ಒಲವಿನ ಪ್ರಿಯತಮೆ ನಿನಗಾಗೀ

0

ನಿನ್ನವನೇ ಪಿಯ ಎನಿಸಿದ ಮೇಲೆ
ಈ ನಾಚಿಕೆಯ ತೆರೆಯೇಕೆ
ನಿನ್ನನೆ ಪ್ರಿಯಗೆ ನೀಡಿದ ಮೇಲೆ
ಇಹದ ಪರದೆಯ ಮರೆಯೇಕೆ

ನಿನಗೆನಿತೋ ಪ್ರೇಮವು ಎನ್ನಲಿ
ಅದಕೇ ನೀ ನನ್ನರಿತಿರುವೆ
ನಾನೂ ನಿನ್ನನೆ ನೆನೆಸೀ ನೆನೆಸೀ
ನನ್ನಿರವನ್ನೇ ಮರೆತಿರುವೆ

ಕಠಿಣ ಸಮಸ್ಯೆಯ  ಹೊತ್ತಿನಲೂ
ನೀನೋರ್ವಳೇ ಎನಗಾಧಾರ
ನನ್ನೆಲ್ಲಾ ಚಿಂತನೆಗಳಿಗೂ ಪ್ರಿಯೆ
ನೆನಪಲ್ಲೇ ಇದೆ ಪರಿಹಾರ

ನನ್ನೀ ಹೃದಯವೆ ಮಿಡಿಯುತಿದೆ
ಒಲವಿನ ಪ್ರಿಯತಮೆ ನಿನಗಾಗೀ
ಪ್ರೇಮದ ಕಂಪನು ಪಸರಿಸಿಸಿ
ಶಾಂತಿಯ ನೀಡೂ ನನಗಾಗೀ

ಬರುವೆನಿದೋ ನಿನ್ನ ಕನಸಲ್ಲೇ ನಾ
ನಗೆಯನು ಅರಳಿಸಿ ಮುಖದಲ್ಲೇ
ಪಡೆಯುವೆ  ಮಹದಾನಂದವನೂ ನಾ
ಸಿಂಗರಿಸೀ ನಿನ್ನ ಒಲವಲ್ಲೇ

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತು೦ಬಾ ನವಿರಾಗಿ ಪೋಣಿಸಿದ್ದಿರಿ..... ಚೆನ್ನಾಗಿದೆ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ಇದೆ ರೀತಿ ನಿಮ್ಮ ಪ್ರೇಮ-ಕವನಗಳನ್ನ ಓದುತ ಇದ್ದ್ರ ಯಾರನ್ನಾದರು ಅರ್ಜೆಂಟಾಗಿ ಪ್ರೀತಿ ಮಾಡ್ಬೇಕು ಅನಿಸುತ್ತೆ ನೋಡಿ... ಏನು ಸೊಗಸು , ಏನು ಭಾವ ನಾನಂತೂ ನಿಮ್ಮ ಕವನಗಳನ್ನ ತುಂಬಾ ಇಷ್ಟ ಪಡ್ತ್ಹಿದಿನಿ...( ಹಾಳಾಗೋ ಎಲ್ಲ ಲಕ್ಷಣಗಳು ನನ್ನಲ್ಲಿ ಕಾಣುತಾ ಇವೆ...:-D ) ತುಂಬಾ ಸೊಗಸಾದ ಕವಿತೆ ಕಣ್ರೀ...!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಿದ್ದಪ್ಪಾ ಅವರೇ ನನ್ನ ಕವಿತೆ ಮೆಚ್ಚಿದ್ದಕ್ಕೆ ಧನ್ಯವಾದಗಳು ನಿಮ್ಮ ಮೊಬಯಿಲ್ ನಂಬರ್ ಕೊಡಿ ನಿಮ್ಮ ತಂದೆತಾಯಿಯವರಿಗೆ ಫೋನಾಯಿಸಿ ಬೇಗ ಒಬ್ಬಳು ಪ್ರಿಯತಮೆಯನ್ನು ಕೊಡಿಸಲು ಕೇಳಿಕೊಳ್ಳುತ್ತೇನೆ. ಮದುವೆ ಸ್ವಲ್ಪ ತಡವಾದರೆ ನೀವೂ ಉತ್ತಮ ಪ್ರೇಮ ಕವಿಗಳಾಗಬಹುದು. ನೀವು ಅದಕ್ಕಾಗಿ ಹಾಳಾಗುವುದು ಬೇಡ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವಿತ್ರ ಅವರೆ ಮೆಚ್ಚುಗೆಗೆ ಧನ್ಯ ನಿಮ್ಮೆಲ್ಲಾ ಕವನಗಳೂ ತುಂಬಾನೇ ಚೆನ್ನಾಗಿವೆ ಹಾಗೇ ಬರೆಯುತ್ತಿರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮಿ, ನರಸಿ೦ಹಸ್ವಾಮಿಗಳೇ, ಸಿದ್ದಪ್ಪರನ್ನೂ ಹಳ್ಳಹತ್ತಿಸಿಬಿಟ್ರಿ! ಮು೦ದಿನ ವಿಕೆಟ್ ಯಾವುದೋ? ಬ್ರಹ್ಮಚಾರಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಬೇಕಾದರೇ, ಸ೦ಪದದ ಗೋಪಿನಾಥರ ಅ೦ಕಣವನ್ನು ಕಣ್ತಪ್ಪಿಯೂ ಕ್ಲಿಕ್ ಮಾಡಬಾರದು ಅ೦ಥ ಬ್ರಹ್ಮಚಾರಿಗಳ ಸ೦ಘದ ಅಧ್ಯಕ್ಷರು ಆಜ್ಞೆ ಹೊರಡಿಸ್ತಾರೆ,ತಡೀರಿ! ಸೊಗಸಾದ ಸಾಲುಗಳು,ನಿಮ್ಮೆಲ್ಲಾ ಪ್ರೇಮಕವಿತೆಗಳನ್ನು ಸಿನಿಮಾ ನಿರ್ದೇಶಕರಿಗೆ ನೀಡಬಹುದು! ಉತ್ತಮ ರಾಗ ಸ೦ಯೋಜನೆ ಮಾಡಿದರೆ, ಸುಮಧುರ ಗೀತೆಗಳಾಗುತ್ತವೆ. ಬರೀತಾ ಇರಿ. ನಮಸ್ಕಾರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ಈಗ ತಾನೇ ಆಟದ ಮೈದಾನಕ್ಕೆ ಇಳಿದೀದಿವಿ..ಇನ್ನು ವಿಕೆಟ್ ಬಿದ್ದಿಲ್ಲ... .:-) ಸಂಪದದ ನರಸಿಂಹಸ್ವಾಮಿಗಳು ಹೀಗೆ ಕವನಗಳನ್ನ ನಮಗೆ ನಿಡ್ತಾ ಇದ್ರೆ ವಿಕೆಟ್ ಬಿಳ್ಲೋದ್ರಲ್ಲಿ ಸಂದೇಹವೇ ಇಲ್ಲ ಬಿಡಿ....:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ನನ್ನ ಕವನ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ನನ್ನಿ ನನ್ನ ಎಲ್ಲಾ ಕವನಗಳು ಕೇವಲ ನನ್ನ ಬಾಳಸಂಗಾತಿಯನ್ನು ಕುರಿತು ಬರೆದದ್ದು. ನಿಮ್ಮೆಲ್ಲರ ಪ್ರೋತ್ಸಾಹದಾಯಕ ನುಡಿಗೆ ಅನಂತಾನಂತ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಾನೂ ನಿನ್ನನೆ ನೆನೆಸೀ ನೆನೆಸೀ ನನ್ನಿರವನ್ನೇ ಮರೆತಿರುವೆ>> ಪ್ರೀತಿ ಎಂಬ ಮಾಯೆಯಲ್ಲಿನ ಪರಮಾವಧಿ.. ಚೆನ್ನಾಗಿದೆ ಗೋಪಿಯವರೇ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತ ಅವರೇ, ಹೆಗಡೆಯವರೇ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಸಾರೂ ಸೂಪರ್ರೋ ಸೂಪರ್ರು ಆದ್ರೆ <<ನಿನ್ನನೆ ಪ್ರಿಯಗೆ ನೀಡಿದ ಮೇಲೆ ದೇಹದ ಪರದೆಯ ಇರವೇಕೆ>> ಹಿ೦ಗ೦ದ್ರೆ ಏನಪ್ಪ ಶುದ್ಧಾನುಶುದ್ದ ಬ್ರಹ್ಮಚಾರಿಗಳು ಸ೦ಪದದಲ್ಲಿದ್ದಾರೆ ನೀವು ಹೀಗೆಲ್ಲಾ ಬರೀಬಹುದಾ? :):) ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಆತ್ರೇಯ ಪ್ರಿಯ ಪ್ರೇಯಸಿಯ ನಡುವೆ ಪರದೆಯೇ ಇಲ್ಲವಲ್ಲ. ಪ್ರಾಯಶಃ ಇದು ಎಲ್ಲಾ ಬ್ರಹ್ಮಚಾರಿಗಳಿಗೂ ಮನದಟ್ಟಾದ ವಿಷಯವೇ. ಆದರೂ ಅದನ್ನು ಚಿಕ್ಕದಾಗಿ ಬದಲಿಸಿದ್ದೇನೆ. ನಿಮ್ಮೆಲ್ಲರ ಪ್ರೇಮ, ಪ್ರೋತ್ಸಾಹ, ಗಳಿಗೆ ಚಿರ ಋಣಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಚಿಕೆಯೆಂಬ ಲಕ್ಷಣ ಹೆಣ್ಣಿಗೆ ಅಂದ ನಾಚುತ್ತಲೇ ಒಲಿದರೆ ಮನಕಾನಂದ (ಕಾಗುಣಿತಗಳನ್ನೊಮ್ಮೆ ಪರಿಶಿಲೀಸಿ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಗುಣಿತಗಳನ್ನೊಮ್ಮೆ ಪರಿಶೀಲಿಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೇರೇ, ನಾವು ಮಾಡೋದು ಅದೇ ತಪ್ಪು! ಬರೇ ಓದ್ತಾ ಹೋಗ್ತೀವಿ! ಅಕ್ಷರ ಸರಿಯಿದೆಯೋ ತಪ್ಪೋ ಅನ್ನುವುದನ್ನು ಗಮನಿಸುವುದೇ ಇಲ್ಲ! ನ೦ತರ ನಾವು ಅದನ್ನೇ ಬರೆಯುವಾಗಲೂ ಅನುಸರಿಸುತ್ತೇವೆ. ಬರೆದ ಮೇಲೆ ಸರಿಯಿದೆಯೋ ತಪ್ಪೋ ಅನ್ನುವುದನ್ನು ಗಮನಿಸುವುದೇ ಇಲ್ಲ! ಇನ್ನು ಮೇಲೆ ನಮ್ಮ ರೀತಿಯನ್ನು ತಿದ್ದಿಕೊಳ್ಳಲೇಬೇಕು. ಅದಕೇ ನೀ ನನ್ನರಿತಿರುವೆ- ನನ್ನನರಿತಿರುವೆ ಆಗಬೇಕೆ? @ ಗೋಪಿನಾಥರೇ, ಪಿಯ- ಪ್ರಿಯ ಆಗಬೇಕು. ನಿನ್ನನೆ-ನಿನ್ನನೇ ಆಗಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪುಗಳು ಆಗಿಹೋಗುವುದು ಸಹಜ. ತಪ್ಪುಗಳನ್ನು ಮಾಡುವುದು ಅಸಹಜ ಪ್ರತಿಕ್ರಿಯೆಗಳನ್ನು ತಿದ್ದಲು ಸಮಯಾವಕಾಶ ಕಡಿಮೆ. ಆದರೆ ಬರಹಗಳನ್ನು ತಿದ್ದಲು ಸಮಯದ ಮಿತಿ ಇಲ್ಲ. ಯಾವಾಗ ಬೇಕಾದರೂ ತಿದ್ದಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ನಿಮ್ಮ ಆಸೆ ಈಡೇರಲಿ. ಚೆನ್ನಾಗಿರಿ. ಹೀಗೆಯೇ ಬರೆಯುತ್ತಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಸಹೃದಯ ಪ್ರತಿಕ್ರಿಯೆಗಳಿಗೆ ಅನಂತಾನಂತ ವಂದನೆಗಳು ಇದು ಹೀಗೆಯೇ ಮುಂದುವರಿಯುತ್ತಿರಲಿ ಹೆಗಡೆಯವರೇ ಮತ್ತು ರಾಯರೇ ಈಗಿನ ನವ್ಯ ಕಾವ್ಯ ಪ್ರಕಾರದಲ್ಲಿ ಪ್ರಾಸ ಮತ್ತು ರಾಗದ ಕಟ್ಟು ಪಾಡುಗಳಿಲ್ಲ. ನಾನು ಮೊದಲು ಬರೆಯಲು ಆರಂಭ ಮಾಡಿದ್ದು ಪ್ರಾಸ ಮತ್ತು ರಾಗ ಹೊಂದಿಸಿ, ಅದಕ್ಕೇ ನಿಮಗೆ ಹಾಗೆ ಕಾಣಿಸುತ್ತಿದೆ, ಮೇಲಿನ ಕವನದಲ್ಲಿ. ಇಲ್ಲಿ ಪಿಯ ಅನುವುದು ಪ್ರಿಯ ಶಬ್ದದ ಹೃಸ್ವ ರೂಪ ಏಕತಾನತೆ ಬರದಿರಲು ಆ ಶಬ್ದ ಅಲ್ಲಿ ಉಪಯೋಗಿಸಿದ್ದೇನೆ. ನಿನ್ನನೇ ಮತ್ತು ನಿನ್ನನೆ ಯಲ್ಲಿ ಒಂದು ಮಾತ್ರೆ ತಪ್ಪುತ್ತದೆ ರಾಗದಲ್ಲಿ. ಪಸರಿಸಿ ಮತ್ತು ಪಸರಿಸಿಸಿ ಯಲ್ಲಿ ಹರಡು ಅಲ್ಲ ಹರಡಿಸು ಎನ್ನುವ ಅರ್ಥದಲ್ಲಿ ಬರೆದಿದ್ದೇನೆ. ಧೀರ್ಘ ಮತ್ತು ಹೃಸ್ವವನ್ನು ಬರೇ ಒಂದು ಮಾತ್ರೆಯನ್ನು ರಾಗದಲ್ಲಿ ಹೊಂದಿಸಲೋಸುಗ ಆ ಮಾರ್ಪಾಡು ಮಾಡಬೇಕಾಯಿತು. ರಾಗವನ್ನು ಸರಿಪಡಿಸಲು ಕವಿಗೆ ಅಷ್ಟು ಸ್ವಾತಂತ್ರ್ಯ ಇದೆ ಅಂತ ನನ್ನ ಅಭಿಪ್ರಾಯ. ತಪ್ಪಿದ್ದಲ್ಲಿ ಕ್ಷಮಿಸಿ ನನ್ನಗನ್ನಿಸುತ್ತೆ ಈ ಬಗ್ಗೆ ಪ್ರಾಯಶ: ಒಂದು ಚರ್ಚೆಇಡುವುದು ಒಳ್ಳೆಯದೇನೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪೀನಾಥ್, "ಪಿಯ" ಮತ್ತು "ಪಸರಿಸಿಸಿ" ಅನ್ನುವ ಶಬ್ದಗಳೂ ಇವೆಯೆಂದು ನನಗೆ ಗೊತ್ತಿರಲಿಲ್ಲ. ಅಲ್ಲದೇ ನೀವು ರಾಗವನ್ನೇ ಗಮನದಲ್ಲಿಟ್ಟುಕೊಂಡು ಬರೆಯುತ್ತೀರೆಂಬ ವಿಷಯ ಮತ್ತು ಪದಗಳನ್ನು ರಾಗದಲ್ಲಿ ಹೊಂದಿಸಲೋಸುಗ ಮಾತ್ರೆಗಳನ್ನು ಹೆಚ್ಚುಕಡಿಮೆ ಮಾಡುತ್ತೀರಿ (ಮಾಡಬಹುದು) ಎನ್ನುವುದೂ ನನಗೆ ಗೊತ್ತಿರಲಿಲ್ಲ ಅವನ್ನೆಲ್ಲಾ ಗೊತ್ತುಮಾಡಿಸಿದ್ದಕ್ಕೆ ಧನ್ಯವಾದಗಳು. ನನಗೆ ಗೊತ್ತಿಲ್ಲದ್ದು ಬಹುಷಃ ಬಹಳಷ್ಟಿದೆ. ನನ್ನ ಪ್ರಶ್ನೆಗಳು ಈರೀತಿ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗುತ್ತಿವೆ ಎನ್ನುವುದೇ ಸಮಾಧಾನ ತರುವ ವಿಷಯ ನನಗೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ನಿಮ್ಮ ಸ್ವಾತ೦ತ್ರ್ಯವನ್ನು ನಾನೇಕೆ ಕಸಿದುಕೊಳ್ಳಲಿ? ನನಗೂ ಹಾಗೂ ಹೆಗಡೆಯವರಿಗೆ ಅನ್ನಿಸಿದ್ದನ್ನು ನಾವು ತಿಳಿಸಿದೆವು. ನೀವು ಮಾತ್ರೆ, ಹೃಸ್ವ, ರಾಗ ಮು೦ತಾದ ಎಲ್ಲಾ ವಿಚಾರಗಳನ್ನೂ ಗಮನದಲ್ಲಿಟ್ಟು ಬರೆದಿದ್ದೀರಿ,ನಮಗೆ ಅದು ಹೇಗೆ ಗೊತ್ತಾಗಬೇಕು ನರಸಿ೦ಹಸ್ವಾಮಿಗಳೇ? ಅದ್ದರಿ೦ದ ನಾವು ಅದನ್ನು ತಿಳಿಸಿದೆವು, ವಿನ: ಬೇರೆ ರೀತಿಯಲ್ಲಿ ಅಲ್ಲ. ಆದ್ದರಿ೦ದ ಬೇಸರಿಸಬೇಡಿ. ಇದಕ್ಕೋಸ್ಕರ ನೀವೆ ನಾಳೆ ಒ೦ದು ಚರ್ಚೆ ಆರ೦ಭಿಸಿ.ನಾವೂ ಪಾಲ್ಗೊಳ್ಳುತ್ತೇವೆ. ಕಾಲೆಳೆಯೋದಿಲ್ಲ ಅ೦ತ ವಚನವಿತ್ತರೆ ಮಾತ್ರ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.