ್ಮ ಕಷ್ಟ ಮಾತ್ರ
ಇವೆ, ಸಕಲರಿಗೂ ಕಷ್ಟ ಅವರವರದ್ದು

ಸಂತೋಷ ನಾವಿಲ್ಲದ ದಿನಗಳಲ್ಲಿಲ್ಲ
ನಾವಿರದ ಕಾರ್ಯಗಳಲ್ಲೂ ಇಲ್ಲ
ಅದಿರುವುದು ನಾವಿರುವಲ್ಲಿ ಮಾತ್ರ
ಪ್ರೀತಿಸೆ ಎಲ್ಲವನ್ನ
ನಮ್ಮ ಪರಿಸರವನ್ನ, ಕಾರ್ಯವನ್ನ
ನಮ್ಮವರನ್ನ, ನಮ್ಮನ್ನ
ಅಲ್ಲಿದೆ ನಮ್ಮೆಲ್ಲರ ಸಂತೋಷ

ನಿನ್ನೆಯೋ ಮುಗಿದ ಕಥೆ
ನಾಳೆಯ ನೋಡಿದವರ್ಯಾರು
ಇಂದು ಮಾತ್ರವೇ ನಮ್ಮದು
ಅದಕ್ಕೇ ಇದ್ದು ಬಿಡಿ ವಾಸ್ತವದಲ್ಲಿ
ಅದೇ ಆನಂದದಲ್ಲಿ
ಇಂದು ಮುಂದು, ಮತ್ತೆಂದೂ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೋಪೀನಾಥ್, "ದುನಿಯಾಂ ಮೆ ಕಿತ್ನಾ ಗಮ್ ಹೈ ಮೇರಾ ಗಮ್ ಕಿತ್ನಾ ಕಮ್ ಹೈ ಔರೋಂ ಕಾ ಗಮ್ ದೇಖಾ ತೋ ಮೈ ಅಪ್ನಾ ಗಮ್ ಬೂಲ್ ಗಯಾ..!" ಹಿಂದೀ ಚಿತ್ರಗೀತೆಯ ನೆನಪಾಯ್ತು ನಾವಾಡುವ ಮಾತೆಲ್ಲವೂ ಸತ್ಯ "ಆದರೂ ಎಲ್ಲರ ಮನಗಳಲ್ಲೂ ಗೋಳು" ಈ ಮಾತು ಕೂಡ ಅಲ್ಲ ಮಿಥ್ಯ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಸುಮನದ ಆತ್ಮೀಯ ಪ್ರತಿಕ್ರಿಯೆಗೆ ಅಭಾರಿ ಸಂತೋಷವೂ ಹಲವೊಮ್ಮೆ ಕೆಲವರಿಗೆ ದುಬಾರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವರಿಗೆ ದುಬಾರಿ ನನ್ನಂಥವರಿಗೆ ಫ್ರೀ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನ್ರೀ ಸಂತೋಶ್ ಹೊಸ ನೋಟ ಬರ್ತೀರಲ್ಲ ನಾಡಿದ್ದು ಸಂಮಿಲನಕ್ಕೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಬೇಕು ಅಂತ ಆಸೆ ಏನೋ ಇದೆ. ಆದರೆ ಈ ಸಲ ಆಗಲ್ಲ. ಮುಂದಿನ ಸಲ ಖಂಡಿತ. ಅದಕ್ಕೆ ಯಾವುದೇ ಸಮ್ಮಿಲನದ ಲೇಖನಗಳಿಗೆ ಪ್ರತಿಕ್ರಿಯೆ ನೀಡದೆ ಸುಮ್ನಿರೋದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಸರ್, ನಿಮ್ಮ ಕವನ ಓದಿದಾಗ ನನಗೆ ಈ ಹಾಡಿನ ಸಾಲುಗಳು ನೆನಪಿಗೆ ಬಂದವು. "ಎಲ್ಲೋ ಹುಡುಕಿದೆ ಕಾಣದ ದೇವನ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಪ್ರೇಮಗಳ ಗುರುತಿಸದಾದೆನು ನಮ್ಮೊಳಗೇ. ಎಲ್ಲಿದೆ ನಂದನ, ಎಲ್ಲಿದೆ ಬಂಧನ ಎಲ್ಲ ಇದೆ ಈ ನಮ್ಮೊಳಗೇ .................................." ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾ ಅವರೇ ಈ ಹಾಡು ಯಾರು ಹಾಡಿದ್ದಾರೆ? ಯಾವ ಆಲ್ಬಮ್ ಅಥವಾ ಸೀಡಿಯಲ್ಲಿದೆ? ನಿಜವಾಗಿಯೂ ಒಳ್ಳೆಯ ಹಾಡದು. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್, ತಡವಾಗಿ ನಿಮ್ಮ ಪ್ರಶ್ನೆಗೆ ಉತ್ತರ ಬರೆಯುತ್ತಿದ್ದೇನೆ. ನನಗೂ ಗೊತ್ತಿರಲಿಲ್ಲ. ವಿಕಿಪೀಡಿಯದಲ್ಲಿ ಸಿಕ್ಕಿತು. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ ಕವಿ: ಜಿ ಎಸ್ ಶಿವರುದ್ರಪ್ಪ ಸಂಗೀತ: ಸಿ ಅಶ್ವಥ್ ದ್ವನಿಸುರುಳಿ: ಚೈತ್ರ ಗಾಯಕರು: ಸಿ ಅಶ್ವಥ್ ಧನ್ಯವಾದಗಳು ಅಂಬಿಕಾ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ತುಂಬಾ ಧನ್ಯವಾದಗಳು ಅಂಬಿಕಾ ಅವರೇ ತಡವಾಗಿಯಾದರೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಸಂದೇಶ ರಾಯರೆ, ಸಂಮಿಲನಕ್ಕೆ ಮುನ್ನುಡಿಯೇ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಕೇಳಿದ್ದು ಒಳ್ಳೆಯದಾಯ್ತು, ಇತ್ತೀಚೆಗೆ ಸಂಪದದಲ್ಲಿ ಜಗಳ ಜಾಸ್ತಿಯಾಗ್ತಾ ಇದೆಯಲ್ಲ ಅದಕ್ಕೇ ಇದೇ ಸರಿ ಅನ್ನಿಸಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಇತ್ತೀಚೆಗೆ ಸಂಪದದಲ್ಲಿ ಜಗಳ ಜಾಸ್ತಿಯಾಗ್ತಾ ಇದೆಯಲ್ಲ>> :-((((((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಶ್ರೀನಾಥ್ ರವರೇ ಅದೇ ಆತಂಕದ ವಿಷಯ ಅದು ನಮ್ಮ ಸಂಪದದಲ್ಲಿ...?!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದ ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.